Connect with us

Mysore

ಶೋಷಿತ ಸಮುದಾಯದ ಏಳಿಗೆಗೆ ನಾನು ಕಟಿಬದ್ಧ: ಡಾ.ಹೆಚ್.ಸಿ.ಮಹದೇವಪ್ಪ

Published

on

ಮೈಸೂರು,ಮಾ.16: ಶತಮಾನಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾದವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುವ ತುಡಿತ ನನ್ನಲ್ಲಿ ಅಚಲವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೆವಪ್ಪ ಅವರು ಹೇಳಿದರು.

ನಗರದ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ 10 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಮತ್ತು ಮತಬ್ಯಾಂಕ್ ದೃಷ್ಟಿಯಲ್ಲಿ ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ಅಶೋಕಪುರಂ ಎಂದರೆ ಎಲ್ಲಾ ದಲಿತರಿಗೆ ವಿಶೇಷ ಆಸಕ್ತಿ ಮತ್ತು ನಂಬಿಕೆ. ಯಾಕೆಂದರೆ ಇಡೀ ಜಿಲ್ಲೆಗೆ ರಕ್ಷಾಕವಚವಾಗಿದೆ. ಜಾತಿವ್ಯವಸ್ಥೆಯಲ್ಲಿ ಜನರು ತೊಂದರೆ ಅನುಭವಿಸಿದರೆ ಧಾವಿಸುತ್ತಾರೆ. ಅಸಂಖ್ಯಾತ ಯುವಕರು ಇಲ್ಲಿ ವಿದ್ಯಾವಂತರಿದ್ದಾರೆ. ನನಗೂ ಕೂಡ ಆಶೋಕಪುರಂ ಹಾಗೂ ಗಾಂಧಿನಗರವೆಂದರೆ ವಿಶ್ವಾಸವಿದೆ. ಬಸವಲಿಂಗಪ್ಪ, ಬಿ.ರಾಚಯ್ಯ, ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಲ್ಲಿಯವರೇ ಆದ ವಿ‌.ಶ್ರೀನಿವಾಸಪ್ರಸಾದ್ ಅವರಿಗೂ ಅಚ್ಚುಮೆಚ್ಚಿನ ಸ್ಥಳವಾಗಿದೆ ಎಂದರು.

ಇಲ್ಲಿನ ಜನರು ಸ್ವಾಭಿಮಾನದ ಬದುಕು ನಡೆಸಬೇಕು. ಜನರ ಜೀವನಮಟ್ಟ ಸುಧಾರಣೆಯಾಗಬೇಕು, ಯುವಕರಿಗೆ ಒಳ್ಳೆಯ ಭವಿಷ್ಯ ದೊರಕಬೇಕೆಂದು ನಿರಂತರವಾಗಿ ಚಿಂತನೆ ಮಾಡುತ್ತೇನೆ. ಆದರೆ ನಮ್ಮ ಆಸಕ್ತಿಗೆ ತಕ್ಕಂತೆ ಇಲ್ಲಿ ಅಭಿವೃದ್ಧಿಯಾಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಜೀವನ ಉತ್ತಂಕೇರಿ ಗುಣಮಟ್ಟದ ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಅವಧಿಯಲ್ಲಿ ನಗರದ ಹೃದಯ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವನ ನಿರ್ಮಾಣ ಅನೇಕ ಒತ್ತಾಯಗಳಿಂದ ಪ್ರಾರಂಭಿಸಲಾಗಿತು. ಆದರೆ ಹಣಕಾಸಿನ ತೊಂದರೆಯಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಬಳಿಕ ಸಮುದಾಯದ ಪರ ಮಾತನಾಡುವ ನಾಯಕರು ಯಾರೂ ಕಾಮಗಾರಿ ಬಗ್ಗೆ ಗಮನಹರಿಸಲಿಲ್ಲ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾನು ಸಚಿವನಾಗಿ ಕಾಮಗಾರಿಯನ್ನು ಮುಂದುವರೆಸಲು ಸಚಿವ ಸಂಪುಟದಲ್ಲಿಟ್ಟು 19 ಕೋಟಿಯನ್ನು ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು‌.

ಅಶೋಕಪುರಂ ಜನರು ಕೇಳಿದ ಎಲ್ಲಾ ಅಭಿವೃದ್ಧಿಗೆ ಸಮ್ಮತಿ ನೀಡಿದ್ದೇನೆ. ಅನೇಕ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಇಲ್ಲಿನ ಜನರ ಏಳಿಗೆಗಾಗಿ ನಾನು ಕಟಿಬದ್ದನಿದ್ದೇನೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ನನ್ನೊಟ್ಟಿಗೆ ಕರೆದು ಜನಸಂಪರ್ಕ ಸಭೆ ನಡೆಸಿ, ನಿಮ್ಮ ಕುಂದುಕೊರತೆಯನ್ನು ಆಲಿಸಲಾಗುವುದು. ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಸವಲತ್ತು ಪಡೆಯಬೇಕು. ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಮಾಡಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಿ.ನರಸೀಪುರ ಕ್ಷೇತ್ರ ಕೆ.ಡಿ.ಪಿ ಸದಸ್ಯರಾದ ಸುನೀಲ್ ಬೋಸ್, ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಮೇಯರ್ ಪುರುಷೋತ್ತಮ್, ಆದಿ ಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸುನೀಲ್, ಉಪಾಧ್ಯಕ್ಷ ಶಿವಸ್ವಾಮಿ, ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಪ್ರೊ.ಪಿ.ವಿ.ನಂಜರಾಜ ಅರಸ್, ಮುಖಂಡರಾದ ಈಶ್ವರ್, ರೇವಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ

Published

on

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಈಚನೂರು ಕುಮಾರ್ ಅವರು ಇಂದು ಬೆಳಗ್ಗೆ 11.30 ಕ್ಕೆ ನಿಧನರಾಗಿದ್ದಾರೆ.
ಅವರ ಇಬ್ಬರು ಮಕ್ಕಳು ಅಕ್ಷರಾ ಹಾಗೂ ಪತ್ರಕರ್ತ ಅಜಿತ್ ಅವರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.

