Hassan
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಹೆಚ್.ಡಿ. ಕುಮಾರಸ್ವಾಮಿ ಕ್ಷಮೆ ಕೇಳುವಂತೆ ಆಗ್ರಹ
ಹಾಸನ: ಗ್ಯಾರಂಟಿ ವಿಚಾರವಾಗಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದಲ್ಲದೇ ಕೂಡಲೇ ರಾಜ್ಯದ ಮಹಿಳೆಯರಿಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ಆದ ದೇವೇಗೌಡರ ಮಗನಾಗಿ ಮತ್ತು ಎರಡು ಬಾರಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದನ್ನು ನಾವು ಖಂಡನೆ ಮಾಡುತ್ತೇವೆ. ಅವರಿಗೆ ಶೋಭೆ ತರುವುದಿಲ್ಲ. ಕೂಡಲೇ ಮಹಿಳೆಯರ ಬಗ್ಗೆ ಮಾತನಾಡಿರುವುದು ತಪ್ಪಾಗಿದ್ದು, ಇಡೀ ರಾಜ್ಯದ ಮಹಿಳೆಯರನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ತಾರಚಂದನ್ ಮಾತನಾಡಿ, ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದಂತಹ ಕುಮಾರಸ್ವಾಮಿ ಅವರು ಬಹಳ ಕೀಳುಮಟ್ಟದಾಗಿ ಹೆಣ್ಣಿನ ಬಗ್ಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಮೂಲಕ ಮಹಿಳೆಯರಿಗೆ ಸಹಾಯ ಆಗಲಿ ಎಂದು ಐದ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ೨ ಸಾವಿರ ರೂಗಳನ್ನು, ಉಚಿತ ಬಸ್ ಪ್ರಯಾಣ ಮತ್ತು ಅಕ್ಕಿಯನ್ನು ಕೊಡುತ್ತಿದ್ದಾರೆ. ಎರಡು ಸಾವಿರ ರೂಗಳನ್ನ ತೆಗೆದುಕೊಂಡ ಹೆಣ್ಣು ಮಕ್ಕಳು ಹಾದಿ ತಪ್ಪು ಹೋಗಿದ್ದಾರೆ ಎಂದಿದ್ದು, ಇದರ ಮಾತಿನ ಅರ್ಥದ ಬಗ್ಗೆ ನಮಗೆ ಮೊದಲು ಹೇಳಲಿ, ಕೋಟಿಗಟ್ಟಲೆ ಹಣ ಇಟ್ಟುಕೊಂಡಿರುವ ಇವರ ಮನೆ ಹೆಣ್ಣು ಮಕ್ಕಳು ಹೇಗಿದ್ದಾರೆ? ಇವರ ಪಕ್ಷದವರು ಯಾರು ಹಣ ಪಡೆಯುತ್ತಿಲ್ಲವೆ, ಗ್ಯಾರಂಟಿಯ ಯೋಜನೆ ಸಿಕ್ಕಿಲ್ಲವೇ? ಈರೀತಿ ಹೇಳಿಕೆ ನೀಡಿದರೇ ಗಂಡಸರ ಮನಸ್ಸಿನಲ್ಲಿ ಯಾವ ಭಾವನೆ ಬರುತ್ತದೆ ಎಂದರು. ಇಂಹ ಮಾತನ್ನು ಆಡುವುದಕ್ಕೆ ಕುಮಾರಸ್ವಾಮಿ ಅವರಿಗೆ ಮನಸ್ಸು ಹೇಗೆ ಬಂತು! ಕೊರೋನಾ ಬಂದು ಜನರು ತತ್ತರಿಸಿ ಎಷ್ಟೊ ಕಾರ್ಖಾನೆಗಳು, ಗುಡು ಕೈಗಾರಿಕೆಗಳು ಮುಚ್ಚಿ ಹೋಗಿದೆ. ನರೇಗಾದಲ್ಲಿ ಕೇಂದ್ರ ಸರಕಾರ ಹಣ ಕೊಡುತ್ತಿಲ್ಲ. ಗ್ರಾಮೀಣ ಮಟ್ಟದಲ್ಲಿ ಹೆಣ್ಣು ಮಕ್ಕಳು ನರಳುತ್ತಿದ್ದು, ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಆಗುತ್ತಿಲ್ಲ. ವಯಸ್ಸಾದ ವೃದ್ಧರು, ಅಂಗವಿಕಲರು ನರಳುವ ಪರಿಸ್ಥಿತಿ ಬಂದಿದೆ. ಅಂತವರಿಗೆ ಸಹಾಯವಾಗಲೆಂದು ರಾಜ್ಯ ಸರಕಾರವು ಅನುಕೂಲ ಮಾಡಿಕೊಟ್ಟಿದೆ. ಇದನ್ನ ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ದೂರಿದರು. ಗ್ರಾಮವಾಸ್ತವ್ಯದಲ್ಲಿ ನಾಡಿನ ಜನತೆಯನ್ನು ಯಾವ ರೀತಿ ಕಂಡಿದ್ದೀರಿ? ಗ್ರಾಮೀಣ ಮಟ್ಟದಲ್ಲಿ ಜನರು ಹೆಚ್ಚಿನ ಕಷ್ಟು ಅನುಭವಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇವೆಲ್ಲಾ ಮರೆತು ಹೋಗಿದ್ದೀಯಾ? ಅವರಿಗೆ ಅನುಕೂಲವಾಗಬಾರದಾ! ನೀವು ಮುಖ್ಯಮಂತ್ರಿ ಆಗಿರುವ ಪ್ರಜ್ಞೆ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ರಾಜ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಉಪಯೋಗಿಸಿಕೊಂಡು ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿರುವುದು ಖಂಡನಾರ್ಹ. ಯಾವ ಮಹಿಳೆ ದಿಕ್ಕು ತಪ್ಪಿದ್ದಾರೆ, ಯಾವ ಮಹಿಳೆ ದಾರಿ ತಪ್ಪಿದ್ದಾರೆ ಎಂಬುದನ್ನು ಯಾವ ಆಧಾರದ ಮೇಲೆ ಹೇಳಿದ್ದೀನಿ ಬ್ಗಗೆ ರಾಜ್ಯದ ಮಹಿಳೆಯರಿಗೆ ಸ್ಪಷ್ಟಪಡಿಸಬೇಕು. ಆಧಾರರಹಿತ ಹೇಳಿಕೆಯನ್ನು ಕೆಟ್ಟ ಭಾಷೆಯನ್ನು ಉಪಯೋಗಿಸುವ ಮೂಲಕ ಅವಹೇಳನಕಾರಿ ರೀತಿ ಮಾತನಾಡುವುದು ಉತ್ತಮ ನಡೆಯಲ್ಲ ಎಂದರು. ಒಂದು ನಿಮ್ಮ ಕುಟುಂಬದ ಸದಸ್ಯರು ರೈತರ ಬಗ್ಗೆ ಅವಹೇಳನಕಾರಿ ರೀತಿ ಮಾತನಾಡುತ್ತಾರೆ, ಇನ್ನೊಂದು ಕಡೆ ನೀವು ಮಹಿಳೆಯರ ಬಗ್ಗೆ ಗೌರವ ಕೊಡದ ರೀತಿಯಲ್ಲಿ ನಡೆದುಕೊಂಡಿದ್ದು, ನಿಮ್ಮ ಇಡೀ ರಾಜ್ಯದ ಜನತೆ ಬುದ್ದಿ ಕಲಿಸಲಿದ್ದಾರೆ. ಕೂಡ ಸಾರ್ವಜನಿಕ ವಲಯದಲ್ಲಿ ಕ್ಷಮೆ ಕೇಳುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಾವಗಲ್ ಮಂಜುನಾಥ್, ಮಂಜುನಾಥ್ ಶರ್ಮ, ಗ್ರಾನೈಟ್ ರಾಜಶೇಖರ್, ಜಮೀಲಾ, ದಿನೇಶ್, ಪ್ರಕಾಶ್, ರಾಮಚಂದ್ರ, ರಘು ಇತರರು ಉಪಸ್ಥಿತರಿದ್ದರು.
