Connect with us

Hassan

ಹಕ್ಕುಪತ್ರಕ್ಕೆ ಖಾತೆ ಮಾಡಿಸಿಕೊಡುವಂತೆ ಮನವಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸದಿದ್ರೆ ಪಿಡಿಓ ಕಛೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ

Published

on

ಹಾಸನ: ಹಕ್ಕುಪತ್ರ ಕೊಟ್ಟು ವರ್ಷಗಳಾದರೂ ಖಾತೆ ಮಾಡಿಸಿಕೊಟ್ಟಿರುವುದಿಲ್ಲ. ಕೂಡಲೇ ಕಾಯ್ದಿರಿಸಿರುವ ಜಾಗದಲ್ಲಿ ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದಲ್ಲದೇ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಸ್ಪಂದಿಸದಿದ್ದರೇ ಗ್ರಾಪಂ ಮತ್ತು ತಹಸೀಲ್ದಾರ್ ಕಛೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯ ರೈತ ಬಣದ ಅಧ್ಯಕ್ಷ ಚಂದ್ರಶೇಖರ್ ಬೋವಿ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನದ ಯೋಜನೆ ಅಡಿಯಲ್ಲಿ ಕಾಯ್ದಿರಿಸಿದ ಜಾಗದಲ್ಲಿ ರಾಮನಾಥಪುರ ಗ್ರಾಮಪಂಚಾಯಿತಿಯಿಂದ ೨೦೨೦-೨೧ರಲ್ಲಿ ನಿವೇಶನ ರಹಿತರ ಅರ್ಹ ಪಲಾನುಭವಿಗಳ ಪಟ್ಟಿ ತಯಾರಿಸಿ ಅದರಲ್ಲೂ ಸೂಕ್ತರೆಂದು ಪರಿಗಣಿಸಿ ಆರಿಸಿ ಏನಾದ್ರು ತಕರಾರು ಇದ್ರೆ ಇಂತಿಷ್ಟು ದಿನಗಳಲ್ಲಿ ಗ್ರಾಮಪಂಚಾಯಿತಿಗೆ ತಿಳಿಸಲು ಕೋರಿ ತಯಾರಿಸಿದ ಪಟ್ಟಿಯನ್ನು ಪಂಚಾಯಿತಿಯ ನೋಟೀಸ್ ನಾಮಫಕದಲ್ಲಿ ಸುಮಾರು ನಾಲ್ಕರಿಂದ ಐದು ತಿಂಗಳು ಹಾಕಿ ಅದಾದ ನಂತರ ಪಂಚಾಯಿತಿಯಲ್ಲೊಮ್ಮೆ ತಾಲ್ಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನೆಡೆಸಲಾಗಿತ್ತು ಎಂದರು. ಕೆಲವು ದಿನಗಳ ನಂತರ ೨೦೨೦ ರಂದು ಪಂಚಾಯಿತಿಯ ಆವರಣದಲ್ಲಿ ದಂಡಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆ ನೆಡೆಸಿ ಯಾರೂ ಆಕ್ಷೇಪಣೆ ಮಾಡದ ಕಾರಣ ಅಂದು ದಂಡಾಧಿಕಾರಿಗಳ ಅನುಮೋದನೆ ದೊರಕಿತು. ೨೦೨೨ ರಾಮನಾಥಪುರದ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಯದಲ್ಲಿ ಹಾಲಿ ಪಂಚಾಯಿತಿ ಅದಿಕಾರಿಗಳು ಹಾಗು ಸದಸ್ಯರು ಮತ್ತು ತಾಲ್ಲೂಕು ಶಾಸಕರು ಮತ್ತು ಮಂತ್ರಿ ಮಹೋದಯರು ಸೇರಿದ ಸಭೆಯಲಿ ಪದಾಧಿಕಾರಿಗಳ ಸಮ್ಮುಖದಲ್ಲಿ ಹಕ್ಕು ಪತ್ರ ವಿತರಿಸಲಾಯಿತು ಎಂದು ಹಕ್ಕುಪತ್ರ ವಿತರಣೆ ಮಾಡಿದ ವಿಡಿಯೋದ ತುಣುಕುಗಳನ್ನು ಕೂಡ ಪ್ರದರ್ಶಿಸಿದರು. ಆದರೇ ಅಂದಿನಿಂದ ಇಂದಿನವರೆಗೂ ಹಕ್ಕು ಪತ್ರ ಕೊಟ್ಟು ವರ್ಷಗಳಾದರೂ ಯಾರಿಗೂ ಖಾತೆ ಮಾಡಿಕೊಟ್ಟಿರುವುದಿಲ್ಲ. ಖಾತೆ ಮಾಡಿಕೊಡುವಂತೆ ಹಲವಾರು ಬಾರಿ ಪಂಚಾಯಿತಿಗೆ ಹೋಗಿ ಅಧಿಕಾರಿಗಳನ್ನು ಕೇಳಿಕೊಂಡರೂ ನಮಗೆ ನಮ್ಮ ಕಷ್ಟಕ್ಕೆ ಸ್ಪಂದಿಸದೆ ಬೇಜಾವಾಬ್ದಾರಿ ಉತ್ತರ ಕೊಟ್ಟು ಕಳುಹಿಸುತ್ತಿದ್ದಾರೆ. ಬಡತನದ ಬೇಗೆಯಲ್ಲಿರುವ ನಮಗೆ ಸರ್ಕಾರದಿಂದ ಮಂಜೂರಾಗಿರುವ ನಿವೇಶನದ ಖಾತೆ ಮಾಡಿಕೊಡುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಕೋರಿದರು.

