Mandya
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಿವನಂಜಯ್ಯ ಅವಿರೋಧ ಆಯ್ಕೆ
ಮದ್ದೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶಿವನಂಜಯ್ಯ ಅವಿರೋಧವಾಗಿ ಆಯ್ಕೆಯಾದರು.
ನಗರದ ಪ್ರವಾಸಿ ಮಂದಿರದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ವಿವಿಧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಶಿವನಂಜಪ್ಪ, ಉಪಾಧ್ಯಕ್ಷರಾಗಿ ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಆರ್.ಚಕ್ರಪಾಣಿ, ಕಾರ್ಯದರ್ಶಿಯಾಗಿ ಎಂ.ಪಿ.ವೆಂಕಟೇಶ್, ಖಜಾಂಚಿಯಾಗಿ ಪಿ.ನಂದೀಶ್ ಅವರನ್ನು ಚುನಾವಣಾಧಿಕಾರಿಯಾಗಿ ಜಿಲ್ಲಾ ಉಪಾಧ್ಯಕ್ಷ ಚಿನಕುರಳಿ ಲೋಕೇಶ್ ಘೋಷಣೆ ಮಾಡಿದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘದ ಎಲ್ಲಾ ಸದಸ್ಯರನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಸಂಘಕ್ಕೆ ಹಾಗೂ ಪತ್ರಕರ್ತರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ರಾಜ್ಯ ಸಂಘದ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್, ರವಿ ಸಾವಂದಿಪುರ, ಕಾರ್ಯದರ್ಶಿ ನಿರ್ದೇಶಕ ಎಸ್.ಪುಟ್ಟಸ್ವಾಮಿ, ಪತ್ರಕರ್ತ ಮಂಜುನಾಥ್, ನಾಗೇಶ್, ಮೋಹನ್, ಶಿವರಾಜ್ ಸೇರಿದಂತೆ ಇತರರು ಇದ್ದರು.
Mandya
ಜಂತುಹುಳು ನಿವಾರಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಎಂ.ಎನ್.ಆಶಾಲತಾ
ಶ್ರೀರಂಗಪಟ್ಟಣ : ಬೆಳೆಯುವ ಮಕ್ಕಳ ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತುಹುಳುಗಳ ನಿವಾರಣೆಗಾಗಿ ಆಲ್ಬೆಂಡಜೋಲ ಮಾತ್ರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದು ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಎನ್.ಆಶಾಲತಾ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಮಾತ್ರೆ ವಿತರಿಸಿ ಅವರು ಮಾತನಾಡಿ, ಬಯಲು ಶೌಚದಿಂದಾಗಿ, ಬರಿಗಾಲಿನಲ್ಲಿ ನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಜಂತುಹುಳುಗಳಾಗುತ್ತವೆ ಆದ್ದರಿಂದ ಮಕ್ಕಳು ಸ್ವಚ್ಛತೆ ಕಡೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ನಂತರ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ಶ್ರೀಧರ್ ಮಾತನಾಡಿ ಆಲ್ಬೆಂಡಜೋಲ್ ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು ಆರೋಗ್ಯ ಇಲಾಖೆಯಿಂದ ಉಚಿತವಾಗಿ ಪ್ರತಿ ವರ್ಷ ಫೆಬ್ರವರಿ 10 ಹಾಗೂ ಆಗಸ್ಟ್ 10 ರಂದು ಆಲ್ಬೆಂಡಜೋಲ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಆದ್ದರಿಂದ ಎಲ್ಲರೂ ಮಾತ್ರೆ ಸೇವಿಸಿ ಜಂತುಹುಳು ಬಾಧೆಯಿಂದ ಮುಕ್ತಿ ಪಡೆದು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸ್ವಪ್ನ, ಸಿಡಿಪಿಒ ಸಕಲೇಶ್ವರ, ಶಿಕ್ಷಕರಾದ ರಾಜಶೇಖರ, ರಾಘು ಹಾಗೂ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ. ಮಂಗಳ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ಜಿ.ಬಿ. ಹೇಮಣ್ಣ, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Mandya
ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13 ರಿಂದ 18 ರವರೆಗೆ ಉತ್ಸವ: ಬಿ.ಬಸವರಾಜು
ಮಂಡ್ಯ: ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ವತಿಯಿಂದ ಮದ್ದೂರು ತಾಲೂಕಿನ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13 ರಿಂದ 18 ರವರೆಗೆ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ತೆಪ್ಪೋತ್ಸವ, ಶಯನೋತ್ಸವ ಮತ್ತು ಭಾರಿ ದನಗಳ ಜಾತ್ರೆ ನಡೆಯಲಿದೆ ಎಂದು ಭಾರತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ 33 ವರ್ಷಗಳಿಂದಲೂ ಶಿವರಾತ್ರಿ ಉತ್ಸವಗಳು ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುತ್ತವೆ. ಈ ನಿಟ್ಟಿನಲ್ಲಿ 6 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಫೆ.೧೩ರಂದು ಧ್ವಜಾರೋಹಣ, ಮಹಾಮಂಗಳಾರತಿ ಮಹಾಗಣಪತಿ ಪೂಜೆ, ಹೋಮ, ಲಘು ಪುರ್ಣಾಹುತಿ ದಿಬ್ಬಲಿ, ಮಹಾಮಂಗಳಾರತಿ, ಫೆ.14 ರಂದು ನಿತ್ಯಪೂಜೆ, ನವಗ್ರಹ ಮೃತ್ಯುಂಜಯ ಮತ್ತು ಶಾಂತಿಹೋಮ, ಮಹಾಮಂಗಳಾರತಿ ನಡೆಯಲಿದೆ. ಫೆ.15 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ, ವಿಶೇಷ ಅಭಿಷೇಕಗಳು, ಹರಿಕಥೆ, ಕೋಲಾಟ, ದೊಡ್ಡವರಸೆ, ಭಜನೆ, ಭರತನಾಟ್ಯ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ನೃತ್ಯರೂಪಕ, ಡೊಳ್ಳುಕುಣಿತ, ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.
