Location
ಸೆ.29 ಅಖಂಡ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆಸೆ.29 ಅಖಂಡ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ
ಬೆಂಗಳೂರು: ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ (Karnataka Bandh) ಇರಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಘೋಷಿಸಿದ್ದಾರೆ.
Mysore
ಜಾತಿ ಬೇಧಗಳನ್ನು ತೊರೆದು ಬೆಳಕನ್ನು ತರುವ ಕಾರ್ಯವನ್ನು ವೇಮನ ಮಾಡಿದ್ದಾರೆ: ಸಿ.ಎನ್ ಮಂಜೇಗೌಡ
ಮೈಸೂರು: ಸಮಾಜದ ಪರಿವರ್ತನೆಗೆ ತಮ್ಮ ವಿಚಾರಧಾರೆಗಳ ಮೂಲಕ ಬೆಳಕ್ಕನ್ನು ಚೆಲ್ಲಿರುವ ವೇಮನ ಅವರ ಜಯಂತಿಯನ್ನು ನಾನು ಬಹಳ ಸಂತೋಷದಿಂದ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಶಾಸಕರಾದ ಸಿ.ಎನ್. ಮಂಜೇಗೌಡ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಹಮ್ಮಿಕೊಂಡಿದ್ದ, ವೇಮನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಒಳ್ಳೆಯಾದರಿಗೆ ತರುವಂತಹ ಕೆಲಸವನ್ನು ವೇಮನ ಅವರು ಮಾಡಿದ್ದಾರೆ. ಜಾತಿ ಬೇಧಗಳನ್ನು ತೊರೆದು ಕತ್ತಲನ್ನು ಬೆಳಗಿಸಿ, ಬೆಳಕನ್ನು ತರುವಂತಹ ಕಾರ್ಯವನ್ನು ವೇಮನ ಅವರು ಮಾಡಿದ್ದಾರೆ ಎಂದು ಹೇಳಿದರು.
ಪುಸ್ತಕದ ಮೂಲಕ ಎಲ್ಲಾ ರೀತಿಯ ವಿಚಾರ ಧಾರೆಗಳನ್ನು ನೀಡುವುದರ ಮೂಲಕ ಸಮಾಜವನ್ನು ಪರಿವರ್ತನೆ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದರು.
ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ಅವರು ಮಾತನಾಡಿ ಮಹಾಯೋಗಿ ವೇಮನ ಅವರು ನಮ್ಮ ಇಡೀ ದೇಶಕ್ಕೆ ನೀಡಿರುವಂತಹ ಆದರ್ಶಗಳು ಬಹಳ ಸತ್ಯವಾಗಿವೆ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯ ಕಾರ್ಯಕ್ರಮವನ್ನು ಆಚರಿಸುತ್ತಾ ಇರುವುದು ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.
ಎಲ್ಲರೂ ಸಹ ಸಮಾನರು , ಯಾವುದೇ ಜಾತಿ ಬೇಧ ಇಲ್ಲದೆ ನಾವೆಲ್ಲರೂ ಒಂದು ಎಂಬುದನ್ನು ನಮಗೆ ತಿಳಿಸಿಕೊಟ್ಟಿರುವಂತಹ ವೇಮನಂತಹ ಮಹಾನ್ ದಾರ್ಶನಿಕರು ನಮಗೆ ದಾರಿದೀಪ ವಾಗಿದ್ದಾರೆ ಎಂದು ಹೇಳಿದರು.
ಬರೀ ನಾವು ಮಾತ್ರ ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳದೆ ನಾವೆಲ್ಲರೂ ಸೇರಿ ಜಯಂತಿಯನ್ನು ಆಚರಿಸುತ್ತೇವೆ ಎಂಬ ಪರಿಕಲ್ಪನೆ ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.
