Mandya
ಮೇ 17 ರಿಂದ ಜೂನ್ 5 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ : ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ 2024 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 17 ರಿಂದ ಜೂನ್ 5 ರವರೆಗೆ ಪರಿಹಾರ ಬೋಧನೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ 1 ರ ಫಲಿತಾಂಶ ವಿಶ್ಲೇಷಣೆ ಹಾಗೂ ಜೂನ್ – 2024 ರ ಎಸ್.ಎಸ್.ಎಲ್.ಸಿ ಪರೀಕ್ಷೆ 02 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನುತ್ತೀರ್ಣರಾಗಿರುವ 5,154 ವಿದ್ಯಾರ್ಥಿಗಳು ಪರೀಕ್ಷೆ- 2 ಬರೆಯಲು ನೊಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಪರಿಹಾರ ಬೋಧನೆಯ ತರಗತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವೊಲಿಸಬೇಕು ಎಂದರು.
ಪರಿಹಾರ ಬೋಧನೆಗೆ ಶಾಲಾ ಶಿಕ್ಷಕರು ವೇಳಾ ಪಟ್ಟಿ ತಯಾರಿಸಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರಲ್ಲಿರುವ ಋಣಾತ್ಮಕ ಮನೋಭಾವನೆಯನ್ನು ಹೋಗಲಾಡಿಸಿ, ಧನಾತ್ಮಕ ಮನೋಭಾವನೆಯನ್ನು ಬೆಳೆಸಿ ಎಂದರು.

ಶಿಕ್ಷಕರಿಗೆ ಕಾರ್ಯಾಗಾರ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯಾವ ರೀತಿ ಪಾಠ ಮಾಡಿ ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂಬ ವಿಧಾನಗಳ ಬಗ್ಗೆ ಶಿಕ್ಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಸೂಕ್ತ ತರಬೇತಿ ನೀಡಿ ಎಂದರು.
ಈಗಾಗಲೇ ಕಡಿಮೆ ಫಲಿತಾಂಶ ಬಂದಿರುವ 6 ರಿಂದ 7 ಶಾಲೆಗಳಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ನೋಡೆಲ್ ಅಧಿಕಾರಿಗಳು ನೇಮಕ ಮಾಡಿರುವ ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಎಸ್ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅಭ್ಯಾಸ ಮಾಡಿಸಿ ಪರೀಕ್ಷೆಗೆ ತಯಾರು ಮಾಡಬೇಕು ಎಂದು ತಿಳಿಸಿದರು.

ಸಮಿತಿ ರಚಿಸಿ ವರದಿ ಜಿಲ್ಲೆಯಲ್ಲಿ ಕಳೆದ 5 – 6 ವರ್ಷಗಳಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿರುವ ಶಾಲೆಗಳಲ್ಲಿ ಕಾರಣಗಳೇನು ಹಾಗೂ ಪರಿಹಾರ ಕ್ರಮಗಳೇನು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಿ ವರದಿ ನೀಡಲು ಸಮಿತಿ ರಚಿಸಲಾಗುವುದು ಎಂದರು.
ಮಧ್ಯಾಹ್ನದ ಬಿಸಿ ಊಟ ಪರಿಹಾರ ಬೋಧನೆ ನಡೆಯುವ ಶಾಲೆಗಳಲ್ಲಿ ವಿದ್ಯಾರ್ಥಿ
ಮಕ್ಕಳನ್ನು ಶಾಲೆಗೆ ಬರುಬಂತೆ ಮಾಡುವುದು ಶಿಕ್ಷಕರ ಕರ್ತವ್ಯವೇ ಹೊರತು, ಪೋಷಕರದಲ್ಲ. ಶಿಕ್ಷಕ ವೃತ್ತಿಯು ಪವಿತ್ರ ಸ್ಥಾನದಲ್ಲಿದ್ದು, ಪ್ರತಿಯೊಬ್ಬ ಶಿಕ್ಷಕರು ಆ ಸ್ಥಾನಕ್ಕೆ ನ್ಯಾಯ ಒದಗಿಸಬೇಕು ಎಂದರು.