ನ್ಯಾಯಯುತ ಬೇಡಿಕೆಗೆ ಏನಾದರೂ ಸ್ಪಂದಿಸದಿದ್ದರೇ ಗ್ರಾಮ ಪಂಚಾಯಿತಿಗೆ ಮತ್ತು ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಇದೆ ವೇಳೆ ರಾಜ್ಯ ರೈತ ಬಣದ ಜಿಲ್ಲಾಧ್ಯಕ್ಷ ಸಿದ್ದೇಶ್, ಗ್ರಾಮದ ಪಾರ್ವತಿ, ವಿಜಯ, ವಸಂತ ಕುಮಾರಿ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಜಾನಪದ ಎಂಬುದು ಯಾರನ್ನು ನೋಯಿಸುವುದಿಲ್ಲ: ಹೆಚ್.ಎಲ್.ಮಲ್ಲೇಶ್ ಗೌಡ

Published

on

ಹಾಸನ: ಜಾನಪದ ಎಂಬುದು ಯಾರನ್ನು ನೋಯಿಸುವುದಿಲ್ಲ. ಎಲ್ಲಾರ ಎದೆಯನ್ನು ತಟ್ಟುತ್ತದೆ. ಮುಟ್ಟಿ ಎಲ್ಲಾರಿಗೂ ರೋಮಾಂಚನ ಕೊಡುತ್ತದೆ. ಆದರೇ ನಾಗರೀಕ ಕಲೆಯು ಇದು ಎಲ್ಲಾರನ್ನು ತಟ್ಟುವುದಕ್ಕಿಂತ ಹೆಚ್ಚಾಗಿ ಎಲ್ಲಾರನ್ನು ಹರ್ಟ್ ಮಾಡುತ್ತದೆ. ಆಗೆ ಅದನ್ನೆ ತಮ್ಮ ಕಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ. ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾನಪದ ಉತ್ಸವ, ಗ್ರಾಮೀಣ ಕಲರವ ಮತ್ತು ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಅವರು ವಿಭಿನ್ನ ರೀತಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜಾನಪದಕ್ಕೆ ವಿಶ್ವವನ್ನು ಕುಣಿಸುವ ಶಕ್ತಿ ಇದೆ. ಅದು ಈ ಜನಪದದ ಸತ್ವ. ಜಾನಪದದ ತುತ್ತ ತುದಿಯ ಸೊಗಡನ್ನು ಉಂಡು, ಇವತ್ತು ನಾಗರೀಕತೆಯ ತುತ್ತ ತುದಿಯಲ್ಲಿ ನಿಂತು ಎಲ್ಲಾವನ್ನು ಮರೆಯುತ್ತಿರುವ ಹಾಗೂ ಬರಡು ಆಗಿರುವ ಬಾರೆಯನ್ನು