Connect with us

Chikmagalur

ರಸ್ತೆಗೆ ಬಡಿದ ಸಿಡಿಲು

Published

on

ಮೂಡಿಗೆರೆ : ಜನ್ನಾಪುರದಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಮೇತ ಬಿದ್ದ. ಮಳೆಗೆ ಜನ್ನಾಪುರದ ಶುಭ ನಗರದಲ್ಲಿ ಬಾರಿ ಘಾತ್ರದ ಸಿಡಿಲು ಬಡಿದಿದ್ದು ಸಿಡಿಲಿನ ಹೊಡೆತಕ್ಕೆ ರಸ್ತೆಯೇ ಚಿದ್ರವಾಗಿದೆ. ಇ ಸಿಡಿಲಿನ ಹೊಡೆತದ ರಬಸಕ್ಕೆ ಶುಭ ನಗರದ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದಾರೆ ಎಂದು ಸ್ಥಳೀಯರಾದ ಅವಿನಾಶ್ ಅವರು ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

13 ವರ್ಷದ ಬಾಲಕಿಯ ಹತ್ಯೆ ಪ್ರಕರಣ ಆರೋಪಿ ಬಂಧನ- ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ

Published

on

ಮಂಗಳೂರು: 13 ವರ್ಷದ ಬಾಲಕಿಯ ಹತ್ಯೆ ಪ್ರಕರಣ ಆರೋಪಿ ಬಂಧನ- ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ

ಮಂಗಳೂರು: ಮಂಗಳವಾರ ಜೋಕಟ್ಟೆಯಲ್ಲಿ‌13 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ವಿರೋಧ ವ್ಯಕ್ತಪಡಿಸಿದಾಗ ಆತ ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

 

ಬೆಳಗಾವಿ ಜಿಲ್ಲೆ ಮೂಲದ ಪ್ರಸ್ತುತ ಮಂಗಳೂರಿನ ತೋಕೂರು ಗ್ರಾಮದ ಜೋಕಟ್ಟೆ ಬಾಡಿಗೆ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ(51) ಬಂಧಿತ ಆರೋಪಿ.

ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸ್ತವ್ಯವಿದ್ದರು. ಕೈನೋವಿನ ಚಿಕಿತ್ಸೆಗೆಂದು ಬೆಳಗಾವಿಯಿಂದ ಬಂದಿದ್ದ ಅವರ ಸಹೋದರನ ಪುತ್ರಿ 13ವರ್ಷದ ಬಾಲಕಿ ಕಳೆದ 4ದಿನಗಳಿಂದ ಅವರ ಮನೆಯಲ್ಲಿ ವಾಸ್ತವ್ಯವಿದ್ದಳು. ಆಗಸ್ಟ್ 6ರಂದು ಎಂದಿನಂತೆ ಮನೆಯಲ್ಲಿದ್ದ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 10.30ರ ವೇಳೆಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ಹೇಳಿದ್ದಾರೆ. ಅದರಂತೆ ಅವರು ಫೋನ್ ಕೊಡಲು ಬಂದಾಗ ಬಾಡಿಗೆ ಮನೆಯಲ್ಲಿ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಕಂಡುಬಂದಿದೆ. ವಿಚಾರ ತಿಳಿದು ಹನುಮಂತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫಕೀರಪ್ಪನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಫಕೀರಪ್ಪ ಕಳೆದ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಮೃತ ಬಾಲಕಿಯ ಚಿಕ್ಕಪ್ಪನಿಗೆ ಪರಿಚಿತನಾಗಿದ್ದ. ಆದ್ದರಿಂದ ಜೋಕಟ್ಟೆಯ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಅದೇ ರೀತಿ ಆಗಸ್ಟ್ 6ರಂದು ಬೆಳಗ್ಗೆ ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಬಂದಿದ್ದಾನೆ‌. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

Continue Reading

Chikmagalur

ಮಲೆಮನೆ: ಮರ ಬಿದ್ದು ಮನೆ ಜಖಂ.

