Connect with us

Sports

ಶತಕದೊಂದಿಗೆ ಸಾಲು ಸಾಲು ದಾಖಲೆ ಬರೆದ ಸ್ಮೃತಿ ಮಂದನಾ

Published

on

ರಾಜಕೋಟ್‌: ಇಲ್ಲಿನ ನಿರಂಜನ್‌ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮಹಿಳಾ ಹಾಗೂ ಐರ್ಲೆಂಡ್‌ ಮಹಿಳಾ ತಂಡಗಳ ನುಡುವಣ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಸ್ಮೃತಿ ಮಂದನಾ ಅವರು ಶತಕದ ದಾಖಲಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು.

ಕಳೆದ ವರ್ಷದಿಂದ ಭರ್ಜರಿ ಫಾರ್ಮ್‌ನಲ್ಲಿರುವ ಸ್ಮೃತಿ ಅವರು, ತಮ್ಮ ಫಾರ್ಮ್‌ನ್ನು ಈ ವರ್ಷವೂ ಮುಂದುವರೆಸುತ್ತಿದ್ದಾರೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಭಾರತ ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಭರ್ಜರಿ ಶತಕ ಬಾರಿಸಿದರು. ಆ ಶತಕದ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು.

ಸ್ಮೃತಿ ಕೆವಲ 70 ಎಸೆತಗಳಲ್ಲಿ 135ರನ್‌ ಚಚ್ಚಿದರು. ಆ ಮೂಲಕ ಭಾರತ ತಂಡದ ಪರವಾಗಿ ವೇಗದ ಶತಕ ದಾಖಲಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಹರ್ಮನ್‌ಪ್ರೀತ್‌ ಕೌರ್‌ ಅವರು 87 ಎಸತಗಳಲ್ಲಿ ಶತಕ ದಾಖಲಾಗಿದ್ದು, ಈವರೆಗೆ ವೇಗದ ಶತಕವಾಗಿತ್ತು.

ಇದರೊಂದಿಗೆ ತಮ್ಮ ವಯಕ್ತಿಕ 10 ಶತಕ ದಾಖಲಿಸಿದರು. ಹಾಗೂ ಏಕದಿನದಲ್ಲಿ ಅತಿಹೆಚ್ಚು ಶತಕ ದಾಖಲಿಸಿದವರ ಪೈಕಿ ಜಂಟಿ 3ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

Continue Reading

Sports

INDvsENG 1st ODI: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

Published

on

ನಾಗ್ಪುರ: ಭಾರತ ತಂಡದ ಸಂಘಟಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ದಾಳಿಯ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಷಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ 47.4 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 248 ರನ್‌ ಕಲೆಹಾಕಿದರು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ 38.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 251 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಇಂಗ್ಲೆಂಡ್‌ ಇನ್ನಿಂಗ್ಸ್‌: ಇಂಗ್ಲೆಂಡ್‌ ಪರವಾಗಿ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಸಾಲ್ಟ್‌ 43(26) ಹಾಗೂ ಡಕೆಟ್‌ 32(29) ರನ್‌ ಗಳಿಸಿದರು. ಜೋ ರೂಟ್‌ 19(31) ರನ್‌ ಬಾರಿಸಿ ನಿರ್ಗಮಿಸಿದರೇ, ಹ್ಯಾರಿ ಬ್ರೂಕ್‌ ಶೂನ್ಯ ಸುತ್ತಿದರು.

ಬಳಿಕ ಒಂದಾದ ನಾಯಕ ಬಟ್ಲರ್‌ ಹಾಗೂ ಬೆಥೆಲ್‌ ಅರ್ಧಶತಕ ಬಾರಿಸಿ ಅಲ್ಪ ಬುನಾದಿ ಹಾಕಿದರು. ಬಟ್ಲರ್‌ 52(67), ಬೆಥೆಲ್‌ 51(64) ರನ್‌ ಗಳಿಸಿ ಔಟಾದರು. ಉಳಿದಂತೆ ಲಿವಿಂಗ್‌ಸ್ಟೋನ್‌ 5(10), ಬ್ರೈಡನ್‌ ಕಾರ್ಸ್‌ 10(18), ಆದಿಲ್‌ ರಶೀದ್‌ 8(16), ಮಹ್ಮೂದ್‌ 2(4), ಹಾಗೂ ಜೋಫ್ರಾ ಆರ್ಚರ್‌ ಔಟಾಗದೇ 21(18) ಉಳಿದರು.

