Connect with us

State

ರೇಣುಕಾಸ್ವಾಮಿ ಕೇಸ್‌ನಲ್ಲಿ ಸುಪ್ರೀಂ ತೀರ್ಪು: ಎ2 ಆರೋಪಿ ದರ್ಶನ್‌ ಅರೆಸ್ಟ್‌

Published

on

ಬೆಂಗಳೂರು: ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಎ1 ಆರೋಪಿ ಪವಿತ್ರ, ಎ2 ಆರೋಪಿ ದರ್ಶನ್‌ ಸೇರಿದಂತೆ 7 ಆರೋಪಿಗಳಿಗೆ ನೀಡಿದ್ದ ಜಾಮೀನು ಅನ್ನು ಇಂದು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ಬೆನ್ನಲ್ಲೇ ಆರೋಪಿ ದರ್ಶನ್‌ನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

 

ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್‌ ಸೌತ್‌ ರಿಡ್ಜ್‌  ಅಪಾರ್ಟ್‌ಮೆಂಟ್‌ನ 15 ನೇ ಫ್ಲೋರ್‌ನ ಫ್ಲಾಟ್‌ ನಂ.4154 ನಲ್ಲಿ ದರ್ಶನ್‌ ಆರೆಸ್ಟ್‌ ಕಾಮಾಕ್ಷಿ ಪಾಳ್ಯದ ಇನ್ಸ್‌ಪೆಕ್ಟರ್‌ ನಾಗೇಶ್‌, ಗೋವಿಂದರಾಜನಗರ ಪೊಲೀಸ್‌ ಠಾಣೆಯ ಸುಬ್ರಹ್ಮಣ್ಯ ನೇತೃತ್ವದಲ್ಲಿ ಎ2 ಆರೋಪಿ ದರ್ಶನನ್ನು ಬಂಧಿಸಲಾಗಿದೆ.

ದರ್ಶನ್‌ ಅನ್ನು ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ವೈದ್ಯಕೀಯ ತಪಾಸಣೆ ಮುಸಿಗಿದ ಬಳಿಕ ಸೆಷನ್ಸ್‌ ನ್ಯಾಯಾಲಯಕ್ಕೆ  ಹಾಜರು ಪಡಿಸಿ ಜೈಲಿಗೆ ಬಿಡಲಾಗುವುದು.

State

ನಾಳೆ KSCA ಚುನಾವಣಾ ಮತದಾನ: ವೆಂಕಟೇಶ್‌ ಪ್ರಸಾದ್ v/s ಬ್ರಿಜೇಶ್ ಪಟೇಲ್ ಬಣಗಳ ಮಧ್ಯೆ ಜಿದ್ದಾಜಿದ್ದಿ

Published

on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್  ಚುನಾವಣಾ ಮತದಾನ ನಾಳೆ ನಡೆಯಲಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣ ಮ ಬ್ರಿಜೇಶ್ ಪಟೇಲ್  ಬಣಗಳ ಮಧ್ಯೆ  ಭಾರೀ ಹಣಾಹಣಿ ನಡೆದಿದೆ.
ಚುನಾವಣೆಯನ್ನು ಸುತ್ತುವರಿದ ವಿವಾದಗಳ ನಡುವೆ ಇಂದು ಪ್ರಸಾದ್ ಬಣವೂ ಕೆಎಸ್‌ಸಿಎ ಸದಸ್ಯರೊಂದಿಗೆ ಸಂವಾದ ನಡೆಸಿತು.

ಪ್ಯಾಲೇಸ್ ಮೈದಾನದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ಕೆಎಸ್‌ಸಿಎ ಸದಸ್ಯರು ಪಾಲ್ಗೊಂಡಿದ್ದರು. ಟೀಂ ಗೇಮ್ ಚೇಂಜರ್ಸ್ ಪರವಾಗಿ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬ್ರಿಜೇಶ್ ಬಣದ ಆಡಳಿತದ ವೈಫಲ್ಯಗಳನ್ನು ಪ್ರಸಾದ್ ಬಣವು ಪಿಪಿಟಿ ಮೂಲಕ ಸದಸ್ಯರಿಗೆ ವಿವರಣೆ ನೀಡಿತ್ತು.

