Connect with us

Hassan

ಹಾಸನದಲ್ಲಿ ಮುಂದುವರೆದ ಕಾಂಗ್ರೆಸ್ ಆಂತರಿಕ ಕಲಹ, ಪಕ್ಷದ ನಾಯಕರ ಆರೋಪ ಪ್ರತ್ಯಾರೋಪ,

Published

on

ನಾನು ಎಂಪಿ ಚುನಾವಣೆ ಅಭ್ಯರ್ಥಿ ಆಗೋದಿಲ್ಲ: ಶಿವಲಿಂಗೇಗೌಡ ಕಡಕ್ ಮಾತು

ಹಾಸನ: ಹಾಸನದಲ್ಲಿ ತಾರಕಕ್ಕೇರಿದ ಕಾಂಗ್ರೆಸ್ ಆಂತರಿಕ ಕಲಹ. ಮುಂದುವರೆದ ಪಕ್ಷದ ನಾಯಕರ ಆರೋಪ ಪ್ರತ್ಯಾರೋಪ ಕೇಳಿಬಂದು, ನಾನು ಲೋಕಾಸಭೆ ಚುನಾವಣೆಯಲ್ಲಿ ಸ್ಪರ್ದೆ ಮಾಡುವುದಿಲ್ಲ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಡಕ್ ಮಾತನ್ನು ಹೇಳಿದರು.

ಜಿಲ್ಲಾ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಮಾತನಾಡಿ, ರಾಜ್ಯ ನಿಗಮ ಮಂಡಳಿಗೆ ನೇಮಕಸಂಬಂಧ ಒಟ್ಟು ೭೫ ಜನರ ಹೆಸರು ಅಂತಿಮವಾಗಿ ಬಂದಿದೆ. ಆದರೆ ಸಿಎಂ ಕಛೇರಿಯಲ್ಲಿ ಅದ್ಯಾಕೊ ತಡವಾಗುತ್ತಿದೆ ಎಂದರು. ಶಾಸಕ ಶಿವಲಿಂಗೇಗೌಡರಿಗೆ ನಿಗಮ ಮಂಡಳಿ ಅವಕಾಶದ ಬಗ್ಗೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಬಿ ಶಿವರಾಮ್ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಈ ಹಿಂದೆ ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಶಿದರ್ ಅವರಿಂದ ಸ್ಥಾನ ಬಿಡಿಸಿ ಕೊಟ್ಟೆವು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರು ಕೂಡ ಅವರ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ನಾನು ಪಕ್ಷಕ್ಕೆ ಸೇರ್ಪಡೆ ವೇಳೆ ಅವರು ನಾನು ಮತ್ತೆ ಚುನಾವಣೆ ಗೆ ನಿಲ್ಲೋದಿಲ್ಲ ಎಂದೇ ಹೇಳಿದ್ರು. ಸ್ವತಃ ನಮ್ಮ ಉಸ್ತುವಾರಿ ಸುರ್ಜೆವಾಲ ಅವರೇ ಶಶಿದರ್ ಗೆ ಫೋನ್‌ಮಾಡಿ ಖಾತ್ರಿ ಮಾಡಿಕೊಂಡರು

