Mandya
ಅಗತ್ಯ ಸೇವಾ ವಲಯದ 1022 ಮತದಾರರಿಗೆ ಏ.19 ರಿಂದ ಅಂಚೆ ಮತದಾನದ ವ್ಯವಸ್ಥೆ
ಮಂಡ್ಯ: ಅಗತ್ಯ ಸೇವಾ ವಲಯದಡಿ ಬರುವ 1022 ಮತದಾರರಿಗೆ ಏಪ್ರಿಲ್ 19, 20 ಹಾಗೂ 21 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮಂಡ್ಯ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಅಂಚೆ ಬ್ಯಾಲೆಟ್ ಮುಖಾಂತರ ಮತದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಇಂದು ನೋಡಲ್ ಅಧಿಕಾರಿಗಳ ಸಭೆ ನಡಸಿ ಮಾತನಾಡಿದರು.1022 ಮತದಾರರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 502 ಮತದಾರರು ಹಾಗೂ ಮಂಡ್ಯ ಜಿಲ್ಲಾ ಮತದಾರರಾಗಿದ್ದು, ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 521 ಮತದಾರರಿದ್ದರೆ. ಇವರಿಗೆ ಈಗಾಗಲೇ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ವಿವರವನ್ನು ಎಸ್.ಎಂ.ಎಸ್ ಮೂಲಕ ಕಳುಹಿಸಿಕೊಡಲಾಗಿದೆ.
ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತದಾರರಿಗೆ ಪತ್ರ ಮುಖೇನ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ವಿವರ ತಿಳಿಸುವಂತೆ ಮತ್ತು ಮಾಹಿತಿ ಕೊರತೆಯಿಂದ ಯಾರೂ ಮತದಾನದಿಂದ
ವಂಚಿತರಾಗಬಾರದು.
ಅಗ್ನಿ ಶಾಮಕ ಇಲಾಖೆಯಿಂದ- 30, ಸಾರಿಗೆ- 573, ಆರೋಗ್ಯ-31, ಮಾಧ್ಯಮ-10, ಪೊಲೀಸ್- 68, ಸಂಚಾರಿ ಪೊಲೀಸ್- 218, ರೈಲ್ವೆ-9, ಕಾರಾಗೃಹ- 19, ವಿದ್ಯುತ್ – 26, ಬಿ.ಎಂ.ಆರ್.ಸಿ.ಎಲ್-5 ಹಾಗೂ ಗ್ರಾಮೀಣ ಹಾಗೂ ನಗರ ಕುಡಿಯುವ ನೀರು ಸರಬರಾಜು- 33 ಮತದಾರರಿಗೆ ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ.
ಅಗತ್ಯ ಸೇವಾ ವಲಯದ ವ್ಯಾಪ್ತಿಗೆ ಬರುವ ಇಲಾಖೆಯ ಮುಖ್ಯಸ್ಥರು ಮತದಾರರಿಗೆ ಮತದಾನ ಮಾಡಲು ಅನುಮತಿ ನೀಡಿ ವ್ಯವಸ್ಥೆ ಮಾಡಿಕೊಡಬೇಕು. ಗುರುತಿಸಲಾಗಿರುವ 1022 ಮತದಾರರಿಗೆ ಏಪ್ರಿಲ್ 26 ರಂದು ಇ.ವಿ.ಎಂ. ಮೂಲಕ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವರಾಜು, ನಗರಾಭಿವೃದ್ಧಿ ಕೋಶದ ಪುರಸಭೆ ತಹಶೀಲ್ದಾರ್ ರವಿಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಮದ್ದೂರಿನಲ್ಲಿ ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ – ಹೆಚ್ಡಿಕೆ ವಿರುದ್ದ ಹರಿಹಾಯ್ದ ಡಿಕೆಶಿ
ಮದ್ದೂರಿನಲ್ಲಿ ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ – ಹೆಚ್ಡಿಕೆ ವಿರುದ್ದ ಹರಿಹಾಯ್ದ ಡಿಕೆಶಿ
ಮದ್ದೂರು: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದ ಉದ್ದಕ್ಕೂ ಹರಿಹಾಯ್ದರು.
