Connect with us

Mandya

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಲು ಶಿಕ್ಷಕರ ಶ್ರಮ ಇರಲಿ

Published

on

ಮಂಡ್ಯ: ಮುಂಬರುವ ಎಸ್.ಎಸ್.ಎಲ್.ಸಿ. ಫಲಿತಾಂಶ ಮತ್ತಷ್ಟು ಹೆಚ್ಚಾಗಲು ಎಲ್ಲಾ ಶಿಕ್ಷಕರ ಶ್ರಮವಿರಲಿ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಶಿವರಾಮೇಗೌಡ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಗಾರ ಮತ್ತು ಪದಾಧಿಕಾರಿಗಳ ಸಮಾವೇಶ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಚ್.ಎಸ್.ರವೀಶ್ ಅವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಹ ಶಿಕ್ಷಕರ ಸಂಘದ ಎಲ್ಲಾ ೮ ವಲಯಗಳ ಪದಾಧಿಕಾರಿಗಳ ಸಮಾವೇಶ ಬಹಾಳ ಸಂತೋಷ ತಂದಿದೆ, ಶಿಕ್ಷಣದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಶಿಕ್ಷಕರ ಕಾರ್ಯವೈಕರಿಯೂ ಕಾರಣವಾಗಿದೆ, ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ೨ ಸ್ಥಾನ ಮಂಡ್ಯ ಜಿಲ್ಲೆ ಬರಲು ನಿಮ್ಮಗಳ ಪಾತ್ರವೂ ಇದೆ ಎಂದರು.

ಶಿಕ್ಷಕರ ಪರಿಶ್ರಮದಿಂದ ರಾಜ್ಯದಲ್ಲಿ ಜಿಲ್ಲೆ ಗುರುತಿಸಿಕೊಳ್ಳುತ್ತಿದೆ, ಸಹಶಿಕ್ಷಕರ ಸಂಘ ಉತ್ತಮವಾಗಿ ಕಾರ್ಯಸಲ್ಲಿಸುತ್ತಿದೆ, ಪ್ರಶಂಸೆ ನುಡಿಗಳು ನಮಗೆ ಬರುತ್ತಿರುತ್ತದೆ, ಅದಕ್ಕೆ ನಿಮ್ಮಗಳ ಶ್ರಮವೇ ಕಾರಣ ಎಂದು ತಿಳಿಸಿದರು.

ಸಂಘಟನೆಗಳು ಶೈಕ್ಷಣಿಕ ಕಾರ್ಯಾಗಾರ ಮಾಡುವುದು ಉತ್ತಮ, ಶೈಕ್ಷಣಿಕ ಚಟುವಟಿಕೆಗಲ್ಲಿ ಯಾವರೀತಿಯ ಪಾತ್ರಗಳನ್ನು ವೈಸಬೇಕು ಅಂತ ಅವಶ್ಯವಿದೆ, ಅದು ನಿಮಗೆ ಕರಗತವಾಗಿದೆ, ಜೊತೆಗೆ ಒಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ಮಾಹಿತಿಯನ್ನು ಪಡೆಯುತ್ತಿರುವುದು ಒಳ್ಳೆಯದು ಎಂದು ಹೇಳಿದರು.

ಸಹಶಿಕ್ಷಕರ ಸಮಸ್ಯೆಗಳು ಮತ್ತು ಕುಂದುಕೊರತೆಗಳು ಇದ್ದರೆ ನೇರವಾಗಿ ಬಂದು ಬೇಟಿ ಮಾಡಿ, ಇಲ್ಲ ನಿಮ್ಮ ಸಂಘದ ಪದಾಧಿಕಾರಿಗಳು ಕುಳಿತಲ್ಲೇ ಬಗೆಹರಿಸಿಕೊಳ್ಳುವ ಸಾಮಥ್ಯವನ್ನು ಪಡೆದಿದ್ದಾರೆ ಎಂದರು.

ಬಳಿಕ “ಶಾಲಾ ಶಿಕ್ಷಣ ಇಲಾಖೆ ಹಾಗೂ ಶೈಕ್ಷಣಿಕ ಸಂಘಟನೆಗಳು”ಕುರಿತು ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕ ರಘು ಮಾತನಾಡಿ, ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲಾ ಶಿಕ್ಷಕರು ಉಪನ್ಯಾಸಕರು ಇದ್ದಾರೆ, ರಾಷ್ಟಿçÃಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆಯಾಗಿದೆ ಎಂದರು.

