Kodagu
ಫೆ.15ಕ್ಕೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ
ಮಡಿಕೇರಿ : ಶಕವರ್ಷ 1947 ನೇ ವಿಶ್ವಾವಸು ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷ ತ್ರಯೋದಶಿ ಫೆ. 15 ರಂದು ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ್ ಸ್ವೀಕರಿಸಿ, ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದ್ದಾರೆ.

ಪೂಜಾ ಕಾರ್ಯಕ್ರಮದ ವಿವರ: ಫೆಬ್ರವರಿ, 15 ರಂದು ಬೆಳಗ್ಗೆ 6.45 ಗಂಟೆಗೆ ಮಹಾಪೂಜೆ, ಬೆಳಗ್ಗೆ 7.15 ಗಂಟೆಗೆ ನಿತ್ಯ ಸೇವೆಗಳ ಆರಂಭ, ಬೆಳಗ್ಗೆ 9.30 ಗಂಟೆಗೆ ರುದ್ರಹೋಮ ಸಂಕಲ್ಪ(ಸಾಮೂಹಿಕ) ಏಕದರ್ಶ ರುದ್ರಾಭಿಷೇಕ(ಸಾಮೂಹಿಕ), ಬೆಳಗ್ಗೆ 10 ಗಂಟೆಗೆ ರುದ್ರ ಹೋಮ ಪ್ರಾರಂಭ(ಸಾಮೂಹಿಕ), ಮಧ್ಯಾಹ್ನ 12 ಗಂಟೆಗೆ ರುದ್ರಹೊಮ ಪೂರ್ಣಾಹುತಿ (ಸಾಮೂಹಿಕ), ಮಧ್ಯಾಹ್ನ 12.30 ಗಂಟೆಗೆ ಕಳಶಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1.30 ಗಂಟೆಗೆ ತೀರ್ಥ ಪ್ರಸಾದ ವಿತರಣೆ(ವಿನಿಯೋಗ), ಸಂಜೆ 4 ಗಂಟೆಗೆ ದೇವರ ದರ್ಶನ ಹಾಗೂ ಸೇವೆಗೆ ಅವಕಾಶ, ನಂತರ ರಾತ್ರಿ 9 ಗಂಟೆಗೆ ಮಹಾ ಪೂಜೆ ನಡೆಯಲಿದೆ.

ಮಹಾ ಶಿವರಾತ್ರಿ ಹಬ್ದದ ಜಾಗರಣೆ ಪ್ರಯುಕ್ತ ಫೆಬ್ರವರಿ, 15 ರಿಂದ ಫೆಬ್ರವರಿ, 16 ರ ಬೆಳಗ್ಗೆ 4.30 ಗಂಟೆಯ ವರೆಗೆ ಬೆಳಗ್ಗಿನ ಜಾವದವರೆಗೂ ಸಹ ದೇವರ ದರ್ಶನಕ್ಕೆ ಅವಕಾಶವಿದೆ. ಭಕ್ತಾದಿಗಳ ಆಗಮನಕ್ಕೆ ದೇವಾಲಯ ತೆರೆದಿರುತ್ತದೆ.
ರುದ್ರಹೋಮ ಮತ್ತು ಏಕದಶ ರುದ್ರಾಭಿಷೇಕ (ಸಾಮೂಹಿಕ) ಸೇವಾರ್ಥದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ, ರಶೀದಿ ಪಡೆದುಕೊಳ್ಳಬಹುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಅವರು ತಿಳಿಸಿದ್ದಾರೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಇದೇ ಫೆಬ್ರವರಿ 12 ರಂದು ಸಂಜೆ 5 ಗಂಟೆಗೆ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಅಂದು(ಫೆ.12) ಸಂಜೆ 5 ಗಂಟೆಗೆ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಇರುವುದಿಲ್ಲ, ಸಾರ್ವಜನಿಕರು ಸಹಕರಿಸಬೇಕಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಕೋರಿದ್ದಾರೆ.
Kodagu
ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ
ಮಡಿಕೇರಿ : ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನ.4 ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡ “ಸಾಂತ್ವನ ಮಹಿಳಾ ಸಹಾಯವಾಣಿ” ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆ ನೀಡಿ ನೆರವು ಕಲ್ಪಿಸುತ್ತಾ ಬಂದಿರುತ್ತದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ 5681 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 5657 ಪ್ರಕರಣಗಳು ಇತ್ಯರ್ಥಗೊಂಡಿದೆ.
2025-26ನೇ ಆರ್ಥಿಕ ಸಾಲಿನಲ್ಲಿ 262 ಪ್ರಕರಣಗಳು ದಾಖಲಾಗಿ, 242 ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು ಸೇರಿ, ಉಳಿದ 24 ಪ್ರಕರಣಗಳು ಇತ್ಯರ್ಥದ ಹಂತದಲ್ಲಿದೆ.

ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ.3,75,000 ಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ 2025-26ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ.
ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷ ಬಿ.ಕೆ ರವೀಂದ್ರ ರೈ ಹಾಗೂ ಪ್ರಧಾನ ಕಾರ್ಯದರ್ಶಿಯವರಾದ ನಮಿತ ಆರ್.ರೈ ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 9880985939 ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
Kodagu
ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
ಮಡಿಕೇರಿ : ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೌಢ್ಯ ವಿರುದ್ಧ, ಅಜ್ಞಾನ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಿ ಸರ್ವರಿಗೂ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಶಿಕ್ಷಕಿ ಬಿ.ಬಿ. ಹೇಮಲತಾ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡೊಹಾರ್ ಕಕ್ಕಯ್ಯ, ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರು ವೃತ್ತಿಯ ಮೂಲಕ ಸಮಾಜದಲ್ಲಿ ಕಾಯಕವೇ ಕೈಲಾಸ ಎಂಬುದನ್ನು ಸಾರಿದ್ದಾರೆ ಎಂದು ಹೇಳಿದರು.
ಡೋಹಾರ ಕಕ್ಕಯ್ಯ ಅವರು ಹನ್ನೆರಡನೇ ಶತಮಾನದಲ್ಲಿ ಕಾಯಕ ಯೋಗಿಯಾಗಿ ವೃತ್ತಿ ಧರ್ಮವನ್ನು ಗೌರವಿಸಬೇಕು ಎಂಬುದನ್ನು ಸಾರಿದ್ದಾರೆ. ಡೋರ ಎಂದರೆ ಚರ್ಮಕಾರ ಎಂದರ್ಥ, ಚರ್ಮ ಹದ ಮಾಡುವ ಕಾಯಕ ಮಾಡುತ್ತಿದ್ದರು ಎಂದು ಹೇಳಿದರು.

ಮಾದರ ಚೆನ್ನಯ್ಯ ಅವರು ಅಪ್ಪನು ನಮ್ಮ ಮಾದರ ಚೆನ್ನಯ್ಯ ಎಂದು ಬಸವಣ್ಣನವರಿಂದ ಗೌರವಿಸಲ್ಪಟ್ಟ ಮಾದರ ಚೆನ್ನಯ್ಯ ಅವರು ಜಾತಿ ರಹಿತ ಸಮಾಜ, ಆತ್ಮ ಶುದ್ಧಿ ಭಕ್ತಿಯ ಮಹತ್ವವನ್ನು ಸಾರುತ್ತಾರೆ ಎಂದು ತಿಳಿಸಿದರು.
ಹರಿಹರ ಕವಿ ದೇವನೊಲಿದನ ಕುಲವೇ ಸದ್ಗುಣಂ, ಸೂರ್ಯ ಕುಲದ ರಾಜ ಕರಿಕಾರ ಚೋಳ, ಮಾದರ ಕುಲದ ಚೆನ್ನಯ್ಯನ ಪಾದ ಹಿಡಿದು ಪಾದದ ಧೂಳನ್ನು ಕಣ್ಣಿಗೊತ್ತಿಕೊಳ್ಳುತ್ತೇನೆ ಎಂದಿದ್ದಾರೆ ಎಂದು ಹೇಮಲತಾ ಅವರು ನುಡಿದರು.

ಮಾದರ ಧೂಳಯ್ಯ ಅವರು ಬಸವ ಕಲ್ಯಾಣದ ಕಾಯಕ ಯೋಗಿಯಾಗಿದ್ದರು. ಕಾಯಕ ನಿಷ್ಠೆ ಮತ್ತು ಆತ್ಮಜ್ಞಾನದಿಂದ ಮಹಾಜ್ಞಾನಿಯಾಗಿ ಬೆಳೆದವರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಇವರ ಜನ್ಮ ಸ್ಥಳ ಮತ್ತು ಕರ್ಮ ಭೂಮಿಯಾಗಿತ್ತು. ಧೂಳೇಶ್ವರ ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎಂದು ಜ್ಞಾನ ಮೋಕ್ಷ, ಭಕ್ತಿಯ ಶ್ರೇಷ್ಠತೆ ಎಂದು ಸಾರಿದ್ದಾರೆ ಎಂದರು.
ಮತ್ತೊಬ್ಬ ಶರಣರು ಉರಿಲಿಂಗ ಪೆದ್ದಿ ಅವರು ವಚನಕಾರ ಮತ್ತು ಕ್ರಾಂತಿಕಾರಿ ಶರಣರಾಗಿದ್ದರು. ಮಂಗಳ ಲಿಂಗ ಅಂಗದ ಮೇಲೆ ಇದ್ದು, ಅನ್ಯ ಲಿಂಗಿಗಳ ನೆರವನ ನಿಮ್ಮ ಭಕ್ತನು ಉರಿಲಿಂಗ ಪೆದ್ದಿ ವಿಶ್ವೇಶ್ವರ ಎಂದು ತಿಳಿಸಿದ್ದಾರೆ ಎಂದು ಅವರು ನುಡಿದರು.

