Kodagu
ಮನಸ್ಸು ಶುದ್ಧೀಕರಣಗೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ: ಮುಸ್ತಫಾ ಸಖಾಫಿ
ಸಿದ್ದಾಪುರ : ಮನುಷ್ಯನ ಮನಸ್ಸು ಶುದ್ದೀಕರಣಗೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಅಭಿಪ್ರಾಯಪಟ್ಟರು.
ಮುಸ್ಲಿಮ್ ಬಾಂಧವರ ಈದುಲ್ ಫಿತ್ರ್ ಹಬ್ಬದ ಈದ್ ನಮಾಝ್ ನೇತೃತ್ವ ವಹಿಸಿ ಕಂಡಕರೆ ಮಸ್ಜಿದ್ ತಖ್ವಾದಲ್ಲಿ ಮಾತನಾಡಿದ ಅವರು,
ಮನಸ್ಸಿನಲ್ಲಿ ದ್ವೇಷ,ಅಸೂಯೆ ಇರಿಸಿಕೊಂಡು ಜೀವನ ನಡೆಸಬಾರದು.
ಮನುಜರ ಮನಸ್ಸು ಸದಾ ಕಾಲ ಶುದ್ಧೀಕರಣದಿಂದಿರಬೇಕು. ಅದಲ್ಲದೇ ಮನಸ್ಸಿನಲ್ಲೊಂದು,ಹೊರಗಡೆ ಒಂದು ವ್ಯಕ್ತಿತ್ವ ಇರಬಾರದು.
ನಮ್ಮ, ನಡೆ,ನುಡಿ ನೇರವಾಗಿರಬೇಕು ಎಂದು ಹೇಳಿದ ಅವರು,

ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವ ಸಮುದಾಯ ಬಲಿಯಾಗುತ್ತಿದ್ದಾರೆ.
ಡ್ರಗ್ಸ್, ಗಾಂಜಾ,ಇನ್ನಿತರ ಮಾದಕ ವ್ಯಸನಗಳಿಂದ ಯುವಕರು ದೂರವಿದ್ದು ಸಮಾಜದ ಯಶಸ್ವಿಗೆ ದುಡಿಯಬೇಕು ಎಂದು ಮುಸ್ತಫಾ ಸಖಾಫಿ ಕರೆ ನೀಡಿದರು.
ಈದುಲ್ ಫಿತ್ರ್ ನಮಾಝಿನ ಬಳಿಕ ಕಂಡಕರೆ ಖಬರ್ ಸ್ಥಾನದಲ್ಲಿ ಮರಣವೊಂದಿದವರಿಗೆ ವಿಶೇಷ ಪಾರ್ಥನೆ ನೆರವೇರಿಸಲಾಯಿತು.
ನಂತರ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡುವುದರ ಮೂಲಕ ಈದುಲ್ ಫಿತ್ರ್ ಶುಭಕೋರಿದರು.
ಈ ಸಂದರ್ಭ ಮಹಮ್ಮದ್ ಮುಸ್ಲಿಯಾರ್,ಕಂಡಕರೆ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ,ಉಪಾಧ್ಯಕ್ಷ ಕೆ.ಎ ಹುಸೈನ್, ಪ್ರ.ಕಾರ್ಯದರ್ಶಿ ಸರ್ಫುದ್ದೀನ್, ಸಹ ಕಾರ್ಯದರ್ಶಿ ಪಿ.ಎಂ ಗಫೂರ್ ಮತ್ತಿತರರು ಇದ್ದರು.