ಕೆ.ಆರ್.ಪೇಟೆ ತಾಲ್ಲೂಕಿನ 56 ಶಾಲೆಗಳಲ್ಲಿ ಒಟ್ಟು 924 ವಿದ್ಯಾರ್ಥಿಗಳು, ಮದ್ದೂರು ತಾಲ್ಲೂಕಿನ 84 ಶಾಲೆಗಳಲ್ಲಿ ಒಟ್ಟು 1,038 ವಿದ್ಯಾರ್ಥಿಗಳು, ಮಳವಳ್ಳಿ ತಾಲ್ಲೂಕಿನ 70 ಶಾಲೆಗಳಲ್ಲಿ 8,14 ವಿದ್ಯಾರ್ಥಿಗಳು, ಮಂಡ್ಯ ತಾಲ್ಲೂಕಿನಲ್ಲಿ ದಕ್ಷಿಣ ವಲಯದ 62 ಶಾಲೆಗಳಲ್ಲಿ 607 ವಿದ್ಯಾರ್ಥಿಗಳು ಹಾಗೂ ಉತ್ತರ ವಲಯದ 27 ಶಾಲೆಗಳಲ್ಲಿ 163 ವಿದ್ಯಾರ್ಥಿಗಳು, ನಾಗಮಂಗಲ ತಾಲ್ಲೂಕಿನ 50 ಶಾಲೆಗಳಲ್ಲಿ ಒಟ್ಟು 596 ವಿದ್ಯಾರ್ಥಿಗಳು, ಪಾಂಡವಪುರ ತಾಲ್ಲೂಕಿನ 47 ಶಾಲೆಗಳಲ್ಲಿ 585 ವಿದ್ಯಾರ್ಥಿಗಳು , ಶ್ರೀರಂಗಪಟ್ಟಣ ತಾಲ್ಲೂಕಿನ 49 ಶಾಲೆಗಳಲ್ಲಿ 427 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಯಟ್ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ -2 ರಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಬೇಕು ಎಂದರು.
ಕನ್ನಡ ಭಾಷೆಯಲ್ಲಿಯೇ 3,571 ವಿದ್ಯಾರ್ಥಿಗಳು ಅನುತ್ತೀರ್ಣ
ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿಯೇ 3,571 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ತಲೆ ತಗ್ಗಿಸುವ ವಿಷಯವಾಗಿದೆ. ಶಿಕ್ಷಕರು ಪ್ರಾಮಾಣಿಕತೆ, ಆಸಕ್ತಿ, ಪ್ರೀತಿ ಹಾಗೂ ನಿಸ್ವಾರ್ಥ ಮನೋಭಾವವನೆಯಿಂದ ಕಾರ್ಯನಿರ್ವಹಿಸಿ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಬೇಕು ಎಂದರು.
ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿಯು ಶ್ರೇಷ್ಠವಾಗಿದ್ದು, ಅಂತಹ ಪವಿತ್ರ ವೃತ್ತಿಯಲ್ಲಿರುವ ಶಿಕ್ಷಕರು ಹೆಚ್ಚು ಶ್ರಮಿಸಿದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯಾಗುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದ ಸಾಧನೆ ಕಡಿಮೆಯಾಗಿದ್ದು, ಪ್ರತಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಇನ್ನುಮುಂದೆ ಎಚ್ಚೆತ್ತುಕೊಳ್ಳಬೇಕು. ಸರಿಯಾದ ಯೋಜನೆಯನ್ನು ಹಾಕಿಕೊಂಡು ಈ ಬಾರಿ ಆಗಿರುವ ತಪ್ಪುಗಳು ಮರು ಪರೀಕ್ಷೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.

