Connect with us

Hassan

ಶಿವಲಿಂಗೇಗೌಡ್ರು ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ

Published

on

ನೂತನ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡರಿಗೆ ಅಭಿನಂದನೆಯಲ್ಲಿ ಭವಿಷ್ಯ ನುಡಿದ ಕೆ.ಎನ್. ರಾಜಣ್ಣ

ಹಾಸನ : ಮುಂದೆ ನಡೆಯಲಿರುವ ಲೋಕಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತವಾಗಿದ್ದು, ಸಚಿವ ಸ್ಥಾನ ವಂಚಿತರಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಒಬ್ಬರು. ಮುಂದೆ ನೂರಕ್ಕೆ ನೂರರಷ್ಟು ಅವರೆ ಸಚಿವರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭವಿಷ್ಯ ನುಡಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ನಿವಾಸದ ಹಿಂಬಾಗದ ರಸ್ತೆ ಬಳಿ ನಡೆದ ಗೃಹಮಂಡಳಿಗೆ ನೂತನ ಅದ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಂ. ಶಿವಲಿಂಗೇಗೌಡರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಶಿವಲಿಂಗೇಗೌಡ ಸಚಿವ ಸ್ಥಾನ ವಂಚಿತ ಶಾಸಕರಲ್ಲಿ ಅವರೂ ಒಬ್ಬರು. ಅವರ ಹೆಸರು ಕೂಡ ಪಟ್ಟಿಯಲ್ಲಿ ಇತ್ತು. ಕೊನೆಗಳಿಗೆಯಲ್ಲಿ ಅವರ ಹೆಸರು ಹೋಯ್ತು. ಆದರೆ ಮುಂದೆ ನೂರಕ್ಕೆ ನೂರರಷ್ಟು ಅವರು ಸಚಿವರಾಗ್ತಾರೆ. ನಂತರ ಅವರೆ ಉಸ್ತುವಾರಿ ಸಚಿವರಾಗಿ ಕೂಡ ಬರ್ತಾರೆ ಎಂದು ಸಚಿವ ರಾಜಣ್ಣ ಹೇಳಿಕೆ ನೀಡಿದರು. ತಮ್ಮ ಕ್ಷೇತ್ರಕ್ಕೆ ಯಾವಾವ ಹೆಡ್ ನಲ್ಲಿ ಅನುದಾನ ಏನಿದೆ ಎಂದು ಸಚಿವರಿಗೆ ಗೊತ್ತಿರಲ್ಲ ಆದರೆ ಶಿವಲಿಂಗೇಗೌಡ ಅವರಿಗೆ ಗೊತ್ತಿರುತ್ತದೆ. ಅವರಿಗೆ ಮುಂದೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕೇ ಸಿಗುತ್ತೆ ಎಂದ ಸಚಿವ ರಾಜಣ್ಣ ವಿಶ್ವಾಸವ್ಯಕ್ತಪಡಿಸಿದರು. ಪಕ್ಷದ ವಿರುದ್ಧ ಮತ್ತು ಪರವಾಗಿ ಹೇಳಿಕೆ ಕೊಡೋದು ಪಕ್ಷಕ್ಕೆ ಮಾರಕ. ತಮ್ಮ ವಿರುದ್ದ ಹಾಸನದಲ್ಲಿ ಬಹಿರಂಗ ಹೇಳಿಕೆ ನೀಡಿದ್ದವರಿಗೆ ಸಚಿವ ರಾಜಣ್ಣ ಇದೆ ವೇಳೆ ಂಬಹಿರಂಗ ವೇದಿಕೆಯಲ್ಲೇ ವಿರೋದಿಗಳಿಗೆ ನೇರ ಎಚ್ಚರಿಕೆ ನೀಡಿದಂತಿತ್ತು.