Kodagu
ಅಂತರ್ಜಾಲ ಬಳಕೆ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯ: ಆರ್.ಐಶ್ವರ್ಯ
ಮಡಿಕೇರಿ :-ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸರಕಾರಿ ಸೇವೆಗಳು ಹಾಗೂ ಕೆಲಸಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಜನಸಾಮಾನ್ಯರಿಗೆ ಒದಗಿಸಲು ಪೂರಕವಾಗಿದೆ. ಅವುಗಳ ಮಾಹಿತಿಗಳು ಅಂತರ್ಜಾಲದಲ್ಲಿ ಸೋರಿಕೆಯಾಗದಂತೆ ಸುರಕ್ಷಿತ ಕ್ರಮ ಅನುಸರಿಸುವುದು ಅತ್ಯಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ತಿಳಿಸಿದ್ದಾರೆ.

ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಅಂತರ್ಜಾಲ ಸುರಕ್ಷತೆಯ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ಅತ್ಯಂತ ಸುಲಭವಾಗಿದೆ. ಸರಕಾರಿ ವೆಬ್‍ಸೈಟ್ ಗಳನ್ನು ಹ್ಯಾಕರ್ ಗಳು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದಿದಾಗ ತಮಗಾದ ಮೋಸದ ಬಗ್ಗೆ ದೂರು ನೀಡಿ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಆರ್.ಐಶ್ವರ್ಯ ಅವರು ವಿವರಿಸಿದರು.
ಅಧಿಕಾರಿಗಳು ಕಚೇರಿಯ ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಅಂತರ್ಜಾಲ ಬಳಕೆಯ ಉಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಅದರ ಅನಾನುಕೂಲತೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಆನ್‍ಲೈನ್ ವ್ಯವಹಾರ, ಬ್ಯಾಂಕಿಂಗ್ ಉಪಯೋಗಿಸುವಾಗ ಎಚ್ಚರ ವಹಿಸಬೇಕು. ಕೆಲವೊಮ್ಮೆ ಅಪರಿಚಿತ ಮೊಬೈಲ್ ನಂಬರ್ ಗಳ ಬಗ್ಗೆಯೂ ಅಧಿಕಾರಿಗಳು ಗಮನವಹಿಸಬೇಕು. ಯಾವುದೇ ಮಾಹಿತಿ ನೀಡುವಾಗ ಎಚ್ಚರ ವಹಿಸಬೇಕು ಎಂದರು.
ಎನ್‍ಐಸಿ ಅಧಿಕಾರಿ ಸಂಗೀತಾ ಮಾತನಾಡಿ, ಸುರಕ್ಷಿತ ಅಂತರ್ಜಾಲ ದಿನ ಪ್ರಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಪೇಸ್‍ಬುಕ್, ಇನ್ಸ್ಟ್ಸಾಗ್ರಾಮ್ ಬಳಸುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಾಸ್‍ವರ್ಡ್‍ಗಳನ್ನು ಯಾರ ಬಳಿಯು ಹಂಚಿಕೊಳ್ಳಬಾರದು. ಇದರಿಂದ ವಂಚಕರು ಮಾಹಿತಿ ಕದಿಯುವ ಸಂದರ್ಭಗಳು ಬರುತ್ತವೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವ ಡಿವೈಸ್‍ಗಳನ್ನು ಬಳಸಬೇಡಿ, ಇತರರ ಮೊಬೈಲ್ ಯುಎಸ್‍ಬಿ ಕೇಬಲ್ ಗಳನ್ನು ಉಪಯೋಗಿಸುವಾಗ ಎಚ್ಚರ ವಹಿಸಿ ಎಂದು ಎನ್‍ಐಸಿ ಅಧಿಕಾರಿ ಅವರು ಹೇಳಿದರು.
ಅಲ್ಲದೇ ನಮ್ಮ ದಿನನಿತ್ಯದ ಜೀವನದಲ್ಲಿ ಇಂಟರ್ನೆಟ್ ಬಳಕೆ, ಅಂತರ್ಜಾಲದ ಸುರಕ್ಷಿತ ಬಳಕೆ, ಸಾಮಾನ್ಯ ಸೈಬರ್ ಬೆದರಿಕೆಗಳು, ಸೈಬರ್ ನೈರ್ಮಲ್ಯ ಅಭ್ಯಾಸಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಕಾರ್ಯವಿಧಾನ, ಆನ್‍ಲೈನ್‍ನಲ್ಲಿ ಸುರಕ್ಷಿತವಾಗಿರಲು ಜಾಗೃತಿ ಸಂಪನ್ಮೂಲಗಳ ಕುರಿತು ವಿವರಿಸಿದರು. .
ಕಾರ್ಯಾಗಾರದಲ್ಲಿ ಡಿವೈಎಸ್ಪಿ ಲಕ್ಷ್ಮೀಕಾಂತ ತಳವಾರ್, ಡಿವೈಒ ಸಿಂಧೂರ್ ರಾಮಯ್ಯ ತಳವಾರ್, ಎಂಜಿನಿಯರ್ ತೇಜಶ್ ಎಸ್., ನೆಟ್‍ವರ್ಕ್ ಎಂಜಿನಿಯರ್ ಆಕಾಶ್ ಕೆ.ಆರ್., ಸುಯೋಗ್ ಸ್ಪಿನ್ಸನ್, ಈ-ಆಫೀಸ್ ಇಲಾಖಾಧಿಕಾರಿ ಅಜಯ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
Kodagu
ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ.
ವಿರಾಜಪೇಟೆ: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತೀ ವರ್ಷದಂತೆ ಈ ವರ್ಷವು ಫೆಬ್ರವರಿ 11 ರಂದು ಸಂಜೆ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಮಹೋತ್ಸವವನ್ನು ಆಚರಿಸಲಾಯಿತು. ಹಬ್ಬದ ಹಿಂದಿನ ಮೂರು ದಿವಸಗಳ ಕಾಲ ಚರ್ಚ್ ನಲ್ಲಿ ಆಧ್ಯಾತ್ಮಿಕ ಸಿದ್ಧತೆಯು ನಡೆಯಿತು. ಧ್ವಜಾರೋಹಣ, ಜಪಸರ, ಬಲಿಪೂಜೆ ಹಾಗೂ ನವೇನ ಪ್ರಾರ್ಥನೆಯು ಜರುಗಿತು. ಬೆಂಗಳೂರಿನ ರಕ್ಷಕರ ಸಭೆಯ ಗುರುಗಳಾದ ಫಾ. ರಾಬಿನ್ ರವರು ಈ ಮೂರು ದಿವಸಗಳ ಕಾಲ ಪ್ರವಚನವನ್ನು ನೀಡಿದರು. ಬುಧವಾರ ವಾರ್ಷಿಕ ಮಹೋತ್ಸವದ ದಿನದಂದು ಸಂಜೆ ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರವೋ ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಹಿಂದೆ ವಿರಾಜಪೇಟೆಯನ್ನು ಆಳಿದ ವೀರ ರಾಜರು ಸಂತ ಅನ್ನಮ್ಮ ಚರ್ಚ್ ಗೆ ಕೊಡುಗೆಯಾಗಿ ನೀಡಿದ ದೀಪಗಳನ್ನು ಧರ್ಮಾಧ್ಯಕ್ಷರು ಬೆಳಗಿಸುವುದರ ಮೂಲಕ ಧಾರ್ಮಿಕ ಆಚರಣೆಗಳಿಗೆ ಚಾಲನೆಯನ್ನು ನೀಡಲಾಯಿತು.

