Connect with us

Hassan

ಇಂದಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಶ್ರೀರಾಮನ ಆದರ್ಶ ಬೆಳೆಸಿ

Published

on

ಆರ್.ಎಸ್.ಎಸ್. ಪ್ರಮುಖ ವಿಜಯಕುಮಾರ್ ಕರೆ

ಹಾಸನ: ಶ್ರೀರಾಮನ ಆದರ್ಶ ಮತ್ತು ಸೀತೆಯ ಗುಣಗಳನ್ನು ಪ್ರಸ್ತೂತದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಲ್ಲಿ ಬೆಳೆಸಬೇಕೆಂದು ಆರ್.ಎಸ್.ಎಸ್. ಪ್ರಮುಖರಾದ ವಿಜಯಕುಮಾರ್ ಕರೆ ನೀಡಿದರು.

ನಗರದ ರಂಗೋಲಿಹಳ್ಳದ ಬಳಿ ಇರುವ ಜಿಲ್ಲಾ ಕುರುಹಿನಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘ ಹಾಗೂ ಜಿಲ್ಲಾ ನೇಕಾರರ ಕುರುಹಿನಶೆಟ್ಟಿ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅಯೋಧ್ಯಾ ಶ್ರೀರಾಮಲೀಲಾ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಶ್ರೀರಾಮನ ಭಜನೆ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ೫೦೦ ವರ್ಷದ ಹೋರಾಟದ ಭಾವನೆಯಲ್ಲಿ ಪ್ರಾಣಕೊಟ್ಟಂತಹ ಜೀವಗಳು ಯಾರು ನಮ್ಮ ಕಣ್ಣಮುಂದೆ ಇಲ್ಲದಿದ್ದರೂ ಸ್ವರ್ಗದಿಂದ ರಾಮಮಂದಿರ ನಿರ್ಮಾಣದ ಉದ್ಘಾಟನೆ ನೋಡುತ್ತಿದ್ದಾರೆ. ಈಸುಸಂದರ್ಭದಲ್ಲಿ ನಾವೆಲ್ಲರೂ ಸೇರಿ ಭಜನೆಯನ್ನು ಮಾಡಿದ್ದೇವೆ. ಶ್ರೀರಾಮನ ಆದರ್ಶ, ಸೀತಾಮಾತೆಯ ಗುಣಗಳನ್ನು ನಾವೆಲ್ಲರೂ ಪಾಲನೆ ಮಾಡಿಕೊಂಡು ಹೋಗೋಣ ಎಂದರು. ಈದೇಶ, ಧರ್ಮ, ಸಮಾಜ ಇವೆಲ್ಲವು ಸನ್ನಾಗಿರಲಿ ಎನ್ನುವ ದೃಷ್ಠಿಯಿಂದ ನಾವೆಲ್ಲರೂ ಈ ಸಮಾಜಕ್ಕೆ ಕೊಡುಗೆ ಕೊಡುವಂತೆ ಕೆಲಸ ಮಾಡಬೇಕು. ಈ ತಾಯಿ ಭಾರತ ಮಾತೆ ಮಡಿಲಲ್ಲಿ ಶ್ರಿರಾಮನ ಮಂದಿರ ಉದ್ಘಾಟನೆ ಆಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಹಿಂದೂ ಸಮಾಜ ಇನ್ನು ಉತ್ತಮವಾಗಿ ಆಗಬೇಕು ಎಂದು ಕಿವಿಮಾತು ಹೇಳಿದರು. ಇಂತಹ ಪುಣ್ಯ ದಿನದಂದು ಮಹಿಳೆಯರು ಬಹುತೇಕ ಶ್ರೀರಾಮನ ಭಜನೆ ಮಾಡಲಾಗಿದ್ದು, ಇಂತಹ ಗುಣಗಳನ್ನು ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಲ್ಲಿ ಈ ಭಾವನೆ ಬೆಳೆಸುವುದು ಮುಖ್ಯವಾಗಿದೆ ಎಂದು ಸಲಹೆ ನೀಡಿದರು. ೧೭೮೦ನೇ ಇಸವಿಯಲ್ಲಿ ಕಾಳರಾಮನ ದೇವಸ್ಥಾನ ಮಹರಾಷ್ಟ್ರದಲ್ಲಿ ಉದ್ಘಾಟನೆಯಾಗಿದ್ದು, ಆಗ ವ್ಯವಸ್ಥೆ ಇದ್ದು, ಆ ದೇವಸ್ಥಾನಕ್ಕೆ ಹೋಗುವಾಗಿಲ್ಲ. ೧೯೩೦ನೇ ಇಸವಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇನ್ನೊಬ್ಬರೂ ಸೇರಿ ನೇತೃತ್ವವಹಿಸಿ ಕಾಳರಾಮನ ದೇವಸ್ಥಾನದ ಒಳಗೆ ಹೋಗಲು ನಿಶ್ಚಯ ಮಾಡಿದ್ದು, ಸುಮಾರು ೧೫ ಸಾವಿರ ಜನ ಸೇರಿ ಗುಡಿಗೆ ಹೋಗಲು ಪ್ರಯತ್ನ ಮಾಡಲಾಯಿತು. ನಿಮಗೇನು ದೇವಸ್ಥಾನಕ್ಕೆ ಹೋಗಲು ನಿಮಗೇನು ಹುಚ್ಚು ಬಂದಿದಿಯಾ ಎಂದು ಅಂಬೇಡ್ಕರ್ ಅವರಿಗೆ ಎಲ್ಲಾರು ಕೇಳಿದರು. ಇದಕ್ಕೆ ಉತ್ತರಿಸಿದ ಅಂಬೇಡ್ಕರ್ ನಾನು ಯಾವ ದೇವಸ್ಥಾನವಾದರೂ ಹೋಗುತ್ತಿರಲಿಲ್ಲ. ಏಕೆಂದರೇ ಕಾಳರಾಮನಗುಡಿಯಲ್ಲಿ ರಾಮನಿದ್ದಾನೆ. ಆ ರಾಮನ ಆದರ್ಶ ಇಡೀ ಸಮಾಜಕ್ಕೆ ಬರಲಿ. ಆರಾಮ ಎಲ್ಲಾರಿಗೂ ಕಾಣಲಿ ಎಂದು ಅದರ ನೇತೃತ್ವವನ್ನು ನಾನುವಹಿಸಿದ್ದೇನೆ. ಅದಕ್ಕೆ ನಂಗೆ ಸಂತೋಷವಿದೆ. ಇದನ್ನೆಲ್ಲ ಗಮನಿಸಿದರೇ ಡಾ|| ಬಿ.ಆರ್. ಅಂಬೇಡ್ಕರ್ ಕೂಡ ರಾಮ ಭಕ್ತರಾಗಿದ್ದರು ಎನ್ನುವುದು ತಿಳಿಯುತ್ತದೆ. ದೇವಾಲಯಕ್ಕೆ ಪ್ರವೇಶದ ಹೋರಾಟವೇ ಕಾರಣ ಎಂದು ಹಿಂದಿನ ಘಟನೆಯನ್ನು ಮೆಲಕು ಹಾಕಿದರು. ಶ್ರೀರಾಮ ಕ್ಷತ್ರಿಯನ್ನಾಗಿದ್ದರೂ ಸಹ ಎಲ್ಲಾ ವರ್ಗದ ಜನರು ರಾಮನನ್ನು ಮತ್ತು ಅವರ ಆದರ್ಶವನ್ನು ಪೂಜೆ ಮಾಡುತ್ತಾರೆ ಎಂದು ಹೇಳಿದರು.