ಕೂಡ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ತಲೆ ಮಾರಿಗೆ ಮರೆತು ಹೋಗಿರುವುದಿಲ್ಲ. ಆದರೇ ನಿಮ್ಮ ತಲೆ ಮಾರಿಗೆ ನೊಡುವ ಸೌಭಾಗ್ಯ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ ಎನ್ನುವ ನೋವು ನನ್ನಲ್ಲಿದೆ. ನಮ್ಮ ತಲೆ ಮಾರಿನ ಜನ ಓದುವುದೇ ಸಂಭ್ರಮ ಎಂದುಕೊಂಡು ಅದನ್ನೆಲ್ಲಾ ಮೂಲೆ ಸೇರಿಸಿ ಬಿಟ್ಟೆವು. ನಮ್ಮಪ್ಪ, ನಮ್ಮಜ್ಜ ಏನು ಮೂಟೆ ಕಟ್ಟಿ ಬಿಟ್ಟಿ ಹೋಗಿದ್ದರೂ ಅದನ್ನು ಹೊತ್ತುಕೊಂಡು ಬಂದು ನಿಮ್ಮ ಎದುರಿಗೆ ಇಡುವ ಶಕ್ತಿ ನಮಗೆ ಇರಲಿಲ್ಲ. ಅದ್ನನ ಮಾಡಬೇಕಿತ್ತು. ಆದರೇ ಮಾಡಲಿಲ್ಲ. ಒಂದು ಕಾಲಮಾನದಲ್ಲಿ ಇರುವುದು ಅದೆಲ್ಲಾ ಬಿಟ್ಟು ನಾಗರೀಕತೆಯತ್ತ ಹೊರಡದೆ ಒಂದು ದೊಡ್ಡ ಪರಿವರ್ತನೆ ಎಂದು ಹೇಳಿ ಒಂದು ದೊಡ್ಡ ಭ್ರಮೆಯಲ್ಲಿ ನಾವುಗಳು ಇದ್ದೇವು. ಪರಿವರ್ತನೆಯ ತುತ್ತ ತುದಿಯತ್ತ ಬಂದಾಗ ಗೊತ್ತಾಗಿ ಇದರಲ್ಲಿ ಅರ್ಥ, ಶಕ್ತಿ ಹಾಗೂ ಸತ್ವ ಇಲ್ಲ ಎಂಬುದು ತಿಳಿಯಿತು. ಈ ಸ್ವಾಧ, ಶಕ್ತಿ ಎಲ್ಲಾ ಪೂರ್ವಿಕರು ಆಚರಿಸಿಕೊಂಡು ಬಂದ ಅದರಲ್ಲಿ ಇತ್ತು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ಹಾಗೂ ಗ್ರಾಮೀಣ ಸೊಗಡನ್ನು ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದರು. ಹಿಂದಿನ ದಿನಗಳಲ್ಲಿ ನಡೆಯುತ್ತಿದ್ದ ಮದುವೆಯನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಜೊತೆಗೆ ಗ್ರಾಮೀಣ ಕ್ರೀಡಾಕೂಟ ಎಲ್ಲಾವು ನೋಡುಗರ ಗಮನಸೆಳೆಯಿತು.

