Connect with us

Mandya

ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ

Published

on

ಮಂಡ್ಯ : ಜಿಲ್ಲೆಯಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು 14 ದಿನದೊಳಗಾಗಿ ರೈತರಿಂದ ಖರೀದಿ ಮಾಡುವ ಕಬ್ಬಿನ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಅವರು ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ ಮಾತನಾಡಿ, ಮೈ ಶುಗರ್ ಸಕ್ಕರೆ ಕಾರ್ಖಾನೆಯು ಸರ್ಕಾರಿ ಸಂಸ್ಥೆಯಾಗಿದ್ದು, ರೈತರಿಂದ‌ ಖರೀದಿ ಮಾಡಿರುವ ಕಬ್ಬಿಗೆ ಹಣ ಪಾವತಿಸಲಾಗಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೂ ಸಹ ಪಾವತಿಸಲು ಯಾವುದೇ ತೊಂದರೆ ಇಲ್ಲ ಎಂದರು.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಕೊಪ್ಪ ಎನ್.ಎಸ್. ಎಲ್ ಹಾಗೂ ಕೆ.ಆರ್.ಪೇಟೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗಳಲ್ಲಿ ಪಾವತಿಗೆ ಬಾಕಿ ಇರುವ ರೈತರ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಮಾಚ್೯ 10 ರೊಳಗೆ ಹಣ ಪಾವತಿ ಮಾಡಬೇಕು. ಕೋರಮಂಡಲ್ ಹಾಗೂ ಎನ್.ಎಸ್.ಎಲ್ ಕಾರ್ಖಾನೆ ಅವರು ಫೆಬ್ರವರಿ 28 ರೊಳಗಾಗಿ ಹಣ ಪಾವತಿಸುವಂತೆ‌ ತಿಳಿಸಿದರು.

ರೈತರು ಹಾಗೂ ಸಕ್ಕರೆ ಕಾರ್ಖಾನೆಯ ನಡುವೆ ಬಾಂದವ್ಯ ಉತ್ತಮವಾಗಿರಬೇಕು. ರೈತರ ಕುಟುಂಬದಲ್ಲಿ ಮದುವೆ, ಆರೋಗ್ಯದಲ್ಲಿ ತೊಂದರೆ ಮುಂರಾದ ಕಷ್ಟವಿರುವ ಸಂದರ್ಭದಲ್ಲಿ ಆದ್ಯತೆಯ ಮೇಲೆ ಹಣ ಪಾವತಿಸಬೇಕು.

ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕಡಿಮೆ ಅದನ್ನು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗಿತ್ತು. ಅವರು ನೀಡಿರುವ ವರದಿಯನ್ನು ಸಕ್ಕರೆ ಆಯುಕ್ತರಿಗೆ ಕಳುಹಿಸಿಕೊಡಿ ಎಂದರು‌.

ಸಕ್ಕರೆ ಕಾರ್ಖಾನೆ ಅವರು ಸಹ ರೈತರಿಗೆ ಉಪಯೋಗಿಸಬೇಕಿರುವ ತಳಿ, ಗೊಬ್ಬರ, ಬೆಳೆಯಲ್ಲಿ ನೀಡಬೇಕಿರುವ ಅಂತರ ಸೇರಿದಂತೆ ಕೃಷಿ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿ.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣ ಕುಮಾರ್, ವ್ಯವಸ್ಥಾಪಕಿ ರೇಣುಕಾ, ಕೃಷಿ ಇಲಾಖೆಯ ಅಧಿಕಾರಿ ಹರ್ಷಾ, ವಿವಿಧ ಕಂಪನಿಗಳು ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ರೈತ ಮುಖಂಡರುಗಳು ಉಪಸ್ಥಿತರಿದ್ದರು.

Continue Reading

Mandya

ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ

Published

on

ಮಂಡ್ಯ: ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮದ್ಯೆದಲ್ಲಿಯ ಮೃತನ ಶವ ಸುಟ್ಟ ಘಟನೆಗೆ ಸಂವಂಧಿಸಿದಂತೆ ಜನಮಿತ್ರ ಪತ್ರಿಕೆ ಹಾಗೂ ಡಿಜಿಟಲ್ ವರದಿಗೆ ಫಲಶೃತಿ ದೊರೆತಿದೆ.

ಜನಮಿತ್ರ ವರದಿಯಿಂದ ಎಚ್ಚತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ರಸ್ತೆಯ ಇಕ್ಕೆಲಗಳ ಇಬ್ಬರೂ ರೈತರಿಂದ ಹತ್ತು, ಹತ್ತು ಅಡಿ ಜಾಗವನ್ನು ಸ್ಮಶಾಬದ ರಸ್ತೆಗೆ ಬಿಡಿಸಿ ಸಫಲತೆ ಕಂಡಿದೆ‌.

ಜನಮಿತ್ರ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳ ತಂಡ, ಸ್ಮಶಾನ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ತೆರಳುವ ರಸ್ತೆಯ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ‌.

ರಸ್ತೆಯ ಎರಡೂ ಬದಿಯಲ್ಲಿನ ರೈತರಾದ ಅಂಧಾನಿಗೌಡ ಹಾಗೂ ಯಶೋಧಮ್ಮ ರವರಿಂದ ತಲಾ ಹತ್ತು ಹತ್ತು ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಟ್ಟುಕೊಡುವಂತೆ ಮನವಲೈಸಿದ್ದಾರೆ.

ತಾಲ್ಲೂಕು ಆಡಳಿತದ ಮದ್ಯಸ್ಥಿಕೆಯಿಂದಾಗಿ ಇದೀಗ ಹೆಬ್ಬಾಡಿಹುಂಡಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜನಮಿತ್ರ ಪತ್ರಿಕೆ ಹಾಗೂ ಜನಮಿತ್ರ ಡಿಜಿಜಿಟಲ್ ನ್ಯೂಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Mandya

ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಚೆಲುವರಾಯಸ್ವಾಮಿ

Published

on

ನಾಗಮಂಗಲ : ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಬಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡುತ್ತ ಮಾತನಾಡಿದರು.

ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್. ಎಚ್ ಟಿ ಕೃಷ್ಣೆ ಗೌಡ. ಪುರಸಭಾ ಅಧ್ಯಕ್ಷರು ಗಣ್ಯರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

Continue Reading

Mandya

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ

Published

on

ಮಂಡ್ಯ : ಈ ಚಿತ್ರದಲ್ಲಿರುವ ವ್ಯಕ್ತಿ ಇಂದು (ಮಾ.14) ರಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲುಗಾಡಿಯಿಂದ ಬಿದ್ದು ಗಾಯಗೊಂಡಿರುತ್ತಾರೆ.

ಸದರಿಯವರ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ, ಅಥವ ಇವರ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ ಮಾಹಿತಿ ನೀಡಲು
ರೈಲ್ವೆ ಹೊರ ಉಪ ಠಾಣೆ ಮಂಡ್ಯ ಕೋರಿದೆ.

Continue Reading

Trending

error: Content is protected !!