Published

on

ಕೊಟ್ಟಿಗೆಹಾರ: ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಮರವೊಂದು ಬಿದ್ದು ಮನೆ ಜಖಂ ಗೊಂಡಿರುವ ಘಟನೆ ನಡೆದಿದೆ.
ಬಾಳೂರು ಹೋಬಳಿಯ ಜಾವಳಿ ಸಮೀಪದ ಮಲೆಮನೆ ಗ್ರಾಮದ ಸುಧಾಕರ್ ಎಂಬವರ ಮನೆ ಮೇಲೆ ಬುಧವಾರ ಮುಂಜಾನೆ ಎಲ್ಲರೂ ಮಲಗಿದ್ದ ವೇಳೆ ಬೃಹತಾಕಾರದ ಬೈನೇಮರ ಬಿದ್ದು ಮನೆಯ ಮೇಲ್ಛಾವಣಿ ಹೆಂಚುಗಳು ಪುಡಿಯಾಗಿ ಹಾನಿ ಸಂಭವಿಸಿದೆ.ಅದೃಷ್ಟವಶಾತ್ ಮಲಗಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಪರಿಹಾರಕ್ಕೆ ಒತ್ತಾಯ: ಸುಧಾಕರ್ ಅವರು ಬಡ ಕುಟುಂಬದಿಂದ ಬಂದಿದ್ದು ಮೂಲತಃ ಕೃಷಿಕರಾಗಿದ್ದಾರೆ.ಬುಧವಾರ ಮರ ಬಿದ್ದು ಮನೆ ಕೂಡ ಜಖಂಗೊಂಡಿದೆ.ಮಳೆಗಾಲವಾದ್ದುದರಿಂದ ಮನೆಯು ಶಿಥಿಲವಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು ಮನೆ ದುರಸ್ತಿಗೆ ಪರಿಹಾರ ನೀಡಬೇಕೆಂದು ಸುಧಾಕರ್ ಆಗ್ರಹಿಸಿದ್ದಾರೆ

Continue Reading

Chikmagalur

ಅಹಿಂದ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ

Published

on

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲದ ಆರೋಪ ಹೊರಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ ಎಂದು ಆರೋಪಿಸಿ ಅಹಿಂದ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಹನುಮಂತಪ್ಪ ವೃತ್ತದಿಂದ ಭಿತ್ರಿ ಪತ್ರಗಳನ್ನು ಹಿಡಿದು ಆಜಾದ್ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಬಿಜೆಪಿ, ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆ ಅಲ್ಲ ಪಾಪದ ಯಾತ್ರೆ. ಎಚ್.ಡಿ.ಕುಮಾರಸ್ವಾಮಿ, ವಿಜಯೇಂದ್ರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಸಾಕಷ್ಟು ಆರೋಪಗಳಿವೆ ಎಂದು ಟೀಕಿಸಿದರು.


ಶಾಸಕ ಎಚ್.ಡಿ.ತಮ್ಮಯ್ಯ, ಶಾಸಕ ಜಿ.ಎಚ್.ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ನಯಾಜ್‌ಅಹ್ಮದ್, ದಲಿತ ಮುಖಂಡರಾದ ಅಣ್ಣಯ್ಯ, ವಸಂತಕುಮಾರ್, ನೇಕಾರ ಒಕ್ಕೂಟದ ಅಧ್ಯಕ್ಷ ನಾರಾಯಣ, ಅಹಿಂದ ಒಕ್ಕೂಟದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮತ್ತಿತರರು ಮಾತನಾಡಿದರು. ಲಕ್ಷ್ಮಣ ಹುಣಸೇಮಕ್ಕಿ, ಭರತ್, ಶಾಂತೇಗೌಡ ಮತ್ತಿತರರಿದ್ದರು.

Continue Reading

Trending

error: Content is protected !!