ಶಾಲಾ ಶಿಕ್ಷಣದಲ್ಲಿ ಪ್ರಾಥಮಿಕ, ಪ್ರೌಢ, ಪಿಯುಸಿ ಕಾಲೇಜು ಶಿಕ್ಷಣವೂ ಒಳಗೊಂಡಿದೆ, ಶಿಕ್ಷಣದ ಸಾರ್ವತ್ರಿಕಕರಣದ ಜೊತೆಗೆ ಶಿಕ್ಷಣದ ಏಕೀಕರಣವು ಒಳಗೊಂಡಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ನಾಗೇಗೌಡ ವಹಿಸಿದ್ದರು.ಸನ್ಮಾನಿತರಾದ ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ರವೀಶ್ ರವರನ್ನು ಜಿಲ್ಲಾ ಹಾಗೂ ತಾಲ್ಲೂಕು ಸಂಘಟನೆಗಳ ಸಹಕಾರದಿಂದ ಸನ್ಮಾನಿಸಲಾಯಿತು.

ಸಹ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಖಜಾಂಚಿ ಬಿ.ಆರ್.ಪ್ರಸನ್ನ, ಸಹ ಕಾರ್ಯದರ್ಶಿ ವಿಶ್ವಮಂಜು ಸ್ವಾಮಿ, ಸಂಘಟನಾ ಕಾರ್ಯದರ್ಶಿ ನಾಗರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ ಜಯರಾಮ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗೋಪಾಲೇಗೌಡ, ಸಹ ಶಿಕ್ಷಕರ ಸಂಘದ ಎಲ್ಲಾ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು

Continue Reading
Click to comment

Leave a Reply

Your email address will not be published. Required fields are marked *

Mandya

ತಾಲ್ಲೂಕು ಕಚೇರಿಗೆ ಡಿಸಿ ಭೇಟಿ : ಸಾರ್ವಜನಿಕರಿಂದ ಕುಂದು ಕೊರತೆ ಪರಿಶೀಲನೆ

Published

on

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಂಡ್ಯ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು‌.

ತಾಲ್ಲೂಕು ಕಚೇರಿಯಲ್ಲಿ ಕಳೆದ ಒಂದು ವಾರದಿಂದ ರೈತರಿಗೆ ಸಂಬಂಧಪಟ್ಟಂತೆ ಆಧಾರ್ ಸೀಡಿಂಗ್ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿದರು.

ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಯಾವುದಾದರೂ ಮನೆ ಹಾನಿ ಅಥವಾ ಬೆಳೆಗಳು ಹಾನಿಯಾಗಿ ವರದಿ ಸಿದ್ಧ ಪಡಿಸುತ್ತಿರುವ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ನೀಡಬೇಕಿರುವ ಬಾಕಿ ಪ್ರಕರಣಗಳು, ರಸ್ತೆ ಒತ್ತುವರಿ, 1ಮತ್ತ5 ತಿದ್ದುಪಡಿ, ಪಡಿತರ ಚೀಟಿ ಕುರಿತು ದೂರು ಬರಿತ್ತಿದ್ದು, ಪರಿಶೀಲನೆ ನಡೆಸಿದರು

ಮಂಡ್ಯ ತಾಲ್ಲೂಕಿನಲ್ಲಿ 410 ಹಕ್ಕು ಪತ್ರಗಳಿಗೆ ಡೇಟಾ ಎಂಟ್ರಿ ನಡೆಯುತ್ತಿದೆ‌. ಅವುಗಳನ್ನು ಸಹ ಪರಿಶೀಲಿಸಿದರು.

ರೈತರು ತಮ್ಮ ಪಹಣಿಗಳಿಗೆ ದಾಖಲೆಗಳಿಗೆ ಕಡ್ಡಾಯವಾಗಿ ಆಧಾರ್ ಸೀಡಿಂಗ್ ಆಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಕೂಡ ಈಗಾಗಲೇ 21 ಲಕ್ಷ ರೈತರ ಪೈಕಿ ಸುಮಾರು 1 ಲಕ್ಷದ 10 ಸಾವಿರ ಆಧಾರ್ ಸೀಡಿಂಗ್ ನ್ನು ಕಳೆದ ಒಂದು ವಾರದಿಂದ ಮಾಡಲಾಗಿದೆ. ಜೂನ್ ಅಂತ್ಯದೊಳಗೆ ಜಿಲ್ಲೆಯ 21 ಲಕ್ಷ ಖಾತೆದಾರರ ಆಧಾರ್ ಸೀಡಿಂಗ್ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಎಡಿಎಲ್’ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್ ಗೌಡ ಇತರರು ಉಪಸ್ಥಿತರಿದ್ದರು.