ತದ ನಂತರ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ – 1 ರಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಶಿಕ್ಷಕರು ಪರೀಕ್ಷೆ – 2 ರ ಮುಂಚಿತವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳಿಗೆ ನಡೆಸುವ ಪರಿಹಾರ ಬೋಧನೆಯ ಸಮಯದಲ್ಲಿ ಬಿಸಿಯೂಟದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿ ಕೆಆರ್.ಪೇಟೆ ಹಾಗೂ ಮದ್ದೂರು ತಾಲ್ಲೂಕಿನ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಕಡಿಮೆಯಿದೆ. ಭಾಷೆ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಪರೀಕ್ಷೆ – 2 ರಲ್ಲಿ ತೇರ್ಗಡೆ ಹೊಂದುವಂತೆ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಡಿ.ಡಿ.ಪಿ.ಐಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಧಿಕಾರಿಗಳು
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ಕೊಡಿಯಾಲದಲ್ಲಿ ಬಾಲ ಮೇಳ ಚಿಣ್ಣರ ಚಿಲಿಪಿಲಿ ತಾಣ
ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ಗ್ರಾಮದ ಸಿದ್ದೇಶ್ವರ ಚೌಟ್ರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಅಜೀಂ ಪ್ರೇಮಜಿ ಫೌಂಡೇಶನ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬಾಲ ಮೇಳ ಚಿಣ್ಣರ ಚಿಲಿಪಿಲಿ ತಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳು ನೃತ್ಯ,ಹಾಡುವುದು ಹಾಗೂ ದೇಶದ ಮಹಾನ್ ನಾಯಕರುಗಳ ಹಾಗೂ ನಾಯಕಿಯರ ವೇಷ ಭೂಷಣ ಧರಿಸಿ ಕಣ್ಮನ ಸೆಳೆದರು. ಉತ್ತಮ ವೇಷ ಭೂಷಣ ಧರಿಸಿದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಹಾಗೆಯೇ ಪೋಷಕರ ದೈಹಿಕ ಚಟುವಟಿಕೆಗಾಗಿ ಮ್ಯೂಜಿಕಲ್ ಚೇರ್ ಆಟ ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಸಿಡಿಪಿಒ ಸಕಲೇಶ್ವರ್,ಗ್ರಾ ಪಂ ಅಧ್ಯಕ್ಷೆ ಪ್ರತಿಭಾ,ಮಾಜಿ ಅಧ್ಯಕ್ಷೆ ನಾಗರತ್ನ,ವೈದ್ಯಾಧಿಕಾರಿ ಡಾ ಗಣೇಶ್,ಅಜೀಂ ಪ್ರೇಮಜಿ ಫೌಂಡೇಶನ್ ರವಿಕುಮಾರ್,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ,ಪ್ರೌಢ ಶಾಲಾ ಮುಖ್ಯ ಶಿಕ್ಷಕ ತೀರ್ಥರಾಜ್ ಹಾಗೂ ಅಂಗನವಾಡಿ ಮೇಲ್ವಿಚಾರಕರು, ಕೊಡಿಯಾಲ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು,ಮಕ್ಕಳು ಉಪಸ್ಥಿತರಿದ್ದರು.
Mandya
ವಿಶ್ವ ಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಬಿ.ಸಿ ಶಿವಾನಂದ ಮೂರ್ತಿ
ಮಂಡ್ಯ : ಡಿ. 29 ರಂದು ವಿಶ್ವ ಮಾನವ ದಿನಾಚರಣೆ ಹಾಗೂ ಜ. 1 ರಂದು ನಡೆಯಲಿರುವ “ಅಮರಶಿಲ್ಪಿ ಜಕಣಾಚಾರಿ” ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರು ಹೇಳಿದರು.
ಮಹಾನ್ ವ್ಯಕ್ತಿಗಳ ಜಯಂತಿಯ ಆಚರಣೆಯ ಮೂಲ ಉದ್ದೇಶ ಅವರ ಆದರ್ಶ ಮತ್ತು ಕೊಡುಗೆಯನ್ನು ಸಾರುವ ಉದ್ದೇಶದಿಂದ ಆಚರಿಸಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಜಯಂತಿಗಳನ್ನು ಆಚರಣೆ ಮಾಡಿದರೆ ಮಹಾನ್ ಚೇತನರ ಜಯಂತಿಗಳಿಗೆ ಮೆರಗು ಬರುತ್ತದೆ ಎಂದು ಹೇಳಿದರು.