ಇದೆ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ಕಲಾವಿದ ಬಿ.ಟಿ. ಮಾನವ, ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಕೆ.ಜಿ. ಕವಿತ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಬಿ.ಎನ್. ಮಹಂತೇಶ್, ಸರ್.ಎಂ. ವಿಶ್ವೇಶ್ವರಯ್ಯ ಸಂಘದ ಅಧ್ಯಕ್ಷ ಎಂ. ಸುನಿಲ್ ಕುಮಾರ್, ಸಿಟಿ ಕೋ ಆಪರೇಟಿವ್ ನಿರ್ದೇಶಕ ಬಾಲಸುಬ್ರಮಣ್ಯ, ನಗರಸಭೆ ಮಾಜಿ ಸದಸ್ಯ ಚಂಧ್ರಶೇಖರ್, ಸಮಾಜ ಸೇವಕ ಹೆಚ್.ಆರ್. ಪ್ರದೀಪ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಸಚಿನ್, ವಾರ್ಷಿಕ ಸಂಚಿಕೆ ಸಂಚಾಲಕ ಬಿ.ಹೆಚ್. ರಾಮೇಗೌಡ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಹೆಚ್.ಎನ್. ಹರೀಶ್, ಉಪನ್ಯಾಸಕ ಮಹೇಶ್, ಇಂಗ್ಲೀಷ್ ಭಾಷೆ ಉಪನ್ಯಾಸಕ ಎಸ್. ಯೋಗೇಶ್, ಹರ್ಷಾ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಹರೀಶ್ ಸ್ವಾಗತಿಸಿದರು.

Continue Reading

Hassan

ನಾಗತವಳ್ಳಿ ಪಾರ್ಕ್ ಜಾಗ ಉಳಿಸಲು ಮುಂದುವರಿದ ಹೋರಾಟ: ಶಾಸಕ ಸ್ವರೂಪ್ ಸಾಥ್‌

Published

on

ಹಾಸನ: ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ 54 ರಲ್ಲಿ ನ 2 ಎಕರೆ ಜಾಗವನ್ನು ಪಾರ್ಕ್ ಗಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಇಂದು ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬೆಂಗಳೂರಿಗೆ ತೆರಳಿದರು. ಹೋರಾಟಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಸಾತ್ ನೀಡಿದರು.

ಗ್ರಾಮದಿಂದ ಇಂದು ಬೆಳಗ್ಗೆ ಗ್ರಾಮದ ಮುಖಂಡರು ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಖಾಸಗಿಯವರಿಗೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು ಮಾತನಾಡಿ, ಗ್ರಾಮದ ಪಾರ್ಕ್ ಜಾಗಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಶಾಮೀಲಾಗಿ ಖಾಸಗಿ ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಮಂಜೂರು ಮಾಡಿ ಕೊಟ್ಟಿದ್ದಾರೆ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದೇ ವಿಚಾರವಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿ, ಕೆ.ಎ.ಐ.ಡಿ.ಬಿ ಅಧಿಕಾರಿಗಳ ಕಚೇರಿ, ಹಾಗೂ ಪಾರ್ಕಿಗೆ ಮೀಸಲಿಟ್ಟಿದ ಸ್ಥಳ ಸೇರಿದಂತೆ ವಿವಿಧಡೆ ಪ್ರತಿಭಟನೆಗಳು ನಡೆದರು ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ. ಬಿ ಪಾಟೀಲ್ ರವರು ಪಾರ್ಕ್ ಜಾಗವನ್ನು ಪಾರ್ಕಿಗಾಗಿಯೇ ಮೀಸಲಿರಿಸುವಂತೆ ಆದೇಶ ಹೊರಡಿಸಿದರು ಈವರೆಗೆ ಅಧಿಕಾರಿಗಳು ಜಾಗವನ್ನು ತೆರವುಗೊಳಿಸಲು ಮುಂದಾಗಿಲ್ಲ ಎಂದರು.