ಜಿಲ್ಲೆಯಲ್ಲಿ ಲಿಂಗಾಯಿತರಿಗೆ ಅನ್ಯಾಯ ಆಯ್ತು ಅಂತೀರಾ! ಲಿಂಗಾಯಿತರಿಗೆ ಟಿಕೆಟ್ ಕೊಡದ ಕಾರಣ ಎರಡು ಮೂರು ಕಡೆ ಸೋಲಾಯ್ತು ಎಂಬ ತಮ್ಮದೇ ಪಕ್ಷದ ನಾಯಕ ಬಿ. ಶಿವರಾಮ್ ಹೇಳಿಕೆ ವಿರುದ್ದ ಹರಿಹಾಯ್ದರು. ಲಿಂಗಾಯಿತರಿಗೆ ಅನ್ಯಾಯ ಆಗಿದ್ದರೆ ಇವರು ಸ್ಪರ್ದೆ ಮಾಡಿದ ಬೇಲೂರಿನಲ್ಲೇ ಸ್ಥಾನ ಬಿಟ್ಟು ಕೊಡಬೇಕಿತ್ತು. ಈಗ ಇದ್ದಕ್ಕಿದ್ದಾಗೆ ಲಿಂಗಾಯಿತರ ಮೇಲೆ ಅಬಿಮಾನ ಉಕ್ಕಿ ಹರಿಯುತ್ತಿದೆ ಎಂದು ಟಾಂಗ್ ನೀಡಿದರು. ತಮ್ಮ ವಿರುದ್ದದ ಟೀಕೆ ಬಗ್ಗೆ ಹೈಕಮಾಂಡ್ ಗೆ ಪತ್ರ ಬರೆಯುತ್ತೇನೆ. ಒಂದು ಕಡೆ ನೀತಿಗೆಟ್ಟೋರು ಅಂತೀರಾ, ಇನ್ನೊಂದು ಕಡೆ ನನ್ನನ್ನೇ ಎಂಪಿ ಕ್ಯಾಂಡೇಟ್ ಆಗಲಿ ಅಂತೀರಾ, ಯಾಕಾಗಿ ಇದನ್ನೆಲ್ಲಾಮಾಡುತ್ತಿದ್ದೀರಾ! ಇದನ್ನೇ ನಾನು ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆಮಾಡುತ್ತೆನೆ. ವಲಸೆ ಬಂದೋರು ಅಂತೀರಾಲ್ಲ ಜಗದೀಶ್ ಶೆಟ್ಟರ್ ಬರದೆ ಹೋಗಿದ್ದರೆ, ಲಕ್ಷ್ಮಣ ಸವದಿ, ನಾನು, ಸೇರಿ ಹಲವರು ಬಂದೆವಲ್ಲ ಅದರಿಂದ ಪಕ್ಷ ಗೆದ್ದಿದೆ. ಸುಮ್ಮನೆ ನಮ್ಮನ್ನ ವಲಸಿಗರು ನೀತಿಗೆಟ್ಟೋರು ಅಂತಾ ಹೇಳಿದ್ರೆ ಹೇಗೆ? ಸಾರ್ವಜನಿಕವಾಗಿ ಪಕ್ಷದ ಘನತೆ ಹಾಳು ಮಾಡುತ್ತಿದ್ದೀರಿ ಎಂದು ಟೀಕಿಸಿದರು. ಹಾಸನದಲ್ಲಿ ತಾರಕಕ್ಕೇರಿದ ಕಾಂಗ್ರೆಸ್ ಆಂತರಿಕ ಕಲಹ. ಮುಂದುವರೆದ ಪಕ್ಷದ ನಾಯಕರ ಆರೋಪ ಪ್ರತ್ಯಾರೋಪ. ಬೇಲೂರಲ್ಲಿ ಹೋಗಿ ಹೊಡೆದಾಡಿಸಿದ್ರಿ. ನನ್ನ ಕ್ಷೇತ್ರಕ್ಕೆ ಬಂದು ನನಗೆ ಹೇಳದೆ ಸಭೆ ಮಾಡಿದ್ರಿ. ಇದು ಪಕ್ಷ ಗೆಲ್ಲಿಸೋ ರೀತಿಯಾ ಎಂದು ಪ್ರಶ್ನಿಸಿದರು. ನನ್ನನ್ನು ಅವಿರೋದವಾಗಿ ಕಳಿಸಿದ್ರು. ನಾನು ಪಾರ್ಲಿಮೆಂಟ್ ಗೆ ಹೋಗೋದಿಲ್ಲ. ತಾವು ಲೋಕಸಭಾ ಚುನಾವಣೆ ಅಭ್ಯರ್ಥಿ ಆಗೋದಿಲ್ಲ ಎಂದ ಶಿವಲಿಂಗೇಗೌಡ.

