Hassan
ಶ್ರೇಯಸ್ ಪಟೇಲ್, ಅನುಪಮ ವಿರುದ್ಧ ಅಸಮಧಾನ ೨ ಲಕ್ಷ ಮತಗಳ ಅಂತರದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು: ಸುನಿಲ್ ಕುಮಾರ್
ಹಾಸನ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಅವರಿಗೆ ಅಷ್ಟೊಂದು ಮತ ಬರಲು ನಮ್ಮಗಳ ಸಂಘಟಿತ ಹೋರಾಟವೇ ಕಾರಣ. ಆದರೇ ಅವರ ನಡವಳಿಕೆಯಿಂದ ಬೇಸೆತ್ತು ಕಾಂಗ್ರೇಸ್ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ. ಈ ಬಾರಿ ಪ್ರಜ್ವಲ್ ರೇವಣ್ಣ ಅವರು ೨ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ಮುಖಂಡ ಹೊಳೆನರಸೀಪುರದ ಸುನಿಲ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು ೩೦-೩೫ ವರ್ಷಗಳಿಂದ ಕಾಂಗ್ರೇಸ್ ಪಕ್ಷ ಕಟ್ಟಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಶ್ರೇಯಸ್ ಪಟೇಲ್ ಮತ್ತು ಅವರ ತಾಯಿ ಅವರು ಸೋತಾಗ ನಮ್ಮನ್ನ ಪ್ರತಿ ಚುನಾವಣೆಯಲ್ಲೂ ತೇಜೋವಧೆ ಮಾಡುವುದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ನೋವನ್ನು ಸಹಿಸಿಕೊಂಡು ಕಾಂಗ್ರೆಸ್ ಪಕ್ಷದ ಪರ ಕೆಲಸ
ಮಾಡಿದ್ದೆವು. ಆದರೆ ಸೋಲನ್ನು ಕಾಣಬೇಕಾಯಿತು. ಇದಕ್ಕೆ ನೇರ ಕಾರಣ ಅಭ್ಯರ್ಥಿ ಶ್ರೇಯಸ್ ಹಾಗೂ ಅವರ ತಾಯಿ ಅನುಪಮಾ ಎಂದು ದೂರಿದರು.

ಹಳೆಯ ಕಾಂಗೆಸ್ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದೆ ಸ್ವಾರ್ಥದ ರಾಜಕೀಯ ಮಾಡಿದರು, ತಮ್ಮ ಪಕ್ಷದ ಕಾರ್ಯ ಕರ್ತರನ್ನು ಯಾವ ರೀತಿ
ನಡೆಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಬರಿ ಅವರ ತಾತ ಪುಟ್ಟಸ್ವಾಮಿ ಗೌಡರ ಹಳೆಯ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ: ಶ್ರೇಯಸ್ ಪಟೇಲ್ ಸೋಲು ಖಚಿತ ಹೆಸರೇಳಿಕೊಂಡು ಬಂದು ಪಕ್ಷದಲ್ಲಿ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ ಆರೋಪಿಸಿದರು. ಹೊಳೆನರಸೀಪುರದಲ್ಲಿ ಪಕ್ಷದ
ಯಾವುದೇ ಸಭೆ ಸಮಾರಂಭವಾಗಲಿ, ನಾಮಪತ್ರ ಸಲ್ಲಿಕೆಗಾಗಲಿ ಹಳೆ ಕಾಂಗ್ರೆಸ್ಸಿಗರನ್ನು ಆಹ್ವಾನಿಸದೆ ಉದಾಸೀನ ಧೋರಣೆ ಅನುಸರಿಸುತ್ತಾರೆ. ಇದರಿಂದ ನಮ್ಮ ಸ್ವಾಭಿಮಾನಕೆ ದಕ್ಕೆಯುಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ಬಾರಿ ಶ್ರೇಯಸ್ ಪಟೇಲ್ ಹಾಗೂ ತಾಯಿ ಅನುಪಮಾ ಅವರೊಂದಿಗೆ ಮಾತನಾಡಿದರು ಸಹ ಸಮಸ್ಯೆ ಬಗೆಹರಿದಿಲ್ಲ, ಇಂತಹ ಧೋರಣೆ ನಡವಳಿಕೆಯಿಂದ ಬೇಸತ್ತು ಹಲವಾರು ಕಾಂಗ್ರೆಸ್ ಸದಸ್ಯರು ಜೆಡಿಎಸ್ ಸೇರ್ಪಡೆ ಗೊಂಡಿದ್ದೇವೆ ಎಂದರು. ಇದರಿಂದ ಬೇಸತ್ತು ಹಲವು ದಿನಗಳ ಹಿಂದೆಯೇ ಜೆಡಿಎಸ್ ಸೇರ್ಪಡೆಯಾಗಿದ್ದೆವು. ಇಷ್ಟು ದಿನಗಳು ಸುಮ್ಮನಿದ್ದು,
