Hassan
ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾ ಮಂತ್ರಿ ರಾಜಣ್ಣ
ಹಾಸನ: ಇನ್ನು ಎರಡು ಮೂರು ದಿನಗಳಲ್ಲಿ ಸಿಎಂ ಮತ್ತು ಡಿಸಿಎಂ ಅವರು ದೆಹಲಿಗೆ ಹೋಗಲಿದ್ದು, ಲೋಕಸಭೆ ಅಭ್ಯರ್ಥಿ ಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಮುಂದಿನ ಸಚಿವರ ಬದಲಾವಣೆ ಸಂದರ್ಭ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ಭವಿಷ್ಯ ನುಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಿಗಮ ಮಂಡಳಿ ಅಧಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಮಾತನಾಡುತ್ತಾ, ಇದೆ ತಿಂಗಳು
೪,೫ ನೇ ತಾರೀಖು ಸಿಎಂ, ಡಿ.ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿ, ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಕೆ.ಎಂ. ಶಿವಲಿಂಗೇಗೌಡರು ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಪಟ್ಟಿ ಬಿಡುಗಡೆ ಮುನ್ನವೇ ಗುಟ್ಟು ಬಿಟ್ಟುಕೊಟ್ಟಂತೆ ಅನಿಸುತಿತ್ತು.

ಮುಂದಿನ ಸಚಿವರ ಬದಲಾವಣೆ ಸಂದರ್ಭ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ಶಿವಲಿಂಗೇಗೌಡ ರಿಗೆ ಸಚಿವ ಸ್ಥಾನವೂ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೂ ನಿಗಮ ಮಂಡಳಿ ಸ್ಥಾನ ಕೊಡಬೇಕು. ಅವರಿಂದಲೇ ತಾನೇ ನಾವೆಲ್ಲಾ ಗೆದ್ದಿರೋದು. ಕಾರ್ಯಕರ್ತರು ಇರೋದ್ರಿಂದಲೇ ನಾವೆಲ್ಲಾ ಶಾಸಕರಾಗಿರೋದು. ಕಾರ್ಯಕರ್ತರು, ಶಾಸಕರು ಇಬ್ಬರಿಗೂ ಸ್ಥಾನ ಕೊಟ್ಟು ಸಮತೋಲನ ಕಾಪಾಡುವ ಬಗ್ಗೆ ಪಕ್ಷ ಮತ್ತು ಅಧ್ಯಕ್ಷರ ನಿರ್ಣಯ ಇದೆ ಎಂದರು.

ನಂದಗೋಡನಹಳ್ಳಿ ಮರಗಳಮಾರಣ ಹೋಮ ಪ್ರಕರಣ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಘಟನೆ ಬಗ್ಗೆ ಈಗಾಗಲೇ ಕಾನೂನು ರೀತಿ ಕ್ರಮ ಆಗಿದೆ. ಕಾಡುಗಳ್ಳರಿಗೆ ಪ್ರೋತ್ಸಾಹ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿದೆ. ಪ್ರತಾಪ್ ಸಿಂಹ ತಮ್ಮ ಕೂಡ ಸಿಕ್ಕಿಹಾಕೊಕೊಂಡಿದ್ದಾರೆ. ಅವರೇ ಮರಗಳನ್ನ ಕತ್ತರಿಸಿದ್ದಾರೆ ಇದರಲ್ಲಿ ರಾಜಕೀಯ ಪ್ರೇರಿತ ಅಂದ್ರೆ ನೀವು ಒಪ್ಪುತ್ತೀರಾ! ಕಾಂಗ್ರೆಸ್ ನವರೇ ಮಾಡಿರ್ಲಿ ಇನ್ನೊಂದು ಪಕ್ಷದವರು ಮಾಡಿರ್ಲಿ ಕಾನೂನು ಎಲ್ಲರಿಗೂ ಒಂದೇ. ಮೈಸೂರಿನಲ್ಲಿ ಸಿದ್ದರಾಮಯ್ಯ ಪುತ್ರರನ್ನ ಚುನಾವಣೆಗೆ ನಿಲ್ಲಿಸಲು ಪ್ರತಾಪ್ ಸಿಂಹ ಟಾರ್ಗೆಟ್ ಆರೋಪ ವಿಚಾರವಾಗಿ ಮಾತನಾಡಿ, ಅವರ ತಮ್ಮ ಕಳ್ಳ ಎಂಬುದು ಜನರ ಮನಸ್ಸಲ್ಲಿ ಸಾಭೀತಾದ ರೀತಿನಲ್ಲಿದೆ. ಅಂತಹವರಿಗೆ ಪ್ರತಾಪ್ ಸಿಂಹ ಬೆಂಬಲ ಕೊಡ್ತಾರೆ ಎಂದು ನಾವು ಭಾವಿಸಬಹುದಾ! ಮರಗಳ್ಳನಿಗೆ ಪ್ರತಾಪ್ ಸಿಂಹ ಬೆಂಬಲ ಎಂದು ನಾವು ಹೇಳಬಹುದಲ್ಲಾ. ಯಾವುದ್ಯಾವುದೋ ಕಾರಣಕ್ಕಾಗಿ ಯಾರ್ಯಾರನ್ನೋ ಟೀಕೆ ಮಾಡೋದು ಸರಿ ಅಲ್ಲ. ಕೋರ್ಟಲ್ಲಿ ಅವರು ನಿರ್ಧೋಷಿ ಎಂದು ಹೊರಬರಲಿ ಯಾರು ಬೇಡ ಅಂದೋರು. ಅವರು ಮಾಡೋ ಪ್ರಶ್ನೆಯನ್ನ ಕೋರ್ಟ್‌ನಲ್ಲಿ ಮಾಡಲಿ. ಕೋರ್ಟ್ ಕೊಡುವ ಅಂತಿಮ ನಿರ್ಣಯಕ್ಕೆ ನಾವು ತಲೆ ಬಾಗುತ್ತೇವೆ ಎಂದು ಹೇಳಿದರು.

ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ರನ್ನ ಆಹ್ವಾನಿಸದ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಯಾರನ್ನ ಕರಿಬೇಕು ಬೇಡ ಎಂಬ ಅಜೆಂಡಾ ಇರುತ್ತೆ. ಬಿಜೆಪಿ ಅಜೆಂಡಾನಾ ನಾವ್ಯಾಕೆ ಪ್ರಶ್ನೆ ಮಾಡೋಕೆ ಹೋಗಬೇಕು? ಅಲ್ಲಿಗೆ ಹೋಗಿ ಮಾಡಿದ್ರೆ ಮಾತ್ರ ರಾಮನ ದರ್ಶನ, ಆಶೀರ್ವಾದಾನಾ!
ನಮ್ಮೂರಲ್ಲಿ ಇರೋ ರಾಮನ ದರ್ಶನ ಮಾಡಿದ್ರೆ ನಮಗೆ ಆಶೀರ್ವಾದ ಮಾಡೋದಿಲ್ವಾ. ದೇವರು ಸರ್ವಾಂತರ್ ಯಾಮಿ ನಮ್ಮಲ್ಲೂ ಇದ್ದಾನೆ ನಿಮ್ಮಲ್ಲೂ ಇದ್ದಾನೆ.
ತೃಪ್ತಿಗೆ ಮನಸ್ಸಿನ ನೆಮ್ಮದಿಗೆ ದೇವಸ್ಥಾನೆಕ್ಕೆ ಹೋಗುತ್ತೇವೆ. ಅಲ್ಲಿಗೆ ಹೋದ ತಕ್ಷಣ ಶ್ರೀರಾಮನ ಆಶೀರ್ವಾದ ಆಗಿಬಿಡುತ್ತಾ. ಇಲ್ಲಿರೋ ಶ್ರೀರಾಮನ ದರ್ಶನಕ್ಕೆ ಹೋದ್ರೆ ಆಶೀರ್ವಾದ ಆಗೋದಿಲ್ವಾ. ಅವರವರ ನಂಬಿಕೆಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ ಅದರಲ್ಲಿ ತಪ್ಪು ಸರಿ ವ್ಯಾಖ್ಯಾನ ನಾವು ಮಾಡೊಲ್ಲ. ಸಿಎಂ ಆಹ್ವಾನಿಸದ್ದನ್ನ ಅವರ ಸಣ್ಣತನ ಅನ್ನಬೇಕೊ, ದೊಡ್ಡತನ ಅನ್ನಬೇಕೋ ನೀವೇ ಹೇಳಿ ಎಂದು ಸಿಡಿಮಿಡಿಗೊಂಡರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ, ಶ್ರೇಯಾಸ್ ಪಟೇಲ್ ಇತರರು ಉಪಸ್ಥಿತರಿದ್ದರು.
