Connect with us

Hassan

ಹುಡಾ ಅಧ್ಯಕ್ಷ ಸ್ಥಾನ ವಿನಯ್ ಗಾಂಧಿಗೆ ನೀಡಲು ಆಗ್ರಹಿಸಿ ಪ್ರತಿಭಟನೆ

Published

on

ಹುಡಾ ಅಧ್ಯಕ್ಷ ಸ್ಥಾನ ವಿನಯ್ ಗಾಂಧಿಗೆ ನೀಡಲು ಆಗ್ರಹಿಸಿ ಪ್ರತಿಭಟನೆ

ಹಾಸನ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರ ಹಿತಾದೃಷ್ಠಿಯಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಣೇರವಾಗಿ ಹೋರಾಟ ಮಾಡಕೊಂಡು ಬರುತ್ತಿರುವ ಪಕ್ಷದ ಶಿಸ್ತಿನ ಸಿಪಾಯಿ ವಿನಯ್ ಗಾಂಧಿ ಅವರಿಗೆ ನಗರಭಿವೃದ್ಧಿ ಪ್ರಾಧೀಕರಾದ ಅಧ್ಯಕ್ಷರ ಹುದ್ದೆ ನೀಡುವಂತೆ ಆಗ್ರಹಿಸಿ ಹಾಗೂ ಕೆ.ಎನ್. ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಕಾಂಗ್ರೆಸ್ ಮುಖೀಂಡರಾದ ಮುನಿಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಸಾಮಾಜಿಕ ನ್ಯಾಯಕೋಸ್ಕರ ಹಾಸನ ಲೋಕಸಭೆಯಲ್ಲಿ ೮ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಮುಖಂಡರ ಮನವಿ ಲೋಕಸಭೆಯಲ್ಲಿ ಒಂದು ವಿಧಾಸಭಾ ಟಿಕೆಟನ್ನು ಲಿಂಗಾಯತರಿಗೆ ನೀಡಬೇಕಾಗಿದೆ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ, ದಾಸ ಒಕ್ಕಲಿಗರಿಗೆ, ಮುಸಲ್ಮಾನರು, ಕ್ರಿಶ್ಚಿಯನ್ನರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ನೀಡಬೇಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶಿಸಿದ್ದರಾಮಯ್ಯನವರು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರವರು, ಸನ್ಮಾನ್ಯ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣ ನವರಲ್ಲಿ ಮನವಿ ಮಾಡುತ್ತೇವೆ ಎಂದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ೩೦ ವರ್ಷಗಳಿಂದ ಕಾಂಗ್ರೇಸ್ ಶಾಸಕರಿಲ್ಲದೆ ಕಾಂಗ್ರೇಸ್ ಮೇಲೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ದಬ್ಬಾಳಿಕೆ ದೌರ್ಜನ್ಯ ಸಾವು ನೋವುಗಳಲ್ಲದೇ ಹಲವಾರು ರೈತರ ಜಮೀನುಗಳನ್ನು ಹಾನಿಮಾಡಿ ಹಲವಾರು ಮನೆಗಳನ್ನು ಜಖಂಗೊಳಿಸಿ ಹಲವಾರು

ಕಾಂಗ್ರೇಸ್ ಕಾರ್ಯಕರ್ತರ ಕೈ-ಕಾಲುಗಳನ್ನು ಕತ್ತರಿಸಿ ಕಾಂಗ್ರೇಸ್‌ನ ಕೆಲವು ಮುಖಂಡರನ್ನು ಜಾತಿ ವೈಷಮ್ಯದಿಂದ ಕೊಲೆಮಾಡಿರುತ್ತಾರೆ ಎಂದು ದೂರಿದರು. ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ಶಾಸಕರಿಲ್ಲದೇ ತಬ್ಬಲಿಯಾಗಿರುತ್ತಾರೆ, ವಿನಯ ಗಾಂಧಿಯವರು ಯಾವುದೇ ಸರ್ಕಾರದ ನಾಮಿನೇಷನ್ ಅಧಿಕಾರ ಇಲ್ಲದಿದ್ದರೂ ಸುಮಾರು ೪೫ ವರ್ಷದಿಂದ ಹಾಸನ ಕ್ಷೇತ್ರದ ಜನರ ಕುಂದುಕೊರತೆಗಳಿಗೆ ಸ್ಪಂಧಿಸುತ್ತ ಬಂದಿರುತ್ತಾರೆ. ಹಾಸನ ವಿಧಾನಸಭಾ ಕ್ಷೇತ್ರದ ಸ್ಥಳೀಯರಾದ ವಿನಯ ಗಾಂಧಿಯವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದರೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರಾಗಿ ಭಾರಿ ಬಹುಮತದ ಅಂತರದಿಂದ ಗೆದ್ದು ಹಾಸನ

ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮತ ಬಾಂಧವರಿಗೆ ಶಕ್ತಿ ತುಂಬಲು ನೆರವಾಗಲ್ಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಹಾಸನದಲ್ಲಿ ಕ್ಷೇತ್ರದ ಸ್ಥಳೀಯರಲ್ಲದವರು ಬೇರೆ ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ನಾವು ಸ್ಥಳೀಯರು ಎಂದು ಹೇಳಿಕೊಂಡು ಸ್ಥಳೀಯ ಮತದಾರರಿಗೆ ದಾರಿ ತಪ್ಪಿಸಿ ಇಲ್ಲ ಸಲ್ಲದ ಆಸೆ ಅಮಿಷಗಳನ್ನು ಮತದಾರರಿಗೆ ತೋರಿಸಿ ಗುಂಪು ಕಟ್ಟಿ ಕ್ಷೇತ್ರದ ಜನರಿಗೆ ವಂಚಿಸುತ್ತಿದ್ದಾರೆ ಅಂತಹವರಿಗೆ ಅವಕಾಶ ಕೊಡದೆ ಯಾರು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದು ಕ್ಷೇತದ ಜನತೆಗೆ ಜನಾನುರಾಗಿ ಚಿರ ಪರಿಚಯವಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕೇ ಹೊರೆತು ಬೇರೆ ಕ್ಷೇತದವರಿಗೆ ಅವಕಾಶ ಕೊಡಬಾರದಾಗಿ ವಿನಂತಿಸುತ್ತ ಹಾಗೆಯೇ ನಿಗಮ ಮಂಡಳಿಯಲ್ಲೂ ಸಹ ಇದೇ ನೀತಿಯನ್ನು ಅನುಸರಿಸಬೇಕಾಗಿ ಕೋರಿದರು.ಕೆ.ಎನ್. ರಾಜಣ್ಣನವರನ್ನು ಹಾಸನ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರುಹಲವು ಭಿನ್ನಾಭಿಪ್ರಾಯಕ್ಕೆ ಒಳಗೊಂಡಂತೆ ಗುಂಪು ಗುಂಪಾಗಿ ಹೋಗಿದ್ದರು.

ನಂತರ ಕೆ.ಎನ್. ರಾಜಣ್ಣ ಅವರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಜಿಲ್ಲೆಯ ಎಲ್ಲಾ ಜನಾಂಗದ ಮುಖಂಡರನ್ನು ಮತ್ತು ಎಲ್ಲಾ ಕಾರ್ಯಕರ್ತರನ್ನು ಒಟ್ಟುಗೂಡಿಸಿ ತಳಹಂತದಿಂದ ಕಾಂಗ್ರೇಸ್ ಪಕ್ಷವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ದಲಿತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಹಾಗೂ ಹಿಂದುಳಿದವರ್ಗದವರು, ಒಕ್ಕಲಿಗರು, ಲಿಂಗಾಯತರು ಇತರ ಎಲ್ಲಾ ಸಣ್ಣ ಪುಟ್ಟ ಸಮುದಾಯವನ್ನು ಒಟ್ಟುಗೂಡಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ ನವರು ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಹಾಸನ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಸಮರ ಸಾರಿದ್ದು, ಆ ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಕಾಂಗ್ರೇಸ್ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಈಗ ತಾನೇ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾನ್ಯ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣನವರು ಜಿಲ್ಲೆಯ ಎಲ್ಲಾ ಜಾತಿ ಧರ್ಮದ ಮತ್ತು ತಳಮಟ್ಟದ ಜನಾಂಗ ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದು ಕಡೆ ಸೇರಿಸಿ ಅವರಿಗೆ ಲೋಕಸಭಾ ಚುನಾನಣೆಗೆ ಸ್ಪರ್ಧಿಸಿದ್ದ ಶ್ರೀಯುತ ಶ್ರೇಯಸ್ ಪಟೇಲ್ ರವರಿಗೆ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದ್ದರು. ಹೆಚ್ಚಿನ ಅಂತರದಿಂದ ಗೆಲ್ಲಿಸದಿದ್ದರೆ ಮುಂದೆ ಹಾಸನಕ್ಕೆ ನಾನು ಕಾಲಿಡುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಕಾರ್ಯಕರ್ತರು ಎಲ್ಲಾ ಒಟ್ಟುಗೂಡಿ ಲೋಕಸಭಾ ಕ್ಷೇತ್ರದ ಎಲ್ಲಾ ಭಾಗದ ಮತದರಾರನ್ನು

