Connect with us

Chikmagalur

ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ

Published

on

ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗಂಧದ ಗುಡಿ ಬಳಗ ಬೆಂಗಳೂರು ಇವರ ಸಹಯೋಗದಲ್ಲಿ ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ ಹೋಬಳಿ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಗುಂಡಿಹೊಂಬಳ ಈ ಶಾಲೆಯ ಎರಡು ಕೊಠಡಿಗೆ ಬಣ್ಣ ಬಳಿಯುವ ಕಾರ್ಯ ನಡೆಯಿತು. ಹಾಗೂ ಸರ್ಕಾರಿ ಶಾಲೆಯ ನಾಮಫಲಕ ಬರೆಯಲಾಯಿತು ಗೋಡೆಗಳಿಗೆ ಚಿತ್ತಾರ ಬಿಡಿಸುವ ಕಾರ್ಯ ನಡೆಸಲಾಯಿತು ಶಾಲಾ ಕೊಠಡಿ ಕಂಬಗಳಿಗೆ ಕನ್ನಡ ಬಾವುಟ ಬಣ್ಣ ಬಳಿಯಲಾಯಿತು. ಹಾಗೂ ಈ ಬಣ್ಣ ಬಳಿಯುವ ಕಾರ್ಯಕ್ಕೆ ಗಂಧದಗುಡಿ ಬಳಗ ಸಾಮಾಜಿಕ ಸೇವಾ ತಂಡ ಎರಡು ತಿಂಗಳಿಂದ ಟ್ವಿಟರ್, ಪೇಸ್ ಬುಕ್, ಇನ್ಟ್ರಾಗ್ರಾಮ್,

ವಾಟ್ಸಾಪ್ ನಲ್ಲಿ ಅಭಿಯಾನ ಪ್ರಾರಂಭಿಸಿ ದಾನಿಗಳಿಂದ ಸಹಾಯಧನ ಸಂಗ್ರಹಿಸಿ ಶಾಲೆಯ ಕೊಠಡಿಗೆ ಬಣ್ಣವನ್ನು ಕೊಂಡು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಪೋಲಿಸ್, ಅರಣ್ಯ ಇಲಾಖೆ ನೌಕರರು ಹಾಗೂ ಗಿನ್ನಿಸ್ ದಾಖಲೆ ಮಾಡಿದ ಚಿತ್ರ ಕಲಾವಿದರು ಸೇರಿ ಕೊಠಡಿಗೆ ಸುಸಜ್ಜಿತ ಬಣ್ಣ ಹೊಡೆದು ಶಾಲೆಯ ಚಿತ್ರಣವನ್ನು ಬದಲಾವಣೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತಿದ್ದೂ ಅ ಮಕ್ಕಳು ಸಹ ಉನ್ನತ ಗುಣಮಟ್ಟದ ಕೊಠಡಿಯಲ್ಲಿ ಕುಳಿತುವಂತಾಗಬೇಕು ಎಂಬ ಅಶಯ. ಈ ಶಾಲೆಗೆ 60 ಸಾವಿರ ಮೌಲ್ಯದ ಬಣ್ಣವನ್ನು ವಿನಿಯೋಗಿಸಲಾಗಿರುತ್ತದೆ. ಈ ಬಣ್ಣ ಉತ್ತಮ ಗುಣಮಟ್ಟದ ಬಣ್ಣವಾಗಿರುತ್ತದೆ. ಈ ಬಣ್ಣ ಬಳಿಯುವ ಕಾರ್ಯಕ್ಕೆ ಗಂಧದಗುಡಿ ಬಳಗ – ಕರ್ನಾಟಕ.ರಿ

