Connect with us

Hassan

ಮೋದಿ ಪ್ರಧಾನಿಯಾಗಿ ೧೦ ವರ್ಷದ ಸಾಧನೆಯೇ ಗ್ರಾಮ ಚಲೋ ಅಭಿಯಾನ ಸಿದ್ದೇಶ್ ನಾಗೇಂದ್ರ ಹೇಳಿಕೆ

Published

on

ಹಾಸನ: ದೇಶದ ಪ್ರಧಾನಿಯಾಗಿ ೧೦ ವರ್ಷಗಳು ಪೂರೈಸಿದ ಸಾಧನೆಯೇ ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.

ನಗರದ ಖಾಸಗೀ ಹೋಟೆಲೊಂದರಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಫೆಬ್ರವರಿ ೯ ರಿಂದ ಫೆ.೧೧ರ ವರೆಗೂ ದೇಶದಾಧ್ಯಂತ ಗ್ರಾಮ ಚಲೋ ಅಭಿಯಾನದ ಕರಪತ್ರವನ್ನು ಬಿಡುಗಡೆಗೊಳಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಮಂಡಲದ ಅಧ್ಯಕ್ಷರು ಪ್ರಧಾನ ಕಾಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಎಲ್ಲಾ ಸೇರಿ ಫೆಬ್ರವರಿ ೯,೧೦,೧೧ ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯೇಯ ಪುಣ್ಯ ದಿನದ ಅಂಗವಾಗಿ ಜಿಲ್ಲಾ ಸಂಚಾಲಕ, ಸಹ ಸಂಚಾಲಕ ಅಡಿಯಲ್ಲಿ, ಮೂರು ದಿನಗಳ ಕಾಲ ವಿಶೇಷ ದಿನವನ್ನಾಗಿ ಅವಧಿ ಮೀಸಲಿಡಬೇಕು. ಎಲ್ಲಾ ಮಂಡಲ ಅಧ್ಯಕ್ಷರು, ಸ್ವಯಂ ಪ್ರೇರಣೆಯಿಂದ ಕೆಲಸ ಮಾಡೋಣ, ಬೂತ್ ಹಂತ ಹೋದಾಗ ಅಧ್ಯಕ್ಷರ ಗಮನಿಸಿ ಸ್ವಯಂ ಪ್ರೇರಣೆ ಕಾರ್ಯಪ್ರವೃತ್ತರಾಗಬೇಕು. ಹುದ್ದೆ ಇಲ್ಲದಿದ್ದರೆ ಮೋದಿ ಆಸೆ ಇರುವವರ ಪಟ್ಟಿ ಮಾಡಿ, ಸಂಜೆ ಒಳಗೆ ಮಂಡಲ ಅಡಿ ಪಟ್ಟಿ ಪ್ರವಾಸಿ ಕಾರ್ಯಕರ್ತರ ಪಟ್ಟಿ ರೆಡಿ ಮಾಡಿ, ಈ ಅಭಿಯಾನ ಅವರಿಗೆ ಸಮರ್ಪಣೆ ಮಾಡಬೇಕೆಂದರು. ಪ್ರತಿ ಮನೆಮನೆಗೆ ಕೇಂದ್ರದ ಯೋಜನೆ ತಲುಪಿಸೋ ಕೆಲಸ ಆಗಬೇಕು. ೨೦೨೪ಕ್ಕೆ ಮತ್ತೊಮ್ಮೆ ಮೋದಿ ಯಾಕೆ ಬಿಜೆಪಿ ಪ್ರಧಾನಿ ಆಗಬೇಕು ಎಂದು ಅರಿವು ಮೂಡಿಸಬೇಕು. ಸ್ವಯಂ ಪ್ರೇರಣೆಯಾಗಿ ಶಕ್ತಿ ಕೇಂದ್ರಕ್ಕೆ ಕರೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳೀದರು. ಗ್ರಾಮಮಟ್ಟದಲ್ಲಿ ಈ ಕಾರ್ಯಕ್ರಮವು ಭಾನುವಾರ ನಡೆಯಲಿದೆ. ಭಾನುವಾರದಿಂದ ಮೊದಲ ಹಂತದ ತಯಾರಿ ಸಭೆ ಶುರುವಾಗಲಿದ್ದು, ತಿಂಗಳು ಕಡೆಯಲ್ಲಿ ೧೭,೧೮ ರಾಷ್ಟ್ರೀಯ ಕಾರ್ಯಕಾರಿಣಿ ತಯಾರಿ ಚುರುಕು ಆಗಲಿ ಎಂದು ಸಲಹೆ ನೀಡಿದರು.

ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿದೆ ಎಂಬುದಕ್ಕೆ ಸಂಸದರು ಸಹಮತ ಎಂದಿದ್ದಾರೆ. ಅವೆಲ್ಲಾ ಸತ್ಯಕ್ಕೆ ದೂರ. ರಾಷ್ಟ್ರೀಯ ನಾಯಕರ ಚರ್ಚೆ ಆಗಿ ನಮಗೆ ಏನೂ ಸಲಹೆ ಸೂಚನೆ ಬಂದಿರುವುದಿಲ್ಲ. ೨೮ ಕಡೆ ವರಿಷ್ಠರ ನಿರ್ಣಯ ಅಂತಿಮ ಎಂದಿದ್ದಾರೆ. ೨೮ ಬಿಜೆಪಿ ವರಿಷ್ಠರು ತೀರ್ಮಾನಿಸಿದ ಮೇಲೆ ನಮ್ಮ ನಡೆ. ಈ ಹಿಂದೆ ಲೋಕಾಸಭೆ ಚುನಾವಣೆಯಲ್ಲಿ ೨೬೬ ಸೀಟು ಸಾಕು ಎನ್ನುತ್ತಿದ್ದೇವು. ಈಗ ೪೦೦ಕ್ಕೂ ಹೆಚ್ಚು ಸೀಟು ಬರಬೇಕು ಎಂಬುದು ಘೋಷಣೆಯಾಗಿದೆ. ೩೬೬ ಬಿಜೆಪಿಗೆ ಸೀಟು ಸಿಗಲಿದೆ ಎಂದು ಗುಪ್ತಚಾರ ಇಲಾಖೆ ತಿಳಿಸಿದೆ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ದೈರ್ಯ ತುಂಬಿದರು. ಐದೂವರೆ ಶತಮಾನದ ಕನಸ್ಸನ್ನು ಭವ್ಯ ರಾಮಮಂದಿರ ಪ್ರತಿಷ್ಟಾಪನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದರು. ನಮ್ಮ ದೂರುವುದು ಬೇಡ. ಕಾಂಗ್ರೆಸ್ ದುರಾಡಳಿತ ಹೇಳಿ ಸಾಕು. ಕೇಂದ್ರದ ೧೦ ವರ್ಷಗಳ ಯೋಜನೆಯ ಸಾಧನೆ ಬಗ್ಗೆ ಅಭಿನಂದನಾ ಪೋಸ್ಡ್ ಕಾರ್ಡ್ ಮೂಲಕ ಸಾಧನೆ ಕೇಂದ್ರದ ಕಾರ್ಯಾಲಯಕ್ಕೆ ಕಳಿಸೋಣ, ಅಭಿನಂದನೆಗಳು, ಪಕ್ಷದಲ್ಲರಿಗೂ ಕೊಡಿ, ನಮಗೆ ಮುಟ್ಟಿಸಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕಾದ್ರೂ ಮುಟ್ಟಿಸಿ ಎಂದು ಕರೆ ಕೊಟ್ಟರು. ನಮ್ಮ ಸಾಧನೆ ಸಮರ್ಥಿಸಿ ಕೊಳ್ಳಿ, ಮಹಿಳೆಯರು ಸಹ ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ಹೇಳಿ, ಮಾತಾಡದಿದ್ದರೂ ಕರಪತ್ರ ಕೊಟ್ಟು