ಸಾಹಿತ್ಯ ಎಂಬುದರಲ್ಲಿ ಒಂದು ವಿಶೇಷವಾದಂತಹ ಶಕ್ತಿ ಇದೆ. ಸಾಹಿತ್ಯವನ್ನು ಓದುವುದರಿಂದ ನಮ್ಮ ಜೀವನವನ್ನ ಯಾವ ರೀತಿ ಬದಲಾವಣೆ ಮಾಡಿಕೊಳ್ಳುತ್ತೇವೆ ಹಾಗೂ ಹೇಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ ಎಂಬುದು ಬಹಳ ದೊಡ್ಡ ವಿಷಯವಾಗಿದೆ ಎಂದರು.
ಕೃಷ್ಣರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರು ಮಾತನಾಡಿ ಭಾರತ ದೇಶವು ತತ್ವಜ್ಞಾನಿಗಳ ತವರು, ಭಾರತ ದೇಶದಲ್ಲಿ ಹುಟ್ಟಿರುವಂತಹ ತತ್ವಜ್ಞಾನಿಗಳು ಬೇರೆಲ್ಲೂ ಹುಟ್ಟಿಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಾಣಿಸಿಕೊಂಡಿರುವಂತಹ ತತ್ವಜ್ಞಾನಿಗಳು ಈ ದೇಶವನ್ನು ಕಟ್ಟಿ ಬೆಳೆಸುವುದಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾಗಿದೆ. ಅವರಲ್ಲಿ ವೇಮನ ನಂತಹ ಸರ್ವಜ್ಞರು ಕೂಡ ನಮ್ಮ ದೇಶಕ್ಕೆ ಅಪಾರವಾದಂತದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ವೇಮನ ಅವರು ನಮಗೆ ವ್ಯಕ್ತಿ ಶೀಲವನ್ನು ಹೇಳಿಕೊಟ್ಟಿದ್ದಾರೆ, ಜೊತೆಗೆ ಸಮಾನತೆ , ಮತ್ತು ಸತ್ಯ ಎಂಬ ಎರಡು ತತ್ವವನ್ನು ನೀಡಿದ್ದಾರೆ. ಎಲ್ಲಾ ಕಾಲವೂ, ಎಲ್ಲ ಸಮಾಜವು ನೆಮ್ಮದಿಯಿಂದ ಇರಲು ಈ ಎರಡು ತತ್ವಗಳು ಸಾಕು ಎಂದು ವೇಮನ ಅವರು ನಮಗೆ ತಿಳಿಸಿದ್ದಾರೆ ಇದಕ್ಕಿಂತ ನಮಗೆ ಇನ್ನೇನು ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷರಾದ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷರಾದ ಡಾ. ಬಿ.ಎಂ ವಾಮದೇವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Mysore
ಫೆಬ್ರವರಿ 10 ರಿಂದ 12 ರವರೆಗೆ ತಿ.ನರಸೀಪುರ ಕುಂಭಮೇಳ
ಮೈಸೂರು: ಫೆಬ್ರವರಿ 10 ರಿಂದ 12 ರವರೆಗೆ ಟಿ ನರಸೀಪುರದ ತ್ರಿವೇಣಿ ಸಂಗಮದ ಬಳಿ ಕುಂಭಮೇಳ 2025 ನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು
ಇಂದು ಕುಂಭ ಮೇಳ -2025 ರ ಆಚರಣೆಯ ಸಂಬಂಧ ಜಲದರ್ಶಿನಿ ಅಥಿತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರವರಿ 10 ರಿಂದ 12 ಈವರೆಗೆ ಟಿ ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಪ್ರಥಮ ಬಾರಿಗೆ 1989 ರಲ್ಲಿ ಪ್ರಾರಂಭವಾಯಿತು. ಇದು 3 ವರ್ಷಗಳಿಗೆ ಒಮ್ಮೆ ನಡೆಯುವ ಮೇಳ. ಕುಂಭಮೇಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಾಂಸ್ಕೃತಿಕ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಕೆ.ಎಸ್.ಆರ್.ಟಿ. ಸಿ ವತಿಯಿಂದ ವಿವಿಧ ಭಾಗಗಳಿಂದ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಅವರು ಮಾತನಾಡಿ 3 ದಿನವೂ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಾವೇರಿ ಆರತಿಯನ್ನು ಫೆಬ್ರವರಿ 11 ರಂದು ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಬೇಕು. ಸ್ನಾನ ಘಟ್ಟಗಳಲ್ಲಿ ಸ್ವಚ್ಚತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಉಚಿತ ಅನ್ನದಾನ ಮಾಡುವ ಕಡೆ ಸ್ವಚ್ಚತೆ ಕಾಪಾಡಬೇಕು ಎಂದು ಸೂಚನೆ ನೀಡಿದರು.