ಬೆಂಗಳೂರು ಅಧ್ಯಕ್ಷರಾದ ಪ್ರಖ್ಯಾತ ಪುತ್ತೂರು, ಕಾರ್ಯದರ್ಶಿಯಾದ ಅಫ್ಜಲ್ ಷರೀಪ್, ಗಿನ್ನಿಸ್ ದಾಖಲೆಯ ಚಿತ್ರ ಕಲಾವಿದ ಯಲ್ಲಪ್ಪ, ಸದಸ್ಯರಾದ ರವಿಕುಮಾರ್, ಜಗದೀಶ್, ಮಹೇಶ್, ಜಯೇಂದ್ರ, ನಿತಿನ್, ಚೇತನ್, ಪುನೀತ್ ಗಂಧದಗುಡಿ ಬಳಗ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಶ್ ಕೃಷಿ ಮೇಲ್ವಿಚಾರಕರಾದ ರವಿಚಂದ್ರ, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಚಂದ್ರಶೇಖರ್ ರೈ, ಸ್ವಯಂಸೇವಕರಾದ ಸುರೇಶ್ ಕೋಟ್ಯಾನ್,

ರಘುಪತಿ ವಿ ಸಿ ಬಿದರೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಬಿದರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಶಾಲಾ ಶಿಕ್ಷಕರಾದ ಬಿ ಡಿ ಚಂದ್ರೇಗೌಡ ಅಂಗನವಾಡಿ ಸಹಾಯಕಿಯಾದ ಮಮತಾ, ಅರಣ್ಯ ಇಲಾಖೆ ನೌಕರರಾದ ಚನ್ನಪ್ಪಗೌಡ, ರಘು, ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹೂವಪ್ಪಗೌಡ ಇದ್ದರು. ಹಾಗೂ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನೂ ಮಂಜುಳರವರು ಮಾಡಿದರು ವಂದನಾರ್ಪಣೆಯನ್ನು ಶಾಲೆಯ ಹಳೆ ವಿದ್ಯಾರ್ಥಿನಿಯಾದ ಯೋಗಿಣಿ ನೇರವೆರಿಸಿದರು. ಹಾಗೂ ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ಮೂಡಿಗೆರೆ: 15 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ

Published

on

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ ಸಮೀಪದ ಬಾನಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕ ಹೃದಯಾಘಾತದಿಂದ ಬಲಿಯಾಗಿರುವ ಘಟನೆ ನಡೆದಿದೆ.

ಪ್ರೀತಮ್‌ ಮೃತಪಟ್ಟ ಬಾಲಕನಾಗಿದ್ದಾನೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರೀತಮ್‌ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಾಗ ಅಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆತನನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕುಟುಂಬಸ್ಥರ ಮಾಹಿತಿ ಪ್ರಕಾರ ಮೃತ ಬಾಲಕನಿಗೆ ಬಾಲ್ಯದಿಂದಲೂ ಹೃದಯ ಸಂಬಂಧಿ ಸಮಸ್ಯೆ ಇತ್ತು ಎಂದು ತಿಳಿದು ಬಂದಿದೆ. ಇನ್ನೂ ಈ ಸಂಬಂಧ ಬಣಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಪತ್ರಕರ್ತರಲ್ಲಿ ನೈಜತೆ ಹಾಗೂ ಸಮಗ್ರ ಅಧ್ಯಯನವಿರಬೇಕು : ಸ್ವಾಮೀಜಿ

Published

on

ಚಿಕ್ಕಮಗಳೂರು, ಆಗಸ್ಟ್ ೦೯:- ಪತ್ರಿಕೋದ್ಯಮ ವೃತ್ತಿಯಲ್ಲಿ ನೈಜತೆ, ಸೃಜನತೆ ಹಾಗೂ ಸುದ್ದಿ ಪ್ರಸಾರ ಕ್ಕೂ ಮುನ್ನ ವಿಷಯಗಳ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸುವುದು ಪತ್ರಕರ್ತರ ಜವಾಬ್ದಾರಿ ಎಂದು ಬಸವತತ್ವ ಪೀಠದ ಶ್ರೀ ಡಾ|| ಬಸವ ಮರುಳಸಿದ್ಧಸ್ವಾಮೀಜಿ ಹೇಳಿದರು.
ನಗರದ ಬಸವ ಮಂದಿರದ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾ ಲ್ಲೂಕು ಸಂಘದಿಂದ ಏರ್ಪಡಿಸಿದ್ಧ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರ ಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.