ಭೇಟಿಮಾಡಿ ಮತದಾರರ ವಿಶ್ವಾಸಗಳಿಸಿ ೨೫ ವರ್ಷಗಳಿಂದ ಗೆಲ್ಲದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಯುತ ಶ್ರೇಯಸ್ ಪಾಟೇಲರನ್ನು ಬಹಳ ಮತಗಳ ಅಂತರದಿಂದ ಗೆಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆ. ಎನ್. ರಾಜಣ್ಣ ನವರ ನೇತೃತ್ವದ ಶ್ರಮದಿಂದ ಯಶಸ್ವಿಯಾಗಿದೆ ಎಂದರು. ಶೀಘ್ರದಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆಗಳು ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ೭ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಅವರ ನೇತೃತ್ವದಲ್ಲಿ ಕಾರ್ಯಕರ್ತರು ಒಗ್ಗಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ ಆದ್ದರಿಂದ ಸನ್ಮಾನ್ಯ ಶ್ರೀ ಕೆ. ಎನ್. ರಾಜಣ್ಣ ನವರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸಲು ಕಳಕಳಿಯಿಂದ ಮನವಿ ಮಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ್ ಗಾಂಧಿ, ಕಡಾಖಡಿ ಫೀರ್ ಸಾಹೇಬ್, ಜಗದೀಶ್, ಆರ್. ವಿಜಯಕುಮಾರ್, ಪಂಕಜ, ಮಂಜೀರ್, ಮೆಹರುನ್ನಿಸಾ, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಸಮಾಜ ಸೇವಕ ಪುನೀತ್ ಬನ್ನಹಳ್ಳಿಗೆ ಧರ್ಮ ಸಂವರ್ಧಕ ಪ್ರಶಸ್ತಿ

Published

on

ವರದಿ ಸತೀಶ್ ಚಿಕ್ಕಕಣಗಾಲು

ಆಲೂರು: ಭಕ್ತರಿಗೆ ಸೇವಾ ಸಮರ್ಪಣಾ ಮನೋಭಾವ ಇದ್ದಾಗ ಮಾತ್ರ ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಸಕಲೇಶಪುರದ ಸಮಾಜ ಸೇವಕ ಪುನೀತ್ ಬನ್ನಹಳ್ಳಿ ಅವರಿಗೆ ಧರ್ಮ ಸಂವರ್ಧಕ ಎಂಬ ಪ್ರಶಸ್ತಿಯನ್ನು ನೀಡಿ ಆರ್ಶೀವದಿಸಿ ನಂತರ ಮಾತನಾಡಿದರು.

ಭಕ್ತರು ಮಠದ ಆಧಾರ ಸ್ತಂಭವಾದಾಗ ಮಠಗಳು ಕಲ್ಯಾಣ ಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಸಂಸ್ಥಾನ ಶ್ರೀಮಠಕ್ಕೆ ತನ್ನದೇ ಇತಿಹಾಸವಿದೆ, ಪ್ರತಿಯೊಬ್ಬರೂ ಜೀವನದಲ್ಲಿ ದಾನ, ಧರ್ಮ, ಸನ್ಮಾರ್ಗ, ಸದ್ವಿಚಾರ ಆಳವಡಿಸಿಕೊಳ್ಳಬೇಕು ಎಂದರು.

ಕಾರ್ಜುವಳ್ಳಿ ಹಿರೇಮಠದಲ್ಲಿ ಪ್ರತಿ ವರ್ಷ ಲಿಂ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ವಾರ್ಷಿಕೋತ್ಸವ-ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಐದನೇ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ಗಣ್ಯರನ್ನು ಗುರುತಿಸಿ ವಿಶೇಷ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಗೌರವಿಸಿ ಸನ್ಮಾನಿಸಲಾತಿದೆ ಆ ನಿಟ್ಟಿನಲ್ಲಿ ಸಕಲೇಶಪುರದ ಸಮಾಜ ಸೇವಕ ಪುನೀತ್ ಬನ್ನಹಳ್ಳಿ ಅವರಿಗೆ ಧರ್ಮ ಸಂವರ್ಧಕ ಎಂಬ ಪ್ರಶಸ್ತಿಯನ್ನು ನೀಡಲಾಗಿತ್ತು ಆ ದಿನ ಅವರು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಇಂದು ಅವರನ್ನು ಶ್ರೀಮಠಕ್ಕೆ ಕರೆಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಿರಂಜನ, ಕುಮಾರ್, ಪುರೋಹಿತ ಶಶಿ ವಿರುಪಾಪುರ ಸೇರಿದಂತೆ ಮುಂತಾದವರು ಹಾಜರಿದ್ದರು‌.