ಬೈಬಲ್ ಪಠಣ, ಪರಮ ಪ್ರಸಾದದ ವಿತರಣೆಯು ಈ ಸಂದರ್ಭದಲ್ಲಿ ನಡೆಯಿತು. ಗಾಯನ ವೃಂದದವರಿಂದ ದೇವರ ನಾಮಾವಳಿಯ ಸ್ತುತಿಯು ನಡೆಯಿತು. ತದನಂತರ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು. ಚರ್ಚ್ ಹಾಗೂ ಒಳ ಆವರಣವನ್ನು ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್, ಸಂತ ಅನ್ನಮ್ಮ ಪಿ ಯು ಕಾಲೇಜಿನ ಪ್ರಾಂಶುಪಾಲ ಹಾಗೂ ಅಮ್ಮತ್ತಿ ಚರ್ಚ್ ನ ಗುರುಗಳಾದ ರೆ. ಫಾ. ಮದಲೈ ಮುತ್ತು, ಧರ್ಮಗುರುಗಳಾದ ಫಾ.ಮೈಕಲ್ ಮೆನೇಜಸ್, ಫಾ.ಜಾನ್ ಡಿಕೋನ, ಫಾ.ದಯಾನಂದ ಪ್ರಭು, ಫಾ.ನವೀನ್ ಕುಮಾರ್ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಧರ್ಮಗುರುಗಳು, ಕನ್ಯಾ ಸ್ತ್ರೀಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.
ಸಂತ ಅನ್ನಮ್ಮ ನವರ ಹಾಗೂ ಲೂರ್ದು ಮಾತೆಯ ತೇರಿನ ಮೆರವಣಿಗೆ: ವಾರ್ಷಿಕ ಮಹೋತ್ಸವದ ಪ್ರಯುಕ್ತವಾಗಿ ಸಂತ ಅನ್ನಮ್ಮನವರ ಹಾಗೂ ಲೂರ್ದು ಮಾತೆಯ ಸ್ವರೂಪಗಳ ತೇರಿನ ಮೆರವಣಿಗೆಯು ವಿರಾಜಪೇಟೆ ನಗರದಲ್ಲಿ ನಡೆಯಿತು. ವಿದ್ಯುತ್ ಹಾಗೂ ಹೂವಿನ ಅಲಂಕೃತ ಮಂಟಪದಲ್ಲಿ ಸಂತ ಅನ್ನಮ್ಮ ಹಾಗೂ ಲೂರ್ದು ಮಾತೆಯವರ ಸ್ವರೂಪಗಳನ್ನು ಪ್ರತಿಷ್ಠಾಪಿಸಿ ಸಂತ ಅನ್ನಮ್ಮ ಚರ್ಚ್ ನಿಂದ ಹೊರಟ ಮೆರವಣಿಗೆಯು ವಿರಾಜಪೇಟೆ ನಗರದ ರಾಜಬೀದಿಗಳಲ್ಲಿ ಸಾಗಿತು. ಭಕ್ತಾದಿಗಳು ಮೊಂಬತ್ತಿಯನ್ನು ಬೆಳಗಿಸಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು, ಚರ್ಚ್ ಪಾಲನಾ ಸಮಿತಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು. ತದನಂತರ ಚರ್ಚ್ ಗೆ ತೆರಳಿ ಪರಮ ಪ್ರಸಾದದ ಆಶೀರ್ವಾದವು ಜರುಗಿತು. ಮಹೋತ್ಸವದ ಪ್ರಯುಕ್ತವಾಗಿ ಲೇಸರ್ ಶೋ, ಸಿಡಿಮದ್ದಿನ ಪ್ರದರ್ಶನ ವು ನಡೆಯಿತು. ತದನಂತರ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನ ಸೇವೆಯನ್ನು ನೆರವೇರಿಸಲಾಯಿತು.