ಇದೀಗ ನಮ್ಮನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದು ಬೇಸರವ್ಯಕ್ತಪಡಿಸಿದರು. ಇಂತಹ ಧೋರಣೆಯನ್ನು ಸಹಿಸದೆ ಇರುವ ಮತ್ತಷ್ಟು ಹಳೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಪಕ್ಷ ಹೊರಬರುವುದು ಖಂಡಿತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲಿಸಲಾಗುತ್ತಿದೆ. ಪ್ರಜ್ವಲ್ ಕಳೆದ ೫ ವರ್ಷಗಳಿಂದ ಎಂಪಿಯಾಗಿ ಉತ್ತಮ ಸೇವೆ ಮಾಡಿದ

ಅನುಭವವಿದೆ. ಅಲ್ಲದೆ ಪ್ರಪಂಚದ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರಕ್ಕೆ ಮತ್ತೆ ಪ್ರಧಾನಿಯಾಗಲು ಕೈಜೋಡಿಸಲು ಪ್ರಜ್ವಲ್ ರೇವಣ್ಣ ಗೆಲುವಿಗೆ ಹೋರಾಟ ಮಾಡುತ್ತೇವೆ. ಅಲ್ಲದೆ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಡಾ. ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮುಂದಿನ ದಿನದಲ್ಲಿ ಮಾರ್ಗ ಸಿಗಲಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ೨ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಿಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಅಷ್ಟು ದೊಡ್ಡ ಇತಿಹಾಸ ಇರುವ ಕಾಂಗ್ರೇಸ್ ಪಕ್ಷಕ್ಕೆ ಬೇರೆ ಅಭ್ಯರ್ಥಿಗಳೆ ಇಲ್ಲದೆ ಇಂತಹ ಅನಿವಾರ್ಯ ಹೀನ ಸ್ಥಿತಿ ತಲುಪಿದೆಯೆ? ಲೋಕಭೆಗೆ ಪಕ್ಷ ಪ್ರತಿನಿಸುವ ಒಬ್ಬ ಸಮರ್ಥನನ್ನ ಸೃಷ್ಟಿಸುವ, ಆಯ್ಕೆ ಮಾಡುವ ಪ್ರತಿನಿಧಿವವರನ್ನ ಕೊಡಲು ಸಾದ್ಯವಿರಲಿಲ್ಲವೇ ಅನ್ನೂದನ್ನು ಪಕ್ಷದ ನಾಯಕರು ವಿಮರ್ಶೆ ಮಾಡಿಕೊಳ್ಳಲಿ ಈ ಎಲ್ಲಾ ಕಾರಣಗಳಿಂದ ನಾವೆಲ್ಲರೂ ಕಾಂಗ್ರೇಸ್ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸುದೇವು, ದೊಡ್ಡಸ್ವಾಮಿ, ಸಿ.ಕೆ. ಸುರೇಶ್, ಬೋರಣ್ಣ, ರಾಜು ಇತರರು ಉಪಸ್ಥಿತರಿದ್ದರು.
Hassan
ಪದವೀಧರರಿಂದ 6, 7 ನೇ ತರಗತಿಗೆ ಪಾಠ: ಸಚಿವ ಸಂಪುಟ ಅನುಮೋದನೆ ಸ್ವಾಗತಾರ್ಹವೆಂದ ದೇವೇಗೌಡ, ಮಹೇಶ್
ಅರಸೀಕೆರೆ: ಪದವೀಧರ ಶಿಕ್ಷಕರುಗಳು ಆರು ಮತ್ತು ಏಳನೇ ತರಗತಿಗೂ ಬೋಧಿಸಲು ಸಚಿವ ಸಂಪುಟ ಅನುಮೋದಿಸಿರುವುದನ್ನು ತಾಲೂಕ್ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ ಮತ್ತು ಕಾರ್ಯದರ್ಶಿ ಮಹೇಶ್ ಸ್ವಾಗತಾರ್ಹವೆಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.

ನಗರದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಆರು ಮತ್ತು ಏಳನೇ ತರಗತಿಗೆ ಬೋಧಿಸಲು ಟಿಇಟಿ ಕಡ್ಡಾಯ ಎಂಬ ನಿಯಮವನ್ನು ಸಡಿ ಲಿಸುವ ಮೂಲಕ ಸುಮಾರು 1. 50 ಲಕ್ಷ ಶಿಕ್ಷಕರಿಗೆ ನಿರಾಳ ದೊರೆತಂತೆ ಆಗಿದೆ ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟಕ್ಕೂ ನಮ್ಮ ಸಂಘವು ಆಭಾರಿಯಾಗಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
6 ಮತ್ತು 7ನೇ ತರಗತಿಗೆ ಬೋಧಿಸುವ ಶಿಕ್ಷಕರುಗಳಿಗೆ ಇತರ ಶಿಕ್ಷಕರುಗಳಂತೆ ಸೌಲಭ್ಯಗಳು ಸಹ ಒದಗಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ ಈವರೆಗೂ ಒಂದರಿಂದ ಏಳನೇ ತರಗತಿಯವರೆಗೆ ಬೋಧಿಸುತ್ತಲೇ ಬಂದಿರುವ ಶಿಕ್ಷಕರುಗಳು 15, 20 ವರ್ಷಗಳ ಸೇವೆಯ ಅನುಭವ ಹೊಂದಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಲೇ ಬಂದಿದ್ದೇವೆ. ಸಚಿವ ಸಂಪುಟದ ಈ ನಿರ್ಧಾರ ಶಿಕ್ಷಕರಿಗೆ ಬೋಧಾನ ಪೂರಕ ವಾತಾವರಣವನ್ನು ಕಲ್ಪಿಸಿದಂತಾಗಿದೆ ಎಂದು ಹೇಳಿದರು.
Hassan
ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ, ಶರಣ ಸಂಸ್ಕೃತಿಯ ಮಹಾ ಭಂಡಾರ: ಎಡೆಹಳ್ಳಿ ಮಂಜುನಾಥ್
ಸಕಲೇಶಪುರ : ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ ಮತ್ತು ಶರಣ ಸಂಸ್ಕೃತಿಯ ಮಹಾ ಭಂಡಾರ ಎಂದು ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿ ಎಡೆಹಳ್ಳಿ ಮಂಜುನಾಥ್ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತಿಸಿ ಮಾತನಾಡಿ,ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ತಪಸ್ಸಿನಿಂದ ಸಂಸ್ಥಾಪಿತವಾದ ಸುತ್ತೂರು ಶ್ರೀಕ್ಷೇತ್ರದಲ್ಲಿ 2026ರ ಜನವರಿ 15ರಿಂದ 20ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ನಾಟಕಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಗಳೂ ನಡೆಯಲಿವೆ ಎಂದರು.
ಭಾರತದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಗಳಿಗೆ ಮಠಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಕಲಾವಿದರು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ರಂಗೋಲಿ, ಗಾಳಿಪಟ ಮತ್ತು ಚಿತ್ರಕಲೆ ಸ್ಪರ್ಧೆಗಳ ವಿವರಗಳಿಗೆ ಸುತ್ತೂರು ಶ್ರೀಕ್ಷೇತ್ರ ಅಥವಾ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ಜಾತ್ರಾ ಕಚೇರಿಯಲ್ಲಿ ಸಂಪರ್ಕಿಸಬಹುದು. ಪೂಜಾ ಕೈಂಕರ್ಯಗಳಿಗೆ ಆಸಕ್ತಿ ಇರುವ ಭಕ್ತರಿಗೂ ಇದೇ ಕಚೇರಿಯಲ್ಲಿ ಮಾಹಿತಿ ಲಭ್ಯ ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕೋಮಲ ದಿನೇಶ್ ಮಾತನಾಡಿ, ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಯುವಕರಿಗೆ ಮಾದರಿಯಾಗಿವೆ ಎಂದು ಹೇಳಿದರು.

ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಭಕ್ತರಿಗೆ ಕೋರಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಕೌಡಹಳ್ಳಿ ಲೋಹಿತ್, ಚಂದ್ರಶೇಖರ್, ಸುರೇಶ್, ಗಾಯತ್ರಿ, ರೇಖಾ ಸುರೇಶ್, ಚಂದ್ರಶೇಖರ್, ಜೆಎಸ್ಎಸ್ ವಿದ್ಯಾ ಸಂಸ್ಥೆಯ ರೇಣುಕಾರಾಧ್ಯ, ಶಿವಕುಮಾರ್, ನಂಜುಂಡಸ್ವಾಮಿ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Hassan
ಬೆಳಗಾವಿ ಅಧಿವೇಶನದಲ್ಲಿ ಆನ್ ಲೈನ್ ಗೇಮ್, ಸೈಬರ್ ಕ್ರೈಮ್ ವಿರುದ್ದ ಧ್ವನಿ ಎತ್ತಿದ ಶಾಸಕ ಸಿಮೆಂಟ್ ಮಂಜು
ಬೆಳಗಾವಿ/ಸಕಲೇಶಪುರ: ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್, ಆನ್ ಲೈನ್ ಗೇಮ್ಸ್ ಗಳನ್ನು ನಿಷೇಧ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು , ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಆನ್ ಲೈನ್ ಗೇಮಿಂಗ್ ಆ್ಯಪ್‌ಗಳ ವ್ಯಸನಕ್ಕೆ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಹಲವೆಡೆ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಗಳಿಗೆ ಒಳಗಾಗಿ ಸಾವಿರಾರು ಯುವಕರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರಸ್ತುತ ಇಡೀ ದೇಶದಲ್ಲಿ ಸೈಬರ್ ಅಪರಾಧಗಳ ಕುರಿತು ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಸರ್ಕಾರ ಗಮನ ಹರಿಸಿ ಸೂಕ್ತ ರೀತಿಯ ಕಾನೂನು ರೂಪಿಸಬೇಕು ಹಾಗೂ ಕೇಂದ್ರ ಸರ್ಕಾರದ ಸೈಬರ್ ಕ್ರೈಂ ಸಹಾಯವಾಣಿ (1930) ರ ಮಾದರಿ ರಾಜ್ಯ ಸರ್ಕಾರದ ವತಿಯಿಂದಲೂ ಸಹಾಯವಾಣಿ ಸ್ಥಾಪಿಸುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕೆಂದು ಗೃಹಸಚಿವರಿಗೆ ತಿಳಿಸಿದರು.
-
Hassan11 hours agoಎಲೈಟ್ ಸಂಸ್ಥೆಯ ನಾಗರಾಜ್ಗೆ ’ಕರ್ನಾಟಕ ಗುರುರತ್ನ ಪ್ರಶಸ್ತಿ-2025’
-
Mysore18 hours agoಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಏಕವಚನ ಬಳಕೆ: ಸಿಎಂ ವಿರುದ್ಧ ಹೇಮಾ ನಂದೀಶ್ ಅಸಮಾಧಾನ
-
Mandya10 hours agoಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗಧಿ
-
Manglore9 hours agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Hassan12 hours agoಈ ಶಿಕ್ಷಕ ಎಣ್ಣೆದಾಸ, ಆತನ ಹೆಂಡತಿ ಮಕ್ಕಳ ಪಾಲಿಗೆ ರಾಕ್ಷಸಿ: ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ
-
Hassan13 hours agoNOC ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ: ಆರ್. ಮರಿಜೋಸೆಫ್ ಆಗ್ರಹ
-
Sports8 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
-
Hassan14 hours agoಸೊಪ್ಪಿನಹಳ್ಳಿಯಲ್ಲಿ ಪ. ಜಾತಿ ಕುಟುಂಬಗಳಿಂದ ರಸ್ತೆ ತಡೆ: ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ತಹಸೀಲ್ದಾರ್ ಗೆ ಮನವಿ
