State
ಅಲ್ಪಸಂಖ್ಯಾತರಿಗೆ ರಾಜ್ಯ ಸರಕಾರ ಬಂಪರ್ ಕೊಡುಗೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ
Karnataka Budget 2024: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಬಜೆಟ್ ಮಂಡನೆ ಮಾಡುತ್ತಿದ್ದು, ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ, 233 ಕೋಟಿ. ರೂ. ವೆಚ್ಚದಲ್ಲಿ ಸೈನ್ಸ್ ಸಿಟಿ ನಿರ್ಮಾಣ, ಕಲಬುರಗಿಯಲ್ಲಿ ಬಸಣ್ಣ ಮತ್ತು ವಚನ ಮಂಟಪ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಸಂದರ್ಭ ಹೇಳಿದ್ದಾರೆ.

ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು, ಶಿವಮೊಗ್ಗ, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಹಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು, 27 ಸಾವಿರ ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ಬಿಸಿನೆಟ್ ಕಾರಿಡಾರ್ ಸ್ಥಾಪನೆ, ಮಹಿಳೆಯರಿಗೆ ಸರಕಾರದಿಂದ ಶೇ.6 ಬಡ್ಡಿ ಸಹಾಯಧನ ನೀಡಲಾಗುವುದು, ಮೇಕೆದಾಟು ಪ್ರತ್ಯೇಕ ಯೋಜನಾ ವಿಭಾಗ ಸ್ಥಾಪನೆ ಮಾಡಲಾಗುವುದು, ಎತ್ತಿನಹೊಳೆ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
Special
ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ:ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿ.
ಕರ್ನಾಟಕ ರಾಜ್ಯದಲ್ಲಿ ಆದರ್ಶ ವಿದ್ಯಾಲಯಗಳು ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಹಾಗೂ ವಸತಿ-ಭೋಜನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದ್ದು, ಈಗ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ ಮಾಡಿವೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
* ಪ್ರಾರಂಭ ದಿನಾಂಕ:23 ಜನವರಿ 2026
• ಕೊನೆಯ ದಿನಾಂಕ: 25 ಫೆಬ್ರವರಿ 2026
• ಪ್ರವೇಶ ಪರೀಕ್ಷೆ: 15 ಮಾರ್ಚ್ 2026 (ಭಾನುವಾರ)
• ಪರೀಕ್ಷೆಯ ಅವಧಿ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 (2.5 ಗಂಟೆ)
ಯಾರು ಅರ್ಹರು?
* ಕರ್ನಾಟಕ ರಾಜ್ಯದ ನಿಗದಿತ ನಿವಾಸಿಯಾಗಿರಬೇಕು.
* 5ನೇ ತರಗತಿ ಪೂರ್ಣವಾಗಿ ಪಾಸಾಗಿರಬೇಕು.
* ಪ್ರಾಥಮಿಕ ಶಿಕ್ಷಣ ಗ್ರಾಮೀಣ ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಪಡೆದಿದ್ದವರಿಗೆ ಹೆಚ್ಚಿನ ಆದ್ಯತೆ.
* ಸರ್ಕಾರದ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.

ಬೇಕಾಗುವ ದಾಖಲೆಗಳು:
* ವಿದ್ಯಾರ್ಥಿಯ ಆದಾರ್ ಕಾರ್ಡ್
* ಜನನ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಡಿಸೇಬಿಲಿಟಿ ಪ್ರಮಾಣ ಪತ್ರ (ಅನ್ವಯಿಸಿದರೆ)
ಅರ್ಜಿ ಸಲ್ಲಿಸುವ ವಿಧಾನ:
ಪ್ರವೇಶಕ್ಕೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು.
ಪ್ರವೇಶ ಪರೀಕ್ಷೆ ಮತ್ತು ಆಯ್ಕೆ:
ಅಧಿಕೃತ ಪ್ರವೇಶ ಪರೀಕ್ಷೆಯು ಮಕ್ಕಳ ಸಾಮರ್ಥ್ಯ, ಪಠ್ಯಪುಸ್ತಕದ ಮೇಲೆ ಆಧಾರಿತ ಪ್ರಶ್ನೆಗಳನ್ನು ಪರೀಕ್ಷಿಸಲಾಗುತ್ತದೆ. ಆಯ್ಕೆ ಪಡೆದ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿಯಲ್ಲಿ ಪ್ರವೇಶ ನೀಡಲಾಗುತ್ತದೆ.
ಈ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿ 2026-27 ಕಾರ್ಯಕ್ರಮವು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ದಾರಿ ತೋರುವ ಮಹತ್ವದ ಅವಕಾಶವಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು.
State
ಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್‌ಗೆ ದೂರು
ಬೆಂಗಳೂರು: ಬಿಗ್ ಬಾಸ್ ಸೀಜನ್- 12ರ ವಿನ್ನರ್ ಗಿಲ್ಲಿನಟ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಲಾಗಿದೆ.
ಸರ್ಕಾರಿ ಶಾಲೆ H8 ಸಿನಿಮಾದ ನಿರ್ಮಾಪಕರು ಗಿಲ್ಲಿನಟ ವಿರುದ್ಧ ದೂರು ನೀಡಿದ್ದಾರೆ. ಗಿಲ್ಲಿ ನಮ್ಮ ಚಲನಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಗಿಲ್ಲಿ ಕೇಳಿದಷ್ಟು ಸಂಭಾವನೆಯನ್ನು ನೀಡಿ ಅವಕಾಶ ನೀಡಿದ್ದೇವು. ಬಿಗ್ ಬಾಸ್ ರಿಯಾಲಿಟಿ ಶೋಗೆ ಗಿಲ್ಲಿ ಹೋಗುವ ಮೊದಲು ಸಂಭಾವನೆ ನೀಡಿದ್ದೆವು. ಆದರೆ ಈಗ ಗಿಲ್ಲಿನಟ ಸಿನಿಮಾ ಪ್ರಮೋಷನ್ ಗೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಗಿಲ್ಲಿನಟಗೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಕುರಿತು ಒಂದು ಪೋಸ್ಟ್ ಸಹ ಮಾಡುತ್ತಿಲ್ಲ ಎಂದು ನಿರ್ಮಾಪಕ ದೂರಿದ್ದಾರೆ.
State
ನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
ಮಂಗಳೂರು: ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಿಕೆ ನೀಡಿದ್ದ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯತೀಂದ್ರ ಅವರೇ ನಮ್ಮ ಪಕ್ಷ ಹೈಕಮಾಂಡ್ . ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡೋಣ ಎಂದು ತಿಳಿಸಿದ್ದಾರೆ.

ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ. ನಾನು ಈ ಕುರಿತು ಯಾರಿಗೂ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.
-
Chamarajanagar17 hours agoಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ
-
National10 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
National - International10 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
State12 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್‌ಗೆ ದೂರು
-
Mysore13 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
-
State14 hours agoನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
-
National14 hours agoಮಹಿಳೆಯ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ನ್ಯಾಯಾಂಗ ಆಗ್ರಹಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
-
Mysore14 hours agoವಕೀಲರ ಸಂಘದ ಅಧ್ಯಕ್ಷರ ಮೇಲೆ ಪ್ರಕರಣ: ವಕೀಲ ಸಂಘದಿಂದ ಪ್ರತಿಭಟನೆ
