Connect with us

Uncategorized

ವಿಪರೀತವಾಗಿ ಮಧ್ಯ ಸೇವನೆ ಮಾಡಿ ಕುಡಿತದ ಮತ್ತಿನಲ್ಲಿ ಆತ್ಮಹತ್ಯೆ

Published

on

ಯಳಂದೂರು ಸಮೀಪದ ಉಲ್ಲೇಪುರ ಗ್ರಾಮದ ಸಿದ್ದರಾಜುರವರ ಮಗನಾದ ಮನು 23 ವರ್ಷ ಯುವಕ ನೆನ್ನೆ ದಿನ ವಿಪರೀತವಾಗಿ ಮಧ್ಯ ಸೇವನೆ ಮಾಡಿ ಕುಡಿತದ ಮತ್ತಿನಲ್ಲಿ ಪುಟ್ಟಶೆಟ್ಟಿ ರವರ ಜಮೀನಿನ ತೆೇಗದ ಮರ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಈತನು ತನ್ನ ಮಾವ ಹೀಗೆ 15 ದಿನಗಳ ಹಿಂದೆ ತೀರಿ ಹೋದ ಕಾರಣ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕುಡಿದ ಚಟಕ್ಕೆ ದಾಸನಾಗಿದ್ದ.

ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Continue Reading
Click to comment

Leave a Reply

Your email address will not be published. Required fields are marked *

Kodagu

ಉಡೋತ್ ಮೊಟ್ಟೆ : ಡಿ.6 & 7  ರಂದು ಕೊರಗಜ್ಜ ದೈವದ ನೇಮೋತ್ಸವ

Published

on

ಮಡಿಕೇರಿ : ಉಡೋತ್‌ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ.

ಡಿ.6ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು. ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.

ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900931278 , 9591304757೯೫೯೧೩೦೪೭೫೭, ೯೪೮೩೩೯೯೦೭೭ ಸಂಪರ್ಕಿಸಬಹುದಾಗಿದೆ.

Continue Reading

Uncategorized

ತರಳಬಾಳು ಸಮಾಗಮ, ಶಿಕ್ಷಣ ಕೇಂದ್ರದಿಂದ ರಾಜ್ಯೋತ್ಸವ, ದತ್ತಿ ಉಪನ್ಯಾಸ

Published

on

ಮೈಸೂರು: ನಗರದ ಟಿ.ಕೆ. ಬಡಾವಣೆಯ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ತರಳಬಾಳು ಸಮಾಗಮ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಹಾಗೂ ಎಚ್‌.ಎಸ್‌. ರುದ್ರಪ್ಪ, ರೇವಮ್ಮ ಹಾಗೂ ಆರ್‌.ಬಿ. ಚನ್ನಬಸಪ್ಪ, ಎನ್‌. ಸುವರ್ಣ ಮತ್ತು ಎಚ್‌. ಗುರುಸಿದ್ದಪ್ಪ, ಕಲ್ಲಮ್ಮ ಹಾಗೂ ಎಂ. ಸಿದ್ದಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು. ಜೆಎಸ್ಎಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಲ್‌. ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು.


ತರಳಬಾಳು ಸಮಾಗಮ ಅಧ್ಯಕ್ಷ ಡಿ.ಎನ್‌. ಲೋಕಪ್ಪ ಅಧ್ಯಕ್ಷತೆ ವಹಿಸಿದ್ದರು. ತರಳಬಾಳು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಮಹದೇವಸ್ವಾಮಿ, ಡಾ.ಎಚ್.ಎಸ್. ರುದ್ರೇಶ್‌ ಇದ್ದರು. ತರಳಬಾಳು ಸಮಾಗಮದ ಕಾರ್ಯದರ್ಶಿ ಶಿವಕುಮಾರ್‌ ಹಂಜಿ ಸ್ವಾಗತಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡದಲ್ಲಿ ಅಧಿಕ ಅಂಕಗಳನ್ನು ಪಡೆದ ಪಿಯುಸಿಯ ಮೌರ್ಯ ಲೋಕೇಶ್‌, ಸಿ.ಎಸ್‌. ನಿಶ್ಚಲ್‌, ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಂ. ಧನುಷ್‌ ಹಾಗೂ ಜಿ. ನಮಿತಾ ಅವರಿಗೆ ಪುರಸ್ಕಾರ ನೀಡಲಾಯಿತು. ಆರು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳು ನೃತ್ಯ, ಸಾನ್ವಿ ಹಾಗೂ ಕವನ ಅವರು ಕನ್ನಡ ಭಾವಗೀತೆ ಹಾಡಿದರು.

Continue Reading

Mysore

ಖೋಖೋ ಪಂದ್ಯಾವಳಿಗೆ ಚಾಲನೆ

Published

on

ಮೈಸೂರು: ನಗರದ ಪ್ರತಿಷ್ಠಿತ ಚಾಮುಂಡಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ಖೋಖೋ ಪಂದ್ಯಾವಳಿಯನ್ನು ನಟ ಜಯಪ್ರಕಾಶ್ (ಜೆಪಿ) ಉದ್ಘಾಟಿಸಿದರು. ಕ್ರೀಡಾಪಟುಗಳು ಸತತವಾಗಿ ಅಭ್ಯಾಸ ಮಾಡುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಟಗಾರರಾಗಬೇಕೆಂದು ಜೆಪಿ ರವರು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಹನುಮಂತೇಗೌಡ ರಘು ಆಚಾರ್, ಶ್ರೀನಿವಾಸ್ ಗೌಡ್ರು ಸುಧೀರ್ ಆದರ್ಶ್ ಗೌಡ ಮತ್ತು ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Continue Reading

Trending

error: Content is protected !!