ಇದೆ ವೇಳೆ ಹಿಂದೂಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಶೆಟ್ಟಿ, ಕಾರ್ಯಾಧ್ಯಕ್ಷ ಸಣ್ಣೇಗೌಡ, ಉಪಾಧ್ಯಕ್ಷ ರಾಮಶೆಟ್ಟಿ, ಜಕ್ಕೇನಹಳ್ಳಿ ಮೋಹನ್ ಕುಮಾರ್, ಕಾರ್ಯಕಾರಣಿ ಸದಸ್ಯರು ಮತ್ತು ಪದಾಧಿಕಾರಿಗಳಾದ ೧೧ನೇ ವಾರ್ಡಿನ ರಾಮಭಕ್ತರು ಪ್ರವೀಣ್, ರಾಮೇಗೌಡ, ಲಕ್ಷ್ಮಿಕಾಂತ್, ಗಿರೀಶ್, ಮೋಹನ್, ರವಿಕುಮಾರ್, ಭರತ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.

ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ‌’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾ‌ರ್ ತಿಳಿಸಿದರು.

ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.

Continue Reading

Hassan

ಅಟಲ್ ವಿರಸತ್ ಕಾರ್ಯಕ್ರಮ: ಒಡನಾಟ ಉಳ್ಳ ಹಿರಿಯರಿಗೆ ಬಿಜೆಪಿಯಿಂದ ಸನ್ಮಾನ

Published

on

ಹಾಸನ: ನಗರದ ಆರ್.ಸಿ.ರಸ್ತೆ, ಶ್ರೀಗಂಧದ ಕೋಠಿ ಆವರಣದಲ್ಲಿರುವ ಖಾಸಗೀ ಹೋಟೆಲೊಂದರಲ್ಲಿ ಗುರುವಾರ ನಡೆದ ಅಟಲ್ ವಿರಸತ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಾಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ಹಿರಿಯರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ಅಟಾಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್ ಮಾತನಾಡಿ, ಅಟಾಲ್ ಜೀ ಅವರು ಎಲ್ಲೆಲ್ಲಿ ಬಂದಿದ್ದರೂ, ಅವರ ಒಡಾಟ, ಹೋರಾಟಗಳು, ಸಂಘಟನೆಗಳು, ಅವರ ವ್ಯಕ್ತಿತ್ವ, ಒಡನಾಟ, ಅವರ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳು, ಅವರ ನೆನಪಿನ ಸ್ಪೂರ್ತಿಯನ್ನು ಸಂಗ್ರಹ ಮಾಡುವಂತಹ ಪೋಟೊ ಸಂಗ್ರಹಿಸುವ ಜೊತೆಗೆ ಯಾರು ಅಟಾಲ್ ಬಿಹಾರಿ ಜೊತೆ ಒಡನಾಟವಿತ್ತು ಅವರನ್ನು ಗುರುತಿಸಿ ಗೌರವಿಸುವ ಕೆಲಸ ನಾವು ಕಳೆದ ಒಂದು ತಿಂಗಳಿನಿಂದ ಮಾಡಿಕೊಂಡು ಈ ಹಿಂದೆಯೇ ಬಂದಿದ್ದೇವೆ ಎಂದರು.

ಅಟಲ್‌ ಜೀ ಪ್ರೇರಣೆಯನ್ನು ಕಾರ್ಯಕರ್ತರು ಪಡೆದಿದ್ದಾರೆ. ನಾವು ಯಾವ ದಿಕ್ಕಿನಲ್ಲಿ ರಾಜಕಾರಣ ಮಾಡಬೇಕು ಎನ್ನುವ ದಿಕ್ಸೂಜಿ ನಮಗೆ ತೊರಿಸುತ್ತದೆ ಎಂದು ಕಿವಿಮಾತು ಹೇಳಿದರು. ರಾಜಕಾರಣದಲ್ಲಿ ಕೆಲಸ ಮಾಡುವ ನಾವು ಯಾವುದು ಆದರ್ಶ ಎಂಬುದನ್ನು ತಿಳಿದಿರಬೇಕು. ಯಾವ ಮಾರ್ಗದರ್ಶನ ತಿಳಿದಿರಬೇಕು ಬಗ್ಗೆ ಜಾಗೃತಿ ಅಗತ್ಯ ಎಂದು ಸಲಹೆ ನೀಡಿದರು.

ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ವಾಜಪೇಯಿ ಕಾಲದಿಂದಲೂ ಹೋರಾಟ ಮಾಡಿದವರು ನಮ್ಮ ಸಕಲೇಶಪುರದಲ್ಲಿ ಮತ್ತು ಈ ಜಿಲ್ಲೆಯಲ್ಲಿ ಹಲವಾರು ಜನರು ಇದ್ದಾರೆ. ಬಿಜೆಪಿಯಲ್ಲಿ ಹಾಸನಕ್ಕೆ ಉತ್ತಮವಾದ ಸ್ಥಾನಮಾನವಿದೆ. ಹಿಂದಿನ ದಿನಗಳಲ್ಲಿ ಎಮರ್ಜನ್ಸಿ ಕಾಲದಲ್ಲಿ ಜೈಲಿಗೆ ಹೋಗಿದಾಗಿನಿಂದ ಹಿಡಿದು ವಾಜಪೇಯಿ ಜೊತೆ ಪಾರ್ಟಿ ಕಟ್ಟಿರುವ ಹಲವಾರು ಜನರು ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆ ಎಂದರು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು

Published

on

ಹಾಸನ: ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವೃದ್ಧೆ ಓರ್ವಳು ಡಿಸಿ ಕಛೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣಿರು ಹಿಟ್ಟಿದ ಪ್ರಸಂಗ ನಡೆಯಿತು.