ಹಾಸನದಲ್ಲಿ ಸಂಸತ್ ಚುನಾವಣೆ ಗೆಲ್ಲೋ ವಾತಾವರಣ ಇದೆ. ಎಲ್ಲೆಡೆ ವಿಚಾರ ಬೇದ ಇದ್ದೇ ಇರುತ್ತೆ. ಅದು ಹಿಂದಿನಿಂದಲೂ ಇದೆ. ಆದರೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಈಬಾರಿ ನಾವು ಹಾಸನದಲ್ಲಿ ಗೆಲ್ಲದೆ ಹೋದರೆ ಮತ್ತೆ ಯಾವತ್ತೂ ಗೆಲ್ಲೋದಿಲ್ಲ ತಿಳಿದುಕೊಳ್ಳಿ. ಈ ಕಾರ್ಯಕ್ರಮದಲ್ಲಿ ಶಪತ ಮಾಡಿ ಹೋಗಬೇಕು. ಎಲ್ಲಾ ಮುಖಂಡರ ಭವಿಷ್ಯ ಈ ಚುನಾವಣೆಯಲ್ಲಿ ಇದೆ. ಈ ಚುನಾವಣೆಯಲ್ಲಿ ನಾವು ಕನಿಷ್ಠ ೨೦ ಸ್ಥಾನ ಗೆಲ್ಲದೇ ಹೋದರೆ ಹೇಗೆ ಮುಖ ತೋರಿಸೋದು ಹೇಳಿ? ಮತದಾರ ಎಂದೂ ನಮಗೆ ಮೋಸ ಮಾಡಲ್ಲ. ನಾವು ಇಷ್ಟೆಲ್ಲಾ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.

ಹಾಗಾಗಿ ಈ ಚುನಾವಣೆಯಲ್ಲಿ ನಾವು ಗೆಲ್ಲಲೇ ಬೇಕು. ಈ ಸರ್ಕಾರ ಜನರ ರೈತರ, ಮಹಿಳೆಯರ, ಯುವಕರ ಸರ್ಕಾರ ಆಗಿದೆ. ಈ ಸರ್ಕಾರದ ಯೋಜನೆ ಪ್ರತೀ ವರ್ಗದ ಜನರಿಗೆ ಮುಟ್ಟಿದೆ ಎಂದರು.

ಗೃಹಮಂಡಳಿ ನೂತನ ಅದ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಉದ್ದೇಶಿಸಿ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ನಮ್ಮ ರಾಜ್ಯ ೪.೩೦ ಲಕ್ಷ ಕೋಟಿ ಟ್ಯಾಕ್ಸ್ ಕಟ್ಟುತ್ತದೆ. ನಮಗೆ ನೀವು ಕೊಡ್ತಾ ಇರೋದು ಕೇವಲ ೫೩ ಸಾವಿರ ಕೋಟಿಮಾತ್ರ. ನೂರಕ್ಕೆ ೧೩ ಪರ್ಸೇಂಟ್ ವಾಪಸ್ ನೀಡಿ ಉಳಿದ ಹಣ ಕೊಡುತ್ತಿಲ್ಲ. ನಮ್ಮ ರಾಜ್ಯದ ಜನ ನಿಮಗೆ ಏನು ಅನ್ಯಾಯ ಮಾಡಿದ್ದಾರೆ?

