Connect with us

Mysore

ವಿದ್ಯಾರ್ಥಿಗಳಿಗೆ ಈ ರೀತಿಯ ವಿಚಾರ ಸಂಕಿರಣಗಳನ್ನು ಪ್ರತೀ ವರ್ಷವೂ ಆಯೋಜಿಸಬೇಕು -ಕೆ.ಹರೀಶ್ ಗೌಡ

Published

on

ಮೈಸೂರು.ಫೆ.17
:ರಾಜ್ಯ ಪತ್ರಾಗಾರ ಇಲಾಖೆಯ ಏಕೀಕರಣ ಕಾರ್ಯಕ್ರಮವು ಇಂದಿಗೆ ಸೀಮಿತವಾಗಿರದೆ, ಪ್ರತೀ ವರ್ಷವು ಆಯೋಜಿಸಿ ವಿದ್ಯಾರ್ಥಿಗಳಿಗೆ ವಿಷಯಗಳ ಬಗ್ಗೆ ಅರಿವು ಮೂಡುವಂತೆ ಮಾಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಸಲಹೆ ನೀಡಿದರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಆಶ್ರಯದಲ್ಲಿ ಕರ್ನಾಟಕ ನಾಮಕರಣ 50 ರ ಸಂಭ್ರಮಾಚರಣೆ ಮಹೋತ್ಸವ ಅಂಗವಾಗಿ ನಡೆದ `ಕರ್ನಾಟಕ ಏಕೀಕರಣ ಮತ್ತು ಕನ್ನಡ ಅಸ್ಮಿತೆ’ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಚಾರಿತ್ರಿಕ ದಾಖಲೆಗಳ ಹಾಗೂ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ರಾಜ್ಯ ಪತ್ರಾಗಾರ ಇಲಾಯು ಇತಿಹಾಸ ತಿಳಿಸುವುದರ ಜೊತೆಗೆ ಎಲ್ಲಾ ರೀತಿಯ ದೇಶದ, ರಾಜ್ಯದ, ನಗರದ, ಭೂಮಿ, ಜಲ ಇತ್ಯಾದಿಗಳಿಗೆ ಸಂಬoಧಿಸಿದ ಎಲ್ಲಾ ರೀತಿಯ ದಾಖಲೆಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ಮುಖ್ಯವಾಗಿ ಬೇಕಾಗಿರುವ ಮಾಹಿತಿಗಳು ಸುಲಭವಾಗಿ ದೊರಕುವಂತೆ ಮಾಡಿದೆ ಎಂದರು.

ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಅವರು ಮಾತನಾಡಿ ಈ ರೀತಿಯ ವಿಚಾರ ಸಂಕೀರಣಗಳಿoದ ಹಲವಾರು ದಾಖಲೆಗಳ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ನಮ್ಮ ನಾಡಿನ ವಿವಿಧ ಸಂಸ್ಕೃತಿ, ಭಾಷೆ, ವಿಷಯಗಳು, ಬರವಣಿಗೆ ಒಟ್ಟಾರೆಯಾಗಿ ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು, ಕಾಲ ಕಾಲಕ್ಕೆ ಬಿಡುಗಡೆಯಾದ ದಾಖಲೆಗಳನ್ನು ಸಂಗ್ರಹಿಸಿರುವ ಮೂಲಕ ಇಲಾಖೆಯು ಮಹತ್ವದ ಕೆಲಸವನ್ನು ಮಾಡುತ್ತಿದೆ ಎಂದರು.