ಭಾರತದ ಪತ್ರಕರ್ತರಿಗಿರುವ ಸ್ವಾತಂತ್ರ್ಯತೆ, ಸಂವಿಧಾನದಡಿ ರಾಜಕೀಯ ನಾಯಕರು ಹಾಗೂ ಆಳುವ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಪ್ರಪಂಚದ ಯಾವುದೇ ಬಲಾಡ್ಯ ರಾಷ್ಟ್ರಗಳಿಲ್ಲ. ಆ ರಾಷ್ಟ್ರಗಳಲ್ಲಿ ಪತ್ರಕರ್ತರು ಸುದ್ದಿ ಪ್ರಸಾರಕ್ಕೂ ಮುನ್ನ ಅನುಮತಿ ಪಡೆಯಬೇಕಾದ ಸ್ಥಿತಿ ಇಂದಿಗೂ ನಡೆಯುತ್ತಿವೆ ಎಂದು ತಿಳಿಸಿದರು.
ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಜಾಪ್ರಭುತ್ವ ನಾಲ್ಕನೇ ಅಂಗ ಪತ್ರಿಕಾರಂಗ. ಈ ವೃತ್ತಿ ಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಅವರಸಕ್ಕೆ ಒಳಗಾದರೆ ಎಡವಿ ಬೀಳಬಹುದು. ಹೀಗಾಗಿ ವೃತ್ತಿ ಯಲ್ಲಿ ಸಂಯಮ, ಸುದ್ದಿಯ ಸ್ಪಷ್ಟತೆ, ಕನ್ನಡ ಶಬ್ದಗಳ ಬಳಕೆ ಹಾಗೂ ವಿಚಾರ ಸಂಕಿರಣದಲ್ಲಿ ಸಮಗ್ರ ಜ್ಞಾನ ಹೊಂದುವುದು ಅತ್ಯವಶ್ಯಕ ಎಂದರು.
ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣದಿಂದ ಮಿಂಚಿನ ವೇಗದಲ್ಲಿ ಸುದ್ದಿಗಳು ನೂರಾ ರು ಕಿ.ಮೀ.ಗಳಲ್ಲಿರುವ ವ್ಯಕ್ತಿಗೆ ತಲುಪುತ್ತಿದೆ. ಎಲ್ಲವೂ ಸತ್ಯವೆಂಬಂತೆ ನಂಬಲಾಗುವುದಿಲ್ಲ. ನಿಖರವಾದ ಸು ದ್ದಿಗಳು ಓದಲು ಪತ್ರಿಕೆಗಳಿಂದ ಮಾತ್ರ ಸಾಧ್ಯ. ಹೀಗಾಗಿ ಪತ್ರಿಕೋದ್ಯಮ ಸಮಾಜದ ಬದ್ಧತೆಯಿಂದ ಕಾರ್‍ಯ ನಿರ್ವಹಿಸಬೇಕು ಎಂದರು.
ಪತ್ರಿಕಾರಂಗದಲ್ಲಿ ವ್ಯವಹಾರಿಕ ಜ್ಞಾನವಿರಬೇಕು. ವೈಯಕ್ತಿಕ ಜೀವನ, ಸೈದ್ದಾಂತಿಕ ಬದ್ಧತೆ ಹಾಗೂ ಸ್ಪ ರ್ಧಾತ್ಮಕವಾಗಿ ಸೆಣಸಾಡಲು ಶಕ್ತಿ ಹೊಂದಿರದಿದ್ದರೆ ವಾಹಿನಿಯಿಂದ ದೂರಾಗಬೇಕಾಗುತ್ತದೆ ಎಂದ ಅವರು ಪತ್ರಿಕೋದ್ಯಮದಲ್ಲಿ ವರದಿಗಾರರು, ಏಜೆಂಟರಿಗೆ ಶಕ್ತಿತುಂಬಲು ಆರ್ಥಿಕ ಸಂಬಂಧದ ಜೊತೆಗೆ ಸೈದ್ದಾಂತಿ ಕವಾಗಿ ರಾಜೀಯಾಗದೇ ನೈಜ ಪತ್ರಕರ್ತರಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಬಿ.ಎನ್.