Hassan
ಹೆಚ್ಚಿನ ಗೌರವ ಕೊಡುವ ಇಲಾಖೆ ಇದ್ದರೆ ಶಿಕ್ಷಣ ಇಲಾಖೆ ಶಿಕ್ಷಣದ ಜೊತೆ ಮಕ್ಕಳಿಗೆ ಸಂಸ್ಕಾರ ಅಗತ್ಯ: ಟಿ.ಎನ್. ಇನವಳ್ಳಿ
ಹಾಸನ: ಸಮಾಜದಲ್ಲಿ ಹೆಚ್ಚಿನ ಗೌರವ ಕೊಡುವ ಇಲಾಖೆಯೊಂದಿದ್ದರೇ ಅದು ಶಿಕ್ಷಣ ಇಲಾಖೆಯಾಗಿದ್ದು, ಶಿಕ್ಷಣದ ಜೊತೆ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಅಭಿಪ್ರಾಯಪಟ್ಟರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಬಾಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಸಾಕ್ಷರತ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ತೆರೆದ ಮನೆ ಕಾರ್ಯಕ್ರಮದಡಿ ಪೋಕ್ಸೋ ಕಾಯ್ದೆ-೨೦೧೨ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ಇಲಾಖೆ ಇಲ್ಲದಿದ್ದರೂ ಜೀವನ ಮಾಡಬಹುದು ಆದರೇ ಶಿಕ್ಷಣ ಇಲ್ಲದೆ ಇದ್ದರೇ ಕಷ್ಟವಾಗುತ್ತದೆ. ಅನ್ನ, ನೀರು, ಬಟ್ಟೆ ಸೇರಿದಂತೆ ಸಾಮಾನ್ಯ ಸೌಲತ್ತು ಎನ್ನುವಂತೆ ವಿಧ್ಯೆ ಕೂಡ ಆಗಿದೆ. ದೇಶ ಎಷ್ಟು ಅಭಿವೃದ್ಧಿಯಾಗುತ್ತಿದ್ರೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಈ ಪೈಕಿ ಮಕ್ಕಳ ಮೇಲೂ ಅನೇಕ ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿರುತ್ತವೆ. ಶಿಕ್ಷಕರಿಂದ ಮಕ್ಕಳ ಜೊತೆ ಅಸಭ್ಯ ವರ್ತನೆ ನಡೆಯುತ್ತಲೆ ಇದೆ. ನಾನು ಕೂಡ ಶಿಕ್ಷಕನ ಮಗನಾಗಿದ್ದು, ನಾನು ತುಂಬ ಗೌರವ ಕೊಡುವ ಇಲಾಖೆಯೊಂದಿದ್ದರೇ ಅದು ಶಿಕ್ಷಣ ಇಲಾಖೆ. ಆದರೇ ಈಗ ತುಂಬ ಬೇಸರದಿಂದ ಕೂಡ ಈ ಇಲಾಖೆ ಮೇಲೆ ಹೇಳುತ್ತಿದ್ದೇನೆ. ಶಿಕ್ಷಕನು ತನ್ನ ಕರ್ತವ್ಯವನ್ನು ತಿಳಿದುಕೊಳ್ಳುವವರೆಗೂ ಶಿಕ್ಷಣ ಇಲಾಖೆಯೂ ಕೂಡ ಒಳ್ಳೆಯದಾಗಲು ಸಾಧ್ಯವಿಲ್ಲ. ಹಾಗೇ ಮಕ್ಕಳು ಕೂಡ ಬೆಳೆಯಲು ಸಾಧ್ಯವಿಲ್ಲ ಎಂದು ಬೇಸರದಲ್ಲಿ ಹೇಳಿದರು. ಶಿಕ್ಷಕನಾದವರು ತನ್ನ ಯೋಗ್ಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದಿಂದ ಒಂದು ಸಮಾಜವನ್ನು ತಿದ್ದಲು ಸಾಧ್ಯ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆ ಸಂಸ್ಕಾರ ಕೂಡ ಬೇಕು ಎಂದು ಕಿವಿಮಾತು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ಮಾತನಾಡಿ, ಪೋಕ್ಸೋ ಕಾಯ್ದೆ ಏನಿದೆ ಅನ್ಯಾಯಕ್ಕೆ ದೌರ್ಜನ್ಯಕ್ಕೆ ಮಕ್ಕಳು ಒಳಗಾಗುತ್ತಿರುವ ಬಗ್ಗೆ ನೋಡುತ್ತಿದ್ದೇವೆ. ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಈ ಜಗತ್ತಿನೆ ಮೊಬೈಲ್ ಪೋನ್ ಪರಿಚಯವಾದ ಮೇಲೆ ಇದರಲ್ಲಿ ಎಷ್ಟು ಒಳಿತು ಇದೆ ಅಷ್ಟೆ ಕೆಟ್ಟದು ಕೂಡ ಕಾಣಬಹುದು. ಇದರಲ್ಲಿ ನಮ್ಮ ಆಯ್ಕೆ ಮೇಲೆ ನಿರ್ಧಾರವಾಗುತ್ತದೆ ಎಂದರು. ೮ನೇ ತರಗತಿ ಓದುವ ಮಕ್ಕಳು ಕೂಡ ಸ್ಮಾರ್ಟ್ ಪೋನ್ ಕೊಡಿಸುವಂತೆ ಪೋಷಕರ ಮೇಲೆ ಒತ್ತಾಯ ಹಾಕಲಾಗುತ್ತಿದೆ. ಇನ್ನು ಮೊಬೈಲ್ ಪೋನ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಆಗಿರುವ ಪ್ರಕರಣ ನೊಡಿದ್ದೇವೆ ಎಂದು ಆತಂಕವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಡಿವೈಎಸ್ಪಿ ಮುರುಳೀಧರ್, ಹಿರಿಯ ಸಾಹಿತಿ ರೂಪಹಾಸನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷ್ಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಸಿಂಹ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಶಾಲಾ ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.
Hassan
ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭ
ಹಾಸನ: ಸರ್ವಗುಣ ಯೋಗಿ ಎನಿಸಿಕೊಂಡಿರುವ ರಾಷ್ಟ್ರಕವಿ ಕುವೆಂಪು ಅವರ ಬರಹವನ್ನು ಯುವಕರು ಓದುವ ಮೂಲಕ ಭಾರತೀಯ ಆಧ್ಯಾತಿಕ, ಸಾಂಸ್ಕೃತಿಕ ಪರಂಪರೆಯನ್ನು ಅರಿಯಬೇಕೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್, ಅಮೋಘ ಸುದ್ದಿ ವಾಹಿನಿ ಸಹಯೋಗದಲ್ಲಿ ಬೆಂಗಳೂರಿನ ಮನೋಜ್ಞ ನೃತ್ಯಕಲಾ ಅಕಾಡೆಮಿ ವತಿಯಿಂದ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಹಮಿಕೊಂಡಿದ್ದ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭದಲ್ಲಿ ಮಾತನಾಡಿದರು.

ಕುವೆಂಪು ಅವರನ್ನು ಎಲ್ಲರಿಗೂ ಪರಿಚಯಿಸಬೇಕಿದೆ. ಸಾಂಸ್ಕೃತಿಕ, ಆಧ್ಯಾತಿಕವಾಗಿ ಭಾರತ ಸಾಕಷ್ಟು ಖ್ಯಾತಿ ಹೊಂದಿದೆ. ಪುರಾತನ ಪರಂಪರೆ ಬಗ್ಗೆ ವಿಶ್ವವೇ ಅಚ್ಚರಿ ವ್ಯಕ್ತಪಡಿಸುತ್ತದೆ. ಅಂತಹ ಶಕ್ತಿಯನ್ನು ಸಾಹಿತ್ಯದ ಮೂಲಕ ಪರಿಚಯಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದರು.
ಮನುಷ್ಯ ಚಿಂತನೆಗಲ್ಲಿ ಭಾವ ಹಾಗು ಅಭಾವ ಮುಖ್ಯವಾಗುತ್ತದೆ. ಯಾವುದನ್ನೇ ಆಗಲಿ ಭಾವದಿಂದ ನೋಡಬೇಕೆ ಹೊರತು ಅಭಾವದಿಂದ ಅಲ್ಲ. ಋಷಿಗಳಿಗೆ ನೋಡಿದ್ದೆಲ್ಲ ಭಾವವಾಗಿ ಕಾಣುತ್ತದೆ. ಆದ್ದರಿಂದಲೇ ಅವರು ಅಸಾಧ್ಯವಾದುದನ್ನು ಸಾಧಿಸಿದ್ದಾರೆಂದರು.
