Connect with us

Hassan

ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪ

Published

on

ಆಲೂರು: ಸತತ ಎಂಟು ಬಾರಿ ತಾಯಿ ಚಾಮುಂಡೇಶ್ವರಿ ದೇವಿಯ ಸೇವೆಯನ್ನ ಮಾಡಿದ ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪವನ್ನು ವ್ಯಕ್ತಪಡಿಸಿದರು.
ಇಡೀ ಕರ್ನಾಟಕದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಎನ್ನುವ ಮಾತನ್ನು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು.


ಇಂತಹ ಒಂದು ದೊಡ್ಡ ಸಮಸ್ಯೆಯನ್ನು ಈ ಭಾಗದ ಜನರು ಹಲವಾರು ವರ್ಷಗಳಿಂದ ಎದುರಿಸಿಕೊಂಡು ಬರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾಡಾನೆ ಮಾನವ ಸಂಘರ್ಷದಿಂದ ಈ ಭಾಗದಲ್ಲಿ ಸಾವು ನೋವುಗಳ ಸುದ್ದಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಎಂದು ಹೇಳಲು ಅತ್ಯಂತ ದುಃಖವೆನಿಸುತ್ತದೆ.
ಈ ಒಂದು ಸಮಸ್ಯೆಯ ಭಾಗವಾಗಿ ನೆನ್ನೆ ಕಾಡಾನೆ ಕಾರ್ಯಾಚರಣೆಗೆ ಇಳಿದಂತಹ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿರುವುದು. ಇತ್ತೀಚಿಗಷ್ಟೇ ಅರವಳಿಕೆ ತಜ್ಞರಾದ ವೆಂಕಟೇಶ್ ರವರನ್ನ ಕಳೆದುಕೊಂಡೆವು ಇಂದು ಆನೆಗಳನ್ನ ಹಿಡಿಯುವ ಬಲಿಷ್ಠವಾದ ಹಾಗೂ ಕಾಡಾನೆ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿದ್ದ ಅದೆಷ್ಟೋ ಊರುಗಳಿಗೆ ಕಾಡು ಪ್ರಾಣಿಗಳಿಂದ ಮುಕ್ತಿಯನ್ನು ನೀಡಿದ ಅರ್ಜುನನನ್ನು ಕಳೆದುಕೊಂಡಿದ್ದೇವೆ. ಕಾಡಾನೆ ಮತ್ತು ಮಾನವ ಸಂಘರ್ಷ ನಿಲ್ಲಲು ಇನ್ನೂ ಅದೆಷ್ಟು ಸಾವು ನೋವುಗಳು ಆಗಬೇಕೋ ಎನ್ನುವುದು ಖಂಡಿತವಾಗಿಯೂ ತಿಳಿಯುತ್ತಿಲ್ಲ ಈ ಮಲೆನಾಡಿನ ಜನರು ಬೆಳಗ್ಗೆ ಎದ್ದಾಕ್ಷಣ ಭಯದ ನೆರಳಿನಲ್ಲಿ ಜೀವನವನ್ನು ನಡೆಸುವಂತೆ ಆಗಿದೆ ಸರ್ಕಾರಗಳು ಬದಲಾಗುತ್ತಿವೆ ಅಧಿಕಾರಿಗಳು ಬದಲಾಗುತ್ತಿದ್ದಾರೆ ಎಲ್ಲವೂ ಬದಲಾಗುತ್ತಿದೆ ಆದರೆ ಮಲೆನಾಡಿನ ಭಾಗಕ್ಕೆ ಕಾಡಾನೆ ಮತ್ತು ಮಾನವರ ಸಂಘರ್ಷ ಬದಲಾಗುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಇಲ್ಲಿ ಸರ್ಕಾರ ವಿಫಲವಾಗಿದೆಯೋ ಅಧಿಕಾರಿಗಳು ವಿಫಲರಾಗಿದ್ದಾರೋ ಅಥವಾ ಮಲೆನಾಡಿನ ಭಾಗವೇ ಎಲ್ಲದರಿಂದ ವಂಚಿತವಾಗಿದೆಯೋ ಆದರೆ ಅದರ ಫಲಿತಾಂಶ ಮಾತ್ರ ಮಲೆನಾಡಿನ ಭಾಗ ಸದಾವಕಾಲ ಸಾವು ನೋವುಗಳನ್ನು ಎದುರಿಸುವಂಥಾಗಿದೆ.