ಇಂದಿನಿಂದ ಕೊಬ್ಬರಿ ಖರೀದಿಗೆ ನೊಂದಣಿ ಆರಂಭವಾಗಲಿದೆ. ಕೊಬ್ಬರಿ ವರ್ಷವಿಡೀ ಬೆಳೆ ಇರಲಿದೆ. ಆದರೆ ಕೇಂದ್ರ ಸರ್ಕಾರ ಜನವರಿಯಿಂದ ಏಪ್ರಿಲ್ ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಿದೆ. ವರ್ಷವಿಡೀ ಕೊಬ್ಬರಿ ಖರೀದಿಗೆ ಅವಕಾಶ ಸಿಗಬೇಕು ಎಂಬುದು ನಮ್ಮ ಒತ್ತಾಯ. ರಾಜ್ಯದಲ್ಲಿ ಬರಗಾಲ ಇದೆ. ಆದರೆ ಇದುವರೆಗೆ ಕೇಂದ್ರ ಸರ್ಕಾರ ಒಂದು ರುಪಾಯಿ ಹಣ ಬಿಡುಗಡೆ ಮಾಡಿಲ್ಲ. ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನಿಸೋದಿಲ್ಲವೇ? ನಮ್ಮ ರಾಜ್ಯದಿಂದ ೪ ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಸಂಗ್ರಹವಾಗುತ್ತೆ. ಕಾನೂನಾತ್ಮಕವಾಗಿ ಸಿಗಬೇಕಾದ ಪರಿಹಾರ ನಮಗೆ ಕೊಡಬೇಕು. ಕೇಂದ್ರದಿಂದ ನಿಯೋಗ ಬಂತು, ಅದ್ಯಾಯನವೂ ಆಯಿತು. ಆದರೆ ಪರಿಹಾರ ನೀಡಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು. ನಮ್ಮ ಹಣ ಕೊಟ್ಟು ಬಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿದೆ.

ಪ್ರದಾನಮಂತ್ರಿ ಫಸಲ್ ಬಿಮಾ ಯೋಜನೆ ಅಂದ್ರು ಆದರೆ ಹಣ ಬರ್ತಾ ಇಲ್ಲ. ಆನುದಾನದ ರಾಜ್ಯವಾರು ಹಂಚಿಕೆಯಲ್ಲಿ ತಾರತಮ್ಯ ಸರಿಯಲ್ಲ. ಆದಷ್ಟು ಬೇಗ ಬರ ಪರಿಹಾರ ಬಿಡುಗಡೆ ಮಾಡಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಹಿಂದಿನ ಚುನಾವಣೆಯಲ್ಲಿ ಪುಲ್ವಾಮ ವಿಚಾರ ಇಟ್ಟು ಚುನಾವಣೆ ಗೆದ್ದರು. ಈ ಬಾರಿ ರಾಮ ಮಂದಿರ ಮುಂದಿಟ್ಟು ಚುನಾವಣೆ ಗೆಲ್ಲಲು ಹೊರಟಿದಾರೆ ಎಂದು ಹಾಸನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಟೀಕೆ ಮಾಡಿದರು. ನಾನೂ ರಾಮನ ಪರಮ ಭಕ್ತ. ಹತ್ತಾರು ವರ್ಷ ರಾಮನ ಫೋಟೊ ಇಟ್ಟುಕೊಂಡು ಭಜನೆ ಮಾಡಿದ್ದೇನೆ. ನಾವೇನು ರಾಮನನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ನಾವು ರಾಮನ ಭಕ್ತರೇ ಆಗಿದ್ದೇವೆ. ನಾವೂ ಜೈ ಶ್ರೀರಾಮ್ ಅಂತೀವಿ. ಅಲ್ಲಿ ಅವರು ಉದ್ಘಾಟನೆ ಮಾಡಿದ್ರೆ ನಾವು ಮನೆಯಲ್ಲಿ ಫೋಟೊ ಇಟ್ಟು ಪೂಜೆ ಮಾಡ್ತೇವೆ ಎಂದ ಖಡಕ್ ಉತ್ತರ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಶಾಸಕ ಶಿವಲಿಂಗೇಗೌಡ ಸದನದಲ್ಲಿ ಅವಹೇಳನಕಾರಿ ಹೇಳಿಕೆ: ಸಭಾಧ್ಯಕ್ಷರ ರಾಜೀನಾಮೆಗೆ ದೇವರಾಜೇಗೌಡ ಆಗ್ರಹ

Published

on

ಹಾಸನ: ವಿಧಾನಸಭಾ ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಪದಗಳು ಎಲ್ಲರೂ ತಲೆಬಗ್ಗಿಸುವಂತಿದ್ದು, ಸದನದ ಘನತೆಗೆ ಧಕ್ಕೆ ತಂದಿವೆ ಎಂದು ದೇವರಾಜೇಗೌಡ ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದರು.

