Connect with us

Hassan

ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

Published

on

ಹಾಸನ: ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಿ ತಕ್ಕ ಶಾಸ್ತಿನೀಡಬೇಕೆಂದು ಆಗ್ರಹಿಸಿ ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಕಾರ್ಯನಿರತ ಸಂಘಟನೆ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕಳೆದ ವರ್ಷ ಡಿಸೆಂಬರ್ ೨೬ ದಂದು ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮವನ್ನು ನೆರೆವೇರಿಸುವ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಈ ಉತ್ಸವವು ಪ್ರತೀವರ್ಷ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಕೆಲವು ದುಷ್ಕರ್ಮಿಗಳು ಪೂರ್ವನಿಯೋಜಿತ ಷಡ್ಯಂತ್ರ್ಯವನ್ನು ಮಾಡಿ, ಸದರಿ ಉತ್ಸವದಲ್ಲಿ ದೊಂಬಿ, ಗಲಾಟೆ ಮಾಡಿ, ಶ್ರೀ ನಂಜುಂಡೇಶ್ವರ ದೇವರಿಗೆ ಧಿಕ್ಕಾರ ಕೂಗಿ, ಉತ್ಸವ ಆಚರಣೆಗೆ ಭಂಗ ತರುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿ, ಉತ್ಸವ ಮೂರ್ತಿಯನ್ನು ಅಪವಿತ್ರ ಮಾಡಿದ್ದಾರೆ ಎಂದರು. ಈ ಘಟನೆಯು ಅತ್ಯಂತ ಗಂಭೀರವಾಗಿದ್ದು, ರಾಜ್ಯದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಫಾಸಿಯುಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಘಟನೆಯನ್ನು ಖಂಡಿಸಿ, ಭಕ್ತರು ಮತ್ತು ಸ್ಥಳಿಯರು ಸ್ವಯಂಪ್ರೇರಿತರಾಗಿ ಶಾಂತಿಯುತ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಪೋಲೀಸರು ಅಪರಾಧಿಗಳನ್ನು ಬಂಧನ ಮಾಡುವ ಬದಲು ಶಾಂತಿಯುತ ಪ್ರತಿಭಟನೆ ಮಾಡಿದ ಭಕ್ತರ ಮೇಲೆ ದೂರು ದಾಖಲು ಮಾಡಿರುವುದು ಖಂಡನೀಯವಾಗಿದೆ. ಕೂಡಲೇ ಸರಕಾರವು ಎಚ್ಚೆತ್ತು ಈ ಉತ್ಸವಕ್ಕೆ ಅಡ್ಡಿಪಡಿಸಿದ ಅಪರಾಧಿಗಳನ್ನು ಕೂಡಲೇ ಬಂಧನ ಮಾಡಿ ಅವರಿಗೆ ತಕ್ಕ ಶಾಸ್ತಿಯನ್ನು ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅಷ್ಟೇ ಅಲ್ಲದೇ ಈ ಘಟನೆಯ ನಂತರ ಅನೇಕ ಹಿಂದೂ ವಿರೋಧಿಗಳು ಶ್ರೀ ಶ್ರೀಕಂಠೇಶ್ವರ ದೇವರ ಬಗ್ಗೆ ಅತ್ಯಂತ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಪಮಾನ ಮಾಡಿದ್ದಾರೆ. ಅವರ ಮೇಲೂ ಸಹ ಕಠಿಣ ಕ್ರಮ ಜರುಗಿಸಬೇಕೆಂದು ವಿನಂತಿ. ಬಿ.ಎಮ್. ನಾಗೇಶ್ ಎನ್ನುವವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ “ಕಬಿನಿ ನದಿಯಲ್ಲಿ ಜಳಕವಾಡುವ ೯೦% ಅಧಿಕ ಹೆಚ್ಚು ಜನ ಉಚ್ಚೆ ಉಯ್ಯುತ್ತಾರೆ. ನದಿಯುದ್ದಕ್ಕೂ ವಾಸವಿರುವ ಜನತಿಕ ತೊಯ್ಯುತ್ತಾರೆ. ಧನ ಮತ್ತು ಬಟ್ಟೆ ತೊಳೆಯುತ್ತಾರೆ. ಅದೇ ನೀರನ್ನು ದಿನನಿತ್ಯ ಆರ್ಚಕರು ತಂದು ನಂಜುಂಡನಿಗೆ ಅಭಿಷೇಕ ಮಾಡುತ್ತಾರೆ. ನೀರನ್ನು ಎರಚಿದರು ಸಹ ನಂಜುಂಡನಿಗೇಕೆ ಮೈಲಿಗೆಯಾಗುತ್ತದೆ? ಎಂದು ಕೆಟ್ಟದಾಗಿ ಭಕ್ತರ ಭಾವನೆಗೆ ಘಾಸಿಯಾಗುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಶ್ರೀನಂಜ ದೇವರಿಗೆ ಅಪಮಾನವಾಗುವ ರೀತಿಯಲ್ಲಿ ಬರೆದಿದ್ದಾರೆ. ಇವರ ಮೇಲೆ ಸಹ ಕಾನೂ ಜರುಗಿಸಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಹಿಂದೂಜನಜಾಗೃತಿ ಸಮಿತಿಯ ಗೋವಿಂದರಾಜು, ಶ್ರೀ ಸುಬ್ರಮಣ್ಯ ದೇವಸ್ಥಾನದ ಹೆಚ್.ಬಿ. ನವೀನ್ ಕುಮಾರ್, ಶ್ರೀ ಕಾಳಿಕಾಂಬ ದೇವಸ್ಥಾನದ ರಾಜಾ ವೆಂಕಟೇಶ್, ಸುಬ್ರಮಣ್ಯ ದೇವಸ್ಥಾನದ ಬಿ. ರಾಜೇಂದ್ರನ್, ನಗರ ಬ್ರಾಹ್ಮಣ ಸಭಾದ ಪಿ.ಎಸ್. ವೆಂಕಟೇಶ್, ಉತ್ತರಮುಖಿ ದೇವಸ್ಥಾನದ ರಾಘವಚಾರ್, ಶ್ರೀ ಶನೇಶ್ವರ ದೇವಸ್ಥಾನದ ವಾಸು, ಶ್ರೀ ಆಂಜನೇಯ ದೇವಸ್ಥಾನದ ಸುರೇಶ್ ಗೌಡ, ಶ್ರೀ ಸರಸ್ವತಿ ದೇವಸ್ಥಾನದ ರವಿಕುಮಾರ್, ಶ್ರೀ ಕಾಳಿಕಾಂಬ ದೇವಾಲಯದ ಹೆಚ್.ಆರ್. ನಾಗೇಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ವೀರಶೈವ ಲಿಂಗಾಯತ ಧರ್ಮ ಸಮಾನತೆ ನೀಡಿದೆ: ಈಶ್ವರ್‌ ಖಂಡ್ರೆ

