Connect with us

State

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟನೆ

Published

on

ಬೆಂಗಳೂರು ಜೂ1: ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆಯಲ್ಲಿ ತಪ್ಪಿತಸ್ಥರು ಎಂದು ಗೊತ್ತಾದರೆ ಎಲ್ಲರ ವಿರುದ್ದವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ರಚಿಸಲಾಗಿದ್ದು ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ನಾವು ಕಾನೂನು ಪಾಲಕರು

ಬಿಜೆಪಿ ಯವರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ ಸಿವಿಲ್ ಸ್ವರೂಪದ ಪ್ರಕರಣ ಇದಾಗಿದೆ. ಕಾನೂನು ರಕ್ಷಕರಾಗಿ, ಪಾಲಕರಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಇಂದು ನಾನು ನ್ಯಾಯಾಧೀಶರ ಮುಂದೆ ಹಾಜರಾಗಿದ್ದೇನೆ. ಜಾಮೀನು ಪಡೆದಿದ್ದೇನೆ ಎಂದರು.

ನನ್ನನ್ನು, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧವೂ ಖಾಸಗಿ ದೂರು ದಾಖಲಾಗಿತ್ತು. ರಾಹುಲ್ ಗಾಂಧಿಯವರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

State

ಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!

Published

on

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತನ್ನ 2025–26ನೇ ಸಾಲಿನ ಅಪ್ರೆಂಟೀಸ್‌ಶಿಪ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಒಟ್ಟು 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು
* ಅಧಿಸೂಚನೆ ಪ್ರಕಟಣೆ: 06 ಫೆಬ್ರವರಿ 2026
* ಆನ್‌ಲೈನ್ ಅರ್ಜಿ ಆರಂಭ: 12 ಫೆಬ್ರವರಿ 2026
* ಕೊನೆಯ ದಿನಾಂಕ: 02 ಮಾರ್ಚ್ 2026

ಹುದ್ದೆಗಳ ವಿವರ:
•ಹುದ್ದೆ ಶ್ರೇಣಿ: ಎಂಜಿನಿಯರಿಂಗ್ ಗ್ರಾಜುಯೇಟ್ (E&E)
* ಹುದ್ದೆಗಳ ಸಂಖ್ಯೆ: 130
* ಬೇರೆ ಎಂಜಿನಿಯರಿಂಗ್ ಹಾಗೂ ಸಾಮಾನ್ಯ ಪದವಿ ಗ್ರಾಜುಯೇಟ್: 315
* ಡಿಪ್ಲೊಮಾ ಹೋಲ್ಡರ್ಸ್: 75
* ಒಟ್ಟು ಹುದ್ದೆಗಳು: 520

ಅರ್ಹತಾ ಮಾನದಂಡ
* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
* ಅಭ್ಯರ್ಥಿಗಳು 2021 ನಂತರ ಶಿಕ್ಷಣ ಪೂರ್ಣಗೊಳಿಸಿರುವವರಾಗಿರಬೇಕು.

ಸ್ಟೈಪೆಂಡ್:
ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ₹9,000/-
ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ ₹8,000/-
(ಪ್ರತಿ ತಿಂಗಳಿಗೆ)

ಆಯ್ಕೆ ಮಾಪನ:
ಯಾವುದೇ ಲಿಖಿತ ಪರೀಕ್ಷೆ ಇಲ್ಲ; ಆಯ್ಕೆ ಮೆರಿಟ್ ಆಧಾರಿತ, ಅಂದರೆ ಪದವಿ/ಡಿಪ್ಲೊಮಾ ಅಂಕಗಳನ್ನು ಆಧರಿಸಿ.
ಆಯ್ಕೆಯಾಗಿದ್ದವರಿಗೆ ದಾಖಲೆ ಪರಿಶೀಲನೆ ನಡೆಯುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
* ಆಸಕ್ತ ಅಭ್ಯರ್ಥಿಗಳು BESCOM ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯಲ್ಲಿ ನಿಮ್ಮ ವಿದ್ಯಾರ್ಹತೆ, ಗುರುತಿನ ದಾಖಲೆಗಳು, ಫೋಟೋ ಮತ್ತು ಸಹಿ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕು.
•ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ಯುವಕರಿಗೆ ಈ ನೇಮಕಾತಿ ಅದ್ಭುತ ಅವಕಾಶವಾಗಿದ್ದು, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಕೆಲಸವನ್ನು ಪಡೆಯುವ ಸುವರ್ಣಾವಕಾಶ ಇದಾಗಿದೆ.