ಮತ್ತೊಬ್ಬ ಶರಣರಾದ ಸಮಗಾರ ಹರಳಯ್ಯ ಅವರು ಹನ್ನೇರಡನೇ ಶತಮಾನದ ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದು, ಪಾದರಕ್ಷೆ ಚಮ್ಮವಗೆ ತಯಾರಿಸುವ ಕಾಯಕದ ಮೂಲಕ ಗುರುಲಿಂಗ ಜಂಗಮ ಸೇವೆ ಮಾಡಿದ ಇವರು ಸಾಮಾಜಿಕ ಸಮಾನತೆಗೆ ಹೋರಾಡಿದ್ದ ಹರಳಯ್ಯ ಅವರು ಅನುಭವ ಮಂಟಪದಲ್ಲಿ ಒಬ್ಬರಾಗಿದ್ದರು ಎಂದು ತಿಳಿಸಿದರು.
ಕಲ್ಯಾಣ ಕ್ರಾಂತಿಗೆ ಕಾರಣರಾದ ಹರಳಯ್ಯನವರ ಮಗ ಶೀಲವಂತ ಮತ್ತು ಉನ್ನತ ಸಮಾಜದ ಮಧುವರಸ ಮಗಳ ಮದುವೆಯು ಬಸವಣ್ಣನವರ ಸಮಾನತೆಯ ತತ್ವದಂತೆ ನಡೆಯಿತು. ಇದು ಕಲ್ಯಾಣದಲ್ಲಿ ನಡೆದ ಜಾತಿ, ವರ್ಣ ರಹಿತ ಸಮಾಜದ ಪ್ರಯತ್ನವಾಗಿತ್ತು ಎಂದು ಹೇಮಲತಾ ಅವರು ವಿವರಿಸಿದರು.

ಶರಣರ ಮಗಳನ್ನು ಶರಣರ ಮಗನಿಗೆ ಕೊಡುವುದು ತಪ್ಪಿಲ್ಲ ಎಂದು ಬಸವಣ್ಣನವರು ನುಡಿದಿದ್ದರು. ಅಂತರ ಜಾತಿ ವಿವಾಹವನ್ನು ಬಸವಣ್ಣ ಅವರು ಪ್ರೋತ್ಸಾಹಿಸಿದ್ದರು.
ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರಾ ಮೆಚ್ಚ ಕೂಡಲಸಂಗಮ ದೇವಾ… ಪರಿವರ್ತನೆ, ಬದಲಾವಣೆ ನಮ್ಮಿಂದ ಪ್ರಾರಂಭ ಆಗಬೇಕು ಎಂದು ವಚನಕಾರರು ಸಾರಿದ್ದಾರೆ ಎಂದರು.

ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಅಬ್ದುಲ್ ನಜೀಜ್ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್, ವನಿತಾ, ಇತರರು ಇದ್ದರು.
Kodagu
ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ
ಪೊನ್ನಂಪೇಟೆ: ಕೊಡಗು ಮೂಲದ ಕುಪ್ಪೋಡಂಡ ಎ. ರಫೀಕ್ ಅವರು ರಾಜ್ಯ ಪೊಲೀಸ್ ಇಲಾಖೆಯ ಅಧೀನದ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್(ಡಿ.ಪಿ.ಐ.) ಆಗಿ ಮುಂಬಡ್ತಿ ಹೊಂದಿದ್ದಾರೆ.
ಇದುವರೆಗೂ ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (ಡಿ.ಎಸ್.ಐ.) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಪ್ಪೋಡಂಡ ಎ. ರಫೀಕ್ ಅವರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಸೌಮೇಂದು ಮುಖರ್ಜಿ ಅವರು ಮಂಗಳವಾರದಂದು ಆಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಕುಪ್ಪೋಡಂಡ ಎ. ರಫೀಕ್ ಅವರು ಮೂಲತಃ ಎಡಪಾಲ ಗ್ರಾಮದವರಾಗಿದ್ದು, ದಿ ಕೆ.ಕೆ. ಅಹಮದ್ ಹಾಜಿಯವರ ಪುತ್ರರಾಗಿದ್ದಾರೆ. ಇವರು ಈ ಹಿಂದೆ ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ.
-
Mysore8 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya2 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Hassan17 minutes agoಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
-
Kodagu3 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
-
Mysore2 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
National2 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Special22 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Chikmagalur1 hour agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
