Education
ದೇಶ ಹಾಗೂ ವಿಶ್ವ ಕಟ್ಟುವಲ್ಲಿ ಶಿಕ್ಷಕರು ಮಹತ್ತರ ಪಾತ್ರ
ಮಂಡ್ಯ: ದೇಶ ಹಾಗೂ ವಿಶ್ವವನ್ನು ರಚನಾತ್ಮಕವಾಗಿ ಕಟ್ಟುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ. ಶಿಕ್ಷಕ ವೃತ್ತಿ ಪವಿತ್ರವಾಗಿದೆ ಎಂದು ಅಸೋಸಿಯೇಷನ್ ಅಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ ವಿ ಭೈರಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ಮಂಡ್ಯ ಸಕ್ಕರೆ ನಾಡು ಅಲಯನ್ಸ್ ಕ್ಲಬ್ ವಿಶ್ವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -2024 ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ವಿಶ್ವದಲ್ಲಿ ನಡೆದಿರುವ ಅಭಿವೃದ್ಧಿ ಕ್ರಾಂತಿಗೆ ಶಿಕ್ಷಕರು ನೀಡಿದ ಮಾರ್ಗದರ್ಶನ ಹಾಗೂ ಕಲಿಸುವಿಕೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲಯನ್ಸ್ ಕ್ಲಬ್ ದೇಶೀಯ ಸಂಸ್ಥೆಯಾಗಿದ್ದು ಸದಸ್ಯರು ಅಗತ್ಯವಿರುವ ಜನರಿಗೆ ನೆರವಾಗುವ ಮೂಲಕ ಸಹಕಾರ ನೀಡುತ್ತಿದ್ದಾರೆ.ಮಂಡ್ಯದಲ್ಲಿ ಮೂವತ್ತು ಕ್ಲಬ್‌ಗಳು ರಚನಾತ್ಮಕವಾಗಿ ಸೇವಾ ಮಾಡುತ್ತಿದ್ದಾರೆ ಎಂದರು.
ಬಳಿಕ ಮಾತನಾಡಿದ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ,ಮನುಷ್ಯ ಎಷ್ಟೇ ದೊಡ್ಡವನಾದರೂ ಗುರುವಿನ ಮಾರ್ಗದರ್ಶನ ಬೇಕು.ಎಷ್ಟೋ ಜನ ಉತ್ತಮ ವಾಗಿ ಎಲೆಮರೆಕಾಯಿ ಹಾಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರನ್ನು ಗುರುತಿಸಿರುವುದಿಲ್ಲ. ಅಂತಹವರನ್ನು ಅಲಯನ್ಸ್ ಸಂಸ್ಥೆ ಗುರ್ತಿಸಿ ಗೌರವಿಸುವ ಕೆಲಸ ಮಾಡಿವೆ.ಇಷ್ಟಾಗಿಯೂ ಶಿಕ್ಷಕರ ಸಮಸ್ಯೆಗಳು ಬೆಟ್ಟದಷ್ಟಿವೆ.ಇವುಗಳನ್ನು ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಕರೆ ನಾಡು ಅಲಯನ್ಸ್ ಕ್ಲಬ್ ಅಧ್ಯಕ್ಷೆ ಸಿ.ಕೆ.ನವ್ಯಶ್ರೀ ವಹಿಸಿ ಮಾತನಾಡಿದರು.