ಸಂವಾದದ ನಂತರ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಸ್ತುತ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವೆಂಕಟೇಶ್ ಪ್ರಸಾದ್ ತಂಡ ಗೆಲ್ಲಲೇಬೇಕು. ರಾಜ್ಯದಲ್ಲಿ ಕ್ರಿಕೆಟ್ ಉದ್ಧಾರ ಆಗಬೇಕಾದರೆ ಬದಲಾವಣೆ ಅನಿವಾರ್ಯ. ನಾವು ಅಧಿಕಾರದಲ್ಲಿದ್ದಾಗ ಎರಡು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈಗ 10 ಹೆಜ್ಜೆ ಹಿಂದೆ ಹೋಗಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಫ್ರಾಸ್ಟ್ರಕ್ಚರ್ ಬದಲಾಗಬೇಕು. ಪ್ರಸಾದ್ ತಂಡ ಇದನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಕೆಎಸ್‌ಸಿಎನಲ್ಲಿ ದುಡ್ಡಿಗೆ ಕೊರತೆಯಿಲ್ಲ. ಆದರೆ ಕ್ರಿಕೆಟ್ ಬೆಳವಣಿಗೆ ಆಗಬೇಕು. ಮತ ಕೇವಲ ಕ್ಲಬ್‌ಗೆ ಅಲ್ಲ. ಕ್ರಿಕೆಟ್ ಕನಸು ಕಟ್ಟಿಕೊಂಡಿರುವ ಮಕ್ಕಳಿಗಾಗಿ ಎಂದು ಹೇಳಿದರು.

ಇನ್ನೂ ನಾಳೆ ನಿರ್ಣಾಯಕ ದಿನವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ಆರಂಭವಾಗಲಿದೆ. ಅಲ್ಲದೇ ನಾಳೆಯೇ ಕೆಎಸ್‌ಸಿಎ ಹೊಸ ಆಡಳಿತ ನಿರ್ಧಾರವಾಗಲಿದ್ದು, ಪ್ರಸಾದ್-ಬ್ರಿಜೇಶ್ ಬಣಗಳ ನಡುವೆ ಕಠಿಣ ಪೈಪೋಟಿ ಎದುರಾಗಲಿದೆ.

Continue Reading

State

ಡಿವೈಡರ್‌ಗೆ ಕಾರ್‌ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ

Published

on

ಧಾರವಾಡ: ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ವರದಿಯಾಗಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣ ಮಾಡುತ್ತಿದ್ದ ಐ20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹೊತ್ತಿ ಉರಿದ ಕಾರಿನಿಂದ ಹೊರಬರಲು ಸಾಧ್ಯವಾಗದೇ ಇನ್ಸ್‌ಪೆಕ್ಟರ್ ಕೂಡ ಅದರ ಒಳಗೆ ಸಜೀವವಾಗಿ ದಹನವಾಗಿದ್ದಾರೆ.

ಕಾರ್‌ನಲ್ಲಿ ಇನ್ಸ್‌ಪೆಕ್ಟರ್‌ ಸಾಲಿಮಠ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿಯೇ ಅವರ ದೇಹ ಸುಟ್ಟುಹೋಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ಘಟನೆ ನಡೆದಿದೆ.

ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರ್‌ ಪ್ರಯಾಣ ಮಾಡುವಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಭೀಕರ ಘಟನೆ ನಡೆದಿದೆ.