Hassan
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ರಾಷ್ಟ್ರೀಯ ಹೆದ್ದಾರಿ 75ರ ಮಾವನೂರು ಗ್ರಾಮದ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಹಿರೇಗೌಡನಹಳ್ಳಿ ಗ್ರಾಮಕ್ಕೆ ಆಲೂರು ತಾಲೂಕಿನ ಪಟ್ನ ಗ್ರಾಮದ ಒಂದೇ ಕುಟುಂಬದವರು ತಮ್ಮ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆ ಹೋಗಿ ಹಿಂದಿರುಗಿ ಬರಗುವ ಬರುವಾಗ ಮಾವನೂರು ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಯಂತ್ರಣ ತಪ್ಪಿ
ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರು ಪವಾಢ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಅಲ್ಪ ಸ್ವಲ್ಪ ಗಾಯವಾಗಿದ್ದು, ಉಳಿದ ಮೂವರು ಯಾವುದೇ ಪ್ರಾಣ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಕಾರು ಪಲ್ಟಿಯಾದ ಸದ್ದು ಕೇಳಿದ ಸ್ಥಳೀಯರು ಹಾಗೂ ವಾಹನ ಸವಾರರು ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ.
ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಸ್ಥಳಕ್ಕೆ ಆಲೂರು ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಅಪಘಾತಕ್ಕೀಡಾಗಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಆಲೂರು ತಾಲೂಕಿನ ಪಟ್ನ ಗ್ರಾಮದ ಸತೀಶ್ ನಾಯಕ, ರಾಜ ನಾಯಕ, ಪ್ರವೀಣ್ ಕಮಲಮ್ಮ, ವಿನುತಾ, ಹಾಗೂ ಚಿಕ್ಕ ಮಕ್ಕಳಾದ ಪ್ರೀತಮ್, ಪಾಪು ಎಂದು ತಿಳಿದು ಬಂದಿದೆ.
Hassan
ಬಂಧಿಸುವ ವೇಳೆ ದರೋಡೆಕೋರ ಪ್ರಮುಖ ಆರೋಪಿ ಸತೀಶ್ ದಾಳಿ
ಹಾಸನ: ರಾಬ್ರಿ ಸೇರಿದಂತೆ ನಾಲ್ಕು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸತೀಶ್ ನನ್ನು ಚನ್ನರಾಯಪಟ್ಟಣ ತಾಲೂಕಿನ ಬೂಕನಬೆಟ್ಟದಲ್ಲಿ ಸೆರೆ ಹಿಡಿಯುವಾಗ ತಮ್ಮ ರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾಹಿತಿ ನೀಡಿದರು.
ತಮ್ಮ ಕಛೇರಿಯಲ್ಲಿ ಭಾನುವಾರದಂದು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಒಂದು ರಾಬ್ರಿ ಕೇಸು ಫೈಲ್ ಆಗಿದ್ದು, ರಾತ್ರಿ ಸಮಯದಲ್ಲಿ ವಾಹನವನ್ನು ಅಡ್ಡಿಪಡಿಸಿ ಅವರ ಬಳಿ ಇದ್ದ ಹಣ ಇತರೆಯನ್ನು ಕಸಿದುಕೊಳ್ಳುತ್ತಿದ್ದ ಮಂಡ್ಯದ ಮಾಡಚಾಕನಹಳ್ಳಿ ಗ್ರಾಮದ ಯೋಗೀಶ್ ೨೮ ವರ್ಷ, ಮಂಡ್ಯ ಜಿಲ್ಲೆಯ ಗೊರವನಹಳ್ಳಿ ಗ್ರಾಮದ ರಾಘವೇಂದ್ರ ೩೪ ವರ್ಷ ಮತ್ತು ಮಂಡ್ಯ ಜಿಲ್ಲೆಯ ಮಾಡಚಾಕನಹಳ್ಳಿ ಗ್ರಾಮದ ಕಾರ್ತಿಕ್ ೨೨ ವರ್ಷ ಎನ್ನುವ ಮೂವರು ಜನ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ವಿಚಾರಣೆಯನ್ನು ಮುಂದುವರೆಸುವಾಗ ಮುಖ್ಯ ಆರೋಪಿ ಇರುವವರು ಸತೀಶ್ ವ್ಯಕ್ತಿ ಎಂಬುದು ತನಿಖೆಯಲ್ಲಿ ಕಂಡು ಬಂದಿರುತ್ತದೆ ಎಂದರು. ಈ ತನಿಖೆಯನ್ನು ಚುರುಕುಗೊಳಿಸುವಾಗ ರಾತ್ರಿ ಸಮಯದಲ್ಲಿ ಹಿರಿಸಾವೆ ಬಳಿ ಸತೀಶ್ ಎನ್ನುವವರು ತಲೆ ಮರೆಯಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿತ್ತು. ಮಾಹಿತಿ ಆಧಾರಿಸಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್. ರಘುಪತಿ, ಸಬ್ ಇನ್ಸ್ ಪೆಕ್ಟರ್ ಭಾರತ್ಡ್ಡಿ ಸೇರಿ ಬೂಕನಹಳ್ಳಿ ಬೆಟ್ಟದಲ್ಲಿ ಒಂದು ಆಫರೇಷನ್ ಮಾಡಲು ಸಿದ್ಧಪಡಿಸಿದರು.
