Connect with us

Mandya

ನಾಲೆಗಳಿಗೆ ನಿರು ಹರಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

Published

on

ಮಂಡ್ಯ: ಒಣಗುತ್ತಿರುವ ಬೆಳೆ ರಕ್ಷಣೆಗೆ ಹಾಗೂ ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು ಅವರಿಗೆ ಮನವಿ ನೀಡಿದರು.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ಅಭಾವ, ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಹಾಗೂ ನಾಲೆಗಳ ಆಸಮರ್ಪಕ ನಿರ್ವಹಣೆ ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದ್ದರೆ ಬೇಸಿಗೆಯಲ್ಲಿ ಬೆಳೆದು ನಿಂತಿರುವ ಬೆಳೆ ರಕ್ಷಣೆ ಕಷ್ಟಕರವಾಗಿದೆ ಎಂದು ಆರೋಪಿಸಿದರು.

ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು, ತೆಂಗು, ತೋಟಗಾರಿಕೆ ಅರಣ್ಯ ಕೃಷಿ ನೆಲಕಚ್ಚಿವೆ, ಜನ– ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದೆ, ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿವೆ, ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶೀಘ್ರವಾಗಿ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಬ್ಯಾಂಕ್, ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ, ಚಿನ್ನದ ಅಡಮಾನ ಸಾಲ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಂಗಳೂರಿಗೆ ಕುಡಿಯುವ ನೀರಿನ ನೆಪದಲ್ಲಿ ಕಾವೇರಿ ನದಿ ಮೂಲಕ ನೀರು ಬಿಡುವುದನ್ನು ನಿಲ್ಲಿಸಿ ತಕ್ಷಣದಿಂದ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ತೆಂಗು, ಅಡಿಕೆ, ಕಬ್ಬು, ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ನೀರಿಲ್ಲದೇ ಕಷ್ಟ ಪಡುತ್ತಿದ್ದಾರೆ, ರೈತರ ಕೃಷಿ ಪಂಪ್‌ಸೆಟ್‌ಗಳ ಅಕ್ರಮ, ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ರೈತರ ಜಮೀನುಗಳಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಮುಂದಾಗಬೇಕು ಅದೇ ರೀತಿ ಪ್ರತಿನಿತ್ಯ ತ್ರೀ ಫೇಸ್ ವಿದ್ಯುತ್ ನಿರಂತರ ಎಂಟು ತಾಸು ಸರಬರಾಜು ಮಾಡಬೇಕು ಎಂದು ಆಗ್ರಹ ಪಡಿಸಿದರು.

ಜಿಲ್ಲೆಯ ತಾಲ್ಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬ ತಪ್ಪಿಸಿ ಭ್ರಷ್ಟಾಚಾರ ನಿಯಂತ್ರಿಸಬೇಕು. ಕೊಬ್ಬರಿಗೆ ಪ್ರತಿ ಕ್ವಿಂಟಲ್ ಗೆ ₹18 ಸಾವಿರ ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಅವಧಿ ಮುಂದೂಡಬೇಕು. ರೈತರ ಪ್ರಮುಖ ವಾಣಿಜ್ಯ ಬೆಳೆ ಕಬ್ಬನ್ನು ವಿಮೆ ವ್ಯಾಪ್ತಿಗೆ ತರಬೇಕು ಕಬ್ಬು ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹40 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಖಾಸಗಿ ಕಾರ್ಖಾನೆಗಳ ಇಳುವರಿ ಆಧಾರಿತ ಬೆಲೆ ನೀತಿ ಕೈಬಿಟ್ಟು ಸಮತೋಲನ ಬೆಲೆ ಕೊಡಬೇಕು. ರೇಷ್ಮೆ ಬೆಳೆಗೆ ಪ್ರತಿ ಕೆಜಿಗೆ ₹600 ರಿಂದ ₹700 ನೀಡಬೇಕು. ಬೇಸಿಗೆ ಕಾಲದಲ್ಲಿ ಕೆರೆ, ಕಟ್ಟೆ,ನಾಲೆಯ ಹೂಳು ತೆಗಿಸಿ ನೀರು ಸಂಗ್ರಹಣೆಗೆ ಅನುಕೂಲ ಮಾಡಿಕೊಡಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ಪ್ರೋತ್ಸಾಹ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಂಜೇಶ್‌ಗೌಡ, ಇಂಡುವಾಳು ಚಂದ್ರಶೇಖರ್, ತೇಜು ಕೋಡಿಶೆಟ್ಟಿಪುರ, ಕುದರಗುಂಡಿ ನಾಗರಾಜ್, ಸೀತಾರಾಮು, ನಂಜುಂಡಯ್ಯ ಕೀಳಘಟ್ಟ, ಅಣ್ಣೂರು ಮಹೇಂದ್ರ, ನಾಗಮಂಗಲ ಸುರೇಶ್, ಶಿವಲಿಂಗಯ್ಯ ಗುಡಿದೊಡ್ಡಿ, ಕಾಂತರಾಜು ಬೆಳ್ಳತ್ತೂರು,ಪುಟ್ಟಸ್ವಾಮಿ ಕೆ ಪಿ ದೊಡ್ಡಿ, ಲಿಂಗರಾಜು ಕೋಣಸಾಲೆ, ಕೆ.ಜಿ.ಪ್ರಭುಲಿಂಗು, ನಾಗೇಂದ್ರ ಸ್ವಾಮಿ, ಪ್ರಕಾಶ್, ಬೋರಲಿಂಗೇಗೌಡ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಪತ್ರಕರ್ತರಿಗೆ ಪರಿಹಾರದ ಚೆಕ್ ವಿತರಣೆ