ಬನ್ನಿ. ಈ ಕಾರ್ಯಕ್ರಮಕ್ಕೆ ಕ್ರಿಯಾಶೀಲ ಹುಡುಗರ ತೊಡಗಿಸಿಕೊಂಡು ನಮ್ಮ ಸಾಧನೆ ಹೇಳಿ, ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆಯೂ ಹೇಳಿ ಎಂದ ಅವರು, ೧೧ ಸಾವಿರ ಕೋಟಿ ಎಸ್ಸಿಪಿಟಿ ಬೇರೆ ಯೋಜನೆಯನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಗ್ಯಾರಂಟಿ ಯಾವ ಗ್ಯಾರಂಟಿ ಎಂದು ಪ್ರಶ್ನೆ ಮಾಡಿದರು. ಇನ್ನು ಕೇಂದ್ರದಿಂದ ಒಂದು ಕೆಜಿ ಅಕ್ಕಿ ೨೯ ರೂಗಳಿಗೆ ಶೀಘ್ರದಲ್ಲಿ ಸಿಗಲಿದೆ ಎಂದು ಇದೆ ವೇಳೆ ಕೇಂದ್ರದ ಯೋಜನೆ ಬಗ್ಗೆ ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ಅಕ್ಕಿ ಕೊಡುತ್ತಿರುವವರು ಯಾರು? ನಮ್ಮ ಕಾರ್ಯಕರ್ತರು, ಗ್ರಾಮಗಳ ಪ್ರಮುಖರ ಭೇಟಿ ಮಾಡಬೇಕು. ಕೇಂದ್ರಕ್ಕೆ ಮೋದಿಬೇಕು ಎನ್ನುವ ಜನ ಕಾಂಗ್ರೆಸ್ ನಲ್ಲೂ ಇದ್ದಾರೆ. ಶಿಕ್ಷಕರು, ವಿದ್ಯಾರ್ಥಿ ಪ್ರಮುಖರು ಪೋಸ್ಟ್ ಮ್ಯಾನ್ ಆಶಾ ಕಾರ್ಯಕರ್ತೆಯರ ಭೇಟಿ ಮಾಡಬೇಕು. ಭೂತ್ ಕಮಿಟಿ ಕೆಲಸ ಹೇಗೆ, ಮಂಡಲಕ್ಕೆ ವರದಿ ಕೊಡಬೇಕು ಎಂದರು. ನಗರಸಭೆಯಲ್ಲಿ ಪ್ರತಿ ಬೂತ್? ವಾರ್ಡ್ ಸಂಚಾಲಕ ಮಾಡಬೇಕು, ನಗರ ಕಾರ್ಯ ಕರ್ತರ ಗ್ರಾಮಾಮತರಕ್ಕೂಬಳಕೆ, ಬಳಕೆ ಆಯಾ ಗ್ರಾಮಗಳಿಗೆ ತಲುಪಬೇಕು ನಿಯೋಜಿತ ಪ್ರವಾಸಿ ಕಾರ್ಯಕರ್ತರು ಗ್ರಾಮಸಭೆ, ಬೂತ್ ಸಭೆ ಫೊಟೋ ಅಪ್ ಲೋಡ್ ಮಾಡಬೇಕು, ನಮೋ ಸಹ ನೋಡುತ್ತಾರೆ, ಬಿಜೆಪಿಯ ಎಲ್ಲರೂ ಶ್ರಮ, ಸಮಯ ಕೊಡಬೇಕು ಪ್ರತಿ ೧೫ ದಿನ ರಿವುವ್ಯೂ ಆಗಬೇಕು, ಚುನಾವಣೆ ಮುಗಿಯೋವರೆಗೂ ಆಯಾ ಗ್ರಾಮ ನಿರ್ವಹಣೆ ಕರ್ತವ್ಯ ಎಂದು ಕರೆ ಕೊಟ್ಟರು.

ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಯುವ ಮೋರ್ಚಾದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಸಂಚಾಲಕರಾದ ರಾಕೇಶ್ ಗೌಡ, ಮಾದ್ಯಮ ಸಂಚಾಲಕ ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಫೆ.15 ಮತ್ತು 16 ರಂದು ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ಜಾತ್ರೆ

Published

on

ಸತೀಶ್ ಚಿಕ್ಕಕಣಗಾಲು

ಆಲೂರು: ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಪುರಾಣ ಪ್ರಸಿದ್ಧ ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ದೇವರ ಐತಿಹಾಸಿಕ ಜಾತ್ರೆ ಫೆ.೧೫ ಮತ್ತು ೧೬ ರಂದು ನಡೆಯಲಿದೆ.

ದೇವಸ್ಥಾನದಲ್ಲಿ ಫೆ.೮ ರಿಂದ ೧೭ ರವರೆಗೆ ಉತ್ಸವಗಳು ಮತ್ತು ಅನ್ನ ಸಂತರ್ಪಣೆ ನಡೆಯುತ್ತದೆ. ಇತಿಹಾಸ ಹೇಳುವಂತೆ ಒಬ್ಬ ಕೊರಮನು ಬುಟ್ಟಿ ಹೆಣೆಯಲು ಬಿದಿರು ತರಲು ಹೋಗಿದ್ದನು. ಬಿದಿರು ಮೆಣೆ (ಗುಂಪೊದಕ್ಕೆ) ಕತ್ತಿಯನ್ನು ಹೊಡೆಯುವಾಗ ಆಯತಪ್ಪಿ ಏಟು ಒಂದು ಬಂಡೆಗೆ ತಾಗುತ್ತದೆ. ಆ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ ಇದರಿಂದ ಗಾಬರಿಯಾದ ಅವನು ಪ್ರಜ್ಞೆ ತಪ್ಪಿ ಬೀಳುವನು. ಮನೆಗೆ ವಾಪಾಸು ಬಾರದ ಈತನನ್ನು ಮನೆಯವರು ಹುಡುಕಿಕೊಂಡು ಹೋದರು. ಪ್ರಜ್ಞೆಬಂದ ವ್ಯಕ್ತಿಯು ನಡೆದ ವಿಷಯವನ್ನು ತಿಳಿಸುತ್ತಾನೆ.

ಸ್ಥಳವನ್ನು ಗಮನಿಸಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ.ಆ ಉದ್ಭವ ಮೂರ್ತಿಯನ್ನು ಪಾಳೆಗಾರರಿಂದ ರಕ್ಷಿಸಲೆಂದು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನು ರಂಗನಾಥನೆಂಬ ಹೆಸರಿನಿಂದ ಕರೆಯಲಾರಂಭಿಸಿದರು.

ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು ೪೮ ಹಳ್ಳಿಗಳಿಗೆ ಸಂಬಂಧಿಸಿದ ಈ ಜಾತ್ರೆ ಸಂಕ್ರಾಂತಿ ಹಬ್ಬದ ದಿನದಂದು ಕುಂದೂರು ಹೋಬಳಿ ವ್ಯಾಪ್ತಿಗೊಳಪುಡುವ ಸುಮಾರು ೨೦ ಗ್ರಾಮಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಏಳು ದಿನಗಳ ಮೊದಲು ಬೆಟ್ಟದಲ್ಲಿರುವ ದೇವಾಲಯಕ್ಕೆ ಕರೆತರಲಾಗುತ್ತದೆ.

ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ. ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯುತ್ತದೆ. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಿ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀ ರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.

ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕುವ ವಿಶೇಷ ಪೂಜೆ ಇರುತ್ತದೆ. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರಿನ ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಗುವುದು. ಶನಿವಾರ ಹೊಳೆ ದಡದಲ್ಲಿ ಜಾತ್ರೆ ನಡೆಯುತ್ತದೆ. ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಗೆ ಅಂದರೆ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವ ಸಂದರ್ಭ ನೋಡಲೇಬೇಕಾದುದು. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಿ ಗೌರವಿಸುತ್ತಾರೆ.

ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ತಲೆ ಬೋಳಿಸಿದ್ದ ಪೂಜಾರಿ ತಲೆ ಮೇಲೆ ಇಡಲಾಗುತ್ತದೆ. ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗುತ್ತಿದ್ದ ಕಳಸ ಹೊತ್ತವರು, ನಂತರದಲ್ಲಿ ತಲೆ ಮೇಲಿರುವ ಕಳಸವನ್ನು ಕೈಯಲ್ಲಿ ಹಿಡಿಯದೆ ಓಡಲು ಪ್ರಾರಂಭ ಮಾಡುತ್ತಾರೆ. ಹೊಳೆಯಿಂದ ಸುಮಾರು ೧೦ ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಏಳು ಊರು ಬಾಗಿಲಗಳನ್ನು ದಾಟಿಕೊಂಡು ಕೇವಲ ಮುಕ್ಕಾಲು ಗಂಟೆಯಲ್ಲಿ ತಲುಪುತ್ತದೆ.

ಊರು ಬಾಗಿಲಲ್ಲಿ ಅಕ್ಕಿ ಹಸೆ ಬರೆದು ಹಣ ಹಾಕಿರುತ್ತಾರೆ. ಬಾಗಿಲು ದಾಟುವ ಸಂದರ್ಭದಲ್ಲಿ ಕಳಸ ಹೊತ್ತವರು ತನ್ನ ಗದ್ದದಿಂದ ನೆಲದ ಮೇಲಿಟ್ಟ ಹಣವನ್ನು ಮುಟ್ಟುತ್ತಾರೆೆ. ಕಳಸ ಮುಂದೆ ಹೋದ ಕೂಡಲೆ ನೆರೆದಿದ್ದವರು ಹಸೆ ಅಕ್ಕಿಯನ್ನು ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ನೋಡಲು ಅತ್ಯಂತ ಕುತೂಹಲಕಾರಿಯಾಗಿರುತ್ತದೆ.

ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯುತ್ತದೆ. ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ. ನಂತರ ಯುಗಾದಿ ಹಬ್ಬದ ಸಂದರ್ಭದಲ್ಲಿ ಭರತೂರು ಕಡೆಗೆ ಸೇರುವ ಸುಮಾರು ೧೦ ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ ಮುಜರಾಯಿ ಇಲಾಖೆಗೆ ಸೇರಿದ ಅಡಿಬೈಲು ಶ್ರೀ ರಂಗನಾಥಸ್ವಾಮಿ ದೇವರ ಜಾತ್ರೆ ಫೆ. ೧೫ ರಂದು ಭರತೂರು ಗ್ರಾಮ ಹೇಮಾವತಿ ಹಿನ್ನಿರು ಬದಿಯಲ್ಲಿ ಮತ್ತು ೧೬ ರಂದು ರಂಗನಬೆಟ್ಟದ ಮೇಲೆ ನಡೆಯುತ್ತದೆ ಆಲೂರಿನಿಂದ ೧೮ ಕಿ. ಮೀ. ಮಗ್ಗೆ-ರಾಯರಕೊಪ್ಪಲು ಮಾರ್ಗವಾಗಿ ಪ್ರತಿದಿನ ಸಾರಿಗೆ ಬಸ್ ವ್ಯವಸ್ಥೆ ಇರುತ್ತದೆ ಭಕ್ತರು ಸ್ವಚ್ಚತೆಯನ್ನು ಕಾಪಾಡಬೇಕು ಎನ್ನುತ್ತಾರೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಿ. ಉಮೇಶ್.