Published

on

ಹಳೇಬೀಡು : ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಸಮಾನತೆ ನೀಡಿರುವುದು ವೀರಶೈವ ಲಿಂಗಾಯತ ಧರ್ಮ ಅದನ್ನು ಮಠಮಾನ್ಯಗಳು ಮುಂದುವರಿಸುತ್ತಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಹಿರಿಯ ಉಪಾಧ್ಯಕ್ಷರು ಮತ್ತು ಮಹಾ ಪ್ರಧಾನ ಕಾರ್ಯದರ್ಶಿಗಳು ಹಾಗೂ  ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

ಪಟ್ಟಣದ ಪುಷ್ಪಗಿರಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ಘಟಕಗಳ ಪದಾಧಿಕಾರಿಗಳಿಗೆ ಎರಡು ದಿನದ ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ಸಮಾಜದ ಎಲ್ಲಾ ಧರ್ಮದವರಿಗೂ ಮತ ಪಂಥದವರಿಗೂ ವಿದ್ಯೆ, ಅನ್ನ ,ಸಂಸ್ಕಾರ ಕೊಟ್ಟಿರುವಂತಹ ಧರ್ಮ ವೀರಶೈವ ಧರ್ಮ ಈ ಧರ್ಮದ ತತ್ವಗಳು ಕೇವಲ ವೀರಶೈವದರಿಗೆ ಮಾತ್ರವಲ್ಲದೆ ಇಷ್ಟಲಿಂಗ ಪೂಜಿಸುವ ಎಲ್ಲರೂ ಕೂಡ ಈ ಸಂಸ್ಕಾರ ದೊರೆಯುತ್ತದೆ ಇಷ್ಟಲಿಂಗ ಪೂಜೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ವ್ಯಕ್ತಿಯಲ್ಲಿ ಏಕಾಗ್ರತೆಯ ಜ್ಞಾಪಕ ಶಕ್ತಿ ಹೆಚ್ಚಿಸುವ ವೈಜ್ಞಾನಿಕ ಶಕ್ತಿ ಇದೆ, ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ವೀರರಶೈವ ಲಿಂಗಾಯತ ಧರ್ಮದ ಸಾರಾಂಶ ಹಡಗಿದೆ ಎಂದು ಹೇಳಿದರು .

ವೀರಶೈವ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ : ವೀರಶೈವ ಲಿಂಗಾಯಿತರಲ್ಲಿ ಒಗ್ಗಟಿನ ಬಹುದೊಡ್ಡ ಕೊರತೆಯಿದೆ ಅದು ನಮ್ಮ ಸವಾಲಾಗಿದೆ ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವವರೆಲ್ಲರೂ ಲಿಂಗಾಯಿತರಾಗಿರುವುದರಿಂದ ಒಳಪಂಗಡದ ಒಡಕುಗಳನ್ನ ಬಿಟ್ಟು ವೀರಶೈವ ಲಿಂಗಾಯತ ಧರ್ಮವನ್ನು ಕಟ್ಟುವಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.

ಪುಷ್ಪಗಿರಿಯಲ್ಲಿ ಟ್ರೀ ಪಾರ್ಕ್: ಪುಷ್ಪಗಿರಿ ಇಷ್ಟೊಂದು ಎತ್ತರವಾಗಿ ಬೆಳೆಯಲು ಪರಮಪೂಜ್ಯ ಶ್ರೀ ಸೋಮಶೇಖರ ಸ್ವಾಮೀಜಿಯವರ ಅವಿರತ ಪರಿಶ್ರಮ ಕಾರಣವಾಗಿದ್ದು ಈ ಭಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಒಂದು ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ಆನೆ ಕಾಟಕ್ಕೆ ಶಾಶ್ವತ ಪರಿಹಾರ: ಮಾನವ ಮತ್ತು ಪ್ರಾಣಿ ಸಂಘರ್ಷ ಅನಾದಿಕಾಲದಿಂದಲೂ ಇದೆ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಕೂಡ ನಮ್ಮ ಜವಾಬ್ದಾರಿಯಾಗಿದೆ ಕರ್ನಾಟಕದಲ್ಲಿ 6500 ಆನೆಗಳಿದ್ದು ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿದೆ ದೇಶದಲ್ಲಿ ಸುಮಾರು 565 ಹುಲಿಗಳು ಇದ್ದು ಇದರಲ್ಲಿ 60 ರಿಂದ 80 ಆನೆಗಳು ಅರಣ್ಯದ ಹೊರ ಭಾಗದಲ್ಲಿ ವಾಸ ಮಾಡುತ್ತಿವೆ ಕಾರಣ ಈ ಭಾಗದಲ್ಲಿ ನೀರು ಆಹಾರ ಪ್ರಾಣಿಗಳಿಗೆ ಸಿಗುತ್ತಿರುವುದರಿಂದ ಆನೆಗಳ ವರ ವಲಯದ ವಾಸ ಮಾನವ ಮತ್ತು ಪ್ರಾಣಿ ಸಂದರ್ಶಕ್ಕೆ ಕಾರಣವಾಗಿದೆ.