ನಿಮ್ಮ ಸರ್ಕಾರ ರಾಜ್ಯದಲ್ಲಿ ಇದ್ದಾಗ ಕೂಡ ನಮ್ಮ ರಾಜ್ಯದ ಬಗ್ಗೆ ನೀವು ಅಭಿಮಾನ ತೋರಿರುವುದಿಲ್ಲ. ರಾಜ್ಯದಲ್ಲಿ ನೀವು ಅದಿಕಾರ ನಡೆಸಿದ್ದು ಆಪರೇಷನ್ ಕಮಲದ ಮೂಲಕ. ಈ ರಾಜ್ಯದ ಜನ ಯಾವತ್ತೂ ನಿಮಗೆ ಅದಿಕಾರ ನಡೆಸಲು ನೇರವಾಗಿ ಆಯ್ಕೆ ಮಾಡಿಲ್ಲ. ಬರೀ ಹಿಂಬಾಗಿಲ ಮೂಲಕ ಅದಿಕಾರಕ್ಕೆ ಬಂದಿದ್ದೀರಾ! ಹಿಂದೆ ಬಿಜೆಪಿ ಸರ್ಕಾರ ಅದಿಕಾರದಲ್ಲಿ ಇದ್ದಾಗ ದೊಡ್ಡ ಮೊತ್ತದ ಹಣ ಬಾಕಿ ಉಳಿಸಿ ಹೋಗಿದ್ದಾರೆ. ಲೋಕೋಪಯೋಗಿ ಇಲಾಖೆ ಒಂದರಲ್ಲೇ ೩೦ ಸಾವಿರ ಕೋಟಿ ಬಾಕಿ ಇದೆ. ಹೀಗೆ ಉಳಿದಿರೊ ಬಾಕಿ ತೀರಿಸೋದು ಯಾರು? ನೀವು ಕೇಂದ್ರದಲ್ಲಿ ದೊಡ್ಡ ಶ್ರೀಮಂತರ ಸಾಲಾ ಮನ್ನ ಮಾಡಿದ್ರಿ. ಜನರಿಗೆ ನೀವು ಕೊಟ್ಟಿರೊ ಕೊಡುಗೆ ಏನು? ನಮ್ಮ ರಾಜ್ಯಕ್ಕೆ ೧.೮೭ ಲಕ್ಷ ಕೋಟಿ ತೆರಿಗೆ ಅನ್ಯಾಯ ಆಗಿದೆ. ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಧೈರ್ಯ ಇರೋದಕ್ಕೆ ನಿಮ್ನ ಮನೆ ಬಾಗಿಲಿಗೆ ಬಂದು ಹೇಳಿದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ನೀವು ಒಟ್ಟಿಗೆ ಹೋಗಬೇಕು.

ನಮ್ಮ ರಾಜ್ಯದಲ್ಲಿ ಬರ ಬಂದಿದೆ. ಇದುವರೆಗೆ ಹತ್ತೆ ಹತ್ತು ರುಪಾಯಿ ಬರ ಪರಿಹಾರ ಕೊಟ್ಟಿಲ್ಲ. ರಾಜ್ಯ ಬಿಜೆಪಿ ನಾಯಕರು ರೈತರಿಗೆ ಪರಿಹಾರ ಕೊಡದೆ ಹೋದರೆ ಹೋರಾಟ ಮಾಡ್ತಿವಿ ಅಂತಾರೆ. ನಿಮಗೆ ಮಾನ ಮರ್ಯಾದೆ ಇದ್ದರೆ ಕೇಂದ್ರದ ಬಳಿ ಪರಿಹಾರ ಕೇಳಿ ಎಂದು ಬಿಜೆಪಿ ವಿರುದ್ದ ಗೃಹ ಮಂಡಳಿ ಅದ್ಯಕ್ಷ ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಷಣದ ಕೊನೆಯಲ್ಲಿ ನೂತನ ಗೃಹ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ. ಶಿವಲಿಂಗೇಗೌಡರಿಗೆ ಬೃಹತ್ ಹಾರ ಹಾಕಿ ಕೃಷ್ಣನ ವಿಗ್ರಹವನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಇದಾದ ಬಳಿಕ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ನೂತನ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಕಾರಿನಲ್ಲಿ ಬರುತ್ತಿದ್ದಂತೆ ಅವರಿಗಾಗಿ ಸಿದ್ದಗೊಂಡಿದ್ದ ಬೃಹತ್ ಹಾರವನ್ನು ಕ್ರೈನ್ ಮೂಲಕ ಹಾಕಿ ಗೌರವ ಸೂಚಿಸಿದರು.