Continue Reading

Hassan

ಅರಕಲಗೂಡು: ಗ್ರಾಮಾಡಳಿತ ಅಧಿಕಾರಿಗಳ ಅನಿರ್ದಿಷ್ಟ ಮುಷ್ಕರ

Published

on

ವರದಿ:-ರಾಜೇಂದ್ರ ಸುಹಾಸ್

ಅರಕಲಗೂಡು: ತಾಲೂಕು ಕಛೇರಿಯ ಆವರಣದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ತಾಲೂಕು ಗ್ರಾಮ ಆಡಳಿತ ಅದಿಕಾರಿಗಳ ಸಂಘದ ಪ್ರದೀಪ್ ಮಾತನಾಡಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಇದರ ಬಗ್ಗೆ ಹಿಂದೆ ಪ್ರತಿಭಟನೆಯ ಮೂಲಕವೇ ರಾಜ್ಯ ಸರ್ಕಾರದ ಗಮನವನ್ನ ಸೆಳೆಯಲಾಗಿತ್ತಾದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಸರ್ಕಾರ ರಾಜ್ಯದ ಅಭಿವೃದ್ದಿಗೆ ಹಗಲಿರುಳು ನಮ್ಮನ್ನ ಬಳಸಿಕೊಳ್ಳುತ್ತದೆ. ಆದರೆ ನಮ್ಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಈ ಬಾರೀ ನಮ್ಮಗಳ ಬೇಡಿಕೆಯನ್ನ ಈಡೇರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ತಾಲೂಕು ಕಛೇರಿ ಆವರಣದಲ್ಲಿ ಪ್ರತಿಭಟನಕಾರರು, ತಹಸಿಲ್ದಾರ್ ಮಲ್ಲಿಕಾರ್ಜುನ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

Continue Reading

Hassan

ಅರಕಲಗೂಡು: ಪಟ್ಟಣ ಪಂಚಾಯತಿ ಬಜೆಟ್ ಮಂಡನೆ

Published

on

ವರದಿ: ರಾಜೇಂದ್ರ ಸುಹಾಸ್

ಅರಕಲಗೂಡು: ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ 2025-26 ನೇ ಸಾಲಿನ ಆಯವ್ಯಯದಲ್ಲಿ ಆಧ್ಯತೆ ನೀಡಲಾಗಿದೆ ಎಂದು ಪಪಂಚಾಯಿತಿ ಅಧ್ಯಕ್ಷ ಪ್ರದೀಪ್‌ಕುಮಾರ್ ಆಯವ್ಯಯ ಮಂಡಿಸಿ ಸಭೆಗೆ ತಿಳಿಸಿದರು.

ಪ.ಪಂಚಾಯಿತಿ ಸಭಾಂಗಣದಲ್ಲಿ ಇಂದು ಪಪಂಚಾಯಿತಿ ಅಧ್ಯಕ್ಷ ಪ್ರದೀಪ್‌ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-26 ನೇ ಸಾಲಿನ ಆಯವ್ಯಯವನ್ನ ಮಂಡಿಸಿದ ಅವರು ಪ್ರಾರಂಭ ಶುಲ್ಕ 1,24,37,294 ಸೇರಿಕೊಂಡಂತೆ ಈ ವರ್ಷದ ನಿರೀಕ್ಷಿತ ಆಧಾಯ 18 ಕೋಟಿ 18 ಲಕ್ಷ 26 ಸಾವಿರದ 567 ರೂ.ಗಳು ಸೇರಿ ಒಟ್ಟು 19 ಕೋಟಿ 42 ಲಕ್ಷದ 61 ಸಾವಿರದ 861 ರೂ.ಗಳು ನಿರೀಕ್ಷೆಯಲ್ಲಿದ್ದು, ಖರ್ಚು 19 ಕೋಟಿ 32 ಲಕ್ಷದ 88 ಸಾವಿರದ 295 ನ್ನು ಅಂದಾಜಿಸಿದ್ದು, ಉಳಿತಾಯ 9 ಲಕ್ಷದ 73 ಸಾವಿರದ 566 ರೂಗಳನ್ನ ನಿರೀಕ್ಷಿಸುವ ಮೂಲಕ ಈ ವರ್ಷದ ಪಪಂಚಾಯಿತಿ ಅಯವ್ಯಯ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಸಭೆಗೆ ಅಧ್ಯಕ್ಷರು ಮಂಡಿಸಿದರು. ಆಗ ಸಭೆ ಸರ್ವಾನುಮತದಿಂದ ಅನುಮೋದಿಸಿತು.