ಮನುಷ್ಯ ಪ್ರಾಣಿ ಗಳ ಜೊತೆ ಸಹ ಬಾಳ್ವೆ ಕೊರತೆಯಿಂದ ಪ್ರಾಣಿಗಳ ದಾಳಿಗೆ ತುತ್ತಾಗಿ ಮರಣ ಹೊಂದುವರ ಸಂಖ್ಯೆ ಹೆಚ್ಚಾಗುತ್ತಿದೆ ಇವುಗಳನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಆನೆ ಕಾರ್ಯಪಡೆ ರೇಡಿಯೋ ಕಾಲರ್ ವಯರ್ಲೆಸ್ ಡ್ರೋನ್ ಕ್ಯಾಮರಗಳ ಮೂಲಕ ಅವುಗಳ ಚಲನವಲನಗಳನ್ನು ಗಮನಿಸಿ ಅವುಗಳ ದಾಳಿಯನ್ನು ತಡೆಯುವ ಪ್ರಯತ್ನವನ್ನ ಶಾಶ್ವತವಾಗಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ವೀರಶೈವ ಲಿಂಗಾಯಿತ ಎರಡು ಒಂದೇ: ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರ ಶಿವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ ಮಹದೇವ ಬಿದರಿ ಮಾತನಾಡಿ ವೀರಶೈವ ಲಿಂಗಾಯತ ಎಂಬುದು ಬೇರೆಯಲ್ಲ ಎರಡು ಒಂದೇ ಆದರೆ 2017 ರಿಂದ ಈಚೆಗೆ ಈ ರೀತಿಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಗಂಡನೀಯ ವೀರಶೈವ ಲಿಂಗಾಯಿತ ಧರ್ಮದ ಒಗ್ಗಟ್ಟನ್ನು ಹೊಡೆಯುವಲ್ಲಿ ಮಠಾಧೀಶರು ಬೇರೆಬೇರೆ ಅರ್ಥ ತರುವುದು ಬೇಸರದ ಸಂಗತಿ ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೂ ಎಲ್ಲರೂ ನಡೆದರೆ ವೀರಶೈವ ಲಿಂಗಾಯತ ಧರ್ಮ ಮತ್ತಷ್ಟು ಗಟ್ಟಿಯಾಗಿ ಕಟ್ಟಬಹುದು ಎಂದರು.