ನಂತರ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಬಿ. ಹೊಸೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬೋರೇಗೌಡ, ಎಲೆಚಾಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಎ. ಬಸವರಾಜು, ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಮಸಿಂಗಯ್ಯ, ಶಿವಪುರ ಶಾಲೆ ಎಂ.ಎಚ್.ದಯಾನಂದ,ಜೋಡಿ ಹೊಡಗಟ್ಟ ಸರ್ಕಾರಿ ಪ್ರೌಢಶಾಲೆಯ ಕೆ.ಟಿ. ನಾರಾಯಣ ಅರಸ್, ಪಾಂಡವಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತೋಟಗಾರಿಕಾ ಶಿಕ್ಷಕ ಚನ್ನೇಗೌಡ, ಚಿಕ್ಕರಸಿನಕೆರೆ ಪ್ರೌಢಶಾಲೆ ಎಸ್.ರುದ್ರಪ್ಪ,ಕೃಷ್ಣರಾಜಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಸಹಶಿಕ್ಷಕರಾದ ಬಿ.ಎಂ. ಕೃಷ್ಣೇಗೌಡ, ಮಳವಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಯ್ಯ, ಪಿ. ಇ.ಎಸ್ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಎಂ. ಮಂಜುನಾಥ್, ಮಂಡ್ಯ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ (ಕಲ್ಲು ಕಟ್ಟಡ) ಉಪನ್ಯಾಸಕಿ ಡಾ. ಕೆ.ಆರ್. ರೂಪಶ್ರೀ, ಮಂಡ್ಯ ನಗರದ ಪೊಲೀಸ್ ಕಾಲೋನಿಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಕುಮಾರ್, ಹೊಳಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪುಟ್ಟಸ್ವಾಮಯ್ಯ, ಹೆಚ್. ಮಲ್ಲಿಗೆರೆ ಬಿ.ಎಲ್.ಎಸ್ ಪ್ರೌಢಶಾಲೆ ಸಹಶಿಕ್ಷಕ ಎನ್. ಗೋಪಿನಾಥ್, ಶ್ರೀರಂಗಪಟ್ಟಣ ತಾಲೂಕಿನ ಪಿ. ನೇರಳಕೆರೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅನಿತಾ ಮನೋಹರಿ, ನಾಗಮಂಗಲ ತಾಲೂಕು ಬೋಗಾದಿ ಪ್ರೌಢಶಾಲಾ ಶಿಕ್ಷಕಿ ಎಚ್. ಇ. ಇಂದ್ರಮ್ಮ, ಕೀಲಾರ ಗ್ರಾಮದ ನಿವೃತ್ತ ಶಿಕ್ಷಕ ಕೆ.ಜಿ. ಲಕ್ಷ್ಮಣ, ಸಂತೆಕಸಲಗೆರೆ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಹೆಚ್. ಶೋಭಾ, ಹುಳ್ಳೇನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಹಶಿಕ್ಷಕ ಎಂ.ಸಿ. ಗೋವಿಂದ, ಟಿ. ಮಲ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸಿ. ಸುನಿತಾ, ಮದ್ದೂರು ತಾಲೂಕು ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಎಸ್. ವಿಜಯಲಕ್ಷ್ಮಿರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಕೆ.ಟಿ..ಹನುಮಂತು,ಒಂದನೇ ಉಪ ರಾಜ್ಯಪಾಲ ಕೆ.ಆರ್. ಶಶಿಧರ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಸಕ್ಕರೆ ನಾಡು ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಎಂ. ಕುಮಾರ್, ಖಜಾಂಚಿ ಬಿ.ಎನ್. ಚಂದ್ರಶೇಖರ್, ಜಿಲ್ಲಾಧ್ಯಕ್ಷರಾದ ಎಚ್. ಪಿ. ದಯಾನಂದ, ಉಪಾಧ್ಯಕ್ಷ ಕೆ.ಎಂ. ಸಿದ್ದರಾಜು, ವಲಯಾಧ್ಯಕ್ಷ ಎಂ. ಲೋಕೇಶ್, ಪ್ರತಿಭಾಂಜಲಿ ಡೇವಿಡ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಸಂತಕುಮಾರ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್,ತಾಲ್ಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಎಸ್. ವಿಜಯಕುಮಾರ್ ಹಾಗೂ ಸಿದ್ದೇಗೌಡ ಇದ್ದರು.