ನಂತರ ಮಾನವಿಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.

ಅರಸೀಕೆರೆ ತಾಲೂಕಿನ ಕಣಕಟ್ಟೆಹಳ್ಳಿ ಗ್ರಾಮದ ನಂಜುಂಡಮ್ಮ ಎಂಬುವರೇ ನನಗೆ ರಕ್ಷಣೆ ನೀಡಿ ನನ್ನ ಆಸ್ತಿ ನಮಗೆ ಕೊಡಿಸುವಂತೆ ಮನವಿ ಮಾಡಿದ ವೃದ್ಧೆಯಾಗಿದ್ದಾರೆ. ನಡೆಯಲು ಸಾಧ್ಯವಾಗದೇ ತೆವಲುತ್ತಲೆ ಡಿಸಿ ಕಛೇರಿಗೆ ಬಂದಿದ್ದು, ಈ ವೇಳೆ ತಹಸೀಲ್ದಾರ್ ವಿಚಾರಿಸಿದಾಗ ಆಕೆ ಹೇಳಿದ್ದು ಕೇಳಿ ಅಧಿಕಾರಿಗಳು ಬೇಸರಗೊಂಡರು.

ತಹಸೀಲ್ದಾರ್ ಎದುರು ಮಾತನಾಡಿದ ವೃದ್ಧೆ, ನಮ್ಮ ಗ್ರಾಮದ ರಾಜ, ಪಾಲಾಕ್ಷಮ್ಮ, ದಿವ್ಯ, ಯೋಗೇಶ್, ಜ್ಯೋತಿ, ನಂಜುಂಡೇಗೌಡ, ಬಸವರಾಜಪ್ಪ, ಬಸವರಾಜ ಹೆಂಡತಿ ತಾಯಮ್ಮ, ಬಸವರಾಜ, ತಾಯಮ್ಮನ ಮಕ್ಕಳುಗಳು ಇಬ್ಬರು ಗಂಡು ಮಕ್ಕಳು, ಯೋಗೇಶ್‌ನ ಎರಡು ಹೆಣ್ಣು ಮಕ್ಕಳು, ಶಾರದಮ್ಮ, ಸ್ವಾಮಿ, ಭಾಗ್ಯ, ಶೇಖರ, ಹಾಗೂ ಶೇಖರನ ಹೆಂಡತಿ ಜ್ಯೋತಿ, ಹಾಗೂ ಅವರ ಮಗ, ಇವರುಗಳು ಸೇರಿಕೊಂಡು ನನ್ನನ್ನು ಗ್ರಾಮ ಬಿಡಿಸಿ ನನ್ನ ಆಸ್ತಿ ಲಪಟಾಯಿಸಲು ಹಾಗೂ ದೇವರುಗಳಾದ ಟಿ.ಕೋಡಿಹಳ್ಳಿ ದ್ಯಾವಮ್ಮ, ತಳ್ಳುರಮ್ಮ, ಚೌಡೇಶ್ವರಿ, ಪಂಡಿತರು, ಕಲ್ಲು ಮಕಾಡೆ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರದಂತೆ ಹೋಗದಂತೆ ದೊಣ್ಣೆ, ಹಾಗೂ ಮಚ್ಚು. ಎಲ್ಲ ಹಿಡಿದುಕೊಂಡು ನನಗೆ ಬೆದರಿಕೆ ಹಾಕುತ್ತಿರುತ್ತಾರೆ ಎಂದು ದೂರಿದರು.

ನಾನು ಸುಮಾರು ಬಾರಿ ಅರ್ಜಿಯನ್ನು ಎಲ್ಲಾ ಅಧಿಕಾರಿಗಳಿಗೆ ಕೊಟ್ಟರು ಸಹ ಯಾರು ನ್ಯಾಯ ಕೊಡಿಸುತ್ತಿಲ್ಲ. ಎಸ್.ಪಿ. ಸಹ ಬರುವುದಿಲ್ಲವೆಂದು ನನಗೆ ತುಂಬಾ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ನನ್ನ ಜಮೀನನ್ನು ನನಗೆ ಬಿಡಿಸಿಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಅರಸೀಕೆರೆ ತಹಸೀಲ್ದಾರರಲ್ಲಿ ಕೈಮುಗಿದು ವೃದ್ಧೆ ಬೇಡಿದರು.

Continue Reading

Trending

error: Content is protected !!