ಭಾವನೆಗಳು ಬದಲಾದರೆ ಮನುಷ್ಯರಾಗಲು ಸಾಧ್ಯವಿಲ್ಲ. ಮನುಷ್ಯ ಭಾವನೆಗಳನ್ನು ಹೊಂದಬೇಕು. ವ್ಯಕ್ತಿಯ ಚಿಂತನಾ ಲಹರಿ ಆಳಕ್ಕಿಳಿಯಬೇಕೆಂದರೆ ಕುವೆಂಪು ಸಾಹಿತ್ಯ ಓದಬೇಕು. ಮರಣ ಇಲ್ಲದ ವಸ್ತು ಎಂದರೆ ಪುಸ್ತಕ ಮಾತ್ರ. ಭಗವಂತ ಕೊಟ್ಟ ಸುಂದರ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಸತ್ಕಾರ್ಯಗಳಲ್ಲಿ ನಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಪ್ರೊ. ಡಾ. ಜಯಪ್ರಕಾಶ್ ಗೌಡ ಅವರು ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಹಿತ್ಯ, ಆಧ್ಯಾತ ಹಾಗು ವೈಜ್ಞಾನಿಕತೆಗೆ ಪ್ರೋತ್ಸಾಹ ನೀಡಿದ್ದರೆಂದರು.
ಕುವೆಂಪು ಅವರನ್ನು ನೃತ್ಯದ ಮೂಲಕ ಅರಿಯಬೇಕೆಂದು ಹಾಸನದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರೌಢ ಶಾಲಾ ಹಂತದಿಂದಲೇ ನೃತ್ಯದ ಮೂಲಕ ಗಮನ ಸೆಳೆದ ಡಾ. ಮಾನಸಾ ಅವರು ಬಿಇ ಪದವಿ ಪಡೆದು ಪಿಹೆಚ್.ಡಿ. ಕೂಡ ಮಾಡಿದ್ದಾರೆ. ರಾಜ್ಯ ಮಾತ್ರವಲ್ಲದೆ ಅನೇಕ ಕಡೆ ನೃತ್ಯ ಕಾರ್ಯಕ್ರಮಗಳ ಮೂಲಕ ಕುವೆಂಪು ಅವರನ್ನು ರಾಷ್ಟ್ರಕ್ಕೆ ಪರಿಚಯಿಸುತ್ತಿದ್ದಾರೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಶಿವರಾಮೇಗೌಡ ಮಾತನಾಡಿದರು.

ವಿಜಯ ಸ್ಕೂಲ್‌ನ ತಾರಾ ಎಸ್. ಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್.ಅನಿಲ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್ ಅಧ್ಯಕ್ಷ ನಿಶ್ಚಯ್ ಧನಪಾಲ್ ಜೈನ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಘು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಮತ್ತಿತರರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ.ಮದನಗೌಡ ಸ್ವಾಗತಿಸಿದರು.
Hassan
ಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
ಬೇಲೂರು : ಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ತಾಲೂಕಿನಲ್ಲಿ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಮೇಶ್ ಆತ್ಮಹತ್ಯೆ ಮಾಡಿಕೊಂಡ ರೈತ ಬೇಲೂರು ತಾಲೂಕಿನ ಹಳೇಬೀಡುಸೋ ಸಮೀಪದ ಗೋಣಿ ಸೋಮೇನಹಳ್ಳಿ ಗ್ರಾಮದ ರೈತ. ಕಳೆದ ಹತ್ತು ವರ್ಷಗಳ ಹಿಂದೆ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಕೃಷಿಗಾಗಿ ಮಾಡಿ ಕೊಂಡಿದ್ದ ಸಾಲವನ್ನ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕಿನಲ್ಲಿ ಸಾಲ ಮಾಡಿ ಹಣದಿಂದ ಕೃಷಿ ಚಟುವಟಿಕೆ ಮಾಡಿದ್ದು ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ನಡುವೆ, ಸರಿಯಾದ ಬೆಂಬಲ ಬೆಲೆ ಸಿಗದೇ ಹಿನ್ನೆಲೆ, ನಷ್ಟವನ್ನ ಅನುಭವಿಸಿತು ಬ್ಯಾಂಕ್ ಮತ್ತು ಕೈ ಸಾಲ ಸೇರಿಸುಮಾರು 20 ಲಕ್ಷದ ತನಕ ಸಾಲ ಮಾಡಿದ್ದ ಎನ್ನಲಾಗಿದೆ.