ಚಿದಾನಂದ್ ಹಿಂದಿನ ಕಾಲದಲ್ಲಿ ಮುಂಜಾನೆ ಕಾಫಿ ಸೇವಿಯುವ ಮುನ್ನ ಪತ್ರಿಕೆಗಳು ಓದುವ ಹವ್ಯಾಸಗಳಿದ್ದವು. ಆಧುನಿಕತೆ ಜಗತ್ತಿನಲ್ಲಿ ಕ್ಷಣಾ ರ್ಧದಲ್ಲೇ ಸುದ್ದಿ ತಲುಪುತ್ತಿವೆ. ಹೀಗಾಗಿ ಪತ್ರಕರ್ತರ ಪರಿಶ್ರಮಕ್ಕೆ ಸರ್ಕಾರವು ಸೂಕ್ತ ಭದ್ರತೆ ಒದಗಿಸುವುದು ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಬಿ.ತಿಪ್ಪೇರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ನಡೆಯುವ ಆಗು- ಹೋಗುಗಳ ವಿಷಯಗಳನ್ನು ಮೊದಲು ಪರಿಚಯಿಸಿದ ಮೊಟ್ಟಮೊದಲ ಕನ್ನಡ ದಿನಪತ್ರಿಕೆ ಮಂಗಳೂರು ಸಮಾಚಾರ. ಇದಾದ ಬಳಿಕ ರಾಜ್ಯಾದ್ಯಂತ ಪತ್ರಕರ್ತರನ್ನು ಒಂದುಗೂಡಿಸಲು ಡಿ.ವಿ.ಗುಂಡಪ್ಪನವರು ಸಂ ಘವನ್ನು ಸ್ಥಾಪಿಸಿ ಅವರ ನೆನಪಾರ್ಥ ೯೪ನೇ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್ ನಾರಿನಿಂಗಜ್ಜಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಕೋದ್ಯಮ ಮಹತ್ವದ ಕೆಲಸ ಮಾಡುತ್ತಿದೆ. ಇಂದಿನ ಕಾಲದಲ್ಲೂ ಪತ್ರಿಕೆ ಗಳ ನಂಬಿಕೆಯಿಟ್ಟು ಖರೀದಿಸಿ ಓದುತ್ತಿರುವ ಕಾರಣ ಪತ್ರಿಕೋದ್ಯಮಗಳು ಯಶಸ್ವಿಯಾಗಿ ಮುನ್ನೆಲೆಗೆ ಬರ ಲು ಕಾರಣವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಜಿಲ್ಲಾಸ್ಪತ್ರೆ ಸರ್ಜನ್ ಡಾ|| ಚಂದ್ರಶೇಖರ್, ಜಿಲ್ಲಾ ಅಡ್ಯಾಕ್ ಕಮಿಟಿ ಅಧ್ಯಕ್ಷ ಆರ್.ಸುಂದರೇಶ್, ಐಟರೇಟಿವ್ ಇಂಟರ್‌ನ್ಯಾಷನಲ್ ಪಬ್ಲಿ ಷರ್ಸ್ ನಿರ್ದೇಶಕ ನಂಜೇಶ್ ಬೆಣ್ಣೂರು, ಬಿಜೆಪಿ ಮುಖಂಡ ಕುಪ್ಪೇನಹಳ್ಳಿ ಸತೀಶ್, ನಿವೃತ್ತ ಕಾರ್ಮಿಕ ಇ ಲಾಖೆ ಅಧಿಕಾರಿ ಶಿವಶಂಕರಪ್ಪ, ಶಿಕ್ಷಕ ಎಂ.ಆರ್.ಪ್ರಕಾಶ್, ನಿವೃತ್ತ ಎಎಸೈ ಅಧಿಕಾರಿ ಹೆಚ್.ಆರ್.ಷಡಕ್ಷರಿ, ಡಾ|| ಮೂರ್ತಿ, ಮುಖಂಡರುಗಳಾದ ಪದ್ಮರಾಜ್, ಅಶೋಕ್‌ಕುಮಾರ್, ಬಿ.ಎಂ.ಕುಮಾರ್, ಅನುಸೂಯ, ಗೀತಾ ರಮೇಶ್ ನಾರಿನಿಂಗಜ್ಜಿ, ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.