Kodagu
ವಿರಾಜಪೇಟೆ ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ಮುಕ್ಕಾಟಿ ವಾಸು ಗಣಪತಿ ಆಯ್ಕೆ
ಮಡಿಕೇರಿ : ವಿರಾಜಪೇಟೆ ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ಮುಕ್ಕಾಟಿ ವಾಸು ಗಣಪತಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತಡಿಯಪ್ಪನ ನರೇಂದ್ರ, ಪೊಕ್ಕುಳಂಡ್ರ ರಮೇಶ್, ಕಾರ್ಯದರ್ಶಿಯಾಗಿ ಮಂಜಂಡ್ರ ರೇಖಾ ಉಲ್ಲಾಸ್, ಜಂಟಿ ಕಾರ್ಯದರ್ಶಿಯಾಗಿ ಚಂಡಿರ ಸುಂದರ, ಖಜಾಂಚಿಯಾಗಿ ಬಿಳಿಯಂಡ್ರ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಪೊಕ್ಕುಲಂಡ್ರ ದನೋಜ್ (ದಿವ್ಯ), ಗೌಡದಾರೆ ಚೋಟು ಬಿದ್ದಪ್ಪ, ಕತ್ರಿ ಕೊಲ್ಲಿ ನಂಜುಂಡ, ತೆಕ್ಕಡೆ ಗಾಯತ್ರಿ, ಉಪ್ಪುಂಡಿ ಬಾಬಿ ದೇವಯ್ಯ, ಮುಕ್ಕಾಟಿ ದಿಲೀಪ್, ಪೊಕ್ಕುಳಂಡ್ರ ದಿನೇಶ್, ಕಾಯರ ತೋಡಿ ನಾಣಯ್ಯ, ಕೊಂಪುಳಿರ ಪೃಥ್ವಿ, ಜೈನೀರ ತನು ತಮ್ಮಯ್ಯ, ಖಾಯಂ ಗೌರವ ಅಧ್ಯಕ್ಷರಾಗಿ ಡಾ.ಕೆ.ವಿ.ಚಿದಾನಂದ, ಡಾ.ಕೆ.ವಿ.ರೇಣುಕಾ ಪ್ರಸಾದ್, ಖಾಯಂ ಸಲಹೆಗಾರರಾಗಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಹಾಗೂ ಉಪಾಧ್ಯಕ್ಷ ಡಾ.ರಾಜೇಶ್ ತೇನನ ಅವರು ಮುಂದುವರೆಯಲಿದ್ದಾರೆ ಎಂದು ವಿರಾಜಪೇಟೆ ಗೌಡ ಸಮಾಜದ ಪ್ರಕಟಣೆ ತಿಳಿಸಿದೆ.
ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಮಡಿಕೇರಿ ಗೌಡ ಸಮಾಜದ ನಿರ್ದೇಶಕ ತೋಟಂಬೈಲು ಅನಂತ ಕುಮಾರ್ ಸೇರಿದಂತೆ ಗೌಡ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
-
Hassan16 hours agoಗುತ್ತಿಗೆ-ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರು ಎದುರು ಪ್ರತಿಭಟನೆ
-
Kodagu19 hours agoಮಡಿಕೇರಿ ಪೊಲೀಸ್ ಕಾನ್ಸ್ಟೇಬಲ್ ಸಂದೀಪ್ ನಿಧನ
-
Hassan18 hours agoರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
-
Hassan8 hours ago
ಗುಡ್ಡಗಾಡು ಓಟ: ಕಲಾ ಕಾಲೇಜು ಅತ್ಯುತ್ತಮ ಸಾಧನೆ
-
Mandya13 hours agoಕಾವ್ಯದ ಕಡುಮೋಹಿಯಾಗಿದ್ದ ಕವಿ ಕೊ.ನಾ.ಪು : ಸಾಹಿತಿ ಸತೀಶ್ ಜವರೇಗೌಡ ಬಣ್ಣನೆ
-
Hassan15 hours agoರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಆರೋಗ್ಯ ತಪಾಸಣೆ
-
Mysore7 hours agoಸಮೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್ ವಿತರಣೆ
-
Manglore8 hours agoಬ್ಯಾಂಕ್ ಖಾತೆಯಿಂದಲೇ 2.37ಲಕ್ಷ ಹಣ ಎಗರಿಸಿದ ಆರೋಪಿ ಅರೆಸ್ಟ್