ಬಸವ ತತ್ವ ಪ್ರಚಾರ ಪ್ರತಿಯೊಬ್ಬರ ಹಕ್ಕು: ಬಸವ ತತ್ವ ಬಸವ ಸಂಸ್ಕಾರ ಇಷ್ಟಲಿಂಗ ಪೂಜೆ ಎಲ್ಲವೂ ಕೂಡ ಬಸವ ತತ್ವದ ಅಡಿಯಲ್ಲೇ ಬರುತ್ತದೆ ಇದನ್ನ ಪ್ರಚಾರ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಕೂಡ ಇಲ್ಲ ಹಾಗೆ ಬಸವ ತತ್ವದಲ್ಲಿ ಯಾವುದು ಭಿನ್ನಾಭಿಪ್ರಾಯಗಳು ಇಲ್ಲ ಬಸವ ತತ್ವ ವೀರಶೈವ ಸಮಾಜ ಬೆಳೆಸಲು ಒಂದು ಆಯುಧ ವಿದ್ದಂತೆ ಅದನ್ನ ಮಾಡುವುದು ಪ್ರತಿಯೊಬ್ಬ ವೀರಶೈವ ಲಿಂಗಾಯತರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಶ್ರೀ ಸೋಮಶೇಖರ ಸ್ವಾಮೀಜಿ ಅವರು ಮಾತನಾಡಿ, ಎಲ್ಲಿಯವರೆಗೆ ಸಮಾಜ ವಿಭಜಕ ಶಕ್ತಿಗಳು ಕ್ರಿಯಾಶೀಲವಾಗಿರುತ್ತವೆ ಅದನ್ನು ತಡೆಯುವ ದೊಡ್ಡ ಕಾರ್ಯಪಡೆ ವೀರಶೈವ ಲಿಂಗಾಯತ ಮಹನೀಯರ ಧರ್ಮದಾಗಬೇಕು ಇಂದಿನ ಮೈಸೂರು ವಿಭಾಗ ಮಟ್ಟದ ಪದಾಧಿಕಾರಿಗಳಿಗೆ ಎರಡು ದಿನದ ಕಾರ್ಯಗಾರ ಮುಖ್ಯ ಉದ್ದೇಶ ಗುರಿ ವೀರಶೈವ ಲಿಂಗಾಯತ ಧರ್ಮವನ್ನು ಬಲಪಡಿಸುವ ನಿಟ್ಟಿನಲ್ಲಿ ಜಾಗೃತಿ ಮತ್ತು ಅನುಷ್ಠಾನದ ಗುರಿಯಾಗಿದ್ದು ಅದರಲ್ಲಿ ನಾವು ಸಂಪನ್ನರಾಗಿದ್ದೇವೆ ಈ ಒಂದು ಕಾರ್ಯಗಾರಕ್ಕೆ ಶ್ರಮಿಸಿದ ಎಲ್ಲ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೂ ಮುಖಂಡರಿಗೂ ಕೃತಜ್ಞತೆ ಮತ್ತು ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಪರಮೇಶ್ ನವಿಲೇ ಅವರು ಮಾತನಾಡಿ ಹಾಸನ ಜಿಲ್ಲೆಯಲ್ಲಿ ಪ್ರಸ್ತುತ 8000 ವೀರಶೈವ ಲಿಂಗಾಯತ ಸದಸ್ಯತ್ವ ಹೊಂದಿದ್ದು ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿದ್ದು ಅದನ್ನು ಪೂರ್ಣಗೊಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದ ಮಹಿಳಾ ವಿಭಾಗದ ಅಧ್ಯಕ್ಷರಾದ ವೀಣಾ ಕಾಶಪ್ಪನವರ್, ಮಹಿಳಾ ಘಟಕದ ಹಾಸನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಮತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯ ಸಮಿತಿ ಸದಸ್ಯ ಗ್ರಾನೇಟ್‌ ರಾಜಶೇಖರ್‌, ಬೇಲೂರು ತಾಲೂಕು ವೀರಶೈವ ಘಟಕದ ಅಧ್ಯಕ್ಷ ಅಡಗೂರು ಬಸವರಾಜ್, ಯುವ ಘಟಕದ ಅಧ್ಯಕ್ಷ ಚೇತನ್, ಮುಖಂಡ ಅದ್ದೂರಿ ಕುಮಾರ್ ಮುಂತಾದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಗಳು

1.ರಾಜ್ಯದಲ್ಲಿ ಪೂರ್ಣ ರಚನೆಯಾಗದೆ ಉಳಿದಿರುವ ಘಟಕಗಳ ಶೀಘ್ರವಾಗಿ ರಚನೆ ಮಾಡುವುದು
2.ಮುಂಬರುವ ಜಾತಿಗಣತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಹಾಗೂ ರಾಜ್ಯ ಘಟಕಗಳು ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಎಲ್ಲಾ ಬಂದವರು ಬದ್ಧರಾಗಿರುವುದು
3. ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಅರ್ಹರಿಗೆ ದೊರೆಯುವಂತೆ ಕಾರ್ಯಕ್ರಮವನ್ನು ರೂಪಿಸುವುದು
4.ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಬಾಂಧವರಿಗೆ ಹೆಚ್ಚಿನ ಅವಕಾಶವನ್ನು ನೀಡಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಮಹಾಸಭಾ ಒತ್ತಾಯಿಸಬೇಕು .
5. ಸಮಸ್ತ ವೀರಶೈವ ಲಿಂಗಾಯತರೆಲ್ಲರೂ ಒಂದೇ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