Continue Reading

Special

ದಂತ ಭಾಗ್ಯ ಯೋಜನೆ, ಹಿರಿಯರ ಆರೋಗ್ಯಕ್ಕೆ ಸರ್ಕಾರದ ಭರವಸೆ.

Published

on

ಹಿರಿಯ ನಾಗರಿಕರು ಇಳಿವಯಸ್ಸಿನಲ್ಲಿ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದಾಗಿದೆ. ಈ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಹಿರಿಯ ನಾಗರಿಕರಿಗೆ ಗುಣಮಟ್ಟದ ದಂತ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿದೆ.

ಯೋಜನೆಯಡಿ ದೊರೆಯುವ ಸೌಲಭ್ಯಗಳು:
ದಂತ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಗಳ ಜೋಡಣೆ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಬಳಸುವ ಉಪಕರಣಗಳು ಉನ್ನತ ಗುಣಮಟ್ಟದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ದೀರ್ಘಕಾಲ ಬಳಕೆಗೆ ಬರುತ್ತವೆ.

ಅರ್ಹತಾ ಮಾನದಂಡಗಳು:
ಈ ಯೋಜನೆಯ ಲಾಭ ಪಡೆಯಲು 45 ವರ್ಷ ಮೇಲ್ಪಟ್ಟವರು ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಅರ್ಹರಾಗಿರುತ್ತಾರೆ. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.

ಸೇವೆ ಲಭ್ಯವಿರುವ ಸ್ಥಳಗಳು:
ರಾಜ್ಯಾದ್ಯಂತ ಇರುವ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರದಿಂದ ಗುರುತಿಸಲ್ಪಟ್ಟ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

ಯೋಜನೆಯ ಸಾಧನೆ:
ಈವರೆಗೆ 41,218ಕ್ಕೂ ಹೆಚ್ಚು ಹಿರಿಯ ನಾಗರಿಕರು ದಂತ ಭಾಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಯೋಜನೆಯ ಯಶಸ್ಸು ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ.

ದಂತ ಭಾಗ್ಯ ಯೋಜನೆ ಹಿರಿಯರ ಆರೋಗ್ಯವನ್ನು ಕಾಪಾಡುವ ಜೊತೆಗೆ ಅವರ ಜೀವನಕ್ಕೆ ಹೊಸ ಸಂತೋಷವನ್ನು ತರುವ ಅತ್ಯುತ್ತಮ ಯೋಜನೆಯಗಿದ್ದು, ಹಿರಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು.

Continue Reading

Politics

ರಾಜ್ಯ ಸರ್ಕಾರದಿಂದ ಮೆಟ್ರೋ ಟಿಕೆಟ್‌ ಏರಿಕೆ: ತೇಜಸ್ವಿ ಸೂರ್ಯ 

Published

on

ಬೆಂಗಳೂರು: ರಾಜ್ಯ ಸರ್ಕಾರದಿಂದಲೇ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದ್ದು, ಸರ್ಕಾರವೇ ದರ ಏರಿಕೆ ‌ಮಾಡಿ ಕೇಂದ್ರದ ಮೇಲೆ ಆರೋಪ ಮಾಡಿದೆ ಎಂದು ಸಿಎಂ, ಡಿಸಿಎಂ ‌ನಿತ್ಯ ಡ್ರಾಮಾ ಮಾಡುತ್ತಾ ಇದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಬಿಜೆಪಿ  ಕಚೇರಿಯಲ್ಲಿ ಇಂದು ಈ  ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಪದೇ ಪದೇ ಕೇಂದ್ರಕ್ಕೆ ಪತ್ರ ಬರೆದು ಫೇರ್ ಫಿಕ್ಸ್ ಸಮಿತಿ ಮಾಡಬೇಕೆಂದು ಒತ್ತಾಯ ಮಾಡಿದರು. ಅದರಂತೆ ಸಮಿತಿಯನ್ನು ಕೇಂದ್ರ ಮಾಡಿದೆ. ಈ ಫೇರ್ ಫಿಕ್ಸ್ ಸಮಿತಿ ಈಗ ದರ ಏರಿಕೆ ಮಾಡಿರೋದು. ಇದಕ್ಕೂ ಕೇಂದ್ರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೆಟ್ರೋ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಎಂಒಯು ಆಗಿದೆ. ರಾಜ್ಯ ಸರ್ಕಾರದ ಆಗ್ರಹದ ಮೇಲೆಯೇ ದರ ಏರಿಕೆ ಆಗಿರೋದು , ರಾಜ್ಯ ಸರ್ಕಾರ ದಿವಾಳಿ ಆಗಿದೆ. ಹೀಗಾಗಿ ಜನರಿಗೆ ಏರಿಕೆ ಬರೆ ಹಾಕಿದ್ದಾರೆ. ಬಡವರು ಮೆಟ್ರೋದಲ್ಲಿ ಓಡಾಡದಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ‌ಸೋಮವಾರದಿಂದ ಆಗುತ್ತಿರೋ ಮೆಟ್ರೋ ‌ಟಿಕೆಟ್ ದರ ನಿಲ್ಲಿಸಬೇಕು. ನಾಳೆ (ಫೆ.8) ಈ‌ ಸಂಬಂಧ ‌ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ಫೇರ್ ಫಿಕ್ಸ್ ಕಮಿಟಿ ‌ಮಾಡಿ ಎಂದು ರಾಜ್ಯ ಸರ್ಕಾರ ‌ಪತ್ರ ಬರೆದರೆ ಅದನ್ನು ಹೋಲ್ಡ್ ನಲ್ಲಿ ಇಡಬೇಕು. ರಾಜ್ಯ ಸರ್ಕಾರ ಸಮಿತಿ ಬೇಕೆಂದು ಪತ್ರ ಬರೆದರೆ ತಕ್ಷಣವೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಬೇಕೆಂದು ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರದ ಸಚಿವರು ಒಪ್ಪಿದ್ದಾರೆ ಎಂದಿದ್ದಾರೆ.

