Connect with us

National - International

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

Published

on

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಉಳಿದ ಏಳು ಜನರಿಗೆ ನೀಡಿದ್ದ ಜಾಮೀನು ಅರ್ಜಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರಕ್ಕೆ ಅಲ್ಪ ಹಿನ್ನಡೆಯಾಗಿದ್ದರೂ ಮತ್ತೊಂದೆಡೆ ಅಲ್ಪ ಮುನ್ನಡೆಯಾಗಿದೆ.

ದರ್ಶನ್‌ ಜಾಮೀನು ಅರ್ಜಿ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶುಕ್ರವಾರ (ಜ.24) ನಡೆಸಿದ ಕೋರ್ಟ್‌, ಜಾಮೀನು ರದ್ದುಗೊಳಿಸಲು ಸುಪ್ರೀಂ ನಿರಾಕರಿಸಿದೆ. ಅದ್ಯಾಗೋ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಪರಿಶೀಲಿಸಲು ಕೋರ್ಟ್‌ ಅನುಮತಿಸಿದೆ.

ಈ ಪ್ರಕರಣ ಸಂಬಂಧ ನ್ಯಾಯಾಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಹಾಗೂ ಆರ್‌. ಮಹದೇವನ್‌ ಇದ್ದ ಪೀಠವು ದರ್ಶನ್‌ ಹಾಗೂ ಉಳಿದ ಆರು ಮಂದಿಗೆ ನೋಟಿಸ್‌ ಹೊರಡಿಸಿದೆ.

National - International

ಮನಮೋಹನ ಸಿಂಗ್‌ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞ: ಅಮರ್ತ್ಯ ಸೇನ್‌ ಬಣ್ಣನೆ

Published

on

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್‌ ಅವರೊಬ್ಬರು ಉತ್ತಮ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದವರು. ಜೊತೆಗೆ ಜಗತ್ತಿನ ಅಗತ್ಯತೆಗಳನ್ನು ಅರ್ಥಮಾಡಿಕೊಂಡಿದ್ದ ಓರ್ವ ಅದ್ಭುತ ಅರ್ಥಶಾಸ್ತ್ರಜ್ಞ ಎಂದು ನೋಬೆಲ್‌ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್‌ ಬಣ್ಣಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿರಭೂಮ್‌ನಲ್ಲಿ ಶನಿವಾರ ಮಾತನಾಡಿದ ಅವರು, ನಾನು ಮತ್ತು ಮನಮೋಹನ ಸಿಂಗ್‌ ಕೇಂಬ್ರಿಡ್ಜ್‌ನಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದ್ದೇವು. ಆ ವೇಳೆ ಉತ್ತಮ ಸ್ನೇಹಿತರಾದ್ದೆವು. ನಾವಿಬ್ಬರೂ ವಿದ್ಯಾರ್ಥಿಗಳಾಗಿದ್ದಾಗ ಹಾಗೂ ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಹೋದ್ಯೋಗಿಗಳಾಗಿದ್ದಾಗಿಂದಲೂ ಹಲವಾರು ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವು ಎಂದು ನೆನದರು.

ಸಿಂಗ್‌ ಅವರು ಗೌತಮ ಬುದ್ಧ ವಿವರಿಸಿದ್ದ ವಜ್ರಚ್ಛೇದಿಕ ಪ್ರಜ್ಞಾಪರಮಿತಾ ಸಂದೇಶದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದವರು. ಮನಮೋಹನ ಸಿಂಗ್‌ ಸಿಖ್‌ ಧರ್ಮದವರಾಗಿದ್ದರೂ ಸಹಾ ಗೌತಮ ಬುದ್ಧ, ಇತರ ಧರ್ಮಗಳ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದರು.

ನಾನು ಮನಮೋಹನ ಸಿಂಗ್‌ ಅವರನ್ನು ತುಂಬಾ ಇಷ್ಟಪಟ್ಟಿದ್ದೇನೆ, ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ ಎಂದು ಅಮರ್ತ್ಯ ಸೇನ್‌ ವಿವರಿಸಿದರು.

Continue Reading

National - International

ರಾಜ್ಯ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ನದಾಫ್‌ ನೇಮಕ

Published

on

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ವಕೀಲ ತಾಜ್‌ ಅಲಿ ಮೌಲಾಸಾಬ್‌ ನದಾಫ್‌ ಅವರನ್ನು ನೇಮಿಸುವ ಅನಮೋದನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ನದಾಫ್‌ ಅವರನ್ನು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ನೇಮಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ 2023ರ 19 ರಂದು ಶಿಫಾರಸ್ಸು ಮಾಡಿತ್ತು.

ನದಾಫ್‌ ಅವರ ಅವಧಿ ಎರಡು ವರ್ಷಗಳಾಗಿದೆ. ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿ ಹುದ್ದೆಗಳ ಪೈಕಿ, 49 ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ.

Continue Reading

National - International

ಬಜೆಟ್‌ ಅಧಿವೇಶನದ ಮೊದಲ ಹಂತದ ಕಲಾಪ: ಮಾ.10 ಕ್ಕೆ ಮುಂದೂಡಿಕೆ

Published

on

ನವದೆಹಲಿ: ಬಜೆಟ್‌ ಅಧಿವೇಶನದ ಮೊದಲ ಹಂತದ ಕಲಾಪ ಶೇ.112ರಷ್ಟು ಫಲಭದ್ರವಾಗಿದ್ದು, ಸದನದ ಕಾರ್ಯಕಲಾಪಗಳನ್ನು ಮಾರ್ಚ್‌ 10ವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಘೋಷಿಸಿದರು.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ, 17 ಗಂಟೆ 23ನಿಮಿಷ ಚರ್ಚೆ ನಡೆದಿದೆ. ಬಜೆಟ್‌ ಮೇಲೆ 170 ಸದಸ್ಯರು ಮಾತನಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಗುಜರಾತ್‌ ಉದ್ಯಮಿಯೊಬ್ಬರಿಗೆ ಯೋಜನೆ ವಹಿಸುವ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ಮಸೂದೆ ಮಂಡಿಸಿದರು.

Continue Reading

Trending

error: Content is protected !!