Connect with us

Hassan

ಮತ ಚಲಾವಣೆ ಮಾಡಿದ ಚಲನಚಿತ್ರ ನಟ ಡಾಲಿ ಧನಂಜಯ

Published

on

ಹಾಸನ : ಕುಟುಂಬ ಸಮೇತರಾಗಿ ಆಗಮಿಸಿ ಮತದಾನದ ಹಕ್ಕು ಚಲಾಯಿದ ಡಾಲಿ

ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ ಡಾಲಿ ಧನಂಜಯ

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದ ಡಾಲಿ ಧನಂಜಯ

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಧನಂಜಯ

Continue Reading
Click to comment

Leave a Reply

Your email address will not be published. Required fields are marked *

Hassan

ಮಳೆಯ ಅಬ್ಬರ: ಸಕಲೇಶಪುರ, ಬೇಲೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರಿದ ‌ಮಳೆಯ ಅಬ್ಬರ

ಇಂದು ಸಕಲೇಶಪುರ, ಬೇಲೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಆಲೂರು ತಾಲ್ಲೂಕಿನ, ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಣೆ

ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ

ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಬಾರಿ ಏರಿಕೆ

ಹೇಮಾವತಿ ಜಲಾಶಯಕ್ಕೆ 32087 ಕ್ಯೂಸೆಕ್ ಒಳಹರಿವು

ಹೇಮಾವತಿ ಜಲಾಶಯದಿಂದ 32925 ಕ್ಯೂಸೆಕ್ ಹೊರಹರಿವು

ಆರು ಕ್ರಸ್ಟ್‌‌ಗೇಟ್‌ಗಳ ಮೂಲಕ ನೀರು ಬಿಡುಗಡೆ

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ

ಸದ್ಯ ಜಲಾಶಯದಲ್ಲಿರುವ ನೀರು – 37.006ಟಿಎಂಸಿ

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2921.90 ಅಡಿ

ಒಳಹರಿವು – 32087 ಕ್ಯೂಸೆಕ್

ಹೊರಹರಿವು – 32925 ಕ್ಯೂಸೆಕ್

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ

Continue Reading

Hassan

ಎಡಪಂಥೀಯರು ಸರ್ಕಾರದೊಂದಿಗೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

Published

on

ಸಕಲೇಶಪುರ: ಎಡಪಂಥೀಯರು ಸರ್ಕಾರದ ಜೊತೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ‌ ತರುವ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಇಂದು ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರಲು ಕೆಲವರು ಪ್ರಾರಂಭ ಮಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಒಮ್ಮೆ ಅಂತ್ಯ ಹಾಡಲಿ ಎಂದು ಸುಮ್ಮನ್ನಿದ್ದರು. ಇದನ್ನು ಶಬರಿಮಲೆಯಲ್ಲೇ ಮೊದಲು ಪ್ರಾರಂಭ ಮಾಡಿದರು. ಆದರೆ ಅಲ್ಲಿ ಏನು ಮಾಡಲು ಆಗಲಿಲ್ಲ. ಆನಂತರ ಒಂದೊಂದೆ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದು ಯಾರು, ಇವತ್ತು ಏನು ಸಿಕ್ಕಿದೆ ನಿಮಗೆ ಮಣ್ಣು ಸಿಕ್ಕಿದೆ, ಮಣ್ಣನ್ನೇ ಅಗೆದು ಮಣ್ಣನ್ನೇ ತೆಗೆದಿದ್ದೀರಿ ಬೇರೇನು ಸಿಕ್ಕಿಲ್ಲ. ಆ ಅನಾಮಿಕ ಕ್ರಿಮಿನಲ್ ಇದ್ದಾನೆ. ಎಡಪಂಥೀಯರು ಸೇರಿ ಒಬ್ಬನನ್ನು ಕ್ರಿಯೇಟ್ ಮಾಡಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಭಕ್ತರು ಕೋಪಗೊಂಡಿದ್ದಾರೆ, ಬೇಸರಗೊಂಡಿದ್ದಾರೆ, ನೊಂದುಕೊಂಡಿದ್ದಾರೆ. ನಾವು ಕೂಡ ಭಕ್ತರೇ, ಅವರ ಜೊತೆ ನಾವು ಸೇರಿ ಕಳಂಕ ಹೋಗಲಾಡಿಸಲು ದೇವರ ದರ್ಶನ ಮಾಡಿದ್ದೇವೆ ಎಂದು ಕಿಡಿಕಾರಿದರು.