I20 ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಅವರು ಹೊರಟಿದ್ದರು.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

State

SSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…

Published

on

ಕರ್ನಾಟಕದಲ್ಲಿ SSLC ಪಾಸ್ ಮಾಡಿದವರಿಗೆ ಇದೀಗ ಸರ್ಕಾರದ ವಿವಿಧ ಇಲಾಖೆಗಳಡಿ ಕೆಲಸ ಪಡೆಯುವ ದೊಡ್ಡ ಅವಕಾಶ ದೊರಕಿದೆ. ಕಡಿಮೆ ವಿದ್ಯಾರ್ಹತೆಯಲ್ಲೇ ಸ್ಥಿರ ಸರ್ಕಾರಿ ಉದ್ಯೋಗ ಪಡೆಯಲು ಹಲವು ಹುದ್ದೆಗಳು ಲಭ್ಯವಾಗಿದ್ದು, ಯುವಕರಿಗೆ ಭದ್ರ ಭವಿಷ್ಯ ನಿರ್ಮಿಸಿಕೊಳ್ಳಲು ಇದು ಮಹತ್ವದ ಅವಕಾಶವಾಗಿದೆ.

ಹುದ್ದೆಗಳ ವಿವರ:
•ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಜೈಲು ವಾರ್ಡರ್ ಹುದ್ದೆಗಳು
•ಅಂಚೆ ಇಲಾಖೆಯ GDS, ಪೋಸ್ಟ್‌ಮನ್ ಮತ್ತು MTS ಹುದ್ದೆಗಳು
•KSRTC, BMTC ಮೊದಲಾದ ಸಾರಿಗೆ ಸಂಸ್ಥೆಗಳಲ್ಲಿ ಕಂಡಕ್ಟರ್/ಡ್ರೈವರ್ ಹುದ್ದೆಗಳು
•ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
•ವಿವಿಧ ಇಲಾಖೆಗಳ ಪಿಯೋನ್, ಅಟೆಂಡರ್, ಕ್ಲರ್ಕ್ ಮತ್ತು ಗ್ರೂಪ್–D ಹುದ್ದೆಗಳು

ವೇತನ: ₹18,000 ರಿಂದ ₹32,000ರವರೆಗೆ

ಅರ್ಹತೆ:
•ಕನಿಷ್ಠ SSLC ಪಾಸ್ ಆಗಿರಬೇಕು
•ವಯೋಮಿತಿ;18ರಿಂದ 35ವರ್ಷ
•ಕೆಲವು ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ
•ಡ್ರೈವರ್ ಹುದ್ದೆಗೆ ಮಾನ್ಯ ಡ್ರೈವಿಂಗ್ ಲೈಸೆನ್ಸ್

ಅರ್ಜಿ ಹೇಗೆ ಸಲ್ಲಿಸಬೇಕು?
•ಅಧಿಕೃತ ಪ್ರಕಟಣೆ ಹೊರಬಂದ ನಂತರ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಹಾಕಬಹುದು
•ಆಧಾರ್, SSLC ಮಾರ್ಕ್ಸ್ ಕಾರ್ಡ್, ಜಾತಿ ಪ್ರಮಾಣಪತ್ರ, ವಿಳಾಸ ದೃಢೀಕರಣ ಮುಂತಾದ ದಾಖಲಾತಿಗಳು ಅಗತ್ಯ
•ಶುಲ್ಕವನ್ನು ಆನ್‌ಲೈನ್ ಪಾವತಿಸಿ ಅರ್ಜಿ ಪೂರ್ಣಗೊಳಿಸಬಹುದು
•ಆಯ್ಕೆ ಪ್ರಕ್ರಿಯೆಯಲ್ಲಿ ಪರೀಕ್ಷೆ/ದೈಹಿಕ ಪರೀಕ್ಷೆ ಇರಬಹುದು

ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಉತ್ತಮ ಭವಿಷ್ಯ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಅಗತ್ಯವಿರುವರಿಗೆ ಕಳುಹಿಸಿ.

Continue Reading

Trending

error: Content is protected !!