ಈ ವೇಳೆ ಆರೋಪಿ ಸತೀಶ್ ಎನ್ನುವವರು ಪೊಲೀಸ್ ತಂಡದಲ್ಲಿರುವ ಪಿಸಿ ಪುಟ್ಟರಾಜು ಎನ್ನುವವರನ್ನು ಡ್ರ್ಯಾಗರ್ ಮೂಲಕ ಕೈಲಿ ಹೊಡೆದು ಏಟು ಮಾಡುತ್ತಾರೆ. ನಂತರ ಪಿ.ಎಸ್.ಐ. ಭರತ್ ರೆಡ್ಡಿ ತಕ್ಷಣ ಫೈರಿಂಗ್ ಮಾಡಿದಾಗ ಆರೋಪಿ ಇತನು ಕೂಡ ಮಂಡ್ಯ ಜಿಲ್ಲೆಯ ಆಡ್ಯಾ ಗ್ರಾಮದ ಸತೀಶ್ ೩೪ ವರ್ಷ ಎನ್ನುವನ ಕಾಲಿಗೆ ಪೆಟ್ಟು ಬೀಳುತ್ತದೆ. ನಂತರ ಬಂಧಿಸಲಾಗಿದ್ದು, ಈಗಾಗಲೇ ಕೇಸು ದಾಖಲಾಗಿದ್ದು, ತನಿಖೆ ಇನ್ನಷ್ಟು ಚುರುಕುಗೊಳಿಸಲಾಗಿದೆ. ಈಗಾಗಲೇ ಸತೀಶ್ ಮೇಲೆ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ೮ ಜನರ ತಂಡವಿದ್ದು, ಉಳಿದ ನಾಲ್ಕು ಜನರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ವಾಹನ ಅಡ್ಡಗಟ್ಟಿ ರಾಬ್ರಿ ನಡೆದಿದ್ದು, ಆ ರಾಬ್ರಿಗೆ ಇವರ ಹಿನ್ನಲೆ ಹಾಗೂ ಮಾಸ್ಟರ್ ಮೈಂಡ್ ಆಗಿದೆ ಎಂದು ತಿಳಿದು ಬಂದಿದ್ದರಿಂದ ದಸ್ತಗಿರಿ ಮಾಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಂಧಿಸುವ ವೇಳೆ ಪಿಸಿ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಆರೋಪಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ನಾಲ್ಕು ಕೇಸುಗಳಲ್ಲಿ ಎರಡು ಕೇಸುಗಳು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್ನೊಂದು ೨೦೨೪ರ ಮಾರ್ಚ್ ತಿಂಗಳಲ್ಲಿ ನುಗ್ಗೆಹಳ್ಳಿಯಲ್ಲಿ ಆಗಿರುವ ಪ್ರಕರಣವಾಗಿದೆ. ತನಿಖೆ ಇನ್ನಷ್ಟು ಪ್ರಗತಿಯಲ್ಲಿದ್ದು, ನಂತರ ಇನ್ನಷ್ಟು ಸತ್ಯಾಂಶಗಳು ಹೊರ ಬರಲಿದೆ ಎಂದು ತಿಳಿಸಿದರು.