ಟೀಂ ಇಂಡಿಯಾ ಪರವಾಗಿ ಹರ್ಷಿತ್‌ ರಾಣಾ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್‌ ಕಬಳಿಸಿದರು. ಕುಲ್ದೀಪ್‌, ಶಮಿ ಹಾಗೂ ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಾಯಕ ರೋಹಿತ್‌ ಶರ್ಮಾ 2(7) ರನ್‌ ಗೆ ಸುಸ್ತಾದರೇ, ಜೈಸ್ವಾಲ್‌ 15(22) ರನ್‌ ಗಳಿಸಿ ಔಟಾದರು. ಬಳಿಕ ಒಂದಾದ ಶ್ರೇಯಸ್‌ ಅಯ್ಯರ್‌ ಮತ್ತು ಗಿಲ್‌ ತಂಡವನ್ನು ಗೆಲುವಿನ ದಡ ಕೊಂಡೊಯ್ದರು. ಅಯ್ಯರ್‌ 59(36) ಅರ್ಧಶತಕ ಗಳಿಸಿ ಔಟಾದರೇ, ಬಳಿಕ ಬಂದ ಅಕ್ಷರ್‌ ಪಟೇಲ್‌ 52(47) ರನ್‌ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು.

ಶುಭ್‌ಮನ್‌ ಗಿಲ್‌ 96 ಎಸೆತಗಳಲ್ಲಿ 14 ಬೌಂಡರಿ ಸಹಿತ 87 ರನ್‌ ಕಲೆಹಾಕಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಕೆ.ಎಲ್‌ ರಾಹುಲ್‌ 2(9), ಹಾರ್ದಿಕ್‌ ಪಾಂಡ್ಯ ಹಾಗೂ ಜಡೇಜಾ ಔಟಾಗದೇ ಕ್ರಮವಾಗಿ 9(6), 12(10) ರನ್‌ ಗಳಿಸಿ ಗೆಲುವಿನ ನಗೆ ಬೀರಿದರು.

ಇಂಗ್ಲೆಂಡ್‌ ಪರ ಮಹಮೂದ್‌ ಹಾಗೂ ರಶೀದ್‌ ತಲಾ ಎರಡು ವಿಕೆಟ್‌, ಆರ್ಚರ್‌ ಹಾಗೂ ಬೆಥೆಲ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

Continue Reading

Sports

ಏಕದಿನ ಮಾದರಿಗೆ ದಿಢೀರ್‌ ನಿವೃತ್ತಿ ಘೋಷಿಸಿದ ಆಸೀಸ್‌ ಆಲ್‌ರೌಂಡರ್‌ ಸ್ಟೋಯ್ನಿಸ್‌

Published

on

ಸಿಡ್ನಿ: ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಅವರು ಅಂತರಾಷ್ಟ್ರೀಯ ಏಕದಿನಕ್ಕೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.

ಇದೇ ಫೆ.19 ರಿಂದ ಪಾಕಿಸ್ತಾನ್‌ ಆಯೋಜಕತ್ವದಲ್ಲಿ ನಡೆಯಲಿರುವ ಚಾಂಪಿಯನ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟೋಯ್ನಿಸ್‌ ದಿಢೀರ್‌ ನಿವೃತ್ತಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಏಕದಿನ ಮಾದರಿಯಿಂದ ನಿವೃತ್ತಿಗೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ T20 ಮಾದರಿಯಲ್ಲಿ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ತಮ್ಮ ಏಕದಿನ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ 35 ವರ್ಷದ ಮಾರ್ಕಸ್‌ ಸ್ಟೋಯ್ನಿಸ್‌.

ಆಸೀಸ್‌ ಪರ 71 ಪಂದ್ಯಗಳಾಡಿ 64 ಬಾರಿ ಬ್ಯಾಟ್‌ ಬೀಸಿರುವ ಸ್ಟೋಯ್ನಿಸ್‌ 93.96 ಸರಾಸರಿಯಲ್ಲಿ 1 ಶತಕ, 6 ಅರ್ಧಶತಕ ಸಹಿತ 1495 ರನ್‌ ಬಾರಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿ 48 ವಿಕೆಟ್‌ ಕಬಳಿಸಿದ್ದಾರೆ. ಇವರು 2019 ರ T20 ವಿಶ್ವಕಪ್‌ ಹಾಗೂ ಭಾರತ ಆಯೋಜಕತ್ವದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ಭಾಗವಾಗಿದ್ದರು.