Continue Reading

Mandya

ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನ ಹಕ್ಕು ಪತ್ರ ನೀಡದೆ ವಂಚನೆ : ಕಾನೂನು ಕ್ರಮಕ್ಕೆ ಲಲಿತಾ ನಾಯಕ್ ಆಗ್ರಹ

Published

on

ಮಂಡ್ಯ: ಬಂಜಾರ ಸಮುದಾಯಕ್ಕೆ ಮಂಜೂರಾಗಿದ್ದ ನಿವೇಶನದ ಹಕ್ಕು ಪತ್ರ ನೀಡದೆ ವಂಚಿಸಿರುವ ಸಮುದಾಯದ ವಂಚಕ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1987 – 88 ರಲ್ಲಿ ನನ್ನ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಂದಿನ ಸರ್ಕಾರ ತಮ್ಮನ್ನು ಮೇಲ್ಮನೆ ಸದಸ್ಯೆಯನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಬಂಜಾರ ಸಂಘಗಳನ್ನು ಸ್ಥಾಪಿಸಿ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯದ ಗುತ್ತಲು ಗ್ರಾಮದ ಸರ್ವೆ ನಂಬರ್ 530 ರಲ್ಲಿ ಒಂದು ಎಕರೆ 28 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು ಎಂದರು.

ನಂತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೃಷ್ಣನಾಯಕ್ ಅವರಿಗೆ ಜವಾಬ್ದಾರಿ ನೀಡಿ ವಸತಿ ವ್ಯವಸ್ಥೆ ಮಾಡಿಕೊಡಲಾಯಿತು. ನಂತರ ಹತ್ತಾರು ಫಲಾನುಭವಿಗಳು ಅಲ್ಲಿ ನೆಲೆಸಿದ್ದು ಅವರೆಲ್ಲರಿಗೂ ಹಕ್ಕು ಪತ್ರ ಲಭ್ಯವಾಯಿತು.

1998ರಲ್ಲಿ ಆ ಬಡಾವಣೆಯನ್ನು ಬಿ.ಟಿ ಲಲಿತಾ ನಾಯಕ್ ಬಡಾವಣೆ ಎಂಬುದಾಗಿ ಮರು ನಾಮಕರಣ ಮಾಡಲಾಯಿತು. ಸಂಘದ ಮೂಲಕ ನ್ಯಾಯಬೆಲೆ ಅಂಗಡಿ, ವಾಚನಾಲಯ, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಂತ ಸೇವಾಲಾಲ್ ಮಂದಿರವನ್ನು ಸಹ ಮಂಜೂರು ಮಾಡಿಸಲಾಯಿತು. ಆದರೆ ಕೃಷ್ಣ ನಾಯಕ್ ಮರಣದ ನಂತರ ಆತ ಮಾಡಿರುವ ವಂಚನೆ ಬಯಲಿಗೆ ಬಂದಿದ್ದು, ಅವರ ಕುಟುಂಬದವರೇ ಬಂಜಾರ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದು ಮೂರು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಹಕ್ಕು-ಪತ್ರವನ್ನು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಕೆಲವರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು.

ಕೃಷ್ಣ ನಾಯಕ್ ಅವರ ಪತ್ನಿ ಮಂಗಳಮ್ಮ ಈಗಿನ ಪ್ರಧಾನ ಕಾರ್ಯದರ್ಶಿ ಆಗಿದ್ದು, ಸ್ವಯಂಘೋಷಿತ ಅಧ್ಯಕ್ಷರಾಗಿ ಅವರ ತಂಗಿಯ ಮಗ ವೆಂಕಟ ನಾಯಕ, ಖಜಾಂಚಿಯಾಗಿ ಮಗ ನಂದರಾಜ ನಾಯಕ, ಸಹ ಕಾರ್ಯದರ್ಶಿಯಾಗಿ ಅಳಿಯ ಕುಮಾರ ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣನ ಮಗ ರಮೇಶ ನಾಯಕ, ಸದಸ್ಯರಾಗಿ ಪುತ್ರಿಯರಾದ ಮಮತಾ ಮತ್ತು ಅನಿತಾಭಾಯಿ ಅವರಿದ್ದು ಇವರೆಲ್ಲರೂ ಕೂಡಿ ವಂಚನೆ ಮಾಡಿದ್ದಾರೆ.