Education
Power Sprayer ಸಬ್ಸಿಡಿ ಯೋಜನೆ: ಕೇವಲ ರೂ.1,781 ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಿರಿ.
ಕರ್ನಾಟಕ ರಾಜ್ಯ ಸರ್ಕಾರ ರೈತ ಬಂಧುಗಳಿಗೆ ಸಂತಸದ ಸುದ್ದಿ ನೀಡಿದ್ದು, ಸಹಾಯಧನ (ಸಬ್ಸಿಡಿ) ಯೋಜನೆಯಡಿ ಪವರ್ ಸ್ಪ್ರೇಯರ್ ಪಡೆಯುವ ಅವಕಾಶ ಲಭ್ಯವಾಗಿಸಿದೆ. ಈ ಯೋಜನೆಯಡಿ ಕೇವಲ, ರೂ.1,781/- ಪಾವತಿಸಿ ಯಂತ್ರವನ್ನು ಪಡೆಯಬಹುದಾಗಿದೆ.
ಯೋಜನೆಯ ಉದ್ದೇಶ:
ರೈತರಿಗೆ ಸ್ಪ್ರೇಯಿಂಗ್ ಕೆಲಸವನ್ನು ಸುಲಭಗೊಳಿಸಿ, ಸಮಯ ಮತ್ತು ಶ್ರಮ ಉಳಿಸಲು ಈ ಪವರ್ ಸ್ಪ್ರೇಯರ್ ಸಬ್ಸಿಡಿ ಯೋಜನೆ ರೂಪಿಸಲಾಗಿದೆ. ಯಂತ್ರದ ಸಹಾಯದಿಂದ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಸಮವಾಗಿ ಮತ್ತು ವೇಗವಾಗಿ ಸಿಂಪಡಿಸಬಹುದು.
ಸಹಾಯಧನದ ವಿವರಗಳು:
ಸಾಮಾನ್ಯ ವರ್ಗದ ರೈತರಿಗೆ:
ಪೂರ್ಣ ದರ: ₹10,219/-
ಸಬ್ಸಿಡಿ: ₹4,688/-
ರೈತನಿಂದ ಪಾವತಿ: ₹5,531/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ರೈತರಿಗೆ: ಪೂರ್ಣ ದರ: ₹9,375/-
ಸಬ್ಸಿಡಿ: ₹8,438/-
ರೈತನಿಂದ ಪಾವತಿ:₹1,781/-
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್
3. ಜಮೀನಿನ ಪಹಣಿ/RTC
4. ರೇಷನ್ ಕಾರ್ಡ್
5. ಪಾಸ್‌ಪೋರ್ಟ್ ಸೈಸ್ ಫೋಟೋ
6. ಬಾಂಡ್ ಪೇಪರ್
7. ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ:
ರೈತ ಬಂಧುಗಳು ಸಮೀಪದ ರೈತ ಸಂಪರ್ಕ ಕೇಂದ್ರ (Raita Samparka Kendra)ಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬಹುದು.ಅಥವಾ ಆನ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.
ಎಲ್ಲಾ ದಾಖಲೆಗಳೊಂದಿಗೆ ಪೂರ್ಣ ಮಾಹಿತಿಯನ್ನು ಸಲ್ಲಿಸಿದ ಬಳಿಕ, ಸಹಾಯಧನ ಅನುಮೋದನೆ ದೊರೆಯುತ್ತದೆ.
ಸೂಚನೆಗಳು:
1.ಸಬ್ಸಿಡಿ ಲಭ್ಯತೆ ನಿಮ್ಮ ಜಿಲ್ಲೆಯ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅನುದಾಯ ಮಿತಿಯ ಮೇಲೆ ಅವಲಂಬಿತವಾಗಿರುತ್ತದೆ.
2.ಯಂತ್ರದ ಕಂಪನಿ ಹಾಗೂ ಮಾದರಿಗಳ ಪ್ರಕಾರ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.