Continue Reading

Mysore

ತಾಂಡವಪುರ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಕಾಲೇಜ್ ನಲ್ಲಿ ಉಚಿತ PGCET ತರಬೇತಿ

Published

on

ನಂಜನಗೂಡು ಜು.20

ನಂಜನಗೂಡು ತಾಲೂಕಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ ಕಾಲೇಜಿನಲ್ಲಿ PGCET ಉಚಿತ ತರಬೇತಿಯನ್ನು ನಡೆಸಲಾಗಿದೆ ವಿದ್ಯಾರ್ಥಿಗಳು ಇದನ್ನು ಸದುಪಡಿಸಿಕೊಳ್ಳಿ ಎಂದು ಎಂ.ಐ.ಟಿ. ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ದಿನಾಂಕ 22-07-24 ಮತ್ತು 23-07-24 ರಂದು ಎರಡು ದಿವಸ ಉಚಿತ PGCET ತರಬೇತಿ ಯನ್ನು MBA ಮತ್ತು MCA ಪ್ರವೇಶಾತಿ ಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಚಾಮರಾಜನಗರ ಗುಂಡ್ಲುಪೇಟೆ ನರಸೀಪುರ ನಂಜನಗೂಡು ಹೆಚ್ ಡಿ ಕೋಟೆ ಮೈಸೂರು ಸುತ್ತಮುತ್ತಲಿನಿಂದ ಬರುವವರಿಗೆ ಬಸ್ ಹಾಗೂ ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ MBA ವಿಭಾಗದ ಮುಖ್ಯಸ್ಥರು ಡಾ. ನಂದನ್ ಗಿರಿ 96326 20320

ನಂಜನಗೂಡು ಮಹದೇವಸ್ವಾಮಿ ಪಟೇಲ್

Continue Reading

Mysore

ಮಳೆಯಿಂದಾಗಿ ಮನೆ ಗೋಡೆ ಕುಸಿದು ಗೃಹಿಣಿ ಸಾವು – ಮೃತರ ಕುಟುಂಬಕ್ಕೆ ಸಂಸದ ಯದುವೀರ್ ಒಡೆಯರ್ ಸಾಂತ್ವನ

Published

on

ಪಿರಿಯಾಪಟ್ಟಣ: ಮನೆ ಗೋಡೆ ಕುಸಿದು ಗೃಹಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಆಕೆಯ ಜೊತೆಯಲ್ಲಿದ್ದ ಎರಡು ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಹೇಮಾವತಿ (22) ಮೃತಪಟ್ಟ ಮಹಿಳೆ, ಶುಕ್ರವಾರ ಹೇಮಾವತಿ ತನ್ನ ಎರಡು ವರ್ಷದ ಗಂಡು ಮಗುವನ್ನು ಎತ್ತಿಕೊಂಡಿದ್ದ ವೇಳೆ ಅತಿಯಾದ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದಿದೆ ತಕ್ಷಣ ಹೇಮಾವತಿ ತನ್ನ ಕೈಯಲ್ಲಿದ್ದ ಮಗುವನ್ನು ಹೊರಗೆ ತಳ್ಳಿದ್ದರಿಂದ ಅದೃಷ್ಟವಶಾತ್ ಮಗುವಿನ ಪ್ರಾಣ ಉಳಿದಿದೆ, ಸಾವಿನಲ್ಲು ತಾಯಿ ಮಮತೆಯನ್ನು ಎತ್ತಿ ಹಿಡಿದು ಹೇಮಾವತಿ ಸಾರ್ಥಕತೆ ಮೆರೆದಿದ್ದಾರೆ, ಮೃತರ ಪತಿ ಶಿವರಾಜ್ ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದು ಘಟನೆ ಸಂಭಂದ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ, ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಉಪ ತಹಶೀಲ್ದಾರ್ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ.

ಸಂಸದರಿಂದ ಸಾಂತ್ವನ: ಸಂಸದ ಯದುವೀರ್ ಒಡೆಯರ್ ಅವರು ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಕಗ್ಗುಂಡಿ ಗ್ರಾಮದ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸ್ಥಳದಲ್ಲಿದ್ದ ತಹಶಿಲ್ದಾರ್ ಕುಂ ಇ ಅಹಮದ್ ಅವರಿಗೆ ಸರ್ಕಾರದಿಂದ NDRF ಅಡಿ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು, ಈ ಸಂದರ್ಭ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೊಪ್ಪ ರಾಜೇಂದ್ರ ಮತ್ತಿತರಿದ್ದರು.

ವರದಿ: ಬೆಕ್ಕರೆ ಸತೀಶ್ ಆರಾಧ್ಯ

Continue Reading

Trending

error: Content is protected !!