ಸರ್ಕಾರಕ್ಕೆ ಮನವಿ ಮಾಡಿದರು ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದನೆಯಿಲ್ಲ. ಕೊನೆಯದಾಗಿ ಪ್ರತಿಭಟನೆಗಳನ್ನ ಮಾಡಿದರು ಕೂಡ ಸಮಸ್ಯೆಯ ತೀವ್ರತೆಯನ್ನು ಅರಿತುಕೊಳ್ಳದ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಈ ಭಾಗದ ಜನಕ್ಕೆ ಪ್ರಾಮುಖ್ಯತೆಯನ್ನು ನೀಡದಿರುವುದು ಅತ್ಯಂತ ದುರದೃಷ್ಟಕರ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೋರಾಟಗಾರರನ್ನು ಜೈಲಿಗೆ ಕಳಿಸುವಲ್ಲಿ ತೆಗೆದುಕೊಂಡ ಮುತವರ್ಜಿಯನ್ನು ಈ ಕಾಡಾನೆ ಮಾನವ ಸಂಘರ್ಷದ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ತೆಗೆದುಕೊಂಡಿದ್ದರೆ ಬಹುಶಹ ಒಂದಷ್ಟು ಜೀವಗಳನ್ನ ಉಳಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸಿಗುತ್ತಿತ್ತೇನೋ ಸಾಕು ಮಾಡಿ ಇನ್ನಾದರೂ ಮಲೆನಾಡಿನ ಭಾಗದ ಜನಕ್ಕೆ ನೆಮ್ಮದಿಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಅದೇ ರೀತಿ ಮಾತು ಬರದ ಪ್ರಾಣಿ ಆದರೂ ಕೂಡ ಮನುಷ್ಯನ ಜೊತೆ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಂಡು ತಾಯಿ ಚಾಮುಂಡೇಶ್ವರಿಯ ಸೇವೆಯನ್ನು ಮಾಡಿದ ಇಡೀ ಕರ್ನಾಟಕಕ್ಕೆ ಕೀರ್ತಿ ಕಲಶದಂತೆ ಇದ್ದ ಅರ್ಜುನನನ್ನು ಇಂದು ಕಳೆದುಕೊಂಡಿದ್ದೇವೆ. ಅರ್ಜುನನ ಪವಿತ್ರಾತ್ಮಕ್ಕೆ ತಾಯಿ ಚಾಮುಂಡೇಶ್ವರಿ ಚಿರಶಾಂತಿಯನ್ನು ಅನುಗ್ರಹಿಸಲಿ ಎಂದು ಈ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದರು

Continue Reading
Click to comment

Leave a Reply

Your email address will not be published. Required fields are marked *

Hassan

ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಪೋದಾರ್ ಪರಿಸರ ಸ್ನೇಹಿಗಳು

Published

on

ಹಾಸನ: ಬಿ. ಕಾಟಿಹಳ್ಳಿ ದೂರವಾಣಿ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಪಂಚಮುಖಿ ಪಾರ್ಕ್ ಉದ್ಯಾನದಲ್ಲಿ “ವಿಶ್ವ ಪರಿಸರ ದಿನಾಚರಣೆ”ಯ ಅಂಗವಾಗಿ ಪೋದಾರ್ ಪರಿಸರ ಸ್ನೇಹಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಗಣ್ಯರು ಭಾಗಿಯಾಗಿ ಗಿಡ ನೆಟ್ಟು ಸಸ್ಯೋತ್ಸವ ಆಚರಣೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

Continue Reading

Hassan

ಬಿರುಗಾಳಿ ಸಹಿತ ಮಳೆಗೆ ಭಾರೀ ಪ್ರಮಾಣದಲ್ಲಿ ಭೂಕುಸಿತ

Published

on

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾರೀ  ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.

ಈ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ ಗ್ರಾಮದ ಬಳಿ ಶಿರಾಡಿಘಾಟ್ ರಸ್ತೆ ಎನ್‌ಎಚ್‌- 75 ರಲ್ಲಿ ನಡೆದಿದೆ. ಮೊದಲೇ ಭೂಕುಸಿತವಾಗಿದ್ದರಿಂದ ಒಂದು ಬದಿ ರಸ್ತೆ ಸಂಚಾರ ಬಂದ್ ಮಾಡಿದ್ದ ಅಧಿಕಾರಿಗಳು ಇಟಾಚಿ ಮೂಲಕ ನಡೆಯುತ್ತಿದ್ದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಹೀಗಾಗಿ  ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.

ಈ ವೇಳೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದ ಭೂಮಿ ಮರಗಳ ಸಮೇತ ಕುಸಿದು ರಸ್ತೆ ಪೂರ್ತಿ ಜಖಂಗೊಂಡಿದೆ. ಇನ್ನೂ ವಾಹನಗಳ ಸಂಚಾರವನ್ನು ಬಂದ್  ಮಾಡಿದ್ದರಿಂದ  ದೊಡ್ಡ ಅನಾಹುತ ತಪ್ಪಿದೆ.

Continue Reading

Hassan

ಮರಿ ಸತ್ತು ಮೂರು ದಿನವಾದರೂ ಸ್ಥಳ ಬಿಟ್ಟು ಕದಲದ ತಾಯಿಯಾನೆ

Published

on

ಅರೇಹಳ್ಳಿ: ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್‌ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ:

ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು. ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

“ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ” ಎಂದು
ಬೇಲೂರಿನ ಆರ್‌ಎಫ್‌ಒ ಅಧಿಕಾರಿ ಯತೀಶ್ ತಿಳಿಸಿದ್ದಾರೆ.

Continue Reading

Trending

error: Content is protected !!