Continue Reading

Hassan

ಕಾರ್ಯನಿರತ ಪತ್ರಕರ್ತರ ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ಉತ್ತಮವಾಗಿದೆ: ಎಂ. ಚಂದ್ರೇಗೌಡ ಶ್ಲಾಘನೆ

Published

on

ಹಾಸನ: ಸಮಾಜದಲ್ಲಿ ನಾವು ವಿವಿಧ ಚಳುವಳಿ, ಆರೋಗ್ಯ ತಪಾಸಣೆ, ಪೌರಕಾರ್ಮಿಕರು ಹಾಗೂ ಇತರರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮ ಏರ್ಪಡಿಸುವುದನ ನೋಡಿದ್ದೇವೆ. ಆದರೆ ಜನನಿ ಪೌಂಢೇಷನ್ ವಿಭಿನ್ನ ರೀತಿ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಹಾನಗರಪಾಲಿಕೆ ಪೌರರಾದ ಎಂ. ಚಂದ್ರೇಗೌಡ ಶ್ಲಾಘನೆ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜನನಿ ಪೌಂಢೇಷನ್ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಮಾಧ್ಯಮ ಮಿತ್ರರಿಗೆ ಗೌರವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅನೇಕ ಚಳುವಳಿಗಳು, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ಎಲ್ಲಾವನ್ನು ಗಮನಿಸಿದ್ದೇವೆ. ಜನನಿ ಪೌಂಢೇಶನ್ ಮೂಲಕ ಹಲವಾರು ಕಾರ್ಯಕ್ರಮಗಳ ಮಾಡಲಾಗಿದ್ದು, ಎಲ್ಲಾರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೀರಿ. ಪತ್ರಕರ್ತರಿಗೆ ಮಾಡುತ್ತಿರುವ ಸನ್ಮಾನ ಇದು ನಮ್ಮ ಹಾಸನಕ್ಕೆ ತಂದ ಗೌರವ. ಪತ್ರಕರ್ತರು ಎಂದರೇ ಅವರಿಗೆ ಬಿಡುವೆ ಇರುವುದಿಲ್ಲ. ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅಂತವರನ್ನ ಗುರುತಿಸಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ . ಇದು ದೇವರು ಮೆಚ್ಚುವ ಕೆಲಸ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಹೊಟ್ಟೆ ಹಸಿದವರಿಗೆ ಜಗತ್ತು ಗೊತ್ತು. ಹೊಟ್ಟೆ ತುಂಬಿದವರಿಗೆ ನೀವು ಏನೆ ಹೇಳಿದರೂ ಕೂಡ ಜಗತ್ತಿನ ಯಾವುದೇ ಅರ್ಥವಾಗುವುದಿಲ್ಲ. ಒಂದು ತಲೆ ಮಾರಿನ ಹಿಂದೆ ಬಗ್ಗೆ ತಿಳಿದರೇ ಕಷ್ಟದ ಬಗ್ಗೆ ತಿಳಿದಿತ್ತು. ಪ್ರಸ್ತೂತದಲ್ಲಿ ಮ್ಯಾಜಿಕ್ ಚಪ್ಪಳಿಗಳೆಲ್ಲಾ ಮನೆಯಲ್ಲಿ ಇದ್ದು, ಇವತ್ತಿನ ಸಂದರ್ಭ, ಕಾಲಘಟ್ಟ ಬದಲಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ನಿಮ್ಮ ಅಜ್ಜ, ಅಜ್ಜಿ, ಮುತ್ತಾತ ಪಟ್ಟ ಕಷ್ಟಗಳು ಇಂದು ಇಲ್ಲ. ಇಡೀ ಮನೆ ಒಳಗೆ ಇಡೀ ಸಂಸಾರ ಇರುತಿತ್ತು. ತುಂಬಿದ ಮೌಲ್ಯಗಳು ಇರುತಿತ್ತು. ಈಗ ಎಲ್ಲಾವೂ ಕೂಡ ದೂರವಾಗಿದೆ. ಎಲ್ಲಾವು ಸಿಕ್ಕರೂ ಸಹ ಮಾನವೀಯ ಗುಣಗಳ, ಮೌಲ್ಯಗಳು ಖಂಡಿತ ಇಂದು ಇಲ್ಲ. ಆಧುನಿಕ ಪ್ರಪಂಚದಲ್ಲಿ ಓಡುತ್ತಿದ್ದೇವೆ. ಆದರೇ ಮಾನವಿಯತೆ ಮರೆಯುತ್ತಿದ್ದೇವೆ ಎಂದು ವಿಷಾಧಿಸಿದರು. ಮೊದಲು ಮಾನವಿಯತೆ, ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ಮಾಡಿದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.

ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಇವತ್ತು ಪರಿಸ್ಥಿತಿ ತೀರ ಕೆಟ್ಟು ಹೋಗಿದ್ದು, ಹವಮಾನ ವೈಫರಿತ್ಯದಿಂದ ನಷ್ಟ ಅನುಭವಿಸಬೇಕಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಇತರೆ ದೇಶಗಳ ಯುದ್ಧ ನಡೆಯುತ್ತಿದೆ. ನಮ್ಮ ಭಾರತ ದೇಶವು ವಿಶ್ವಶಾಂತಿಗಾಗಿ ಹೆಚ್ಚಿನ ರೀತಿ ಮುಂದಾಗಿದೆ. ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಲು ಪ್ರತಿಯೊಬ್ರರೂ ಮುಂದಾಗಬೇಕು. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ಕಸಾಪ ಗೌರವಾಧ್ಯಕ್ಷ ರವಿನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಲೀಲಾವತಿ, ಗಿರಿ ಮೆಡಿಕಲ್ಸ್ ಮಾಲೀಕರಾದ ಗಿರೀಗೌಡ, ಶ್ರೀ ರಂಗನಾಥ ಪ್ರೌಢಶಾಲೆ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಮಾಧ್ಯಮ ದಿನಾಚರಣೆಯನ್ನು ಪ್ರತಿವರ್ಷ ನಾವು ಹಮ್ಮಿಕೊಳ್ಳುವುದು ಸಾಮಾನ್ಯ. ಆದರೇ ಜನನಿ ಪೌಂಢೇಶನ್ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಇತ್ತಿಚಿನ ದಿನಗಳಲ್ಲಿ ನಮ್ಮ ಮಾಧ್ಯಮದಲ್ಲೂ ಕೆಲ ನ್ಯೂನ್ಯತೆಗಳಿವೆ. ಆದರೇ ಇಡೀ ಒಟ್ಟು ಸಮಾಜದಲ್ಲಿ ಮಾನವಿಯವಾಗಿ ಸಮಾಜ ಬೆಳಗುವ ಕೆಲಸ ಮಾಡುತ್ತಿರುವುದು ಪತ್ರಕರ್ತರು ಮಾತ್ರ ಎಂದು ತಮ್ಮ ವಯಕ್ತಿಕ ಅಭಿಪ್ರಾಯ ಎಂದರು.

ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ನಡೆಯುತ್ತಿರುವ ಅನಚಾರ ಬೇಸರವಾಗುತ್ತದೆ. ಯಾವುದಕ್ಕೂ ಮೌಲ್ಯವೇ ಇಲ್ಲದ ಸಂದರ್ಭ ಕಾಣುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಊಹಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಇನ್ನು ಪ್ರಕೃತಿ ವಿಕೋಪಕ್ಕೆ ಇಡೀ ಮನೆಯ ತಳಪಾಯವೇ ತೇಲಿ ಹೋಯಿತು. ಅಭಿವೃದ್ಧಿ ಹೆಸರಿನಲ್ಲಿ ಮೌಲ್ಯವು ಇಲ್ಲದ ರೀತಿ ನಡೆದುಕೊಳ್ಳುತ್ತಿದ್ದಾರೆ. ಮೊದಲು ಮೌಲ್ಯವನ್ನು ಬೆಳೆಸಿಕೊಂಡು ಮಾನವಿಯ ರೀತಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಇವ್ತತು ಮಾಧ್ಯಮದ ಲೋಕದಲ್ಲೂ ಕೂಡ ತುಂಬ ಅಲ್ಲೋಲ್ಲಕೊಲ್ಲಾಲ ನಡೆಯುತ್ತಿದ್ದು, ಸಿಕ್ಕಿದವರನೆಲ್ಲಾ ವರದಿಗಾಗಿ ಕಳುಹಿಸುತ್ತಾರೆ. ಮೌಲ್ಯಗಳೆ ಇಲ್ಲದಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಜನನಿ ಪೌಂಢೇಶನ್ ಸಂಸ್ಥಾಪಕರಾದ ಹೆಚ್.ಎಸ್. ಭಾನುಮತಿ ಇತರರು ಉಪಸ್ಥಿತರಿದ್ದರು.