ಆದ ಕಾರಣ ಇವರೆಲ್ಲರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಂಡು ಉಗ್ರಶಿಕ್ಷೆ ನೀಡಬೇಕು. ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. .ಹಾಗೂ ಅವರು ಪಡೆದಿರುವ ಹಣವನ್ನು ವಾಪಸ್ ನೀಡಬೇಕು. ಬೇರೆ ಸಮುದಾಯದವರು ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅವರು ಸುದ್ದಿಗೋಷ್ಠಿ ಮೂಲಕ ಆಗ್ರಹ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಒಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿಎಂ.ಶಿವಕುಮಾರ್ ನಾಯಕ್. ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪ ಚನ್ನನಾಯಕ, ಮಂಡ್ಯ ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂಕೆ ಬಾಲರಾಜ್, ಕರ್ನಾಟಕ ಬಂಜಾರ ಜಾಗೃತಿ ದಳದ ಮಹೇಶ್ ನಾಯಕ, ಮುಖಂಡರಾದ ಪುಟ್ಟಸ್ವಾಮಿ, ಶೀನಾ ನಾಯಕ್, ವಿವೇಕ್ ಉಪಸ್ಥಿತರಿದ್ದರು.

Continue Reading

Mandya

ನಾಲ್ವಡಿ ಕೃಷ್ಣರಾಜ‌ ಒಡೆಯರ್ 140 ನೇ ಜನ್ಮ‌ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳೂ ಆಚರಿಸಬೇಕು – ತಗ್ಗಳ್ಳಿ ವೆಂಕಟೇಶ್

Published

on

ಮಂಡ್ಯ: ಜೂನ್ 4 ರಂದು ಮಂಡ್ಯ ಜಿಲ್ಲಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನಾಚರಣೆಯನ್ನು ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು ಆಚರಿಸಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡೆಯರ್ ಅವರು ಮಾದರಿ ಮಹಾರಾಜರಾಗಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಅವರು ನೀಡಿದ್ದಾರೆ .

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ, ಗೆಜ್ಜೆಪೂಜೆಯಂತಹ ಅನಿಷ್ಟ ಪದ್ದತಿಗೆ ಒಡೆಯರ್ ಅವರು ತಿಲಾಂಜಲಿ ನೀಡಿದ್ದಾರೆ. ದೇಶದಲ್ಲಿ ಜನಪರ, ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು .
ಮಂಡ್ಯ ಜಿಲ್ಲೆಯ ಬರಡು ಭೂಮಿಯನ್ನು ಹಸಿರು ಮಾಡಿ ದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ತಮ್ಮ ಕುಟುಂಬದವರ ಒಡವೆಗಳನ್ನು ಮಾರಿ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ

ನೀರಾವರಿ ,ಕೈಗಾರಿಕೆ ಒಡೆಯರ್ ಅವರ ಕೊಡುಗೆಯಾಗಿದೆ. ಇಡೀ ಏಷ್ಯಾದಲ್ಲಿಯೇ ಶಿಂಷಾದಲ್ಲಿ ವಿದ್ಯುತ್ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೆ ತಂದಿದ್ದಾರೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ ಹೀಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಜನೋಪಯೋಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ ಎಂದರು .
ಚಿತ್ರನಟರು ,ಕ್ರೀಡಾಪಟುಗಳು, ರಾಜಕಾರಣಿಗಳ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಸಹಜ ಪ್ರಕ್ರಿಯೆಯಾಗಿದೆ. ಆದರೆ ನಮಗೆ ಅನ್ನ ನೀಡಿದ, ರಾಜ್ಯಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು. ಇದು ಎಲ್ಲರ ಕರ್ತವ್ಯವಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಮತ್ತು ಇತರ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲೆಡೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ. ಆದ ಕಾರಣ ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಸ್ವಯಂ ಪ್ರೇರಿತವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಸರಳ ರೀತಿಯಲ್ಲಿ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಚಿನ್, ಮಂಜು, ಶಿವಣ್ಣ, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!