Connect with us

Mandya

ಸಕ್ಕರೆ ಕಾರ್ಖಾನೆ ಧೂಳು ಗ್ರಾಮದ ಮನೆಯೊಳಗೆ : ಆರೋಗ್ಯ ಹಾಗೂ ಪರಿಸರ ಹಾನಿ ತಡೆ ಕ್ರಮಕ್ಕೆ ಮುಂದಾಗಲು ಒತ್ತಾಯ

Published

on

ಶ್ರೀರಂಗಪಟ್ಟಣ : ಪಾಂಡವಪುರ ಸಕ್ಕರೆ ಕಾರ್ಖಾನೆಯ ಧೂಳು ಗ್ರಾಮದ ಮನೆಯೊಳಗೆ ಆವರಿಸಿಕೊಳ್ಳುತ್ತಿದ್ದು, ಆರೋಗ್ಯ ಹಾಗೂ ಪರಿಸರ ಹಾನಿ ತಡೆಗೆ ಮುಂದಾಗುವಂತೆ ಅಕ್ಕಪಕ್ಕದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇಲ್ಲಿನ ಸಕ್ಕರೆ ಕಾರ್ಖಾನೆಯಿಂದ ಬರುವ ಧೂಳು ಹೊರಬರದಂತೆ ತಡೆಗೆ ಮುಂದಾಗಬೇಕು ಎಂದು ಒತ್ತಾಯಿಸಿ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರ್ಖಾನೆ ಮುಖ್ಯಸ್ಥರಿಗೆ ಮನವಿ ನೀಡಿದ್ದು, ವೇದಿಕೆ ಅಧ್ಯಕ್ಷ ಜ್ಞಾನೇಶ್ ಮಾತನಾಡಿ ಕಾರ್ಖಾನೆ ಧೂಳಿನಿಂದಾಗಿ ಮಕ್ಕಳು ಹಾಗೂ ವಯೋವೃದ್ದರಿಗೆ ಹುಸಿರಾಟದ ಸಮಸ್ಯೆ ಉಂಟಾಗುತ್ತಿರುವುದಾಗಿ ಕಿಡಿಕಾರಿದ್ದಾರೆ.

ಪಿ ಎಸ್ ಎಸ್ ಕೆ ಸಕ್ಕರೆ ಕಾರ್ಖಾನೆಯ ಹೊಗೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಇಲ್ಲದೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ವಸತಿಯ ಮೇಲೆ ಧೂಳಿನ ವಾತಾವರಣ ಸೃಷ್ಠಿಯಾಗುತ್ತಿದ್ದು, ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮವನ್ನು ಕೂಡಲೇ ತಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ನಮ್ಮ ಭಾಗದಲ್ಲಿ ಸಕ್ಕರೆ ಕಾರ್ಖಾನೆ ನಡೆಯುತ್ತಿರುವುದು ಹರ್ಷದ ಸಂಗತಿ. ಇದನ್ನು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಪ್ರಶಂಸಿಸುತ್ತದೆ. ಆದರೆ ಈ ಕಾರ್ಖಾನೆಯಿಂದ ಹೊರಬರುತ್ತಿರುವ ಹೊಗೆಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದು, ಸ್ಥಳೀಯ ಗ್ರಾಮಗಳಾದ ಕೆನ್ನಾಳು, ರೈಲ್ವೆ ಸ್ಟೇಷನ್, ದರಸುಕುಪ್ಪೆ, ನೆಲಮನೆ, ಕೆಂಪೇಗೌಡನ ಕೊಪ್ಪಲು,. ಹನುಮಂತನಗರ, ಕೂಡಲಕುಪ್ಪೆ,ಬಲ್ಲೇನಹಳ್ಳಿ, ಚಂದಗಿರಿ ಕೊಪ್ಪಲು, ಸಬ್ಬನಕುಪ್ಪೆ, ಮಲ್ಲೇಗೌಡನ್ ಕೊಪ್ಪಲು, ಚಿನ್ನನಹಳ್ಳಿ, ಎಂತಹಳ್ಳಿ, ಕೆ. ಶೆಟ್ಟಿಹಳ್ಳಿ, ಕಿರಂಗೂರು, ಬಾಬುರಾಯನ ಕೊಪ್ಪಲು ಹಾಗೂ ಸುತ್ತಮುತ್ತಲಿರುವ 10 ರಿಂದ 12 ಕಿಲೋಮೀಟರ್ ದೂರದ ಗ್ರಾಮಗಳವರೆಗೆ ಸಕ್ಕರೆ ಕಾರ್ಖಾನೆಯಿಂದ ಬರುತ್ತಿರುವ ಧೂಳು ಮನೆಗಳ ಮೇಲೆ ಕೂರುತ್ತಿದೆ. ಜೊತೆಗೆ ಕಿಟಕಿ ಮೂಲಕ ಮನೆಯೊಳಗೂ ಹೋಗಿ ಗೋಡೆಗಳೆಲ್ಲವೂ ಕಪ್ಪ ಬಣ್ಣದ ಧೂಳಿನಿಂದ ಮುಚ್ಚಿಹೋಗುತ್ತಿದ್ದು, ಇದರಿಂದ ಜನ ವಸತಿಯ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ.

