Connect with us

Cinema

ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಗೆ ಅಸ್ತು ಎಂದು ಸುಪ್ರೀಂ

Published

on

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಲವು ಮಂದಿ ಜಾಮೀನಿನ ಮೇಲೆ ಹೊರಗಿದ್ದಾರೆ.

ಪವಿತ್ರಾ ಗೌಡಕ್ಕೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಕಳೆದ ವರ್ಷ ಜೂನ್‌.8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಾಗಿತ್ತು. ಈ ಹತ್ಯೆ ಸಂಬಂಧ ಜೂನ್‌. 11 ರಂದು ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಇತರ ಸಹಚರರ ಬಂಧನವಾಗಿತ್ತು.

ಸತತ ಅರು ತಿಂಗಳ ಬಳಿಕ ನಟ ದರ್ಶನ್‌ ಹಾಗೂ ಪವಿತ್ರ ಗೌಡರಿಗೆ ಜಾಮೀನು ಸಿಕ್ಕಿದ್ದು, ಸದ್ಯ ದರ್ಶನ್‌ ನಟನೆಯಲ್ಲಿ ಬ್ಯೂಸಿಯಾಗಿದ್ದರೇ, ಪವಿತ್ರಾ ಗೌಡ ತಮ್ಮ ರೆಡ್‌ ಕಾರ್ಪೆಟ್‌ ಸ್ಟುಡಿಯೋದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ ನೀಡಿದ್ದ ಜಾಮೀನು ಅರ್ಜಿ ರದ್ದು ಕೋರಿ ವಿಚಾರಣೆಗಾಗಿ ಕರ್ನಾಟಕ ಪೊಲೀಸ್‌ ಇಲಾಖೆ ಸುಪ್ರೀಂ ಮೊರೆ ಹೋಗಿತ್ತು.

ಆರಂಭದಲ್ಲಿ ಆಸಕ್ತಿ ತೋರದ ಸುಪ್ರೀಂ, ಇದೀಗ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಜಾಮೀನು ರದ್ದು ಕೋರಿ ಪೊಲೀಸರ ಪರವಾಗಿ ವಾದ ಮಂಡಿಸಿರುವ ವಕೀಲ ಅನೀಲ್‌ಕುಮಾರ್‌ ನಿಶಾನಿ ಅವರ ಮನವಿಗೆ ಸ್ಪಂದಿಸಿರುವ ಸುಪ್ರೀಂಕೋರ್ಟ್‌ ಇದೇ ಏ.2 ರಂದು ಅರ್ಜಿ ವಿಚಾರಣೆ ಮಾಡುವುದಾಗಿ ಹೇಳಿದೆ.

ಒಂದು ವೇಳೆ ತೀರ್ಪು ಪೊಲೀಸರ ಪರವಾಗಿ ಬಂದಿದ್ದಲ್ಲಿ ನಟ ದರ್ಶನ್‌ ಹಾಗೂ ಪವಿತ್ರ ಗೌಡ ಮತ್ತೆ ಜೈಲು ಪಾಲಾಗಲಿದ್ದಾರೆ.

 

Continue Reading

Cinema

ಲಾಂಗ್‌ ಹಿಡಿದು ರೀಲ್ಸ್‌ ಪ್ರಕರಣ: ಬಿಗ್‌ಬಾಸ್‌ ಖ್ಯಾತಿಯ ರಜತ್‌ ಮತ್ತೆ ಬಂಧನ

Published

on

ಬೆಂಗಳೂರು: ಲಾಗ್‌ ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್‌ಬಾಸ್‌ ಖ್ಯಾತಿಯ ರಜತ್‌ನನ್ನು ಬುಧವಾರ ಬಂಧಿಸಲಾಗಿದೆ.

ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್‌ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆಯಲ್ಲಿ ಎರಡು ಬಾರಿ ನೋಟಿಸ್‌ ನೀಡಿದ್ದು. ಆದರೆ ರಜತ್‌ ಪೊಲೀಸ್‌ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್‌ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕೋರ್ಟ್‌ ಸೂಚನೆ ಮೇರೆಗೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನು ಬಂಧಿಸಿದ್ದಾರೆ.

Continue Reading

Cinema

ಬಾಲಿವುಡ್‌ ಭಾಯ್‌ ಜಾನ್‌ಗೆ ಮತ್ತೆ ಕೊಲೆ ಬೆದರಿಕೆ ಸಂದೇಶ: ಆತಂಕದಲ್ಲಿ ಫ್ಯಾನ್ಸ್‌

Published

on

ಮುಂಬೈ: ಬಾಲಿವುಡ್‌ನ ಭಾಯ್‌ ಜಾನ್‌ ಎಂದೇ ಹೆಸರುವಾಸಿಯಾಗಿರುವ ನಟ ಸಲ್ಮಾನ್‌ ಖಾನ್‌ಗೆ ಇಂದು (ಸೋಮವಾರ) ಮತ್ತೆ ಕೊಲೆ ಬೆದರಿಕೆ ಸಂದೇಶ ರವಾನೆಯಾಗಿದ್ದು, ಫ್ಯಾನ್ಸ್‌ ಆತಂಕಕ್ಕೆ ಒಳಗಾಗಿದ್ದಾರೆ.

ಮುಂಬೈನ್‌ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಅವರ ಕಾರನ್ನು ಸ್ಫೋಟಿಸುವ ಮೂಲಕ ಸಲ್ಮಾನ್‌ಖಾನ್‌ ಕೊಲೆ ಮಾಡುತ್ತೇವೆ ಎಂದು ವರ್ಲಿಯಲ್ಲಿರುವ ಸಾರಿಗೆ ಇಲಾಖೆ ವಾಟ್ಸಪ್‌ ನಂಬರ್‌ಗೆ ಸಂದೇಶ ಬಂದಿದೆ.