Hassan
ಶಾಸಕ ಶಿವಲಿಂಗೇಗೌಡ ಸದನದಲ್ಲಿ ಅವಹೇಳನಕಾರಿ ಹೇಳಿಕೆ: ಸಭಾಧ್ಯಕ್ಷರ ರಾಜೀನಾಮೆಗೆ ದೇವರಾಜೇಗೌಡ ಆಗ್ರಹ
ಹಾಸನ: ವಿಧಾನಸಭಾ ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಪದಗಳು ಎಲ್ಲರೂ ತಲೆಬಗ್ಗಿಸುವಂತಿದ್ದು, ಸದನದ ಘನತೆಗೆ ಧಕ್ಕೆ ತಂದಿವೆ ಎಂದು ದೇವರಾಜೇಗೌಡ ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಖಂಡಿಸಿದರು.
ವಿರೋಧ ಪಕ್ಷದವರಿಗೆ ಸದನದಲ್ಲಿ ಖಂಡನೆ ವ್ಯಕ್ತಪಡಿಸುವ ಹಕ್ಕಿದ್ದು, ಅದನ್ನು ಬಿಜೆಪಿ ಪಕ್ಷ ಬಳಸಿದೆ. ಆದರೆ ಈ ಎಲ್ಲ ಘಟನೆಗಳನ್ನು ನೋಡುತ್ತಾ ಸಭಾಧ್ಯಕ್ಷರು ನಗುತ್ತಾ ಕುಳಿತರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಅತ್ಯಂತ ಆಕ್ಷೇಪಾರ್ಹ ಸಂಗತಿ ಎಂದು ಆರೋಪಿಸಿದರು. ಇಂತಹ ವರ್ತನೆಯಿಂದ ಸಭಾಧ್ಯಕ್ಷರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಆರ್‌ಎಸ್‌ಎಸ್ ವಿಶ್ವಾದ್ಯಂತ ಒಪ್ಪಿಗೆಯಾದ ಸಂಘವಾಗಿದ್ದು, ರಾಜ್ಯದಲ್ಲಿ ಹಿಂದುತ್ವ ಉಳಿದಿರುವುದು ಆರ್‌ಎಸ್‌ಎಸ್‌ನಿಂದಲೇ ಎಂದು ದೇವರಾಜೇಗೌಡ ಹೇಳಿದರು. ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಹೆಣ್ಣುಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದಕ್ಕೂ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು.

ಅದೇ ಸದನದಲ್ಲಿ ಪಾಕಿಸ್ತಾನ ಅಥವಾ ಮುಸ್ಲಿಂ ಮಹಿಳೆಯರ ಕುರಿತು ಮಾತನಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹಿಂದೂ ಹೆಣ್ಣುಮಗಳ ಬಗ್ಗೆ ಅವಹೇಳನ ಮಾಡಿದಾಗ ದನಿ ಎತ್ತದಿರುವುದು ದ್ವಂದ್ವ ನಿಲುವು ಎಂದು ಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಶಿವಲಿಂಗೇಗೌಡ ಅವರು ಧರ್ಮದ ಮಾನವನ್ನು ಹರಾಜು ಹಾಕುತ್ತಿರುವುದು ಅತೀ ಖಂಡನೀಯ ಎಂದರು.