ಡಿ. 29 ರಂದು “ವಿಶ್ವಮಾನವ ದಿನಾಚರಣೆ” ಯನ್ನು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಚರಿಸಿ. ಕಾರ್ಯಕ್ರಮಕ್ಕೂ ಮುನ್ನ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ವಿಶ್ವ ವಿದ್ಯಾಲಯ ಮಟ್ಟದಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರೂ ವಿದ್ಯಾರ್ಥಿಗಳಿಗೂ ಸಮ್ಮಾನ ಮಾಡಿ. ಸಂಪನ್ಮೂಲ ವ್ಯಕ್ತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಚಿಂತನೆ ಮತ್ತು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿ ಎಂದು ಸೂಚಿಸಿದರು.
ಜ. 1 ರಂದು ನಡೆಯಲಿರುವ “ಅಮರಶಿಲ್ಪಿ ಜಕಣಾಚಾರಿ” ಜಯಂತಿಯನ್ನು ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ವರೆಗೂ ಮೆರವಣಿಗೆ ಹೊರಡಲಿದೆ. ಮಾರ್ಗಸೂಚಿಯಂತೆ ವೇದಿಕೆಯಲ್ಲಿ ಆಹ್ವಾನಿತ ಗಣ್ಯರು ಮಾತ್ರ ಇರಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಜಯಂತಿಯನ್ನು ಆಚರಿಸುವಂತೆ ಸೂಚನೆ ನೀಡಿ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ನೀಡಲಾಗುವ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸದರಿ ಕಾರ್ಯಕ್ರಮದಲ್ಲಿ ಆಯೋಜಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ ನಂದೀಶ್ ಹಾಗೂ ಸಮುದಾಯ ಮುಖಂಡರುಗಳು ಉಪಸ್ಥಿತರಿದ್ದರು.
Mandya
ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹೆಚ್ಚು: ಡಾ.ಕುಮಾರ
ಮಂಡ್ಯ: ಜಿಲ್ಲೆಯ ಸರ್ಕಾರಿ ನೌಕರರು ಜಿಲ್ಲೆಗೆ ಉತ್ತಮ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಕುಂದು ಕೊರತೆಗಳ ಸಭೆ ಹಾಗೂ ಮಂಡ್ಯ ಜಿಲ್ಲೆಯ ಡಿ.ಡಿ.ಓ ಗಳಿಗೆ ಹಾಗೂ ಸಂಬಂಧಪಟ್ಟ ವಿಷಯ ನಿರ್ವಾಹಕರುಗಳಿಗೆ HRMS 2.0 ತಂತ್ರಾಂಶ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ನಡೆಸಿದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರಿಂದ ರಾಜ್ಯದಲ್ಲಿಯೇ ಅತಿ ಹೆಚ್ಚು ಸಮೀಕ್ಷೆ ಮಾಡಿದ ಜಿಲ್ಲೆ ಮಂಡ್ಯ ಎಂಬ ಹೆಗ್ಗಳಿಕೆ ಜಿಲ್ಲೆಗೆ ಬಂದಿತು ಎಂದರು.

ಸರ್ಕಾರದ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹೆಚ್ಚಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಬಹುದು ಆದರೆ ತಳಮಟ್ಟದ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸರ್ಕಾರದ ವಿವಿಧ ಯೋಜನೆಗಳು ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಇದ್ದಾರೆ ಆರೋಗ್ಯ ಸಂಜೀವಿನಿ ಯೋಜನೆ ಅಡಿ ಬಾಕಿ ಇರುವ ಮೊತ್ತವನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಕ್ರಮ ವಹಿಸಲಾಗುವುದು. ಸಮೀಕ್ಷೆ ನಡೆಸಿದ ಎಲ್ಲಾ ಶಿಕ್ಷಕರಿಗೆ ಸರ್ಕಾರದಿಂದ ನೀಡಲಾಗುವ ಗೌರವ ಧನ ರೂ. 