ಗ್ರಾಮದ ಸುನಿಲ್ ಮಾತನಾಡಿ, 2 ಎಕರೆ ಪಾರ್ಕ್ ಜಾಗ ಯಾರೊಬ್ಬರ ಸ್ವತ್ತಲ್ಲ. ಗ್ರಾಮದ ಜನರ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣ ಮಾಡಲು ಮೀಸಲಿಟ್ಟಿರುವ ಜಾಗ ಇದಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇದೀಗ ಎರಡು ಎಕರೆ ಬೆಲೆಬಾಳುವ ಜಾಗ ಖಾಸಗಿಯವರ ಪಾಲಾಗುತ್ತಿದೆ ಇದನ್ನು ಸರ್ಕಾರ ತಡೆಯಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು, ಮಾಜಿ ಸಚಿವರಾದ ಎಚ್ ಡಿ ರೇವಣ್ಣನವರು. ಶಾಸಕರಾದ ಸ್ವರೂಪ ಪ್ರಕಾಶ್ ಸೇರಿದಂತೆ ಹಲವರು ಜಾಗ ಉಳಿಸಲು ಮನವಿ ಮಾಡಿದ ಮೇರೆಗೆ ಇದೀಗ ಸಚಿವರಾದ ಎಂಬಿ ಪಾಟೀಲ್ ರವರು ಜಾಗವನ್ನು ಪಾರ್ಕಿಗೆ ಮೀಸಲಿಡಲು ಆದೇಶಿಸಿದ್ದಾರೆ ಅದರಂತೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಜಾಗವನ್ನು ತೆರವುಗೊಳಿಸುವ ಬದಲಾಗಿ ಖಾಸಗಿಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ರಾಜ್ಯಮಟ್ಟದ ಹೋರಾಟಕ್ಕೆ ಗ್ರಾಮಸ್ಥರು ಸಜ್ಜಾಗಿದ್ದು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ಕೆ.ಎ.ಐ.ಡಿ.ಬಿ ಕೇಂದ್ರ ಕಚೇರಿ ಎದುರು ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಜಾಗವನ್ನು ಉಳಿಸುವ ಕೆಲಸ ಮಾಡಬೇಕಿದೆ ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

ಪ್ರತಿಭಟನೆ ವೇಳೆ ನಾಗತವಳ್ಳಿ ಗ್ರಾಮಸ್ಥರಾದ ಶರತ್, ಶೇಖರ್, ಪುಟ್ಟರಾಮು, ರಂಗಣಿ, ಸರೋಜಾ, ಕೋಮಲ, ರೇಣುಕಾ, ಗವಿ, ಆನಂದ್, ಶಿವಕುಮಾರ್, ಪುಟ್ಟರಾಜು, ಕೆಂಪೇಗೌಡ, ಕಿರಣ್, ರವಿ, ಇತರರು ಉಪಸ್ಥಿತರಿದ್ದರು

Continue Reading

Hassan

ಉಳ್ಳಾಲ: ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ- ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕ ವಶಕ್ಕೆ

Published

on

ಉಳ್ಳಾಲ: ಕೆಎಸ್ಆರ್‌ಟಿಸಿ ಬಸ್ಸೊಂದರಲ್ಲಿ ನಿದ್ದೆಗೆ ಜಾರಿದ್ದ ಯುವತಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪದಲ್ಲಿ ಬಸ್ ನಿರ್ವಾಹಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಬಸ್ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್ ಕಾಶಪ್ಪ(35) ಎಂದು ಗುರುತಿಸಲಾಗಿದೆ.

ಬುಧವಾರ ಮುಡಿಪುವಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಬಸ್ ಪ್ರಯಾಣದಲ್ಲಿ ನಿದ್ದೆಗೆ ಜಾರಿದ್ದ ಯುವತಿಯೊಬ್ಬಳ ಬಳಿ ನಿಂತು ಆಕೆಯ ದೇಹದ ಖಾಸಗಿ ಭಾಗವನ್ನು ಸ್ಪರ್ಶಿಸಲು ಯತ್ನಿಸಿದ್ದ. ಈ ದೃಶ್ಯವನ್ನು ಬಸ್‌ನಲ್ಲಿದ್ದ ಮತ್ತೋರ್ವ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿ ಬಸ್ ನಿರ್ವಾಹಕನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿಯವರು ಆತನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Continue Reading

Trending

error: Content is protected !!