ಕಾರ್ಖಾನೆ ಮಾಲೀಕರು ಆಧುನಿಕ ತಂತ್ರಜ್ಞಾನ ಯಂತ್ರಗಳನ್ನು ಬಳಕೆ ಮಾಡುವ ಮೂಲಕ ಆದಷ್ಟು ಹೊಗೆ ನಿಯಂತ್ರಣ ಮಾಡಿ, ರಸ್ತೆಯಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಧೂಳಿನ ನರಕಯಾತನೆಯನ್ನು ತಪ್ಪಿಸುವಂತೆ ಕಾರ್ಉಕರ್ತರು ಆಗ್ರಹಿಸಿದ್ದಾರೆ.

ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿ ಗೌಡ, ಕಾರ್ಯಕರ್ತರಾದ, ಸುರೇಶ್, ಯೋಗೇಶ್, ವಿನೋದ್, ಮನು ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Mandya

ಶಾಲಾ ಪುನರಾರಂಭದ ಹಿನ್ನೆಲೆ ಶಿಕ್ಷಣ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

Published

on

ಮಂಡ್ಯ : ಶಾಸಕ ಪಿ . ರವಿಕುಮಾರ್ ಗೌಡ ಅವರು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಮಂಡ್ಯ ಪ್ರವಾಸಿ ಮಂದಿರದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಜೂನ್ 1ರಿಂದ ಶಾಲೆಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಬ್ಬದ ವಾತಾವರಣದಲ್ಲಿ ಪ್ರೀತಿಪೂರ್ವಕ ಸ್ವಾಗತ ಕೋರಬೇಕು ಎಂದು ಅವರು ಸೂಚಿಸಿದರು.

ಪ್ರತಿಯೊಂದು ಶಾಲೆಯಲ್ಲೂ ಮಕ್ಕಳಿಗೆ ಆತ್ಮೀಯತೆ, ಸಂತೋಷ ಮತ್ತು ಉತ್ಸಾಹ ತುಂಬುವ ರೀತಿಯಲ್ಲಿ ವಿಶೇಷ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಶಾಸಕರು, “ಸರ್ಕಾರಿ ಶಾಲೆಗಳ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಅಧಿಕಾರಿಗಳ ಮೇಲಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನಾನು ನೀಡುತ್ತೇನೆ. ಪ್ರತಿ ಮಗುವಿಗೂ ಶಿಕ್ಷಣ ದೊರಕಬೇಕು ಎಂಬುದು ನನ್ನ ಮೊದಲ ಆದ್ಯತೆ” ಎಂದು ಹೇಳಿದರು.