ಯಾವುದೇ ಒಬ್ಬ ಸಂಶೋಧಕನು ಸಂಶೋಧನೆ ಮಾಡಲು ಪತ್ರಾಗಾರ ಇಲಾಖೆ ಕಲೆ ಹಾಕಿರುವ ಮಾಹಿತಿಗಳು ಬಹಳ ಪೂರಕವಾಗಿ ಸಹಕಾರ ನೀಡುತ್ತವೆ. ಇದರಲ್ಲಿ ನಾವು ಎಂದೂ ಓದದ, ನೋಡದ ದಾಖಲೆಗಳನ್ನು ಕಾಣಬಹುದು. ಪ್ರತಿಯೊಬ್ಬ ವ್ಯಕ್ತಿಯು ಇಲಾಖೆಯಲ್ಲಿರುವ ದಾಖಲೆ ಮಾಹಿತಿಗಳನ್ನು ಓದಿದಾಗ ನಮ್ಮ ಜ್ಞಾನದಲ್ಲಿ ವಿಕಾಸವಾಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕರಾದ ಡಾ.ಗವಿಸಿದ್ದಯ್ಯ ಅವರು ಮಾತನಾಡಿ ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಚಾರಿತ್ರಿಕ ದಾಖಲೆಗಳನ್ನು ಸಂಸ್ಕರಿಸಿ ಅದನ್ನು ಜನರಿಗೆ ತಲುಪಿಸುವುದೇ ಪತ್ರಾಗಾರ ಇಲಾಖೆಯ ಮುಖ್ಯ ಉದ್ದೇಶ. ಇಲಾಖೆಯಲ್ಲಿ ಇತಿಹಾಸಕ್ಕೆ ಸಂಬoಧಿಸಿದ ಹಲವಾರು ದಾಖಲೆಗಳನ್ನು ವಿಷೇಶವಾಗಿ ಮೈಸೂರಿನ ಇತಿಹಾಸದ ಬಗ್ಗೆ ತಿಳಿಸುವ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಸಾರ್ವಜನಿಕರು ಅದರಲ್ಲೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಅವರು ಮಾತನಾಡಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಅರಿಯಲು ಇದು ಉತ್ತಮ ಸಮಯ. ನಮ್ಮ ಹಿರಿಯರು, ಹಲವಾರು ದಿಗ್ಗಜರು ಈಗಾಗಲೇ ಕನ್ನಡ ದೀಪವನ್ನು ಹಚ್ಚುವ ಕೆಲಸ ಮಾಡಿದ್ದಾರೆ. ಅದನ್ನು ಧ್ವಿಗುಣಗೊಳಿಸಿ ಉಳಿಸುವುದು ನಮ್ಮ ಕರ್ತವ್ಯ. ಬೇರೆ ಭಾಷೆಯನ್ನು ದ್ವೇಷ ಮಾಡಬಾರದು ಆದರೆ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಿ ಅದನ್ನು ಉಳಿಸಿ ಬೆಳೆಸಬೇಕು. ನಮ್ಮ ಕನ್ನಡ ಬಗ್ಗೆ ಮೊದಲು ನಮಗೆ ಹೆಮ್ಮೆ ಇರಬೇಕು. ಎಲ್ಲಾ ರೀತಿಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕರ್ನಾಟಕದಲ್ಲಿನ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದರು.

ಪ್ರತಿಯೊಬ್ಬರೂ ಸಹ ಇತಿಹಾಸವನ್ನು ತಿಳಿದುಕೊಳ್ಳಬೇಕು ನಮ್ಮ ನೆಲದ ಹಿನ್ನೆಲೆಯ ಬಗ್ಗೆ ನಮಗೆ ಅರಿವಿರಬೇಕು. ಈ ಕೆಲಸವನ್ನು ಪತ್ರಾಗಾರ ಇಲಾಖೆಯು ದಾಖಲೆಗಳನ್ನು ಸಂಸ್ಕರಿಸಿ ಸಂರಕ್ಷಿಸುವ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯಲು ಸಹಾಯಕಾರಿಯಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಪತ್ರಾಗಾರ ಇಲಾಖೆಗೆ ಭೇಟಿ ನೀಡಿ ಅಲ್ಲಿರುವ ದಾಖಲೆ ಹಾಗೂ ಮಾಹಿತಿಗಳನ್ನು ತಿಳಿದುಕೊಂಡು ಅದರ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುಂಡಪ್ಪಗೌಡ, ಕಾಲೇಜು ನಿರ್ವಹಣಾ ಮಂಡಳಿ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷರಾದ ಟಿ.ನಾಗರಾಜು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