Published

on

ಮಂಡ್ಯ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮಂಡ್ಯ ನಗರ ಸಭೆಯಲ್ಲಿ ಮೀಸಲಿರಿಸಿದ್ದ ಆರೋಗ್ಯ ಪರಿಹಾರ ನಿಧಿಯಿಂದ ಹಿರಿಯ ಪತ್ರಕರ್ತರಾದ ಬಸವರಾಜ್ ಹೆಗಡೆ ಹಾಗೂ ಶೇಷು ಅವರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ..ಎನ್.ನವೀನ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಬಿ.ಪಿ ಪ್ರಕಾಶ್ ಅವರು, ಪರಿಹಾರದ ಚೆಕ್ ವಿತರಣೆ ಮಾಡಿ ಆರೋಗ್ಯ ವಿಚಾರಿಸಿದರು.

ಬಸವರಾಜ್ ಹೆಗಡೆ ಹಾಗೂ ಶೇಷು ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಜಿಲ್ಲಾ ಸಂಘದ ಮನವಿ ಮೇರೆಗೆ ನಗರ ಸಭೆ ತಲಾ ಹತ್ತು ಸಾವಿರದ ಪರಿಹಾರದ ಚೆಕ್ ಅನ್ನು ನೀಡಿದೆ.

Continue Reading

Mandya

ಕರೀಘಟ್ಟ ದೇವರ ಕಾಡು‌ ಅರಣ್ಯ ಪ್ರದೇಶಕ್ಕೆ ಬೆಂಕಿ: 25 ಎಕರೆ ಅರಣ್ಯ ಭಸ್ಮ

Published

on

ಶ್ರೀರಂಗಪಟ್ಟಣ : ಕರೀಘಟ್ಟ ದೇವರ ಕಾಡು‌ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 25 ಎಕರೆ ಪ್ರದೇಶದ ಅರಣ್ಯ ಭಸ್ಮವಾಗಿದೆ.

ತಾಲ್ಲೂಕಿನ ಗಣಂಗೂರು ಐಬಿ ಎದುರುಗಿನ‌ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಅರಣ್ಯ ಪ್ರದೇಶದಲ್ಲಿನ ಮರ, ಗಿಡಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸಿದ್ದಾರೆ.

Continue Reading

Mandya

ಫೈನಾನ್ಸ್‌ ಕಿರುಕುಳದಿಂದ ಮೃತರಾದ ತಾಯಿ-ಮಗನ ಕುಟುಂಬ ಭೇಟಿಯಾದ ಆರ್‌.ಅಶೋಕ್‌

Published

on

ಮಂಡ್ಯ: ಮೈಕ್ರೋ ಫೈನಾನ್ಸ್‌ ಕಿರುಕಳಕ್ಕೆ ಬೇಸತ್ತು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡದ್ದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮ ಎಂಬವವರು ಉಜ್ಜೀವನ್‌ ಬ್ಯಾಂಕ್‌ನಲ್ಲಿ 6 ಲಕ್ಷ ಸಾಲ ಪಡೆದು, ಸಾಲ ತೀರಿಸಲಾಗದೆ ಬ್ಯಾಂಕ್‌ ಸಿಬ್ಬಂದಿಗಳ ಕಾಟದಿಂದ ಮನನೊಂದು ಜ.28 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ತಾಯಿ ಸಾವಿನಿಂದ ಮನನೊಂದ ಮಗ ರಂಜಿತ್‌ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಂದು (ಫೆ.6) ಗ್ರಾಮಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಜೆಡಿಎಸ್‌ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್‌, ಇಂಡವಾಳು ಸಚ್ಚಿದಾನಂದ ಮತ್ತಿತರರು ಸಾಥ್‌ ನೀಡಿದರು.

Continue Reading

Trending

error: Content is protected !!