Continue Reading

Hassan

ಕಾಫಿ ಕಳ್ಳತನ ಮಾಡಿದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಕೇಸು ಹಾಕುವ ಬೆದರಿಕೆ : ನ್ಯಾಯ ಕೊಡಿಸುವಂತೆ ಅಕ್ಷಿತಾ ಮನವಿ

Published

on

ಹಾಸನ: ಜಮೀನಿನಲ್ಲಿ ಕಾಫಿ ಕದ್ದು ಕೂಯ್ದ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮತ್ತು ಅಟ್ರಾಸಿಟಿ ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದ್ದು, ನಮಗೆ ನ್ಯಾಯಕೊಡಿಸಬೇಕೆಂದು ಕೊಡಗಲವಾಡಿ ಗ್ರಾಮದ ಅಕ್ಷತಾ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಕ್ಷತಾ ಕೊಡಗಲವಾಡಿ ಯಾದ ನಾನು ಸುಮಾರು ೭-೮ ವರ್ಷಗಳಿಂದ ಆಲೂರು ತಾಲೂಕಿನ ಕೊಡಗಲವಾಡಿ ಗ್ರಾಮದ ಸರ್ವೆ ನಂ ೧೭/೨ ರಲ್ಲಿ ನಮ್ಮ ಮನೆಯಲ್ಲಿ ವಾಸವಾಗಿರುತ್ತೇನೆ. ಮನೆಯ ಪಕ್ಕದಲ್ಲೇ ಕಾಫಿ ಗಿಡಗಳಿದ್ದು, ಅದರ ಕಾಫಿ ಹಣ್ಣನ್ನು ನನ್ನ ಚಿಕ್ಕಮ್ಮ ಕುಯ್ಯುತಿದ್ದಾಗ ಪಕ್ಕದ ತೋಟದ ಮಂಜುನಾಥ್ ಎಂಬುವವರ ಅಣ್ಣ ಕಾಂತಾ ಮತ್ತು ಅವರ ಮಗ ಬಾಲರಾಜ್ ಎಂಬುವವರು ಅಲ್ಲಿಗೆ ಬಂದು ನನ್ನ ಚಿಕ್ಕಮ್ಮನಿಗೆ ಅವ್ಯಾಚ ಶಬ್ದಗಳಿಂದ ಬೈದು ಅವರು ಅದಕ್ಕೆ ಯಾಕೆ ಎಂದು ಕೇಳುವಾಗ ಅವರ ತಲೆ ಕೂದಲಿಗೆ ಕೈ ಹಾಕಿ ಮುಡಿ ಎಳೆದಾಡುತ್ತಿದ್ದಾಗ ಅವರು ಕಿರುಚಡುತಿದ್ದನ್ನು ಕಂಡು ನಾನು ಮನೆಯಿಂದ ಹೋಗಿ ಬಿಡಿಸಲು ಯತ್ನಿಸಿದಾಗ ನನ್ನ ಮೇಲೂ ಹಲ್ಲೆ ಮಾಡಿ ನನ್ನನ್ನು ಕೆಳಗೆ ತಳ್ಳಿ ಬೀಳಿಸಿರುತ್ತಾರೆ ಎಂದು ದೂರಿದರು. ಅಲ್ಲೇ ಬಿದ್ದಾಗ ರಕ್ತಸ್ರಾವ ಉಂಟಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೊರಬರುವಾಗ ನನ್ನನ್ನು ಅವ್ಯಚ್ಯಾ ಶಬ್ದಗಳಿಂದ ನಿಂದಿಸಿ ನಿನ್ನ ಮನೆಯನ್ನು ಪುಡಿ ಮಾಡುವುದಾಗಿ ಮತ್ತು ಮುಂದೆ ನಾವು ಅವರು ಹೇಳಿದಂತೆ ಕೆಳದಿದ್ದರೆ ಅಟ್ರಾಸುಟಿ ಕೇಸ್ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಮತ್ತು ಅಲ್ಲೇ ಇದ್ದ ೬-೭ ಕಾಫಿ ಮೂಟೆಯ ಚೀಲಾಗಳನ್ನು ತೆಗೆದುಕೊಂಡು ಮುಂದೆ ನಾವು ಹೇಳಿದಂತೆ ಕೆಳದಿದ್ದರೆ ಇಲ್ಲಿರುವ ಗಿಡಗಳನ್ನು ಕಡಿದು ಬೆಂಕಿಗೆ ಹಾಕುತ್ತೆನೆಂದು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದು, ಆಲೂರು ಪೊಲೀಸ್ ಸ್ಟೇಷನ್ ಅಲ್ಲಿ ಸುಮಾರು ೨ ಗಂಟೆಗೆ ದೂರು ದಾಖಲಾಯಿಸಲು ಹೋದಾಗ ನಮ್ಮ ದೂರನ್ನು ತೆಗೆದುಕೊಳ್ಳದೆ ೨ ಗಂಟೆಯವರೆಗೂ ಕಾಯಿಸಿರುತಾರೆ. ನನಗೆ ಹಲ್ಲೆ ಮಾಡಿದ ವ್ಯಕ್ತಿ ಬರುತ್ತಿದ್ದಾರೆ ಇರಿ ಎಂದು ಹೇಳಿದ್ದಾರೆ. ನಂತರ ನನಗೆ ಹೊಟ್ಟೆ ನೋವಾಗಿದೆ ಮತ್ತು ಸುಸ್ತು ಅಗುತಿದೆ ಹಾಗಾಗಿ ದೂರು ದಾಖಲಾಯಿಸಲು ತಡವಾದರೆ ಹಿಂಬಾರ ಕೊಡಿ ಎಂದು ಹೇಳಿದಾಗ ನನ್ನ ಚಿಕ್ಕಮ್ಮನಾ ದೂರನ್ನು ತೆಗೆದುಕೊಂಡು ಎಫ್.ಐ.ಆರ್. ಮಾಡುತ್ತಾರೆ. ನಂತರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ನಿಮಗೆ ಪೆಟ್ಟು ಬಿದ್ದಿದ್ದರಿಂದ ಮತ್ತು ಮಾನಸಿಕ ಒತ್ತಡದಿಂದ ಹೀಗಾಗಿದೆ ಎಂದು ಎಂ.ಎಲ್.ಸಿ. ಮಾಡಿರುತಾರೆ. ನನ್ನ ೧೭/೨ ರಲ್ಲಿ ನ್ಯಾ ಲೋನ್ ಗಳಿದ್ದು ಪ್ರತಿ ವರ್ಷ ನನ್ನ ಜಾಗದ ಕಾಫಿ ಹಣ್ಣು ಕುಯುತಿದ್ದಾರೆ ಮುಂದೆ ನನ್ನ ತರ ರೈತರು ಹೇಗೆ ಜೀವನ ಮಾಡುವುದೆಂದು ಪ್ರಶ್ನೆ ಮಾಡಿದರು. ನಾನು ಒಬ್ಬ ಜನಪ್ರತಿನಿಧಿಯಾಗಿ ಒಬ್ಬ ೨೦ ರಿಂದ ೨೫ ವರ್ಷದ ಹುಡುಗ ಹೀಗೆ ಮಾಡಿದ್ದಾರೆ ಮುಂದಿನ ಆಗುಹೋಗುಗಳನ್ನು ಗಮನಿಸಿ ದೂರು ಕೊಟ್ಟಿರುತೇವೆ. ನಾನು ಅಟ್ರಾಸಿಟಿ ವಿರೋಧಿ ಅಲ್ಲ. ಇದರ ದುರುಪಯೋಗದ ವಿರೋಧಿ ಎಂದು ಹೇಳಿದರು. ಇವುಗಳನೆಲ್ಲ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಗಮನಿಸಿ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದರು.