ಮನೆ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಮನೆ ಜಪ್ತಿ ಮಾಡಲು ಬಂದಾಗ ತನಗಿದ್ದ ಜಮೀನನ್ನ ಮಾರಾಟ ಮಾಡಿ ಬಡ್ಡಿ ರಹಿತ ಸಾಲ ಪಾವತಿಸಿದ. ಅಲ್ಲದೆ ಕೈ ಸಾಲ ಮತ್ತು ಮತ್ತೊಂದು ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಜಮೀನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮುಂದೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ ಎಂದು ಬೆಳಗ್ಗೆ, ತನ್ನ ಜಮೀನಿನ ಪಕ್ಕದ ದಿನೇಶ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ತೇಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Hassan
ಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
ಅರಕಲಗೂಡು: ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿ ವಾಸವಾಗಿರುವ ಅರ್ಪಿತ ಎಂಬುವವರು ಸಹಾಯಕ್ಕಾಗಿ 112 ಕರೆ ಮಾಡಿದರೆ ಸಮಯಕ್ಕೆ ಸರಿಯಾಗಿ ವಾಹನ ಬಾರದೇ ಇದ್ದರಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಆಗ ಎಎಸ್ಐ ದೇವರಾಜ್ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಏನಿದು ಘಟನೆ?
ಅಸಹಾಯಕ ಅರ್ಪಿತಾ ಅವರ ಅತ್ತೆ ಭಾಗ್ಯಮ್ಮ, ಅತ್ತಿಗೆ ಗೀತಾ, ನಾದಿನಿ ಜ್ಯೋತಿ, ಬಾವ ಲೋಕೇಶ್ ಎಲ್ಲಾ ಸೇರಿ ಗಂಡ ಇಲ್ಲದ ವೇಳೆ ಅವರ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ಮನೆಯ ಮಹಡಿಯ ಮೇಲೆ ವಾಸವಿದ್ದ ಅವರ ಮನೆಗೆ ಬೀಗ ಹಾಕಿ ಅವರನ್ನು ಮನೆ ಇಂದ ಹೊರ ಹಾಕುವ ಪ್ರಯತ್ನ ಮಾಡಿದ್ದರು.
ಅರ್ಪಿತಾ ಅವರಿಗೆ ಪ್ರೀತಿಸಿ 5 ವರ್ಷದ ಹಿಂದೆ ಮದುವೆ ಆಗಿತ್ತು. ಆದರೆ ಒಂದು ವರ್ಷದಿಂದ ಚೆನ್ನಾಗಿ ನೋಡಿಕೊಳ್ಳದೆ ಹೆಂಡತಿ ಇದ್ದರಿಂದ ಗಂಡನಿಂದ ದೂರ ಉಳಿದ್ದರು. ಇದೀಗ ಅರ್ಪಿತಾ ಅವರನ್ನು ಮನೆ ಖಾಲಿ ಮಾಡಿಸೋದಕ್ಕೆ ಅವರ ಅತ್ತೆ ಬಂದಿದ್ದಾರೆ.

ಈ ವೇಳೆ ಪೊಲೀಸರು ಆಕೆಯ ಸಹಾಯಕ್ಕೆ ಬಾರದೇ ಹಲ್ಲೆ ಮಾಡಿದವರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಹಲ್ಲೆಗೊಳಗಾದ ಅಸಹಾಯಕ ಮಹಿಳೆ ದೂರು ತೆಗೆದುಕೊಳ್ಳಲು ಎಎಸ್ಐ ದೇವರಾಜ್ ನಿರಾಕರಿಸಿದ್ದಾರೆ. ಆ ಅಸಹಾಯಕ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ, ನ್ಯಾಯ ಸಿಗದೇ ಕಣ್ಣೀರು ಹಾಕಿಕೊಂಡು ತನ್ನ ಅಳಲನ್ನು ತೋಡಿಕೊಂಡು ಬೀದಿಗೆ ಬಿದ್ದಿದ್ದಾರೆ.

ಈ ಸಂತ್ರಸ್ಥೆಯೂ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Hassan23 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Kodagu22 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Hassan24 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
-
Hassan6 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Chamarajanagar7 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Mandya24 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
Mysore22 hours agoನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ್
-
Mandya4 hours agoಕನ್ನಡ ಭವನ ನಿರ್ಮಾಣಕ್ಕೆ ನೀಲ ನಕಾಶೆ ತಯಾರಿ: ಜಿಲ್ಲಾಧಿಕಾರಿ ಡಾ.ಕುಮಾರ