3.ಅರ್ಜಿಯ ವೇಳೆಗೆ ಅಧಿಕೃತ ದೃಢೀಕರಣ ಪತ್ರಗಳನ್ನು ಮಾತ್ರ ಸಲ್ಲಿಸುವುದು ಅತ್ಯಂತ ಅಗತ್ಯ.
ರಾಜ್ಯ ಸರ್ಕಾರ ನೀಡುತ್ತಿರುವ ಈ ಪವರ್ ಸ್ಪ್ರೇಯರ್ ಸಹಾಯಧನ ಯೋಜನೆಯು ರೈತರ ಶ್ರಮವನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ಮಾಹಿತಿ ಪಡೆದು ತಕ್ಷಣ ಅರ್ಜಿ ಸಲ್ಲಿಸಿ.
Education
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) – 2025 ಅರ್ಜಿ ಆಹ್ವಾನ : ಹೊಸ ನಿಯಮ ತಿದ್ದುಪಡಿ ಪ್ರಕಟ!
ಈ ಬಾರಿ TET ನಿಯಮದಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದ್ದು, ಶಿಕ್ಷಕ ವೃತ್ತಿಗೆ ಆಸಕ್ತರಾಗಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ.
ಪರೀಕ್ಷೆಯ ಕುರಿತು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 8ನೇ ತರಗತಿವರೆಗೆ ಶಿಕ್ಷಕರ ನೇಮಕಾತಿಗೆ ಅಗತ್ಯವಾದ ಅರ್ಹತಾ ಪರೀಕ್ಷೆಯಾಗಿದೆ. ಪ್ರತೀ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಈ ಪರೀಕ್ಷೆಯನ್ನು ಆಯೋಜಿಸುತ್ತದೆ.
ಪ್ರಮುಖ ತಿದ್ದುಪಡಿ: ಹಿಂದಿನ ಅಧಿಸೂಚನೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ B.Ed ಓದುತ್ತಿರಬೇಕು ಅಥವಾ ಪಾಸಾಗಿರಬೇಕು ಎಂಬ ನಿಯಮ ಅನಿವಾರ್ಯವಾಗಿತ್ತು.ಆದರೆ ಈಗ ಈ ನಿಯಮವನ್ನು ಹಿಂಪಡೆಯಲಾಗಿದ್ದು, ಈ ಶರತ್ತು ಇದೀಗ ಕೈಬಿಡಲಾಗಿದೆ, ಹಾಗಾಗಿ ಪೂರ್ವ ನಿಯಮದಂತೆ ಅಭ್ಯರ್ಥಿಗಳಿಗೆ ಹೆಚ್ಚು ಸಡಿಲಿಕೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-11-2025
ಪರೀಕ್ಷೆಯ ದಿನಾಂಕ: 07-12-2025
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ(https://schooleducation.karnataka.gov.in/cacell/en) ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಬಹುದು.
TET ಹೊಸ ನಿಯಮ ತಿದ್ದುಪಡಿಯಿಂದ ಹೆಚ್ಚು ಅಭ್ಯರ್ಥಿಗಳಿಗೆ ಅವಕಾಶ ದೊರೆತಿದೆ. ಹಾಗೂ ಶಿಕ್ಷಕರಾಗುವ ಕನಸನ್ನು ಸಾಕಾರಗೊಳಿಸಲು ಇದು ಉತ್ತಮ ಅವಕಾಶವಾಗಿದೆ.
Education
ಬ್ಯಾಂಕ್ ಖಾತೆಗಳಲ್ಲಿ ಹೊಸ ಅಧ್ಯಾಯ: ಕುಟುಂಬದ ಭದ್ರತೆಗೆ ನಾಲ್ಕು ನಾಮನಿರ್ದೇಶಿತರ ಅವಕಾಶ
ಬ್ಯಾಂಕ್ ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ ಸಿಗಲಿದೆ. ಈಗಿನವರೆಗೆ ಖಾತೆಗಳಲ್ಲಿ ಒಬ್ಬರ ನಾಮನಿರ್ದೇಶನಕ್ಕೆ ಮಾತ್ರ ಅವಕಾಶವಿತ್ತು, ನವೆಂಬರ್ 1, 2025ರಿಂದ ನಾಲ್ಕು ಜನರ ತನಕ ನಾಮನಿರ್ದೇಶಿತರನ್ನು ನೇಮಿಸಲು ಅವಕಾಶ ದೊರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಇಲಾಖೆ ಪ್ರಕಟಿಸಿದೆ.