ಫೆ.16 ರಂದು ವಿಶೇಷ ಪೂಜಾಲಂಕಾರದೊಂದಿಗೆ ಪೂಜಾಭಿಷೇಕ, ಫೆ.17 ರಂದು ಮಧ್ಯಾಹ್ನ 12.10ಕ್ಕೆ ರಥೋತ್ಸವ, ವಿವಿಧ ದೇವರುಗಳ ಉತ್ಸವಗಳು, ಕೀಲುಕುದುರೆ, ಗಾರುಡಿ ಬೊಂಬೆ, ಡೊಳ್ಳುಕುಣಿತ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆಗೆ ಬಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರು ಎಪಿಎಂಸಿಯಿಂದ ಪಶುವೈದ್ಯಕೀಯ ನಿರ್ದೇಶಕರಿಂದ ನೇಮಿಸಲ್ಪಟ್ಟ ವೈದ್ಯಾಧಿಕಾರಿಗಳು ಆಯ್ಕೆ ಮಾಡುವ ವಿಜೇತ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದರು.

ಫೆ.೧೮ರಂದು ಸಂಜೆ 6.30 ರಿಂದ ತೆಪ್ಪೋತ್ಸವ, ಹಾಗೂ ರಾತ್ರಿ 8 ರಿಂದ ಶಯನೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ದನಗಳ ಜಾತ್ರೆಯ ಉತ್ತಮ ರಾಸುಗಳಿಗೆ ಜೋಡಿ ಎತ್ತುಗಳ ವಿಭಾಗದ ಪ್ರಥಮ ಸ್ಥಾನಕ್ಕೆ 15 ಸಾವಿರ, ದ್ವಿತೀಯ 9 ಸಾವಿರ, ತೃತೀಯ 6 ಸಾವಿರ, ಜೋಡಿ ಉಳುಮೆ ಹಸುಗಳ ವಿಭಾಗಕ್ಕೆ ಪ್ರಥಮ 10 ಸಾವಿರ, ದ್ವಿತೀಯ 7,500, ತೃತೀಯ 5 ಸಾವಿರ ತಲಾ ಐದು ವಿಭಾಗಗಳ ಸ್ಪರ್ಧೆಗಳಿಗೆ ನೀಡಲಾಗುವುದು. ಬಹುಮಾನದ ಮೊತ್ತದಲ್ಲಿ ಎಪಿಎಂಸಿಯಿಂದ 22,500 ರೂ ಸೇರಿದಂತೆ ಭಾರತೀ ಎಜುಕೇಷನ್ ಟ್ರಸ್ಟ್ 2,95,000 ರೂ.ಗಳನ್ನು ಭರಿಸಲಿದೆ. ಅತ್ಯುತ್ತಮ ಚಪ್ಪರಕ್ಕೂ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಸಿದ್ದೇಗೌಡ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಉಪನ್ಯಾಸಕ ಶಿವಲಿಂಗೇಗೌಡ ಇತರರಿದ್ದರು.
Mandya
ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದಾರೆ : ಸಂತೋಷ್
ಮಂಡ್ಯ: ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದು, ಎಲ್ಲಾದರು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಪುತ್ರ ಸಂತೋಷ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ವಿರೋಪಾಕ್ಷ ಅವರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ವಾಸವಿದ್ದೇನೆ. ಕಳೆದ 10 ದಿನಗಳ ಹಿಂದ ವಾಯು ವಿಹಾರಕ್ಕೆಂದು ಹೊರಬಂದ ಅವರು, ಬಸ್ ಹತ್ತಿ ಮೈಸೂರು, ಬೇಲೂರು ಮೂಲಕ ಮಂಡ್ಯದಲ್ಲಿ ತಪ್ಪಿ ಹೋಗಿದ್ದಾರೆ ಎಂಬ ಮಾಹಿತಿ ಪಡೆದಿದ್ದೇವೆ ಎಂದರು.
ಮಂಡ್ಯ ನಗರದಲ್ಲಿ ತಲೆಸುತ್ತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅವರ ಬಗ್ಗೆ ಮಾಹಿತಿ ದೊರೆತ ವೇಳೆಯಲ್ಲಿ ಮತ್ತೆ ಅವರು ಕಾಣಿಯಾಗಿದ್ದು, ಕಳೆದ ಗುರುವಾರ ಮದ್ದೂರು ತಾಲೂಕಿನಲ್ಲಿ ಪತ್ತಯಾಗಿದ್ದರು ಎಂದು ಸ್ಥಳೀಯರು ತಿಳಿಸಿದರು.

ಆದರೆ ಇದುವರೆಗೆ ಅವರ ಸುಳಿವು ಸಿಕ್ಕಿಲ್ಲ. ಯಾರಿಗಾದರು ಕಂಡಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 9880394671, 9972272055, 9945599002 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.
-
Mysore9 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya4 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
National3 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Mysore4 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
Special23 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Chikmagalur2 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Kodagu4 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
-
Hassan1 hour agoಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾರವರನ್ನು ಭೇಟಿಯಾಗಿ ಹಾಸನ ಜಿಲ್ಲೆಯ ಅಂಚೆ ಇಲಾಖೆ ಬಗ್ಗೆ ಚರ್ಚಿಸಿದ ಶ್ರೇಯಸ್