ಪೆನ್ ಡ್ರೈವ್ ವಿಚಾರವಾಗಿ ಹೆಚ್ಡಿಕೆಗೆ ತಿರುಗೇಟು ನೀಡಿದ ಡಿಕೆಶಿ, ಪೆನ್
ಡ್ರೈವ್ ವಿಚಾರವಾಗಿ ನೀನುಂಟು, ನಿಮ್ಮ ಅಣ್ಣತಮ್ಮಂದಿರು ಉಂಟು.
ಪೆನ್ ಡ್ರೈವ್ ರಿಲೀಸ್ ಮಾಡಿದ್ದು ಮಹಾನಾಯಕ ಡಿಸಿಎಂ ಅಂದೇ.
ಆ ಮಾತಿಗೆ ಸ್ಟಿಕಾನ್ ಆಗಬೇಕಿತ್ತು.
ಆ ಮಾತು ಬದಲಿಸಿದ್ದು ಯಾಕೆ?.
ನನ್ನದು ನಿನ್ನದು 1980ರಿಂದಲೂ ನಡೀತ್ತಿದೆ. ಬರಲಿ ಎಲ್ಲವೂ, ನಾನು ಹೊರ ತರ್ತೀನಿ. ನನ್ನಜ್ಜಯ್ಯನ ಶಕ್ತಿ ನಿನಗೇನು ಗೊತ್ತು. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ. ಮಂಜುನಾಥನ ಮುಂದೆ ಆಣೆ-ಪ್ರಮಾಣ ಮಾಡುದ್ರಲ್ಲ. ಯಡಿಯೂರಪ್ಪನ್ನ ಜೈಲಿಗೆ ಯಾಕೆ ಕಳಿಸಿದೆ ಹೇಳು?. ಆಣೆ-ಪ್ರಮಾಣ ಮಾಡಿದ ನಂತರ ಮುಂದೇನಾಯ್ತು ಅಂತಾ ಗೊತ್ತಿಲ್ಲವಾ?. ಪಾದಯಾತ್ರೆ ಬೇಡ ಅಂತಾ ಯಾಕೆ ಹೇಳಿದೆ.
ಆಮೇಲೆ ಯಾಕೆ ಒಪ್ಪಿಕೊಂಡೆ ಅದಕ್ಕೆ ಉತ್ತರ ಕೊಡು. ಪ್ರೀತಂಗೌಡ ದೇವೇಗೌಡರ ಕುಟುಂಬವನ್ನ ನಾಶ ಮಾಡಲು ಹೊರಟವನು ಅಂದೆ. ನೀನೇ ಅಲ್ವಾ ಅವತ್ತು ರೇವಣ್ಣ ಕುಟುಂಬ ಬೇರೆ ನನ್ನ ಕುಟುಂಬ ಬೇರೆ ಅಂತಾ ಹೇಳಿದ್ದು.
ಇಂತಹ ಪಾದಯಾತ್ರೆಗೆ ನಾನು ಹೆದರುವವನಲ್ಲ. ನಿನ್ನ ಬೇನಾಮಿ ಸಹೋದರನ ದಾಖಲೆ ಕೊಡಪ್ಪ ಎಂದು ಪ್ರಶ್ನಿಸಿದರು.
ಬಿಜೆಪಿ ಹಗರಣದ ಮಾಹಿತಿ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್, ಬಡವರ ಪರ ಇದ್ದ ಕಾಂಗ್ರೆಸ್ ಅಧಿಕಾರದಲ್ಲಿದೆ.