Continue Reading

Sports

ಚುಟುಕು ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ರಶೀದ್‌ ಖಾನ್‌

Published

on

ನವದೆಹಲಿ: ಆಧುನಿಕ ಕ್ರಿಕೆಟ್‌ ಜಗತ್ತಿನಲ್ಲಿ ಚುಟುಕು ಮಾದರಿಗೆ (ಟಿ20) ಎಲ್ಲಿಲ್ಲದ ಅಭಿಮಾನಿಗಳ ಬಳಗವಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌), ಬಿಗ್‌ಬ್ಯಾಷ್‌ ಲೀಗ್‌(ಬಿಬಿಎಲ್‌), ಪಾಕಿಸ್ತಾನ್‌ ಸೂಪರ್‌ ಲೀಗ್‌ (ಪಿಎಸ್‌ಎಲ್‌), ಎಸ್‌ಎ ಟಿ20 ಸೇರಿದಂತೆ ಜಗತ್ತಿನಾದ್ಯಂತ ಹಲವು ಕಡೆಗಳಲ್ಲಿ ಚುಟುಕು ಮಾದರಿ ತನ್ನದೇ ಛಾಪು ಮೂಡಿಸಿದೆ.

ಈ ಚುಟುಕು ಮಾದರಿಯಲ್ಲಿ ಪ್ರತಿ ಬಾರಿಯೂ ನೂತನ ದಾಖಲೆಗಳು ಆಗುತ್ತಿರುತ್ತದೆ, ಮತ್ತೊಂದೆಡೆ ಆ ದಾಖಲೆಗಳು ಮುರಿಯಲ್ಪಡುತ್ತದೆ. ಇದೇ ನಿಟ್ಟಿನಲ್ಲಿ ಸದ್ಯ ದಕ್ಷಿಣಾ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ ಟಿ20 ಲೀಗ್‌ನಲ್ಲಿ ಅಫ್ಘಾನಿಸ್ತಾನ್‌ ಬೌಲರ್‌ ರಶೀದ್‌ ಖಾನ್‌ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಎಸ್‌ಎ ಟಿ20 ಕ್ವಾಲಿಫೈ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ತಂಡದ ಪರವಾಗಿ ಬೌಲಿಂಗ್‌ ಮಾಡಿದ ರಶೀದ್‌ ಪ್ರಮುಖ ಎರಡು ವಿಕೆಟ್‌ ಕಬಳಿಸಿದರು. ಆ ಮೂಲಕ ಟಿ20ಯಲ್ಲಿ ಅತ್ಯಧಿಕ ವಿಕೆಟ್‌ ಕಬಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಹಿಂದೆ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಅವರು 582 ಪಂದ್ಯಗಳಿಂದ ಬರೋಬ್ಬರಿ 631 ವಿಕೆಟ್‌ ಕಬಳಿಸಿ ಅಗ್ರಸ್ಥಾನದಲ್ಲಿದ್ದರು. ಈ ದಾಖಲೆಯನ್ನು ಮುರಿದಿರುವ ರಶೀದ್‌ ಖಾನ್‌ ಕೇವಲ 461 ಪಂದ್ಯಗಳಿಂದ 633 ವಿಕೆಟ್‌ ಪಡೆದು ವಿಶ್ವದಾಖಲೆ ಬರೆದಿದ್ದಾರೆ.

ಟಿ20 ವಿಭಾಗದಲ್ಲಿ ಅತ್ಯಧಿಕ ವಿಕೆಟ್‌ ಪಡೆದವರಿವರು:

ರಶೀದ್‌ ಖಾನ್‌ (ಅಫ್ಘಾನಿಸ್ತಾನ್‌): 633
ಡ್ವೇನ್‌ ಬ್ರಾವೋ (ವೆಸ್ಟ್‌ ಇಂಡೀಸ್‌): 631
ಸುನೀಲ್‌ ನರೈನ್‌ (ವೆಸ್ಟ್‌ ಇಂಡೀಸ್‌): 573
ಇಮ್ರಾನ್‌ ತಾಹೀರ್‌ (ಸೌಥ್‌ ಆಫ್ರಿಕಾ): 531
ಶಕೀಬ್‌ ಅಲ್‌-ಹಸನ್‌ (ಬಾಂಗ್ಲಾದೇಶ): 492

Continue Reading

Trending

error: Content is protected !!