ಖಾಸಗಿ ಶಾಲೆಗಳತ್ತ ಮುಖಮಾಡಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮ ಪ್ರಮುಖ ಗುರಿಯಾಗಬೇಕು ಎಂದು ತಿಳಿಸಿದ ಅವರು, ಸರ್ಕಾರಿ ಶಾಲೆಗಳಲ್ಲೇ ಉತ್ತಮ ಶಿಕ್ಷಣ, ಮೂಲಭೂತ ಸೌಲಭ್ಯಗಳು ಹಾಗೂ ಗುಣಮಟ್ಟದ ಬೋಧನೆ ಲಭ್ಯವಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಕ್ಷೇತ್ರದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಶಾಸಕರು, ಪ್ರತಿಯೊಂದು ಗ್ರಾಮದಲ್ಲೂ ಮನೆಮನೆಗೆ ತೆರಳಿ ವಿದ್ಯಾರ್ಥಿಗಳ ದಾಖಲಾತಿ ಅಭಿಯಾನ ನಡೆಸಬೇಕು. ಖಾಸಗಿ ಶಾಲೆಗಳತ್ತ ಮುಖಮಾಡಿರುವ ಪೋಷಕರನ್ನು ಮನವೊಲಿಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವ ಕಾರ್ಯಕ್ಕೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಶಾಲಾ ಪುನರಾರಂಭವನ್ನು ವಿಭಿನ್ನವಾಗಿ ಆಚರಿಸಿ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಸ್ವಾಗತಿಸುವ ಮಂಡ್ಯ ವಿಧಾನಸಭಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳಿಗೆ ತಲಾ ₹10,000 ನಗದು ಬಹುಮಾನವನ್ನು ವೈಯಕ್ತಿಕವಾಗಿ ನೀಡುವುದಾಗಿ ಅವರು ಘೋಷಿಸಿದರು.

ಇದರೊಂದಿಗೆ, ಕ್ಷೇತ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿ ದಾಖಲಾತಿ ಮಾಡಿಸಿರುವ ಸರ್ಕಾರಿ ಶಾಲೆಗೆ ವಿಶೇಷವಾಗಿ ₹5 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.

Continue Reading

Mandya

ರಾಜ್ಯದ ರೈತರ ಹಿತ ಕಾಯಲು ನಿತ್ಯ ಸೇವೆ : ಸಚಿವ ಚಲುವರಾಯಸ್ವಾಮಿ

Published

on

ನಾಗಮಂಗಲ : ರಾಜ್ಯದ ಗ್ರಾಮೀಣ ರೈತರ ಹಿತಕಾಯಲು ಕೃಷಿಮಂತ್ರಿಯಾಗಿ ನಿತ್ಯ ಸೇವೆ ಮಾಡಲು ಸದಾ ಕಟಿಬದ್ಧನಾಗಿದ್ದೇನೆಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಅವರು ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ದೇವಲಾಪುರ ರೈತ ಉತ್ಪಾದಕರ ಕಂಪನಿಯ ಕಟ್ಟಡಗಳನ್ನ ಲೋಕಾರ್ಪಣೆಗೊಳಿಸಿ ಮಾತನಾಡಿ, ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಜೊತೆಗೆ ರಾಜ್ಯದ ರೈತರ ಸಂಕಷ್ಟದ ನೆರವಿಗೆ ಸದಾ ಸೇವೆ ಮಾಡಲು ಕೃಷಿ ಇಲಾಖೆ ಸಹಕಾರದೊಂದಿಗೆ ರೈತರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖಾಂತರ ರೈತರ ಆರ್ಥಿಕ ಅಭಿವೃದ್ಧಿ ಗುಣಮಟ್ಟ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಮೂಲಕ ರೈತರಿಗೆ ದೊರಕುವ ಸೌಲಭ್ಯ ಹಾಗೂ ಬೆಳೆ ಬೆಳೆಯುವ ಸಲಹೆ ಮಾರ್ಗದರ್ಶನಗಳನ್ನು ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ರೈತ ಉತ್ಪಾದಕ ಕಂಪನಿ ಕೇಂದ್ರಗಳನ್ನು ಸಂಪರ್ಕಿಸುವ ಮುಖಾಂತರ ಸೌಲಭ್ಯಗಳನ್ನು ಪಡೆದು ಕೃಷಿಯಲ್ಲಿ ತಮ್ಮದೇ ಆದ ಬೆಳೆಗಳನ್ನು ಬೆಳೆಯುವ ಮುಖಾಂತರ ಕೃಷಿಯಲ್ಲಿ ಹೊಸ ಚಾಪು ಮೂಡಿಸಲು ಅನುಕೂಲ ಪಡೆದುಕೊಳ್ಳಬೇಕು ಎಂದರು.