ವಿರೋಧ ಪಕ್ಷದವರಿಗೆ ಸದನದಲ್ಲಿ ಖಂಡನೆ ವ್ಯಕ್ತಪಡಿಸುವ ಹಕ್ಕಿದ್ದು, ಅದನ್ನು ಬಿಜೆಪಿ ಪಕ್ಷ ಬಳಸಿದೆ. ಆದರೆ ಈ ಎಲ್ಲ ಘಟನೆಗಳನ್ನು ನೋಡುತ್ತಾ ಸಭಾಧ್ಯಕ್ಷರು ನಗುತ್ತಾ ಕುಳಿತರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಅತ್ಯಂತ ಆಕ್ಷೇಪಾರ್ಹ ಸಂಗತಿ ಎಂದು ಆರೋಪಿಸಿದರು. ಇಂತಹ ವರ್ತನೆಯಿಂದ ಸಭಾಧ್ಯಕ್ಷರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಆರ್‌ಎಸ್‌ಎಸ್ ವಿಶ್ವಾದ್ಯಂತ ಒಪ್ಪಿಗೆಯಾದ ಸಂಘವಾಗಿದ್ದು, ರಾಜ್ಯದಲ್ಲಿ ಹಿಂದುತ್ವ ಉಳಿದಿರುವುದು ಆರ್‌ಎಸ್‌ಎಸ್‌ನಿಂದಲೇ ಎಂದು ದೇವರಾಜೇಗೌಡ ಹೇಳಿದರು. ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಹೆಣ್ಣುಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದಕ್ಕೂ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು.


ಅದೇ ಸದನದಲ್ಲಿ ಪಾಕಿಸ್ತಾನ ಅಥವಾ ಮುಸ್ಲಿಂ ಮಹಿಳೆಯರ ಕುರಿತು ಮಾತನಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹಿಂದೂ ಹೆಣ್ಣುಮಗಳ ಬಗ್ಗೆ ಅವಹೇಳನ ಮಾಡಿದಾಗ ದನಿ ಎತ್ತದಿರುವುದು ದ್ವಂದ್ವ ನಿಲುವು ಎಂದು ಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಶಿವಲಿಂಗೇಗೌಡ ಅವರು ಧರ್ಮದ ಮಾನವನ್ನು ಹರಾಜು ಹಾಕುತ್ತಿರುವುದು ಅತೀ ಖಂಡನೀಯ ಎಂದರು.

ದೇವರಾಜೇಗೌಡ ಅವರು ಮಾತನಾಡಿ, ಶಾಸಕ ಶಿವಲಿಂಗೇಗೌಡ ಅವರಿಗೆ ಬಹಿರಂಗ ಎಚ್ಚರಿಕೆ ನೀಡಿದರು. ನೀವು ಯಾರ ಕಾಲು ಹಿಡಿದು ಬೇಡಿಕೊಂಡಿದ್ದೀರೋ ನನಗೆ ತಿಳಿದಿದೆ. ಸರ್ಕಾರಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರ ಅಧಿಕಾರಾವಧಿಯಲ್ಲಿ ‘ಭೂಮಿ ಕಳ್ಳ’ ಎಂದು ವರದಿ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಆಗಿನ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಿಎ ಜಾಗಕ್ಕೆ ಬದಲಿ ನಿವೇಶನ ನೀಡಲು ಅನುಮೋದನೆ ನೀಡಿ ತಪ್ಪು ಮಾಡಿದ್ದಾರೆ ಎಂದು ದೂರಿದರು.