ಹೊಸ ನಿಯಮದ ಉದ್ದೇಶ :
ಖಾತೆದಾರರು ನಿಧನರಾದ ನಂತರ ಬ್ಯಾಂಕ್ ಹಣ ಅಥವಾ ಠೇವಣಿಗಳ ಹಕ್ಕು ಹಂಚಿಕೆಯಲ್ಲಿ ಅನಾವಶ್ಯಕ ತೊಂದರೆಗಳು, ಕಾನೂನು ವಿವಾದಗಳು ಉಂಟಾಗದಂತೆ ತಡೆಯುವುದು.
ಹೊಸ ನಾಮನಿರ್ದೇಶನ ವ್ಯವಸ್ಥೆ ಹೇಗಿರಲಿದೆ?
* ಖಾತೆದಾರರು ಗರಿಷ್ಠ ನಾಲ್ಕು ಜನರನ್ನು ನಾಮನಿರ್ದೇಶಿತರಾಗಿ ನಿಗದಿಪಡಿಸಬಹುದು.
* ಪ್ರತಿ ನಾಮನಿರ್ದೇಶಿತನಿಗೂ ಶೇಕಡಾವಾರು ಹಂಚಿಕೆ (ಉದಾ: 40%, 30%, 20%, 10%) ನಿಗದಿಪಡಿಸಬಹುದು.
* ಬ್ಯಾಂಕ್ ಲಾಕರ್ ಅಥವಾ ಸುರಕ್ಷಿತ ವಸ್ತುಗಳ ನಾಮನಿರ್ದೇಶನದ ಸಂದರ್ಭಗಳಲ್ಲಿ ಕ್ರಮಬದ್ಧ ನಾಮನಿರ್ದೇಶನ (successive nomination) ವ್ಯವಸ್ಥೆ ಅನ್ವಯಿಸುತ್ತದೆ.
* ಖಾತೆದಾರರು ಬಯಸಿದಾಗ ನಾಮನಿರ್ದೇಶನದ ಹೆಸರು ಅಥವಾ ಪ್ರಮಾಣ ಬದಲಾಯಿಸಲು ಅವಕಾಶವಿದೆ.
ಈ ನಿಯಮ ಜಾರಿಗೆ ಆಗುವ ದಿನಾಂಕ : 1/11/2025
ಬ್ಯಾಂಕ್ ಖಾತೆಗಳಿಗೆ ನಾಲ್ಕು ನಾಮನಿರ್ದೇಶನ ಅವಕಾಶ ನೀಡುವ ಹೊಸ ನಿಯಮ ಗ್ರಾಹಕರಿಗೆ ಭದ್ರತೆ, ಪಾರದರ್ಶಕತೆ ಮತ್ತು ವಿಶ್ವಾಸದ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರತಿ ಖಾತೆದಾರರೂ ತಮ್ಮ ನಾಮನಿರ್ದೇಶನ ಮಾಹಿತಿಯನ್ನು ತಕ್ಷಣ ನವೀಕರಿಸಿಕೊಳ್ಳಬೇಕು.
-
State19 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Mandya22 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
Mandya20 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Chamarajanagar14 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Kodagu13 hours agoಪ್ರಧಾನಿ ಬಗ್ಗೆ ಅವಹೇಳನ – ಮಡಿಕೇರಿಯ ಮೂವರ ಬಂಧನ
-
State14 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Hassan17 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Hassan16 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