ಬೆದರಿಕೆ ಸಂದೇಶ ರವಾನಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಇದೀಗ ವರ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬೆದರಿಕೆಯ ಹೊಣೆಯನ್ನೂ ಯಾರು ಸಹ ಹೊತ್ತುಕೊಂಡಿಲ್ಲ. ಇನ್ನು ನಟ ಸಲ್ಮಾನ್‌ ಖಾನ್‌ ಅವರಾಗಲಿ ಹಾಗೂ ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆಯೂ ಹಲವು ಬಾರಿ ಸಲ್ಮಾನ್‌ ಖಾನ್‌ಗೆ ಬೆದರಿಕೆಗಳು ಬಂದಿದ್ದವು. ಗ್ಯಾಂಗ್‌ಸ್ಟರ್‌ ಬಿಷ್ಣೋಯ್‌ ಮತ್ತು ಗೋಲ್ಡಿ ಬ್ರಾರ್‌ ಗ್ಯಾಂಗ್‌ನಿಂದ ಬೆದರಿಕೆಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ನಟ ಸಲ್ಮಾನ್‌ ಖಾನ್‌ ಮನೆಯ ಸುತ್ತಮತ್ತ ಹಲವು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Continue Reading

Cinema

ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಏ.16ರಿಂದ ಶುರುವಾಗಲಿದೆ ‘ಬಿಲ್ಲ ರಂಗ ಭಾಷಾ’

Published

on

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು ಏನು ಎಂದು ಅಭಿಮಾನಿಗಳು ಹುಳ ಬಿಟ್ಟುಕೊಂಡರು. ಕೆಲವರು ಚಿತ್ರದ ಮುಹೂರ್ತವಿರಬಹುದು ಎಂದರೆ, ಇನ್ನೂ ಕೆಲವರು ಇನ್ನೇನೋ ಘೋಷಣೆ ಇರಬಹುದು ಅಂದುಕೊಂಡರು.

ಈಗ ಏಪ್ರಿಲ್‍.16ಕ್ಕೆ ಏನಾಗಲಿದೆ ಎಂದು ಸ್ವತಃ ಸುದೀಪ್‍ ಹೇಳಿಕೊಂಡಿದ್ದಾರೆ. ‘ಏಪ್ರಿಲ್‍.16ರಂದು ಏನಾಗಲಿದೆ ಎಂಬ ಕುತೂಹಲವಿರುವವರಿಗೆ, ಅಂದು ನಮ್ಮ ‘ಬಿಲ್ಲ ರಂಗ ಭಾಷಾ’ ಚಿತ್ರ ಪ್ರಾರಂಭವಾಗಲಿದೆ’ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.

ಕಳೆದ ವರ್ಷ ಸುದೀಪ್‍ ಹುಟ್ಟುಹಬ್ಬದಂದು ಹೊಸ ಸುದ್ದಿಯೊಂದನ್ನು ಘೋಷಿಸುವುದಾಗಿ ಹೇಳಿದ್ದರು ನಿರ್ದೇಶಕ ಅನೂಪ್‍ ಭಂಡಾರಿ. ಅದರಂತೆ, ಅದು ‘ಬಿಲ್ಲ ರಂಗ ಭಾಷಾ’ ಚಿತ್ರದ ಅಧಿಕೃತ ಘೋಷಣೆಯಾಗಿತ್ತು. ಆದರೆ, ಸುದೀಪ್‍ ಆ ನಂತರ ‘ಬಿಗ್‍ ಬಾಸ್‍’, ‘ಮ್ಯಾಕ್ಸ್’, ಸಿಸಿಎಲ್‍ನಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರವು ವಿಳಂಬವಾಯಿತು. ಈಗ ಕೊನೆಗೂ ಚಿತ್ರ ಏಪ್ರಿಲ್‍.16ಕ್ಕೆ ಪ್ರಾರಂಭವಾಗುತ್ತಿದೆ.

‘ಬಿಲ್ಲ ರಂಗ ಭಾಷಾ ತಮ್ಮ ಜೀವನದಲ್ಲೇ ದೊಡ್ಡ ಚಿತ್ರವಾಗಲಿದೆ ಎಂದು ಸುದೀಪ್ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು. ’ವಿಕ್ರಾಂತ್ ರೋಣ’ ನಂತರ ಒಂದು ತಂಡವಾಯಿತು. ನಮಗೆ ನಮ್ಮ ಮೇಲೆ ನಂಬಿಕೆ ಬಂತು. ಈಗ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಕೈ ಹಾಕಿದ್ದೇವೆ. ಈ ಚಿತ್ರ ನನ್ನ ಮತ್ತು ಅನೂಪ್‍ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾ ಆಗಲಿದೆ. ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಸಾಕಷ್ಟು ಸಮಯವಾಯಿತು. ಇದೊಂದು ಅಪರೂಪದ ಚಿತ್ರವಾಗಲಿದೆ’ ಎಂದು ಅವರು ಹೇಳಿದ್ದರು.

ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲ ‘ಹನುಮಾನ್’ ಎಂಬ ಬ್ಲಾಕ್‌ ಬಸ್ಟರ್‌ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್‍ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಹೆಸರುಗಳನ್ನು ಚಿತ್ರತಂಡ ಸದ್ಯದಲ್ಲೇ ಘೋಷಿಸಲಿದೆ.

Continue Reading

Trending

error: Content is protected !!