ಇದೆ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶಿವರಾಮ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮಾಜಿ ಶಾಸಕ ಗೋಪಾಲಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಶ್ರೀದರ್ ಗೌಡ, ಪ್ರಸಾದ್ ಗೌಡ, ಸಣ್ಣಸ್ವಾಮಿ, ರಾಮಚಂದ್ರ, ಬೈರಮುಡಿ ಚಂದ್ರು, ಪ್ರಸನ್ನ ಕುಮಾರ್, ಮುನಿಸ್ವಾಮಿ, ಬಾಗೂರು ಮಂಜೇಗೌಡ್ರು, ವಿನಯಗಾಂಧಿ, ಕಡಾಕಡಿ ಫೀರ್ ಸಾಹೇಬ್, ತಾರ ಚಂದನ್, ಶ್ರೇಯಸ್ ಪಟೇಲ್, ಶಂಕರ್, ಬಾಬಣ್ಣ, ಆರೀಫ್, ಮುರುಳಿ ಮೋಹನ್, ಹೆಚ್.ಕೆ. ಮಹೇಶ್, ಜಾವಗಲ್ ಮಂಜುನಾಥ್, ಗೌಡಗೆರೆ ಪ್ರಕಾಶ್, ಅಶ್ರು, ಚಂದ್ರು, ಗೊರೂರು ರಂಜಿತ್, ರಘು ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Published

on

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

ಡಿಡಿಪಿಯು ಮಹಾಲಿಂಗಯ್ಯ ಆದೇಶ

ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾದರೆ ರಜೆ ನೀಡುವ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ

ಡಿಸಿ ಅನುಮತಿ ಪಡೆದು ರಜೆ ಘೋಷಣೆ ಮಾಡಿದ ಡಿಡಿಪಿಯು

Continue Reading

Hassan

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

Published

on

ಹಾಸನ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ರಾಜೇಶ್ (9) ಸಾವನ್ನಪ್ಪಿದ ಬಾಲಕ

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮಾಡಾಳು ಗ್ರಾಮದಲ್ಲಿ ಘಟನೆ

ಗ್ರಾಮದ ಗೌರಮ್ಮ-ನಾಗರಾಜ ದಂಪತಿ ಪುತ್ರ ರಾಜೇಶ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್

ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್

ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್

ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಹಿಮ್ಸ್‌ಗೆ ದಾಖಲಾಗಿದ್ದ ರಾಜೇಶ್

ಚಿಕಿತ್ಸೆ ಫಲಕಾರಿಯಾಗದೆ ಇಂದು ರಾಜೇಶ್ ಸಾವು

Continue Reading

Hassan

2 ತಿಂಗಳ ಮಗುವಿಗೆ ಅನಾರೋಗ್ಯ ಬೇಸೆತ್ತ ಅಪ್ಪ ಆತ್ಮಹತ್ಯೆಗೆ ಯತ್ನ

Published

on

ಹಾಸನ: ಮಗುವಿನ ಆರೋಗ್ಯವು ಸುಧಾರಿಸದೇ ದಿನೆ ದಿನೆ ಹೆಚ್ಚಾದ ಹಿನ್ನಲೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ಹಿನ್ನಲೆಯಲ್ಲಿ ಏನು ಮಾಡುವುದು ಎಂಬುದು ತೋಚದೇ ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಹೋಗಿ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಆಸ್ಪತ್ರೆ ಸಿಬ್ಬಂದಿಗಳು ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿ ಬದುಕಿಸಿದ ಘಟನೆ ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಎಂಬುವರ ಎರಡು ತಿಂಗಳ ಮಗುವಿನ ಅನಾರೋಗ್ಯವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬೇಸರದಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ಹೇಳಲಾಗಿದೆ. ಮಗುವಿನ ಅನಾರೋಗ್ಯದಿಂದ ತಂದೆ ಮನನೊಂದಿದ್ದು, ಹಾಸನದ ಜಿಲ್ಲಾ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೇಲೇರಿ ಸಾಯುವ ಹೈಡ್ರಾಮ ಮಾಡಲಾಗಿದೆ. ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ ಹೊಡ್ಡಿದ್ದು,

ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಯತ್ನ ಮಾಡಲಾಗಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಗಿದೆ. ಗಂಗಸ್ವಾಮಿಯನ್ನ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿಸಿ ನಂತರ ಪೊಲಿಸ್ ಠಾಣೆಗೆ ಆಸ್ಪತ್ರೆ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ರಸ್ತೆಯಲ್ಲಿ ಸಾರ್ವಜನಿಕರು ನೋಡಿದ್ದು, ವಿಡಿಯೋ ಸೆರೆ ಹಿಡಿದಿದ್ದಾರೆ.

Continue Reading

Trending

error: Content is protected !!