ಬೆಲೆಯೇರಿಕೆಯಿಂದ ಬಡವರು ತತ್ತರಿಸಿದ್ರು. 5ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಮೀ ಯೋಜನೆ ಮನೆ ಯಜಮಾನಿಯರಿಗೆ ಬರುತ್ತಿದೆ ಎಂದರು.
ಈ ವೇಳೆ ಬರ್ತಾಯಿಲ್ಲ, ಬತ್ತಾಯಿಲ್ಲ ಎಂದು ಮಹಿಳೆಯರು ಕೂಗಿದ ಘಟನೆ ನಡೆಯಿತು. ಮುಂದುವರೆದು ಮಾತನಾಡಿದ ಡಿ.ಕೆ.ಶಿವಕುಮಾರ್ ಬರುತ್ತಿದೆ. 2 ತಿಂಗಳಿನಿಂದ ಬಂದಿಲ್ಲ ಅಷ್ಟೇ,. ಅದು ಬರುತ್ತದೆ ಎಂದು ಮಾತು ಮುಂದುವರೆಸಿದರು.
ಗ್ಯಾರಂಟಿ ನಿಲ್ಲಸಬೇಕೆಂದು ಬಿಜೆಪಿ ಜೆಡಿಎಸ್ ಪ್ರಯತ್ನ.
10ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಎಚ್‌ಡಿಕೆ ಹೇಳುತ್ತಾರೆ. ಬ್ರಿಟಿಷರ ಕೈಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ.
ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ?
10ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ ನಮ್ಮದು 10ವರ್ಷದ ಸರ್ಕಾರ. ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ.
ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಬದುಕಿನ ಮೇಲೆ ರಾಜಕಾರಣ. ಮುಸ್ಲಿಂರು ಇಲ್ಲ ಎಂದಿದ್ರೆ ನೀವು MLA ಆಗ್ತಿರಲಿಲ್ಲ, ನಿಮ್ಮ ತಂದೆ CM ಆಗ್ತಿರಲಿಲ್ಲ.
ಈಗ ಮುಸ್ಲಿಮರಿಗೆ ಓಟ್ ಹಾಕಿಲ್ಲ ಅಂತಾ ಧಮ್ಕಿ ಹಾಕ್ತಾರೆ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಕುಮಾರಸ್ವಾಮಿ ಎಂದರು.
ನಿನ್ನ ಅಧ್ಯಕ್ಷತೆಯಲ್ಲಿ ಎಷ್ಟು ಬಂತು ಬರೀ 19 ಸೀಟು. ಈಗ 2 ಸೀಟು ಗೆದ್ದು ಬಿಜೆಪಿ ಬ್ಲಾಕ್ ಮೇಲ್ ಮಾಡ್ತಿದ್ದೀಯಾ. ರೇವಣ್ಣಂದು ಬೇರೆ ಕುಟುಂಬ ಅಂತಾ ಅಂದು ಈಗ ನನ್ನ ಕುಟುಂಬದ ಮರ್ಯಾದೆ ತೆಗೆದ ಅಂತಾ ಪ್ರೀತಿಂಗೆ ಹೇಳ್ತೀಯಾ?. ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಎಂದು ದೇವರಾಜೇಗೌಡ ಕೈಲಿ ಪತ್ರ ಬರೆಸಿದ್ದು ಯಾರು?. ಸ್ವಂತ ಅಣ್ಣ, ಅಣ್ಣನ ಮಗನನ್ನೇ ಅವನು ಸಹಿಸಲ್ಲ. ಇನ್ನು ನನ್ನ ಏಳಿಗೆ ಸಹಿಸುತ್ತಾನ? ಎಂದರು.
ನೀನು 10,000 ಜನರಿಗೆ ಕೆಲಸ ಕೊಡುವ ಕಾರ್ಖಾನೆಯನ್ನು ಜಿಲ್ಲೆಗೆ ತಂದರೆ ನನ್ನ ಬೆಂಬಲ ಇರುತ್ತದೆ.