ದರ‌ ಏರಿಕೆ ವಿರುದ್ದ ಕೇಂದ್ರ ಸರ್ಕಾರ ಸುಮೋಟೋ ತೀರ್ಮಾನ ಮಾಡಲು ಸಾಧ್ಯವಿಲ್ಲ. ರಾಜ್ಯ-ಕೇಂದ್ರದ ನಡುವೆ MOU ಆಗಿದೆ. ಇದನ್ನ ಬಿಟ್ಟು ಸುಮೋಟೋವಾಗಿ ಏನೋ ನಿರ್ಧಾರ ಮಾಡಲು ಆಗೊಲ್ಲ. ಸಿಎಂ,‌ ಡಿಸಿಎಂ ನಿತ್ಯ ‌ಮೀಡಿಯಾದಲ್ಲಿ ಸುಳ್ಳು ಹೇಳ್ತಾ ಇದ್ದಾರೆ. ನಾಚಿಕೆ ಆಗೊಲ್ಲವಾ ಇವರಿಗೆ. ಈ‌ ಸರ್ಕಾರದವರು ಏನ್ ತಿನ್ನುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಜನರು ‌ಸಿಎಂ ಹಾಗೂ ಡಿಸಿಎಂ ಮೇಲೆ ಒತ್ತಡ ಹಾಕಬೇಕು. ಹೊಸ ಫೇರ್ ಫಿಕ್ಸ್ ಕಮಿಟಿ ಮಾಡಲು ಕೇಂದ್ರಕ್ಕೆ ಪತ್ರ ಬರೆಯಲು ಒತ್ತಾಯ ‌ಮಾಡಬೇಕೆಂದು ಜನರಿಗೆ ಸಲಹೆ ನೀಡಿದರು. ಸಂಸದನಾಗಿ ನಾನು ಕೇಂದ್ರದ ಸಚಿವರ ಜೊತೆ ‌ಮಾತಾಡಿದ್ದೇನೆ. ಮೆಟ್ರೋ ಮುಂದೆ ಪ್ರತಿಭಟನೆ ‌ಮಾಡಿದ್ದೇನೆ. ಡಿಸಿಎಂ ಭೇಟಿಯಾಗಿ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೋರ್ಟ್ ನಲ್ಲಿ ಹೋರಾಟ ಮಾಡಿದ್ದೇನೆ. ಇದಕ್ಕಿಂತ ಹೆಚ್ಚು ಸಂಸದನಾಗಿ ಮಾಡೋಕೆ ಏನು ಸಾಧ್ಯ? ಎಲ್ಲವೂ ಕೋರ್ಟ್‌‌ನಿಂದಲೇ ಆಗೊಲ್ಲ. ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ. ಇದನ್ನ ಮೊದಲು ನಿಲ್ಲಿಸಬೇಕು. ಕೂಡಲೇ ಹೊಸ ಫೇರ್ ಫಿಕ್ಸ್ ಸಮಿತಿ ಮಾಡಿ ಎಂದು ಸಿಎಂ,‌ ಡಿಸಿಎಂ ಅವರು ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಒತ್ತಾಯ ಮಾಡಿದ್ದಾರೆ.

Continue Reading

Trending

error: Content is protected !!