ಫೈರ್ ಸೆಪ್ಟಿ ಕೈಗೊಳ್ಳಬೇಕು. ಕುಟೀರಗಳ ಬಳಿ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು. ರಸ್ತೆಗಳು ಉತ್ತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು 1989 ರಿಂದ ಕುಂಭಮೇಳ ಆಚರಣೆ ಪ್ರಾರಂಭವಾಯಿತು. ಪ್ರತಿ 3 ವರ್ಷಕ್ಕೆ ಒಮ್ಮೆ ನಡೆಯುತ್ತದೆ. 2019 ರಲ್ಲಿ ನಡೆಯಿತು. ಕೋವಿಡ್ ಇದ್ದುದರಿಂದ 2021 ರಲ್ಲಿ ಕುಂಭಮೇಳ ನಡೆಯಲಿಲ್ಲ. ನದಿಯಲ್ಲಿ ಸ್ಥಾನ ಮಾಡಲು 5 ಕಡೆ ಜಾಗ ಗುರುತಿಸಲಾಗಿದೆ. 1 ಯಾಗ ಶಾಲೆ ನಿರ್ಮಾಣ ಮಾಡಲಾಗುವುದು. 6 ಕುಟೀರಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Hassan
ಯಶಸ್ವಿಗೊಂಡ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ
ಹಾಸನ: ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೋಪ್ ಫಾರ್ ಹ್ಯೂಮನಿಟಿ ವೆಲ್ಫೇರ್ ಟ್ರಸ್ಟ್ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಭಾನುವಾರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ನೂರಾರು ಜನರು ಇದರ ಪ್ರಯೋಜನ ಪಡೆದುಕೊಂಡರು.
ಇದೆ ವೇಳೆ ನಗರಸಭೆ ಸದಸ್ಯ ಅಮೀರ್ ಜಾನ್ ಮಾತನಾಡಿ, ಮನುಷ್ಯನಿಗೆ ಬಿಪಿ, ಶುಗರ್ ಇತರೆ ಏನಿದೆ ಎಂದು ತಿಳಿಯಬೇಕಾದರೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೇ ಮಾತ್ರ ಸರಿಯಾಗಿ ತಿಳಿಯುತ್ತದೆ. ವರ್ಷದಲ್ಲಿ ಒಂದು ಇಲ್ಲವೇ ಎರಡು ಬಾರಿ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯ ಇದ್ದರೇ ಸಮಾಜದಲ್ಲಿ ಏನಾದರು ಸಾಧಿಸಬಹುದು ಎಂದರು.