ದೇವರಾಜೇಗೌಡ ಅವರು ಮಾತನಾಡಿ, ಶಾಸಕ ಶಿವಲಿಂಗೇಗೌಡ ಅವರಿಗೆ ಬಹಿರಂಗ ಎಚ್ಚರಿಕೆ ನೀಡಿದರು. ನೀವು ಯಾರ ಕಾಲು ಹಿಡಿದು ಬೇಡಿಕೊಂಡಿದ್ದೀರೋ ನನಗೆ ತಿಳಿದಿದೆ. ಸರ್ಕಾರಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರ ಅಧಿಕಾರಾವಧಿಯಲ್ಲಿ ‘ಭೂಮಿ ಕಳ್ಳ’ ಎಂದು ವರದಿ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಆಗಿನ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಿಎ ಜಾಗಕ್ಕೆ ಬದಲಿ ನಿವೇಶನ ನೀಡಲು ಅನುಮೋದನೆ ನೀಡಿ ತಪ್ಪು ಮಾಡಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ಅವರು ಸಾಕಿದ ಭ್ರಷ್ಟಾಚಾರದ ಮಗು ಶಿವಲಿಂಗೇಗೌಡ ಎಂದು ಕಟುವಾಗಿ ಟೀಕಿಸಿದರು. 2022ರ ಚುನಾವಣೆಯ ವೇಳೆ ಬ್ಲೂ ಫಿಲಂ ಅನ್ನು ಕ್ರಮಬದ್ಧವಾಗಿ ಹಂಚಿಕೆ ಮಾಡಲು ನೀವೇ ಹೇಳಿದ್ದೀರಿ ಎಂಬ ಆರೋಪವನ್ನೂ ಮಾಡಿದರು. ಹೂಡ ಅಧಿಕಾರ ಹಂಚಿಕೆಗೆ ಮೂರು ಕೋಟಿ ರೂ. ಲಂಚ ಪಡೆದಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದು ಆರೋಪಿಸಿ, ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದರು. ಈ ಎಲ್ಲ ಪ್ರಕರಣಗಳ ಕುರಿತು ತೀವ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ನಾವು ಇಂದಿಗೂ ಸ್ಮರಿಸಬೇಕು. ಆದರೆ ಶಿವಲಿಂಗೇಗೌಡ ಅವರಂತಹ ವ್ಯಕ್ತಿಗಳನ್ನು ಯಾವುದೇ ಪಕ್ಷದಲ್ಲೂ ನೋಡಿಲ್ಲ ಎಂದು ಹೇಳಿದರು. ಕೂಡಲೇ ಶಾಸಕ ಶಿವಲಿಂಗೇಗೌಡ ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಬೇಕೆಂದು ದೇವರಾಜೇಗೌಡ ಅವರು ಆಗ್ರಹಿಸಿದರು.
Hassan
ಹಾಸನಾಂಬ ದೇವಾಲಯದಲ್ಲಿ 108ಕ್ಕೂ ಅಧಿಕ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ
ಹಾಸನ: ನಗರದ ಪ್ರಸಿದ್ಧ ಶಕ್ತಿಪೀಠವಾಗಿರುವ ಶ್ರೀ ಹಾಸನಾಂಬ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಮಳೆ–ಬೆಳೆ ಸಮೃದ್ಧಿ, ಸುಖ–ಶಾಂತಿ ಹಾಗೂ ನೆಮ್ಮದಿಗಾಗಿ 108ಕ್ಕೂ ಅಧಿಕ ಶ್ರೀ ದೇವಿ ಉಪಾಸಕರಿಂದ ಸಾಮೂಹಿಕ ಶ್ರೀ ದೇವಿ ಪುರಾಣ ಪಠಣ ಹೋಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಟ್ಟಾಯ ಶಿವಕುಮಾರ್ ಅವರು ತಿಳಿಸಿದರು.
ದಿನಾಂಕ 06-02-2026 (ಶುಕ್ರವಾರ) ರಂದು ಬೆಳಿಗ್ಗೆ 7.30 ಗಂಟೆಗೆ ಈ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀ ಹಾಸನಾಂಬ ದೇವಾಲಯ ಅನಾವರಣದ ಐದನೇ ವರ್ಷದ ಅಂಗವಾಗಿ ಈ ವಿಶೇಷ ಪೂಜಾ ವಿಧಿಗಳು ನೆರವೇರಲಿವೆ. ಜಗನ್ಮಾತೆಯಾದ ಶ್ರೀ ಶಾಂಭವಿಯನ್ನು ಭಕ್ತಿಯಿಂದ ಭಜಿಸುವ ಮೂಲಕ ನಾಡಿನ ಜನತೆಗೆ ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿ ದೊರಕಲಿ ಎಂಬ ಸಂಕಲ್ಪವನ್ನು ಕೈಗೊಳ್ಳಲಾಗಿದೆ ಎಂದರು.

ಶ್ರೀ ಹಾಸನಾಂಬ ದೇವಾಲಯವು ವರ್ಷದಲ್ಲಿ ಕೇವಲ 10 ರಿಂದ 12 ದಿನಗಳವರೆಗೆ ಮಾತ್ರ ಗರ್ಭಗುಡಿ ತೆರೆದುಕೊಳ್ಳುವ ಅಪರೂಪದ ವೈಶಿಷ್ಟ್ಯ ಹೊಂದಿದ ಶಕ್ತಿಶಾಲಿ ಕ್ಷೇತ್ರವಾಗಿದೆ. ಗರ್ಭಗುಡಿ ಮುಚ್ಚಿದ ಬಳಿಕವೂ ನಂದಾದೀಪ ಆರದೇ ಇರುವುದೂ, ಅರ್ಪಿಸಿದ ನೈವೇದ್ಯ ಬಿಸಿಯಾಗಿಯೇ ಇರುವುದೂ ದೇವಿಯ ಮಹಿಮೆಯ ಪವಾಡವೆಂದು ಭಕ್ತರು ನಂಬುತ್ತಾರೆ. ದೇವಿಯ ಮುಂಭಾಗದಲ್ಲಿರುವ ನೆಲ್ಲು ಕಾಳಿನ ಗಾತ್ರದ ಕಲ್ಲು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತ ಬರುತ್ತಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರು.