ತಾಲೂಕು ಹಾಗೂ ತಮ್ಮ ಊರುಗಳ ಅಭಿವೃದ್ಧಿಗೆ ನನ್ನ ಇತಿಮಿತಿಯಲ್ಲಿ ಕೈಲಾದ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಹಾಗೂ ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿಯ ಜೊತೆಗೂ ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನಗೊಳಿಸುವ ಮುಖಾಂತರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ನಮ್ಮ ಸಾಧನೆಗಳನ್ನು ತಾವುಗಳು ಇನ್ನೂ ಅರ್ಥ ಮಾಡಿಕೊಳ್ಳದಿರುವುದು ತುಂಬಾ ಬೇಸರವಾಗಿದ್ದು, ನನ್ನ ಈ ಅವಧಿಯಲ್ಲಿ ತಾವುಗಳೇ ಅರ್ಥ ಮಾಡಿಕೊಂಡು ಅಭಿವೃದ್ಧಿ ಮುಂಚೂಣಿಗೆ ಪ್ರಾಮಾಣಿಕ ಪ್ರಯತ್ನದಲ್ಲಿ ನನ್ನ ಸೇವೆ ಸದಾ ನಿರಂತರವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಅಪ್ಪಾಜಿಗೌಡರು ಸಚಿವ ಚೆಲುವರಾಯಸ್ವಾಮಿ ಅವರ ಕೃಷಿ ಕ್ಷೇತ್ರ ಹಾಗೂ ತಾಲೂಕಿನ ಅಭಿವೃದ್ಧಿ ಮುಂಚೂಣಿಯ ಸಾಧನೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು.

ಸಮಾರಂಭದಲ್ಲಿ ಅಧಿಕಾರಿಗಳಾದ ಉಪೇಂದ್ರ ಪ್ರತಾಪ್ ಸಿಂಗ್, ಅಶೋಕ್ ಜಯಸ್ವಾಮಿ, ತಹಸೀಲ್ದಾರ್ ಆದರ್ಶ, ತಾ.ಪಂ. ಇಓ ಸತೀಶ್, ದೇವಗಿರಿ, ಡಾ. ಭಾನುಪ್ರಕಾಶ್ ಪಾಂಡವಪುರ ಉಪ ವಿಭಭಾಗಾಧಿಕಾರಿ ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ ಹರೀಶ್ ಸೇರಿದಂತೆ ಮುಖಂಡರುಗಳಾದ ಮಾವಿನಕೆರೆ ಸುರೇಶ್. ಉದಯ್ ಕಿರಣ್. ಶಶಿ. ತಟ್ಟಹಳ್ಳಿ ನರಸಿಂಹಮೂರ್ತಿ. ನಂದಿ ರಮೇಶ್ ಹಾಗೂ ರೈತ ಉತ್ಪಾದಕ ಕಂಪನಿಯ ನಿರ್ದೇಶಕರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಉತ್ಪಾದಕ ಕಂಪನಿ ನಿರ್ದೇಶಕ ಹಾಗೂ ಅಧ್ಯಕ್ಷರಾದ ಎನ್ ಜೆ ರಾಜೇಶ್ ಎಲ್ಲರನ್ನೂ ಸ್ವಾಗತಿಸಿದರು.

Continue Reading

Mandya

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದಿದ್ದರೆ  ಕಠಿಣ ಕ್ರಮ: ಕೆ.ಎಂ.ಉದಯ್‌

Published

on

ಮದ್ದೂರು: ಸರ್ಕಾರಿ ಜಮೀನುಗಳು, ಸ್ಮಶಾನ ಹಾಗೂ ಗೋಮಾಳ ಪ್ರದೇಶಗಳ ಒತ್ತುವರಿಯನ್ನು ತಕ್ಷಣ ತೆರವುಗೊಳಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಡಿಒಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದರು.

ತಾಲೂಕಿನ ಹಲವು ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳ ಮೇಲೆ ವರ್ಷಗಳಿಂದ ಒತ್ತುವರಿ ನಡೆಯುತ್ತಿದ್ದು, ಕಂದಾಯ, ಸರ್ವೆ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಸ್ಮಶಾನ ಮತ್ತು ಗೋಮಾಳ ಜಾಗಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕೆಂದೂ ಅವರು ಹೇಳಿದರು.

ಆಶ್ರಯ ಯೋಜನೆಯಡಿ ಗುರುತಿಸಿರುವ ಜಾಗಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಹಾಗೂ ಸ್ಥಳೀಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಹ ಸೂಚನೆ ನೀಡಲಾಯಿತು.

ಸಭೆಯಲ್ಲಿ ಮುಂದಿನ ಜುಲೈ ತಿಂಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ತಿಳಿಸಲಾಯಿತು.

Continue Reading

Trending

error: Content is protected !!