ಸಮಾಜ ಸೇವಕ ಎಸ್.ಎಸ್. ಪಾಷಾ ಮಾತನಾಡಿ, ಒಂದು ಹಳೆ ಹಾಸನ ಎಂದರೇ ಬಸ್ ನಿಲ್ದಾಣದಿಂದ ಒಳಗೆ, ಎಪಿಎಂಸಿಯಿಂದ ಇಲ್ಲಿಗೆ ಬಹುತೇಕರು ಹಳೆ ಹಾಸನದವರು. ಈ ಭಾಗ ನೆಗ್ಲೆಟ್ ಗೆ ಒಳಗಾಗಿದೆ. ಈ ಭಾಗಕ್ಕೆ ಒಂದು ಸಿಟಿ ಬಸ್ ಸೌಕರ್ಯವಿಲ್ಲ. ಗ್ರಂಥಾಲಯವಿಲ್ಲ. ಸರಿಯಾದ ಆಸ್ಪತ್ರೆ ಕೂಡ ಇಲ್ಲ. ಇದ್ದರೂ ನಾಮಕವಸ್ತೆ ಮಾತ್ರ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು. ನಾನು ಕೂಡ ಇಲ್ಲೆ ಹುಟ್ಟಿ ಬೆಳೆದವರು, ಇಲ್ಲಿನ ಕಷ್ಟಗಳನ್ನು ಕಂಡಿದ್ದೇವೆ. ಇಲ್ಲಿನ ಜನರಿಗೆ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಖಾಯಿಲೆ ಬಂದ ಮೇಲೆ ಔಷಧಿ ತೆಗೆದುಕೊಳ್ಳುತ್ತೇವೆ. ಆದರೇ ಖಾಯಿಲೆ ಬರುವುದಕ್ಕೆ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ. ಬೆಳಗಿನ ಸಮಯ ವಾಕ್ ಮಾಡಬೇಕು. ಯಾವಾಗಲೂ ವಾಹನದಲ್ಲೆ ನಾವು ಹೋಗುತಿದ್ದರೇ ನಾನಾ ಖಾಯಿಲೆಗಳು ಉದ್ಭವಿಸುತ್ತದೆ. ನಮ್ಮ ಜೀವನ ಶೈಲಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡು ನಡೆಯುವ ಪ್ರವೃತ್ತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾಕ್ಟರ್ ನಾಯೀಮ್ ಸಿದ್ದಿಕಿ ಮಾತನಾಡಿ, ಇಂತಹ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಅಗತ್ಯವಿದೆ. ಒಮದು ಸಾಮಾನ್ಯ ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ದುಂದು ವೆಚ್ಚ ಮಾಡಿಕೊಂಡು ಹೋಗಬೇಕಾಗಿದೆ. ಈ ಶಿಬಿರಕ್ಕೆ ನುರಿತ ವೈದ್ಯರು ಇದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ರಕ್ತದ ಅವಶ್ಯಕತೆ ಇದ್ದಾಗ ಯಾವ ಜಾತಿ ಇರುವುದಿಲ್ಲ. ಒಟ್ಟಾರೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದು ಒಳ್ಳೆಯ ಉದ್ದೇಶ. ಇದರಲ್ಲಿ ಯುಆವ ಸಂಬಂಧ ಇರುವುದಿಲ್ಲ. ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದರೇ ನಮ್ಮ ದೇಹಕ್ಕೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ದೈಹಿಕವಾಗಿ ಸದೃಢರಾಗಿರುತ್ತೇವೆ ಎಂದರು. ಈ ಉದ್ದೇಶದಲ್ಲಿ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಮೂಳೆ ತಜ್ಞರು ನರರೋಗ ತಜ್ಞರು ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ಹೃದ್ರೋಗ ತಜ್ಞರು ಹಾಗೂ ಉಚಿತ ಕನ್ನಡಕ ಸಹಿತವಾಗಿ ಈ ಮೇಲ್ಕಂಡ ಖಾಯಿಲೆಗಳ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೋಪ್ ಫಾರ್ ಹ್ಯೂಮನಿಟಿ ಅಧ್ಯಕ್ಷರಾದಂತಹ ಮುದಸಿರ್, ಹಫೀಜ್ ಹಿದಾಯ್ತುಲ್ಲ ಖಾನ್, ಇಂಡಿಯಾನಾ ಆಸ್ಪತ್ರೆಯ ಡಾಕ್ಟರ್ ಆಫ್ರಿಕಾ ತಾಜ್, ಇಂಡಿಯನ್ ಆಸ್ಪತ್ರೆ, ಹೆಚ್.ಜಿ. ಭರತ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಚೇರ್ಮನ್, ಜಬಿ ಉಲ್ಲಬೇಗ್, ಕಾರ್ಯದರ್ಶಿ ಡಾಕ್ಟರ್ ಕೃತಿ, ನಿ ಡಾಕ್ಟರ್ ಮಹೇಂದ್ರರವರು, ಡಾಕ್ಟರ್ ಶಶಂಕ್, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಪವನ್ ರಾಜ್ ರವರು ರಾಕೇಶ್ ನೇತ್ರಾಲಯ ಇತರರು ಉಪಸ್ಥಿತರಿದ್ದರು.
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech17 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International24 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan23 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