ಪ್ರತಿ ವರ್ಷ ಆಶ್ವಿಜ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿ ತೆರೆದು ಲಕ್ಷಾಂತರ ಭಕ್ತರು ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆಯುತ್ತಾರೆ. ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬ ಗಾಢ ನಂಬಿಕೆ ಭಕ್ತರಲ್ಲಿ ಇದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಜಗದ್ರಕ್ಷಕಳಾದ ಶ್ರೀ ದೇವಿಯ ಪುರಾಣ ಪಠಣ ಹೋಮವನ್ನು 108ಕ್ಕೂ ಅಧಿಕ ಉಪಾಸಕರಿಂದ ನಡೆಸಲಾಗುತ್ತಿದೆ ಎಂದರು.

ಮಧ್ಯಾಹ್ನ 12.30 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪುರಾಣ ಮಹಾಮಂಗಲ ಧರ್ಮಸಭೆ ನಡೆಯಲಿದ್ದು, ನಂತರ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸೇವೆ ಸಲ್ಲಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಹಾಸನಕ್ಕೆ ಆಗಮಿಸುವ ಭಕ್ತರಿಗೆ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ಆಟೋ ರಿಕ್ಷ ವ್ಯವಸ್ಥೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:
9980868058, 9449261302, 9945858274.
Hassan
ವಿಕಸಿತ ಭಾರತ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕ – ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ವಿಕಸಿತ ಭಾರತ ಮೋದಿಜಿಯವರ ಕನಸು. 2047ಕ್ಕೆ ವಿಕಸಿತ ಭಾರತ ಆಗಬೇಕು ಅನ್ನೊ ಸಂಕಲ್ಪಕ್ಕೆ ಪೂರಕವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಈ ಭಾರಿಯ ಬಜೆಟ್ ಮಂಡಿಸಿದ್ದಾರೆ. ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು; ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್‌ನ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

◦ ಈ ಬಜೆಟ್ ’ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ನಂತಹ ವೇದಿಕೆಗಳ ಮೂಲಕ ಯುವಜನರ ಆಲೋಚನೆಗಳನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ. ಇದು ಯುವಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ರಾಷ್ಟ್ರದ ನಿರ್ಧಾರಗಳಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಿದೆ. ಆ ಮೂಲಕ ಭಾರತದ ಮುಂದಿನ ಪ್ರಗತಿಯನ್ನು ಯುವಜನರು ಮುನ್ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಒತ್ತಿ ಹೇಳಿದ್ದು, ಅದರತ್ತ ಈ ಬಜೆಟ್ ಕೂಡ ಗಮನಹರಿಸಿರುವುದು ಸಮಯೋಚಿತವೆನಿಸಿದೆ ಎಂದು ಹೇಳಿದರು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಜೆಟ್ ಮಂಡಿಸಿದ್ದಾರೆ.
ಕರ್ತವ್ಯ ಭವನದಲ್ಲಿ ಈ ಬಜೆಟ್ ತಯಾರಾಗಿದ್ದು.ನಿರ್ಮಲಾ ಸೀತಾರಾಮನ್ ನಮ್ಮವರು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವರು 9ನೇ ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದಾರೆ.ಕ್ರೀಡಾ ಕ್ಷೇತ್ರ, ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಾವುದೇ ಹೊಸ ತೆರಿಗೆಯನ್ನ ಹೇರಿಲ್ಲ. ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ಇದು.ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆರ್ಥಿಕ ಸದೃಢತೆ, ವಿಶ್ವಗುರುವಾಗಲು ಪೂರಕ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.
-
Politics20 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Special3 hours agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
Hassan18 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
National21 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Hassan22 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
Chamarajanagar22 hours agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
-
Mysore21 hours agoಜಿಲ್ಲಾ ಪೊಲೀಸರಿಂದ ಗೋದಾಮು, ಕೈಗಾರಿಕಾ ಶೋಧ
-
Mysore3 hours agoಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