Hassan
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿವೃತ್ತ ಯೋಧರ ಮಕ್ಕಳಿಗೆ ವಿವಿಧ ಸ್ಪರ್ದೆ
ಹಾಸನ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಹೌಸಿಂಗ್ ಬೋರ್ಡ್ ಬಳಿ ಇರುವ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಸೈನಿಕರ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಮತ್ತು ರಸಪ್ರಸ್ನೆ ಸ್ಪರ್ದೆಯಲ್ಲಿ ಸುಮಾರು ೪೫ಕ್ಕೂ ಹೆಚ್ಚಿನ ಮಕ್ಕಳು ಉತ್ಸಹದಿಂದ ಪಾಲ್ಗೊಂಡಿದ್ದು, ಸ್ಪರ್ದೆಯಲ್ಲಿ ಗೆದ್ದ ಮಕ್ಕಳಿಗೆ ಆಗಸ್ಟ್ ೧೫ ರಂದು ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ.
ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮಾತನಾಡಿ, ಪ್ರಸ್ತೂತದಲ್ಲಿ ಸ್ಪರ್ದೆ ಮಾತ್ರವಲ್ಲ. ಈ ಮಕ್ಕಳ ಮುಂದಿನ ಬೆಳೆವಣಿಗೆ ನಮ್ಮ ದೇಶದ ಆಸ್ತಿ, ಈಗ ನಡೆಯುತ್ತಿರುವ ಕ್ರೀಡೆಯನ್ನು ನಾವುಗಳೆಲ್ಲಾ ನೋಡುತ್ತಿದ್ದು, ಗೋಲ್ಡ್ ಮೆಡಲ್ ತಂದಿದ್ದಾರೆ. ದೇಶದ ಮಕ್ಕಳು, ಸೈನಿಕರ ಮಕ್ಕಳು ನಮ್ಮೆಲ್ಲರ ಆಸ್ತಿ. ಚಿಕ್ಕ ಚಿಕ್ಕ ಸ್ಪರ್ದೆಯಲ್ಲಿ ಪಾಲ್ಗೊಂಡು ಮುಂದೆ ದೊಡ್ಡ ದೊಡ್ಡ ಸ್ಪರ್ದೆಯಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಸಂಸ್ಕಾರ ಉಳ್ಳ ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ದೊಡ್ಡ ಆಸ್ತಿ ಆಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಾಗರ್ ಮಾತನಾಡಿ, ಸ್ವತಂತ್ರ್ಯ ದಿನದ ಅಂಗವಾಗಿ ನಾವು ನಮ್ಮ ಹಾಸನ ಜಿಲ್ಲಾ ಮಾಜಿ ಸೈನಿಕರ ಕುಟುಂಬ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ದೆ, ಕ್ವಿಜ್ ಸ್ಪರ್ದೆಯನ್ನು ಕಳೆದ ವರ್ಷವೂ ಕೂಡ ಹಮ್ಮಿಕೊಂಡಂತೆ ಈ ವರ್ಷವೂ ಕೂಡ ಏರ್ಪಡಿಸಲಾಗಿದೆ ಎಂದರು. ಪ್ರಸ್ತೂತದಲ್ಲಿ ಸ್ಪರ್ದೆ ಎಂಬುದು ಹೆಚ್ಚಾಗಿದ್ದು, ಮಾಜಿ ಸೈನಿಕರ ಮಕ್ಕಳಿಗೂ ಭಾಗವಹಿಸಲು ದೈರ್ಯ ಬರಲೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿವಿಧ ಸ್ಪರ್ದೆಯಲ್ಲಿ ಸುಮಾರು ೪೦ ರಿಂದ ೪೫ ಜನ ಮಕ್ಕಳುಬಹಳ ಉತ್ಸಹದಿಂದ ಪಾಲ್ಗೊಂಡಿದ್ದು, ದೇಶ ಭಕ್ತ ಕುರಿತು ಡ್ರಾಯಿಂಗ್ ಬರೆಯಲು ಅವಕಾಶ ಕೊಟ್ಟಿರುವಂತೆ ಮಕ್ಕಳು ತುಂಬ ಚನ್ನಾಗಿ ಬರೆದಿದ್ದಾರೆ ಎಂದು ಇದೆ ವೇಳೆ ಶ್ಲಾಘಿಸಿದರು.
ಇದೆ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಖಜಾಂಚಿ ಬಾಲಕೃಷ್ಣ, ಚನ್ನರಾಯಪಟ್ಟಣ ತಾಲೂಕು ನಿರ್ದೇಶಕರಾದ ಚಂದ್ರಶೇಖರ್, ತಾಲೂಕು ನಿರ್ದೇಶಕ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.