ಕುಮಾರಸ್ವಾಮಿ ಅವರು ಸಾಕಿದ ಭ್ರಷ್ಟಾಚಾರದ ಮಗು ಶಿವಲಿಂಗೇಗೌಡ ಎಂದು ಕಟುವಾಗಿ ಟೀಕಿಸಿದರು. 2022ರ ಚುನಾವಣೆಯ ವೇಳೆ ಬ್ಲೂ ಫಿಲಂ ಅನ್ನು ಕ್ರಮಬದ್ಧವಾಗಿ ಹಂಚಿಕೆ ಮಾಡಲು ನೀವೇ ಹೇಳಿದ್ದೀರಿ ಎಂಬ ಆರೋಪವನ್ನೂ ಮಾಡಿದರು. ಹೂಡ ಅಧಿಕಾರ ಹಂಚಿಕೆಗೆ ಮೂರು ಕೋಟಿ ರೂ. ಲಂಚ ಪಡೆದಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದು ಆರೋಪಿಸಿ, ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದರು. ಈ ಎಲ್ಲ ಪ್ರಕರಣಗಳ ಕುರಿತು ತೀವ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ನಾವು ಇಂದಿಗೂ ಸ್ಮರಿಸಬೇಕು. ಆದರೆ ಶಿವಲಿಂಗೇಗೌಡ ಅವರಂತಹ ವ್ಯಕ್ತಿಗಳನ್ನು ಯಾವುದೇ ಪಕ್ಷದಲ್ಲೂ ನೋಡಿಲ್ಲ ಎಂದು ಹೇಳಿದರು. ಕೂಡಲೇ ಶಾಸಕ ಶಿವಲಿಂಗೇಗೌಡ ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಬೇಕೆಂದು ದೇವರಾಜೇಗೌಡ ಅವರು ಆಗ್ರಹಿಸಿದರು.

Continue Reading

Hassan

ಹಾಸನಾಂಬ ದೇವಾಲಯದಲ್ಲಿ 108ಕ್ಕೂ ಅಧಿಕ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ

Published

on

ಹಾಸನ: ನಗರದ ಪ್ರಸಿದ್ಧ ಶಕ್ತಿಪೀಠವಾಗಿರುವ ಶ್ರೀ ಹಾಸನಾಂಬ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಮಳೆ–ಬೆಳೆ ಸಮೃದ್ಧಿ, ಸುಖ–ಶಾಂತಿ ಹಾಗೂ ನೆಮ್ಮದಿಗಾಗಿ 108ಕ್ಕೂ ಅಧಿಕ ಶ್ರೀ ದೇವಿ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಟ್ಟಾಯ ಶಿವಕುಮಾರ್ ಅವರು ತಿಳಿಸಿದರು.

ದಿನಾಂಕ 06-02-2026 (ಶುಕ್ರವಾರ) ರಂದು ಬೆಳಿಗ್ಗೆ 7.30 ಗಂಟೆಗೆ ಈ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀ ಹಾಸನಾಂಬ ದೇವಾಲಯ ಅನಾವರಣದ ಐದನೇ ವರ್ಷದ ಅಂಗವಾಗಿ ಈ ವಿಶೇಷ ಪೂಜಾ ವಿಧಿಗಳು ನೆರವೇರಲಿವೆ. ಜಗನ್ಮಾತೆಯಾದ ಶ್ರೀ ಶಾಂಭವಿಯನ್ನು ಭಕ್ತಿಯಿಂದ ಭಜಿಸುವ ಮೂಲಕ ನಾಡಿನ ಜನತೆಗೆ ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿ ದೊರಕಲಿ ಎಂಬ ಸಂಕಲ್ಪವನ್ನು ಕೈಗೊಳ್ಳಲಾಗಿದೆ ಎಂದರು.


ಶ್ರೀ ಹಾಸನಾಂಬ ದೇವಾಲಯವು ವರ್ಷದಲ್ಲಿ ಕೇವಲ 10 ರಿಂದ 12 ದಿನಗಳವರೆಗೆ ಮಾತ್ರ ಗರ್ಭಗುಡಿ ತೆರೆದುಕೊಳ್ಳುವ ಅಪರೂಪದ ವೈಶಿಷ್ಟ್ಯ ಹೊಂದಿದ ಶಕ್ತಿಶಾಲಿ ಕ್ಷೇತ್ರವಾಗಿದೆ. ಗರ್ಭಗುಡಿ ಮುಚ್ಚಿದ ಬಳಿಕವೂ ನಂದಾದೀಪ ಆರದೇ ಇರುವುದೂ, ಅರ್ಪಿಸಿದ ನೈವೇದ್ಯ ಬಿಸಿಯಾಗಿಯೇ ಇರುವುದೂ ದೇವಿಯ ಮಹಿಮೆಯ ಪವಾಡವೆಂದು ಭಕ್ತರು ನಂಬುತ್ತಾರೆ. ದೇವಿಯ ಮುಂಭಾಗದಲ್ಲಿರುವ ನೆಲ್ಲು ಕಾಳಿನ ಗಾತ್ರದ ಕಲ್ಲು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತ ಬರುತ್ತಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರು.