ಆಯವ್ಯಯದ ಮುಖ್ಯಾಂಶಗಳು: ಪಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವುದನ್ನ ಗಮನದಲ್ಲಿಟ್ಟುಕೊಂಡು ರಸ್ತೆ, ಶುದ್ದಕುಡಿಯುವ ನೀರು, ಚಿರಂಡಿ, ಉಧ್ಯಾನವನ ಅಭಿವೃದ್ದಿ, ಬೀದಿ ದೀಪ ಹಾಗೂ ಸ್ವಚ್ಚತೆ ಮತ್ತು ಸ್ಮಶಾಣದ ಅಭಿವೃದ್ದಿಗೆ ಹೆಚ್ಚು ಆಧ್ಯತೆಯನ್ನ ನೀಡಲಾಗಿದೆ. ಈ ಬಾರೀ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಧಾನವನ್ನ ಹೆಚ್ಚು ನಿರೀಕ್ಷಿಸಲಾಗಿದ್ದು, ಇದನ್ನ ಹೊರತುಪಡಿಸಿದರೆ ಪಪಂಚಾಯಿತಿಯ ಮಳಿಗೆಗಳ ಆಧಾಯದ ಮೇಲೆ ಹೆಚ್ಚು ಕಣ್ಣಿರಿಸಲಾಗಿದೆ.

ವಿರೋದ ಪಕ್ಷದ ಸಧಸ್ಯರಿಂದ ಶ್ಲಾಘನೆ: ಪ.ಪಂಚಾಯಿತಿಯ ಆಯವ್ಯಯ ಮಂಡಿಸಿದ ನಂತರ ಬಿ.ಜೆ.ಪಿ. ಸಧಸ್ಯೆ ರಶ್ಮಿ ಸಭೆಯನ್ನ ಉದ್ದೇಶಿಸಿ ಮಾತನಾಡಿ ಪ್ರತೀ ವರ್ಷಗಳಿಗಿಂತಲೂ ಈ ವರ್ಷ ಉತ್ತಮ ಆಯವ್ಯಯವನ್ನ ಮಂಡಿಸಿದ್ದೀರಿ, ನಿಮಗೆ ಶುಭವಾಗಲೀ, ಪಟ್ಟಣದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ಆಧ್ಯತೆ ನೀಡಬೇಕಿತ್ತು ಎಂದು ಸಭೆಯಲ್ಲಿ ತಿಳಿಸಿದಾಗ ಅಧ್ಯಕ್ಷರು ತಮ್ಮ ನಿರೀಕ್ಷೆಯಂತೆ ಫುಡ್‌ಕೋರ್ಟ್ ನಿರ್ಮಾಣಕ್ಕೆ ಈಗಾಗಲೇ ಅಂದಾಜು ವೆಚ್ಚವನ್ನ ತಯಾರಿಸಿ ಕಾಮಗಾರಿ ಟೆಂಡರ್ ಹಂತಕ್ಕೆ ತಲುಪಿದೆ, ಶೀಘ್ರದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಪರ್ತಕರ್ತರ ಆರೋಗ್ಯ ನಿಧಿ ಸ್ಥಾಪನೆ: ಇದೇ ಪ್ರಪ್ರಥಮ ಭಾರಿಗೆ ಪಪಂಚಾಯಿತಿಯ ಆಯವ್ಯಯದಲ್ಲಿ ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸಿ ನಿಧಿಗೆ ೫೦ ಸಾವಿರ ಹಣವನ್ನ ಮೀಸಲಿರಿಸಿದ್ದಾರೆ.

ಇಂದಿನ ಆಯವ್ಯಯದಲ್ಲಿ ಪತ್ರಕರ್ತರಿಗೆ ನೀಡಿದ ಸಹಾಯ ಹಸ್ತಕ್ಕೆ ಪತ್ರಕರ್ತರು ಪಪಂಚಾಯಿತಿ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯಲ್ಲಿ ಪಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು ಠಾಕಪ್ಪ ಶಿಗ್ಗಾವಿ, ಉಪಾಧ್ಯಕ್ಷ ಸುಭಾನ್ ಷರೀಫ್, ಉಪಸ್ಥಿತರಿದ್ದರು. ಅಕೌಂಟೆಂಟ್ ವಿಮಲಶಂಕರ್ ಸಭೆಯಲ್ಲಿ ಸ್ವಾಗತ ಮಾಡಿದರು.

Continue Reading

Trending

error: Content is protected !!