ಬಿಜೆಪಿ, ಜೆಡಿಎಸ್ ಸಮಾಜ ಒಡೆಯುವ ಕೆಲಸ ಮಾಡುತ್ತದೆ.
ಕಾಂಗ್ರೆಸ್ ಸಮಾಜ ಜೋಡಿಸುವ ಕೆಲಸ ಮಾಡುತ್ತದೆ. ಪಾದಯಾತ್ರೆ ಬೇಡ ಎಂದು ಮತ್ತೆ ಯಾಕೆ ಒಪ್ಪಿಕೊಂಡೆ ಹೇಳು. ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯ ಕಳ್ಳತನ ಮಾಡಿದ್ದಾರಾ..?. ಸರ್ಕಾರದ ಜಮೀನು ಒಡೆದಿದ್ದಾರ?
ಅಣ್ಣನ ಸೈಟು ಕೊಟ್ಟಿದ್ರು ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ ಎಂದರು.
ಅವರ ಕುಟುಂಬದಿಂದ ಇದು 20 ವರ್ಷದಿಂದ ನಡೀತಾ ಇದೆ.
ನನ್ನ ವಿರುದ್ದ ಇಡಿ,ಸಿಬಿಐ ಬಿಟ್ಟು ನನ್ನ ವಿರುದ್ದ ಏನಾದ್ರು ಸಿಗುತ್ತೆ ಅಂತಾ ಜಾಲಾಡ್ತಿದ್ದಾರೆ. ಇದ್ರಿಂದ ನನಗೇನು ತೊಂದರೆ ಇಲ್ಲ,ಇವರು ಅದನ್ನೇ ತಗೊಂಡು ಮಾಡ್ತಾರೆ ಮಾಡ್ಲಿ. ನನ್ನದು ತೆರದ ಪುಸ್ತಕ ಏನು ತೊಂದರೆ ಇಲ್ಲ. ಮೈತ್ರಿ ಪಕ್ಷದ ಪಾದಯಾತ್ರೆ ನನಗೆ ವರಕೊಟ್ಟಂತೆ ಆಗಿದೆ. ಅವರ ವಿಚಾರಗಳನ್ನು ಅಕ್ರಮಗಳನ್ನು ಭ್ರಷ್ಟಾಚಾರಗಳನ್ನು ಜನರ ಮುಂದೆ ತೆರದಿಡುವ ಅವಕಾಶ ಸಿಕ್ಕಿದೆ. ನನ್ನ ಚಾಲೆಂಜ್ ನನ್ನು ಚರ್ಚೆ ಮಾಡ್ಲಿಕೆ ಅಸೆಂಬ್ಲಿಗೆ ಅವರೇ ಡೇಟ್ ಫಿಕ್ಸ್ ಮಾಡಿ ಬರಲಿ.
ಅವರು ಅಸೆಂಬ್ಲಿ ಒಳಗೆ ಬರೋಕೆ ಆಗಲ್ಲ, ಅವರ ಸಹೋದರನನ್ನು ಕಳಿಸಲಿ.
ಪೌರಾಡಳಿತ ಇಲಾಖೆ ಒಂದೇ ದಿನ 20 ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿ, ನನ್ನ ಇಲಾಖೆಗೆ ಸಂಬಂಧಪಟ್ಟಂತೆ ನಾನು 100 ಜನರನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಯಾವುದೇ ಲಂಚದ ಆರೋಪ ಬರಲ್ಲ. ಮಂತ್ರಿಗಳಿಗೆ ಇದರಲ್ಲಿ ಅವಕಾಶ ಇರುತ್ತೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆಡಳಿತಾತ್ಮಕ ನಿರ್ಧಾರ. ನಾನೇನು ಯಾವುದೇ ದಲಿತ ಕುಟುಂಬ ಹಾಳು ಮಾಡಿಲ್ಲ, ಬೇಕಿದ್ರೆ ಪಟ್ಟಿ ಕೊಡಲಿ.