ಪ್ರತಿ ವರ್ಷ ಆಶ್ವಿಜ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿ ತೆರೆದು ಲಕ್ಷಾಂತರ ಭಕ್ತರು ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆಯುತ್ತಾರೆ. ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬ ಗಾಢ ನಂಬಿಕೆ ಭಕ್ತರಲ್ಲಿ ಇದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಜಗದ್ರಕ್ಷಕಳಾದ ಶ್ರೀ ದೇವಿಯ ಪುರಾಣ ಪಠಣ ಹೋಮವನ್ನು 108ಕ್ಕೂ ಅಧಿಕ ಉಪಾಸಕರಿಂದ ನಡೆಸಲಾಗುತ್ತಿದೆ ಎಂದರು.


ಮಧ್ಯಾಹ್ನ 12.30 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪುರಾಣ ಮಹಾಮಂಗಲ ಧರ್ಮಸಭೆ ನಡೆಯಲಿದ್ದು, ನಂತರ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸೇವೆ ಸಲ್ಲಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಹಾಸನಕ್ಕೆ ಆಗಮಿಸುವ ಭಕ್ತರಿಗೆ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ಆಟೋ ರಿಕ್ಷ ವ್ಯವಸ್ಥೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:
9980868058, 9449261302, 9945858274.

Continue Reading

Hassan

ವಿಕಸಿತ ಭಾರತ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕ – ಶಾಸಕ ಸಿಮೆಂಟ್ ಮಂಜು.

Published

on

 ಸಕಲೇಶಪುರ : ವಿಕಸಿತ ಭಾರತ ಮೋದಿಜಿಯವರ ಕನಸು. 2047ಕ್ಕೆ ವಿಕಸಿತ ಭಾರತ ಆಗಬೇಕು ಅನ್ನೊ ಸಂಕಲ್ಪಕ್ಕೆ ಪೂರಕವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಈ ಭಾರಿಯ ಬಜೆಟ್ ಮಂಡಿಸಿದ್ದಾರೆ.  ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು; ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್‌ನ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


◦ ಈ ಬಜೆಟ್ ’ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ನಂತಹ ವೇದಿಕೆಗಳ ಮೂಲಕ ಯುವಜನರ ಆಲೋಚನೆಗಳನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ. ಇದು ಯುವಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ರಾಷ್ಟ್ರದ ನಿರ್ಧಾರಗಳಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಿದೆ. ಆ ಮೂಲಕ ಭಾರತದ ಮುಂದಿನ ಪ್ರಗತಿಯನ್ನು ಯುವಜನರು ಮುನ್ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಒತ್ತಿ ಹೇಳಿದ್ದು, ಅದರತ್ತ ಈ ಬಜೆಟ್ ಕೂಡ ಗಮನಹರಿಸಿರುವುದು ಸಮಯೋಚಿತವೆನಿಸಿದೆ ಎಂದು ಹೇಳಿದರು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಜೆಟ್ ಮಂಡಿಸಿದ್ದಾರೆ.

ಕರ್ತವ್ಯ ಭವನದಲ್ಲಿ ಈ ಬಜೆಟ್ ತಯಾರಾಗಿದ್ದು.ನಿರ್ಮಲಾ ಸೀತಾರಾಮನ್ ನಮ್ಮವರು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವರು 9ನೇ ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದಾರೆ.ಕ್ರೀಡಾ ಕ್ಷೇತ್ರ, ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಾವುದೇ ಹೊಸ ತೆರಿಗೆಯನ್ನ ಹೇರಿಲ್ಲ. ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ಇದು.ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆರ್ಥಿಕ ಸದೃಢತೆ, ವಿಶ್ವಗುರುವಾಗಲು ಪೂರಕ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.

Continue Reading

Trending

error: Content is protected !!