Continue Reading

Hassan

ಸುತ್ತೂರು ಮಠದಿಂದ 2 ಲಕ್ಷಕ್ಕೂ ಅಧಿಕ ಉಪಕರಣ ಸರಕಾರಿ ವಾಣಿವಿಲಾಸ ಶಾಲೆಗೆ ಕೊಡುಗೆ

Published

on

ಹಾಸನ: ಶ್ರೀಕ್ಷೇತ್ರ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕೃಪಾ ಆಶೀರ್ವಾದದಿಂದ ಸುಮಾರು ೨ ಲಕ್ಷಕ್ಕೂ ಅಧಿಕ ಮೊತ್ತದ ದೂರದರ್ಶಕ ಯಂತ್ರ, ಸೂಕ್ಷ್ಮ ದರ್ಶಕ ಯಂತ್ರ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿ ವಿಲಾಸ ಶಾಲೆಗೆ ನೀಡಿದ್ದಾರೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದರು.

ನಗರದ ಮಹಾವೀರ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರಾದ ಮೀನಾಕ್ಷಿ ಅವರಿಗೆ ಉಪಕರಣಗಳನ್ನು ಹಸ್ತಂತರಿಸಿದ ನಂತರ ಮಾತನಾಡಿದ ಅವರು, ಸುತ್ತೂರು ಮಠದಿಂದ ಸುಮಾರು ೮೦ ಸಾವಿರ ಮೌಲ್ಯದ ದೂರದರ್ಶಕ ಯಂತ್ರ, ಸುಮಾರು ೮ ಸಾವಿರ ಮೌಲ್ಯದ ಸೂಕ್ಷ್ಮದರ್ಶಕ ಯಂತ್ರಗಳು ಮತ್ತು ಸುಮಾರು ೧ ಲಕ್ಷಕ್ಕೂ ಮೀರಿದ ಮೌಲ್ಯದ ಸಾವಿರಕ್ಕೂ ಅಧಿಕ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕವಾದ ಅಕ್ವಾಗಾರ್ಡ್‌ಗಳು ಸುತ್ತೂರು ಮಠದಿಂದ ಮಹಾಪ್ರಸಾದವಾಗಿ ಶಾಲೆಗೆ ದೊರೆತ ಸುದಿನವಾಗಿದೆ ಎಂದರು.

ಸಹಕಾರವನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿಯವರೊಂದಿಗೆ ಇತ್ತೀಚಗೆ ಸುತ್ತೂರು ಜಗದ್ಗುರುಗಳು ಹಾಸನದ ಧಾರ್ಮಿಕ ಕಾರ್ಯಕ್ರಮಕ್ಕೆ ಅಗಮಿಸಿದ ಸಂದರ್ಭದಲ್ಲಿ ನಮ್ಮ ಸರ್ಕಾರಿ ಪ್ರಾಥಮಿಕ ವಾಣಿವಿಲಾಸ ಶಾಲೆಯಲ್ಲಿ ವಚನ ಕಂಠಪಾಠ ಕಾರ್ಯಕ್ರಮಕ್ಕೆ ಕರೆಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮಾಡಿದ ಅವರು ಹೆಚ್ಚಿನ ಸಹಕಾರ ನೀಡಿ ಸುತ್ತೂರು ಮಠದಿಂದ ಉಪಕರಣಗಳನ್ನು ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ. ಮಧು ಕುಮಾರ್ ಹಾಗೂ ಬಾಲು ಸ್ವತಃ ಶಾಲೆಗೆ ಭೇಟಿ ನೀಡಿ ದೂರದರ್ಶಕ ಯಂತ್ರ ಸೂಕ್ಷ್ಮದರ್ಶಕ ಯಂತ್ರ ಹಾಗೂ ಅಕ್ವಾಗಾರ್ಡನ್ನು ನಮ್ಮ ಶಾಲೆಗೆ ನೀಡಿದ್ದಾರೆ.

ಈ ಒಂದು ಶುಭ ಕಾರ್ಯಕ್ರಮದಲ್ಲಿ ಚಾಪು ಮೂಡಿಸಿ ಸಹಕಾರ ನೀಡಿದ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತಾ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ.

ಈ ಸಂದರ್ಭದಲ್ಲಿ ಜೆಎಸ್‌ಎಸ್ ಕಾಲೇಜು ಪ್ರಾಂಶುಪಾರು ಮಧುಕುಮಾರ್, ಬಾಲು, ಶಿಕ್ಷಣಾಧಿಕಾರಿಗಳು ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಈ ಶಾಲೆಯ

ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆ ಸಲ್ಲಿಸಿ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಎಂ.ಎಚ್. ಮೀನಾಕ್ಷಿ ಕೃತಜ್ಞತೆ ಸಲ್ಲಿಸಿದರು.

 

Continue Reading

Trending

error: Content is protected !!