ಪಾದಯಾತ್ರೆಯಲ್ಲಿ ಬಿಜೆಪಿಯವರಿಂದ ಮಾಧ್ಯಮದವರ ಹಲ್ಲೆ ಖಂಡನೀಯ.
ಕುಮಾರಣ್ಣನ ಗಣಿ ಹಗರಣದ ಬಗ್ಗೆ ನಾನು ಈಗ ಮಾತಾಡೋದಿಲ್ಲ.
ಲೋಕಾಯುಕ್ತಕ್ಕೆ ಕೊಟ್ಟುಬಿಟ್ಟು ಆನಂತರ ಮಾತಾಡ್ತೀನಿ.
ಹೆಚ್ಡಿಕೆ ಗಣಿ ಹಗರಣ ಬಿಡುಗಡೆಯ ಸುಳಿವು ನೀಡಿದ ಡಿಕೆಶಿ.
ನೀನು ಈಗ ಸ್ಟೀಲ್ ಮಂತ್ರಿ. ಸ್ಟೀಲ್ ಅಂದ್ರೆ ಕಬ್ಬಿಣ. ಬಿಜೆಪಿ-ಜೆಡಿಎಸ್‌ನವರು ಕಬ್ಬಿಣದಿಂದ ಕತ್ತರಿಸುವ ಕತ್ತರಿ ಮಾಡ್ತಾರೆ. ನಾವು ಸೂಜಿ ಮಾಡಿ ಜೋಡಿಸೋ ಕೆಲಸ ಮಾಡ್ತೇವೆ.
ನಿನ್ನೆ ಯಾಕೋ ಎಸ್.ಎಂ.ಕೃಷ್ಣ ಅವರನ್ನ ನೆನಪು ಮಾಡ್ಕೊಂಡಿದ್ದಾನೆ. ಅವರ ಬಗ್ಗೆ ಮಾತಾಡುವಷ್ಟು ಯೋಗ್ಯತೆ ಇದೆಯ ನಿನಗೆ. ನಿನ್ನದು ಖಾಲಿ ಮಾತು, ಬುಡ ಬುಡುಕೆ ಬೇಡ.
ಸಿದ್ದರಾಮಯ್ಯರನ್ನ ಮುಟ್ಟೋಕೇ ಸಾಧ್ಯವೇ ಇಲ್ಲ ನಿಮಗೆ. ಹಿಂದುಳಿದ ವರ್ಗದವರ ನಾಯಕ ಎರಡನೇ ಬಾರಿ ಸಿಎಂ ಆಗಿದ್ದಾರೆ. ಬಡವರ ಪರ ಯೋಜನೆ ಕೊಡ್ತಿರೋದನ್ನ ಸಹಿಸೋಕೆ ಆಗ್ತಿಲ್ಲ ನಿಮಗೆ ಎಂದು
ಬಿಜೆಪಿ-ಜೆಡಿಎಸ್‌ನವರನ್ನ ಅಕ್ಬರ್-ಬೀರ್ ಬಲ್ ಸಂಭಾಷಣೆಗೆ ಹೋಲಿಸಿ ವ್ಯಂಗ್ಯವಾಡಿದರು.
ಸಭೆಯಲ್ಲಿ ಮದ್ದೂರು ಶಾಸಕ ಕೆ.ಉದಯ್ ಸೇರಿದಂತೆ ಸಚಿವರು, ಶಾಸಕರು ಹಾಗೂ ಮಾಜಿ ಸಚಿವರುಗಳು ಉಪಸ್ಥಿತರಿದ್ದರು.