Published

on

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

ಬಳಿಕ ಸಚಿವ ವೆಂಕಟೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಾರೆ ಈ ಗ್ರಾಮದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು 20 ಕಿ ಮೀ ದೂರ ಹೋಗಬೇಕಾದ ದೃಷ್ಟಿಯಿಂದ ಈ ಕ್ಷೇತ್ರದ ಶಾಸಕರು ಒತ್ತಾಡದ ಮೇರೆಗೆ ಈ ಗ್ರಾಮಕ್ಕೆ ಪಶು ಸಂಗೋಪನೆ ಆಸ್ಪತ್ರೆಗೆ ಅನುದಾನ ನೀಡಲಾಗಿದೆ ಪ್ರತಿಯೊಬ್ಬ ರೈತರು ಸದ್ದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ ನಮ್ಮ ಸರ್ಕಾರದಿಂದ ಜಾನುವಾರುಗಳು ಸಾವನ್ನಾಪ್ಪಿದರೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ ಕುರಿ ಸಾವನ್ನಾಪ್ಪಿದರೆ 5 ಸಾವಿರ ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಆಸ್ಪತ್ರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಕಾಡಾಂಚಿನ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುಂಭಾ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಚಿವರ ಗಮನಕ್ಕೆ ತಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್,
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅದ್ಯಕ್ಷರಾದ ಕೆ ಜಿ ಮಹೇಶ್, ಶ್ರೀಕಂಠನಾಯಕ,ಗ್ರಾ ಪಂ ಅದ್ಯಕ್ಷ ಹರೀಶ್ ಕುಮಾರ್, ಸದಸ್ಯ ಕೃಷ್ಣಮೂರ್ತಿ,ಮಹದೇವು,ನಿಂಗಮಣಿ,ಮುಖಂಡರುಗಳಾದ ದೊರೆಸ್ವಾಮಿ ನಾಯಕ,ಸೇರಿದಂತೆ ಪ್ರಮುಖರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಕಳ್ಳಿಮುದ್ದನಹಳ್ಳಿ ಸಣ್ಣ ಜವರಯ್ಯ ನಿಧನ 

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಸಣ್ಣ ಜವರಯ್ಯ (74 ವರ್ಷ ) ನಿಧಾನರಾದರು.

ಮೃತರು, ಪತ್ನಿ, ದಲಿತ ಸಂಫರ್ಷ ಸಮಿತಿ (ಅಂಭೇಡ್ಕರ್ ವಾದ)  ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರು, ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿತು.

ಎಸ್ ಸಿ ಘಟಕದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ಪತ್ರಕರ್ತರಾದ ಎಸ್ ಬಿ ಹರೀಶ್,ಲಕ್ಕಿಕುಪ್ಪೆ ರಮೇಶ್, ರಾಂಪುರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

Continue Reading

Mysore

ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಚಾಲಕ  ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹಳೆ ಮಿರ್ಲೆ ಗ್ರಾಮದಲ್ಲಿ  ನಡೆದಿದೆ.


ಘಟನೆಯಲ್ಲಿ ಗ್ರಾಮದ ಕುಮಾರ್ ಎಂಬುವರ‌ ಪುತ್ರ ಮನೋಜ್ (23) ಎಂಬಾತನೇ ಮೃತಪಟ್ಟವನಾಗಿದ್ದಾನೆ.
ಮೃತ ಮನೋಜ್ ಜಮೀನು ಒಂದನ್ನು ಉಳುಮೆ ಮಾಡಲು ಚಾಮರಾಜ ನಾಲೆಯ ಏರಿಯ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ಯಾಕ್ಟರ್ ಜಮೀನಿಗೆ ಉರುಳಿ, ಈ ಅವಘಡ ಸಂಭವಿಸಿದೆ.


ಘಟನೆ ನಡೆದ ತಕ್ಷಣವೇ ಮಗುಚಿ ಬಿದ್ದ ಟ್ಯಾಕ್ಟರ್ ನ ಅಡಿಯಲ್ಲಿ ಸಿಲುಕಿದ್ದ ಮನೋಜ್ ನನ್ನ ಮೇಲಕ್ಕೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ವತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!