7.63 ಕೋಟಿ ಹಣ ಜಿಲ್ಲಾ ಖಜಾನೆಗೆ ಬಂದಿದೆ. ಸಮೀಕ್ಷೆ ನಡೆಸಿದ ಎಲ್ಲಾ ಶಿಕ್ಷಕರಿಗೂ ತಾಲೂಕು ನವರು ಹಣವನ್ನು ತಹಶೀಲ್ದಾರ್ ನೇತೃತ್ವದಲ್ಲಿ ನೀಡಲು ಸಮಯ ಹೆಚ್ಚಾಗುವುದರಿಂದ ಸ್ವತಃ ನಾನೇ 2500 ಕ್ಕೂ ಹೆಚ್ಚು ಸಹಿಗಳನ್ನು ಮಾಡಿ ಈವರೆಗೆ 7 ಕೋಟಿ ಗೌರವದನವನ್ನು ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದ ಶಿಕ್ಷಕರ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ತಾಂತ್ರಿಕ ದೋಷ ಉಂಟಾದ ಕಾರಣ ಉಳಿದ ರೂ.63 ಲಕ್ಷವನ್ನು ಪಾವತಿಸಲು ಸಾಧ್ಯವಾಗಿಲ್ಲ ಒಂದು ವಾರದೊಳಗೆ ಸದರಿ ಮೊತ್ತವನ್ನು ಅರ್ಹರಿಗೆ ತಲುಪಿಸುವ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಸರ್ಕಾರಿ ನೌಕರರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸವನ್ನು ಪ್ರೀತಿಸದ ಹೊರತು ಕೆಲಸ ನಮ್ಮನ್ನು ಪ್ರೀತಿಸುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ನೌಕರರು ಜವಾಬ್ದಾರಿಯನ್ನು ಅರಿತು ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿ ಕಾರ್ಯನಿರ್ವಹಿಸಿ. ಕೆಲಸದಲ್ಲಿ ಬದ್ಧತೆ ಶಿಸ್ತು ಮತ್ತು ಆಸಕ್ತಿ ಅತಿ ಮುಖ್ಯ. ಮನೆಯಷ್ಟೇ ಕೆಲಸದ ಸ್ಥಳವು ಸಹ ಪವಿತ್ರ. ಸರ್ಕಾರಿ ಕೆಲಸ ಮಾಡಲು ದೇವರು ನಮಗೆಲ್ಲರಿಗೂ ಅವಕಾಶ ನೀಡಿದ್ದಾನೆ. ಮನಸ್ಸಾಕ್ಷಿ ಹಾಗೂ ಆತ್ಮ ಸಾಕ್ಷಿಯಿಂದ ಕರ್ತವ್ಯ ನಿರ್ವಹಿಸೋಣ. ಎಂದು ಕರೆ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಆರೋಗ್ಯ ಸಂಜೀವಿನಿ ಯೋಜನೆಯಡಿ ಮೂರು ಆಸ್ಪತ್ರೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ 12 ಆಸ್ಪತ್ರೆಗಳನ್ನು ಆರೋಗ್ಯ ಸಂಜೀವಿನಿ ಯೋಜನೆಯಡಿ ತರಲು ಕ್ರಮ ವಹಿಸಲಾಗಿದೆ. ಸರ್ಕಾರಿ ನೌಕರರಿಗೆ ಸಂಬಳವನ್ನು ಸೂಕ್ತ ಕಾಲಮಿತಿಯೊಳಗೆ ನೀಡಲು ಡಿ ಡಿ ಓ ಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯ ಎಲ್ಲಾ ಡಿಡಿಓಗಳು ತಮ್ಮ ಕರ್ತವ್ಯವನ್ನು ಅರಿತು ವ್ಯವಸ್ಥಿತವಾಗಿ ಹಣಕಾಸಿನ ಜವಬ್ದಾರಿಯನ್ನು ನಿಭಾಯಿಸಿ. ಎಚ್ ಆರ್ ಎಂ ಎಸ್ ತತ್ರಾಂಶ 2.0 ನಲ್ಲಿ ಇರುವ ನೂತನ ವಿಚಾರಗಳನ್ನು ತಿಳಿಯಿರಿ ಎಂದು ತಿಳಿಸಿದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರು ಮಾತನಾಡಿ, ಇಲಾಖೆಯ ಮುಖ್ಯಸ್ಥರು ಜವಾಬ್ದಾರಿಯನ್ನು ನೌಕರರಿಗೆ ಧನಾತ್ಮಕ ರೀತಿಯಲ್ಲಿ ಸ್ಪಂದಿಸಿ. ಮಂಡ್ಯ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ಅರಿವು ಮತ್ತು ಜ್ಞಾನ ಚೆನ್ನಾಗಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಾರ್ಯ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಸರ್ಕಾರಿ ನೌಕರರ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಇಲ್ಲಿ ಎಲ್ಲರೂ ಮುಖ್ಯರು, ಇಲಾಖೆಯ ಮುಖ್ಯಸ್ಥರು ಎಲ್ಲ ನೌಕರರನ್ನು ಉತ್ತಮವಾಗಿ ನಡೆಸಿಕೊಂಡು ಅವರಿಗೆ ಸ್ವಾತಂತ್ರ್ಯ ಗೌರವ ಮನ್ನಣೆಯನ್ನು ನೀಡಿ ಅವರ ಕಾರ್ಯಗಳನ್ನು ಗುರುತಿಸಿದರೆ ಅದರಿಂದ ನೌಕರರು ಉತ್ತೇಜನಗೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.