Mandya
ಡೆಂಗ್ಯೂ ಜ್ವರದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ – ಡಿಸಿ ಸೂಚನೆ
ಮಂಡ್ಯ : ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜುಲೈ ಮಾಹೆಯಲ್ಲಿ ಒಟ್ಟು 395 ಪ್ರಕರಣಗಳು ದಾಖಲಾಗಿವೆ. ಮಂಡ್ಯ ನಗರ – 75, ಮಂಡ್ಯ ಗ್ರಾಮಾಂತರ – 147,
ಮದ್ದೂರು – 61, ಮಳವಳ್ಳಿ – 24, ಪಾಂಡವಪುರ – 19, ಶ್ರೀರಂಗಪಟ್ಟಣ – 34, ಕೆ ಆರ್ ಪೇಟೆ – 14, ನಾಗಮಂಗಲ – 21 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಾದ್ಯಂತ ಸಾರ್ವಜನಿಕರು ಡೆಂಗ್ಯೂ ಜ್ವರ ಬಾರದಂತೆ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸಬೇಕು ಎಂದರು.
ಹಾಟ್ ಸ್ಪಾಟ್ ಗ್ರಾಮ ಒಂದು ಗ್ರಾಮ / ಪ್ರದೇಶದಲ್ಲಿ 100 ಮೀಟರ್ ಅಂತರದಲ್ಲಿ 2 ಡೆಂಗ್ಯೂ ಪ್ರಕರಣಗಳು ವರದಿಯಾದಲ್ಲಿ ಅಂತಹ ಗ್ರಾಮ/ ಪ್ರದೇಶವನ್ನು ಡೆಂಗೀ ಹಾಟ್ ಸ್ಪಾಟ್ ಎಂದು ಗುರುತಿಸಿ ಡೆಂಗ್ಯೂ ರೋಗ ನಿಯಂತ್ರಣವನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ. ತ್ವರಿತ ಜ್ವರ ಸಮೀಕ್ಷೆ ಹಾಗೂ ಈಡಿಸ್ ಲಾರ್ವ ಸಮೀಕ್ಷೆ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್ ಅವರು ತಿಳಿಸಿದರು.
ಫಿವರ್ ಕ್ಲಿನಿಕ್ ಹಾಟ್ ಸ್ಪಾಟ್ ಗ್ರಾಮಗಳಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರೆದು ಡೆಂಗ್ಯೂ ಜ್ವರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂ ಜ್ವರ ಪ್ರಕರಣಗಳಿಗೆ ರಕ್ತ ಲೇಪನ ಪರೀಕ್ಷೆ ಹಾಗೂ ಸಂಶಯಾಸ್ಪದ ಡೆಂಗೀ ಪ್ರಕರಣಗಳಿಂದ ರಕ್ತ ಮಾದರಿ ಸಂಗ್ರಹಿಸಿ ಜಿಲ್ಲಾ ಸರ್ವೆಲೆನ್ಸ್ ಲ್ಯಾಬ್ ನಲ್ಲಿ ಪರೀಕ್ಷೆಗೋಳಪಡಿಸಲಾಗುತ್ತಿದೆ. ಇದುವರೆಗೂ 6 ಫಿವರ್ ಕ್ಲಿನಿಕ್ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ನೀಮ್ ಆಯಿಲ್ ವಿತರಣೆ ಹಾಟ್ ಸ್ಪಾಟ್ ವರದಿಯಾದ ಗ್ರಾಮಗಳಲ್ಲಿ ಬಿಪಿಎಲ್ ಕುಟುಂಬದವರಿಗೆ ಬೇವಿನ ಎಣ್ಣೆಯನ್ನು ವಿತರಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಹಾಸ್ಟಲ್ ವಿದ್ಯಾರ್ಥಿಗಳಿಗೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಿ ಬೇವಿನ ಎಣ್ಣೆಯನ್ನು ವಿತರಿಸಲಾಗುತ್ತಿದೆ. ಇದುವರೆಗೂ 50 ಎಂ ಎಲ್ ನ 4,903 ಬಾಟಲಿಗಳನ್ನು ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಿವೃತ್ತ ಡಿಹೆಚ್ಒ ಡಾ.ಮರೀಗೌಡ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತಾರಾಜು, ಶಿಕ್ಷಣಾಧಿಕಾರಿ ಚಂದ್ರಕಾಂತ, ಮಿಮ್ಸ್ ವೈದ್ಯರಾದ ಡಾ.ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಂದ ಭೂಮಿ ಪೂಜೆ