Continue Reading

Chikmagalur

ಸಹೋದರಿ ಹತ್ಯೆಯ ಪ್ರತೀಕಾರವಾಗಿ ಭಾವನ ಬರ್ಬರ ಹ*ತ್ಯೆ: ಆರೋಪಿಗಳನ್ನು ಬಂಧಿಸಿದ ಪೊಲೀಸರು

Published

on

ಚಿಕ್ಕಮಗಳೂರು: ಸಹೋದರಿಯ ಹತ್ಯೆಯ ಪ್ರತಿಕಾರವಾಗಿ ಭಾವನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ತರೀಕೆರೆ ತಾಲೂಕಿನ ಕರಕುಚಿ ಗ್ರಾಮದ ಬಳಿ ಈ ಒಂದು ಭೀಕರ ಕೊಲೆ ನಡೆದಿತ್ತು.

ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಕರಕೋಚಿ ಗ್ರಾಮ ಚರಣ್ (23) ಹತ್ಯೆಗೈದ ಬಾಮೈದ ಸಂತೋಷ ಮತ್ತು ಸಚಿನ್‌ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

2024ರ ಏಪ್ರಿಲ್ 29ರಂದು ಪತ್ನಿ ಮೇಘನಾಳನ್ನು ಪತಿ ಚರಣ್ ಕೊಂದಿದ್ದ. ಗ್ರಾಮದ ಮೇಘನಾ ಮತ್ತು ಚರಣ್ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಮನೆ ಬಿಟ್ಟು ತವರು ಮನೆಗೆ ಊರಿಗೆ ಹೋಗಿದ್ದಕ್ಕೆ ಚರಣ್ ಮೇಘನಾಳನ್ನು ಕೊಂದಿದ್ದ. ಬಟ್ಟೆ ತೊಳೆಯಲು ಹೋದಾಗ ಪತ್ನಿಕೊಂದು ಶವ ಕಾಲುವೆಗೆ ಎಸೆದಿದ್ದ. ಚರಣ್ 2024 ಏಪ್ರಿಲ್ 29ರಂದು ಮೊಳಕಟ್ಟಮ್ಮ ಜಾತ್ರೆಯ ದಿನ ಮೇಘನಾ ಕೊಲೆ ನಡೆದಿತ್ತು.

ಬಳಿಕ ಮೂರು ತಿಂಗಳ ಹಿಂದೆ ಚರಣ್ ಜಾಮೀನಿನಿಂದ ಹೊರಗಡೆ ಬಂದಿದ್ದನ್ನು ನೋಡಿ ಮೇಘನಾ ಸಹೋದರ ಕೊಲೆ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಭಾವನನ್ನು ಕೊಲೆಗೈದ ಸಂತೋಷ. ಕರಕೋಚಿ ಗ್ರಾಮಕ್ಕೆ ಬೈಕ್ ಮೇಲೆ ಬಂದು ವಾಪಸ್ ತೆರಳುವಾಗ ಚರಣನನ್ನು ಕೊಲೆ ಮಾಡಲಾಗಿದೆ.

ಈ ಘಟನೆಯ ಬಗ್ಗೆ ಲಕ್ಕವಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!