ಈಗಾಗಲೇ ನಮ್ಮಲ್ಲಿ ವಾಟರ್ ಮ್ಯಾನ್, ಬಿಲ್ ಕಲೆಕ್ಟರ್ಗಳಿಗೆ ಇ ಎಫ್ ಐ, ಪಿಎಫ್ ಸೌಲಭ್ಯವನ್ನು ಕೊಡಿಸುವ ಕೆಲಸ ಮಾಡಲಾಗಿದೆ. ಎಲ್ಲ ಇಲಾಖೆಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೂ ಸದರಿ ಸೌಲಭ್ಯವನ್ನು ಕಲ್ಪಿಸಿ. ಇಲಾಖಾ ವಿಚಾರಣಾ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾದಾದಲ್ಲಿ ಅವರು ಮಾತನಾಡಿ, ಸರ್ಕಾರಿ ನೌಕರರಿಗೆ ಸದರಿ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಸದರಿ ಕಾರ್ಯಕ್ರಮದ ಸ್ವರೂಪ ಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ ನಾಗೇಶ್ ಅವರು ಮಾತನಾಡಿ ಎಚ್ ಆರ್ ಎಂ ಎಸ್ ಮತ್ತು k2 ಕುರಿತಾಗಿ ಇರುವ ದೋಷಗಳನ್ನು ಪರಿಹಾರ ಮಾಡಿಕೊಡಿ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಮೊದಲ ದಿನವೇ ಸಂಬಳ ನೀಡಿ. ಆರೋಗ್ಯ ಸಂಜೀವಿನಿ ಅಡಿ ಜಿಲ್ಲೆಯಲ್ಲಿ ಬಾಕಿ ಇರುವ ಮೊತ್ತವನ್ನು ಶೀಘ್ರವಾಗಿ ಪಾವತಿ ಮಾಡುವಂತೆ ಇತರೆ ಮನವಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಪಾದ, ಸರ್ಕಾರಿ ನೌಕರರ ಗೌರವಾಧ್ಯಕ್ಷ ಶ್ರೀನಿವಾಸ್, ಸರ್ಕಾರಿ ನೌಕರರ ಹಿರಿಯ ಉಪಾಧ್ಯಕ್ಷ ಚಂದ್ರಶೇಖರ್, ಪಶು ಪಾಲನೆ ಇಲಾಖೆ ಉಪ ನಿರ್ದೇಶಕ ಶಿವಲಿಂಗಯ್ಯ ಸೇರಿದಂತೆ ಇನ್ನಿತರ ಗಣ್ಯರುಗಳು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
-
State41 minutes agoಟಾಟಾ ಸ್ಕಾಲರ್ಶಿಪ್ 2025–26: ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ₹1,00,000 ವರೆಗೆ ಆರ್ಥಿಕ ನೆರವು
-
Mysore22 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Hassan14 hours agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Hassan23 hours agoಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
-
Mandya19 hours agoಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹೆಚ್ಚು: ಡಾ.ಕುಮಾರ
-
Mysore19 hours agoಡಿ. 21 ರಂದು ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಪಿಲಾ ಆರತಿ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮ
-
Manglore24 hours agoಗಾಂಜಾ ‘ಪೆಡ್ಲರ್’ ಅಪ್ಪಿ ಮೂಡುಬಿದಿರೆ ಪೊಲೀಸ್ ವಶಕ್ಕೆ
-
Hassan18 hours agoಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಗೆ ಶತಮಾನೋತ್ಸವ