ಮಂಡ್ಯ: ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿ ಸುಂಡಹಳ್ಳಿ ಹಾಗೂ ಇಂಡುವಾಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ..ರಮೇಶ ಬಂಡಿಸಿದ್ದೇಗೌಡ ಅವರು ಗುದ್ದಲಿಪೂಜೆ ನೆರವೇರಿಸಿದರು
ಸುಂಡಹಳ್ಳಿ ಗ್ರಾಮದಲ್ಲಿ ವಾಟರ್ ಟ್ಯಾಂಕ್ ಮತ್ತು ಕುಡಿಯುವ ನೀರು, ಇಂಡವಾಳು ಗ್ರಾಮದಲ್ಲಿ ಅಂಗನವಾಡಿ ಮತ್ತು ಜೆಜೆಎಂ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಾವಣ ಮಾಸ ಪ್ರಾರಂಭವಾಗಿರುವುದರಿಂದ ನಿಂತು ಹೋಗಿರುವ ಹಳೇ ಕೆಲಸಗಳ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಪ್ರಾರಂಭ ಮಾಡಿದ್ದೇನೆ.
ನಿತ್ಯ ನಿರಂತರವಾಗಿ ಪ್ರತಿನಿತ್ಯ ಪ್ರತಿಯೊಂದು ಊರಲ್ಲಿ ಯಾವುದಾದರೂ ಒಂದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡುವ ಸಂಕಲ್ಪ ಮಾಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜನರು ಯಾವುದೇ ರೀತಿಯಾಗಿ ನೀರು ಕೊಡಲ್ಲ ಎನ್ನುವ ಆತಂಕ ಬೇಡ ನೀರು ಕೊಡುತ್ತೇವೆ. ಕಾನೂನಾತ್ಮಕ ಕಾರಣಗಳಿಂದ ಕಾನೂನು ಬದ್ಧವಾಗಿ ಸರ್ಕಾರ ಅಧಿಕಾರಿಗಳು ಮಾಡಿದ್ದಾರೆ. ರೈತರು ಧೈರ್ಯವಾಗಿ ಇರಿ ಯಾವುದೇ ತರಹದ ಯೋಚನೆ ಮಾಡುವುದು ಬೇಡ ಧೈರ್ಯವಾಗಿ ಇರಿ ನೀರು ಕೊಡುತ್ತೇವೆ ಎಂದು ಹೇಳಿದರು.
ಸುಂಡಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ವಾಟರ್ ಟ್ಯಾಂಕ್, ಇಂಡವಾಳು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ, 75 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಒಟ್ಟಾರೆ ಇಂಡುವಾಳು ಗ್ರಾಮದ ಅಭಿವೃದ್ಧಿಗೆ ಕಂಕಣ ಬದ್ಧವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಗ್ರಾಮ ಪಂಚಾಯತಿ ಸದಸ್ಯರಾದ ತೇಜ, ಸತೀಶ, ಚಿಕ್ಕಯ್ಯ, ಮುಖಂಡರಾದ ಸಿದ್ದರಾಜು, ಕಾಳೇನಹಳ್ಳಿ ಮಂಜು, ಸೋಮ ಶೇಖರ್, ಸಿಡಿಪಿಓ ಕುಮಾರಸ್ವಾಮಿ, ಪಿಡಿಒ ಯೋಗೇಶ್, ಗುತ್ತಿಗೆದಾರ ಸುದೀರ್ ನಾಯ್ಡು, ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.