 

Continue Reading

Hassan

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಸ್ಪರ್ಧೆ

Published

on

ಹಾಸನ: 79ನೇ ವರ್ಷದ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ನಗರದ ಕುವೆಂಪು ನಗರ ಫೀಲ್ಡ್ ಮಾರ್ಷಲ್ ಕರಿಯಪ್ಪ ಉದ್ಯಾನವನದ ಬಳಿ ಇರುವ ಜಿಲ್ಲಾ ಮಾಜಿ ಸೈನಿಕರ ಸಂಘದವತಿಯಿಂದ ಸೈನಿಕ ಹಾಗು ಮಾಜಿ ಸೈನಿಕರ ಮಕ್ಕಳಿಗೆ ಭವನದಲ್ಲಿ ಕ್ವಿಜ್, ಚಿತ್ರಕಲಾ ಸ್ಪರ್ಧೆ ಮತ್ತು ಭಾಷಣ ಸ್ಪರ್ದೆಯನ್ನು ಭಾನುವಾರ ಹಮ್ಮಿಕೊಳ್ಲಲಾಗಿತ್ತು.

ಈ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ದೊರೆರಾಜು ಮತ್ತು ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳಲ್ಲಿ ದೇಶ ಭಕ್ತಿಯ ಭಾವನೆಯನ್ನು ಮೂಡಿಸಲು ಹಾಗೂ ಅವರಲ್ಲಿ ಸ್ಪರ್ದಾಮನೋಭಾವದಲ್ಲಿ ಪಾಲ್ಗೊಂಡು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸಲು ಹಿರಿಯರಾದ ನಾವು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ. ಮಕ್ಕಳಲ್ಲಿ ಧೈರ್ಯ, ವಿಶ್ವಾಸ, ದೇಶದ ಮೇಲಿನ ಪ್ರೀತಿ ಗೌರವವನ್ನು ಬಿತ್ತಬೇಕಾಗಿದೆ ಎಂದು ಹೇಳಿದರು.

ಚಿತ್ರಕಲಾ ಸ್ಪರ್ದೆಯಲ್ಲಿ ಸೈನಿಕರ ಮಕ್ಕಳು ಭಗತ್ ಸಿಂಗ್, ಗಡಿ ಕಾಯುವ ಯೋಧ, ಸ್ವಾತಂತ್ರ್ಯ ಸಿಕ್ಕ ಮೇಲೆ ಪಂಜರದಿಂದ ಹಕ್ಕಿ ಹಾರುತ್ತಿರುವುದು ಹೆಚ್ಚು ಚಿತ್ರ ಬಿಡಿಸಿರುವುದು ಕಂಡು ಬಂದಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಸೈನಿಕರ ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಖಜಾಂಚಿ ಹೆಚ್.ಎ. ಲೋಕೇಶ್, ಸಹಕಾರ್ಯದರ್ಶಿ ಶ್ರಿಧರ್, ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ನಿರ್ದೇಶಕರಾದ ಕೃಷ್ಣೇಗೌಡ, ಮೇಲೆಗೌಡ ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Continue Reading

Trending

error: Content is protected !!