ವೀರೇಂದ್ರ ಹೆಗ್ಗಡೆ ಅವರು ನೊಂದುಕೊಂಡಿದ್ದರು, ಅವರ ಜೊತೆ ನಾವೀದ್ದೇವೆಂದು ಹೇಳಿ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಕಳ್ಳರು ಯಾವಾಗಲೂ ಬೇರೆಯವರನ್ನ ಕಳ್ಳರು ಮಾಡಲು ಹೋಗುತ್ತಾರೆ. ಕಾಂಗ್ರೆಸ್‌ನವರು ಪಿಕ್‌ಪ್ಯಾಕೇಟ್ ಕಳ್ಳರಿದ್ದಂತೆ. ಬುರುಡೆ ತಂದಿದ್ದು ಯಾರು, ಆ ಅನಾಮಿಕ, ಅವನು ಕಾಂಗ್ರೆಸ್‌, ಎಡಪಂಥೀಯರ ಕೈವಶದಲ್ಲಿದ್ದಾನೆ. ಇದನ್ನು ಮಾಡಿಸಿರುವ ಕಳ್ಳರು ಯಾರು ಎಂದರೆ ಕಾಂಗ್ರೆಸ್‌ನವರು, ಎಡಪಂಥೀಯರು ಎಂದರು.

ಬೆಂಗಳೂರು ಕಾಲ್ತುಳಿತ ಆದಾಗ ಪೊಲೀಸರ ಮೇಲೆ ಹಾಕಿದ್ರು. ಈಗ ಯೂಟರ್ನ್ ಹೊಡೆಯುತ್ತಿದ್ದಾರೆ. ಈಗ ಸಿಕ್ಕಿಬಿದ್ದಿದ್ದೀವಿ ಎನ್ನುವ ಕಾರಣಕ್ಕೆ ನಿರೀಕ್ಷಿಣಾ ಜಾಮೀನು ತೆಗೆದುಕೊಳ್ಳಲು‌ ನೋಡುತ್ತಿದ್ದಾರೆ. ದೇವರ ವಿಷಯದಲ್ಲಿ ಯಾರು ಕೂಡ ಆಟವಾಡಬಾರದು. ಭಕ್ತರು ಒಂದು ಸಾರಿ ತಿರುಗಿ ನಿಮ್ಮ ಮೇಲೆ ಬಿದ್ದರೆ ಏನಾಗುತ್ತೆ ನೋಡಿ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದು ಟರ್ನ್ ಕೊಟ್ಟರೆ ಜನರು ಬೇರೆ ಕಡೆ ಗಮನಹರಿಸುತ್ತಾರೆ ಎಂದು ಇದನ್ನು ಬಳಸಿಕೊಂಡರು ಎಂದು ಹೇಳಿದರು. ಮತಗಳ್ಳತನ ನಡಿತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಜನ ಯಾರಿಗೆ ಓಟು ಹಾಕಬೇಕು ಅವರಿಗೆ ಹಾಕುತ್ತಿದ್ದಾರೆ. ಜನಮನ್ನಣೆ ಕೊಡದಿದ್ದಾಗ ಈ ರೀತಿ ಹೇಳುತ್ತಾರೆ. ಅರವತ್ತು ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದಾಗ ಎಲೆಕ್ಷನ್ ಕಮಿಷನ್ ಇದೆ ಅನ್ನುವುದು ಗೊತ್ತಿರಲಿಲ್ಲ. ನೀವು ಮಾಡಿರುವ ಕಳ್ಳತವನ್ನು ನಮ್ಮ ಮೇಲೆ ಹಾಕುತ್ತಿದ್ದೀರಿ. ಅವರ ಮಾಡಿದ್ದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಆಪಾದನೆ ಮಾಡುತ್ತಿದ್ದಾರೆ ಎಂದರು.

Continue Reading

Hassan

ಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

Published

on

ಸಕಲೇಶಪುರ: ಧರ್ಮಸ್ಥಳ ಅಸಂಖ್ಯಾತ ಭಕ್ತರು ನಂಬಿರುವ ಪುಣ್ಯ ಕ್ಷೇತ್ರ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸಕಲೇಶಪುರ ಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರೊಂದಿಗೆ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದೇವೆ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿ ಬಂದಿದ್ದೇವೆ. ರಾಜ್ಯ ಸರ್ಕಾರ ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ರಚನೆ ಮಾಡಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಇದು ಕೋಟಿ ಕೋಟಿ ಭಕ್ತರಿಗೆ ನೋವುಂಟು ಮಾಡಿದೆ ಎಂದರು.


ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂಥ ಹೇಳಿದರೆ, ಡಿ.ಕೆ.ಶಿವಕುಮಾರ್ ಅವರು ಷಡ್ಯಂತ್ರ ಇದೆ, ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ. ತನಿಖೆ ಆಗಲಿ, ಸತ್ಯ ಹೊರಬರಲಿ ಎಂದು ರಾಜ್ಯದ ಜನತೆ ಕೇಳುತ್ತಿದ್ದರೆ, ಒತ್ತಡಕ್ಕೆ ಮಣಿದು ತನಿಖೆ ಹಾದಿ ತಪ್ಪುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಅಪಪ್ರಚಾರ ತಡೆಯುವ ಕೆಲಸವನ್ನು ಸರ್ಕಾರ ಏಕೆ ಮಾಡಲಿಲ್ಲ. ತನಿಖೆ ಬೇಗ ಮುಗಿಯಬೇಕು, ಸದನದಲ್ಲಿ ಮಧ್ಯಂತರ ವರದಿ ಮಂಡನೆ ಮಾಡಬೇಕು. ದೂರದಾರನ ಹಿಂದೆ ಇರುವ ಶಕ್ತಿಗಳು ಯಾರು, ಅವರ ಉದ್ದೇಶ ಏನು ಎಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ವಿಚಾರದಲ್ಲಿ ಬಿಜೆಪಿ ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯ ನಿಲುವಿನಲ್ಲಿ ಯಾವುದೇ ಒಂದು ಬದಲಾವಣೆ ಇಲ್ಲ ಎಂದು ತಿಳಿಸಿದರು.


ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದೆವು. ತನಿಖೆ ಅಂಥ ಹೇಳಿ ದಿನಕ್ಕೊಂದು ಕಡೆ ಗುಂಡಿ ತೆಗೆದು ಸರ್ಕಾರ ಏನು ಮಾಡಲು ಹೊರಟಿದೆ. ತನಿಖೆ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟುವ ಸಂದರ್ಭ ಸೃಷ್ಟಿಯಾಗಿದೆ. ಜನರ ಭಾವನೆಗಳಿಗೆ ಧಾರ್ಮಿಕ ಶ್ರದ್ದೆಗೆ ಧಕ್ಕೆ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದರು. ಸದನದಲ್ಲಿ ಈ ಬಗ್ಗೆ ನಾವು ಮಾತನಾಡಿದ್ದೇವೆ. ಎಲ್ಲದಕ್ಕೂ ಇತಿಮಿತಿಗಳು ಇದೆ. ನಾಡಿನ ಜನ ಶಾಂತಿಯಿಂದ ಎದುರು ನೋಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಜನರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಂದರ್ಭ ಸೃಷ್ಟಿಯಾಗಬಾರದು, ಸರ್ಕಾರ ಎಚ್ಚೆತ್ತುಕೊಂಡು ಮಧ್ಯಂತರ ವರದಿ ನೀಡಬೇಕು, ನಾವು ಅದನ್ನ ಎದುರು ನೋಡುತ್ತಿದ್ದೇವೆ ಎಂದರು.

ಸೌಜನ್ಯ ಹತ್ಯೆ ಪ್ರಕರಣ, ಯಾವುದೇ ಪ್ರಕರಣ ಇದ್ದರು ಸಮಗ್ರ ತನಿಖೆ ಆಗಲಿ, ಆದರೆ ಆ ನೆಪದಲ್ಲಿ ನಮ್ಮ ಭಾವನೆಗಳಿಗೆ ಧಕ್ಕೆ ಬರುವಾಗ ಸರ್ಕಾರ ಕೈಕಟ್ಟಿ ಕುಳಿತರೆ ಯಾರು ಒಪ್ಪಲ್ಲ. ವೀರೇಂದ್ರ ಹೆಗ್ಗಡೆ ಅವರಿಗೆ ಸಹಜವಾಗಿ ನೋವಾಗಿದೆ. ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದು, ತನಿಖೆ ಮುಗಿಯಬೇಕು ಎನ್ನುವ ಅಪೇಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಸಹವಾಗಿಯೇ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಎಲ್ಲಾ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

 

Continue Reading

Trending

error: Content is protected !!