Chikmagalur
ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐನಿಂದ ಪ್ರತಿಭಟನೆ
ಚಿಕ್ಕಮಗಳೂರು : ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐನಿಂದ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ಸರ್ಕಲ್ ಇಂದು ಪ್ರಜ್ವಲ್ ರೇವಣ್ಣ, ಬಿಜೆಪಿಯ ಪಕ್ಷಪಾತ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು. ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಜ್ವಲ್ ನನ್ನ ಬಂಧಿಸುವ ಮೂಲಕ ನೊಂದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
Chikmagalur
ಚಿಕ್ಕಮಗಳೂರು| ಕಾಫಿನಾಡಿನಲ್ಲಿ ಮಳೆ ಆರ್ಭಟ: ಗಾಂಧಿ ಮೈದಾನ, ಪ್ಯಾರಲಲ್ ರಸ್ತೆ ಜಲಾವೃತ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ತುಂಗಾ ನದಿಯ ಒಳ ಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೆರೆಕಟ್ಟೆ, ನೆಮ್ಮಾರು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಶೃಂಗೇರಿಯ ಶಾರದಾ ಮಠದ ಅಕ್ಕಪಕ್ಕದ ಪ್ರದೇಶಗಳಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ. ಗಾಂಧಿ ಮೈದಾನ ಮತ್ತು ಪ್ಯಾರಲಲ್ ರಸ್ತೆ ಜಲಾವೃತವಾಗಿದ್ದು. ನದಿ ತೀರಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರು ತೆರಳದಲ್ಲಿ ಸೂಚನೆ ನೀಡಲಾಗಿದೆ.

Chikmagalur
2 ಮನೆ ಕಳ್ಳತನ, ತೆಂಗಿನಕಾಯಿ ಕಳವು ಪ್ರಕರಣ: ಆರೋಪಿಗಳನ್ನು ಬಂಧಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು
ಚಿಕ್ಕಮಗಳೂರು: ಎರಡು ಮನೆಕಳ್ಳತನ ಮತ್ತು ತೆಂಗಿನಕಾಯಿ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ 10,35,000/- ರೂ (ಹತ್ತು ಲಕ್ಷದ ಮುವತ್ತೈದು ಸಾವಿರ) ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ಇಲಾಖೆಯೂ, ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೇಣುಗೋಪಾಲ ಸ್ವಾಮಿ ದೇವಾಲಯದ ಹತ್ತಿರದ ಶ್ರೀಮತಿ ಮಂಜುಳ ಎಂಬುವರ ಮನೆಯಲ್ಲಿ ದಿ: 19.03.2025 ರಂದು ಮನೆಯ ಬೀಗವನ್ನು ಮುರಿದು 43 ಗ್ರಾಂ ಚಿನ್ನಾಭರಣಗಳು ಹಾಗೂ 10.000/- ರೂ ಹಣವನ್ನು ಕಳ್ಳತನ ಮಾಡಿದ ಬಗ್ಗೆ ಹಾಗೂ ದಿ: 01.07.2025 ರಂದು ಅದೇ ಸ್ಥಳದಲ್ಲಿ ಪಕ್ಕದ ಮನೆ ವಾಸಿಯಾದ ಶ್ರೀಮತಿ ಪಾರ್ವತಮ್ಮ ಎಂಬುವರ ಮನೆಯ ಬೀಗವನ್ನು ಮುರಿದು 51 ಗ್ರಾಂ ಚಿನ್ನಾಭರಣಗಳು, 100 ಗ್ರಾಂ ಬೆಳ್ಳಿಯ ಆಭರಣಗಳು & 6,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ಮೂರು ತಿಂಗಳಿನಿಂದ ಈಚೆಗೆ ಮಾರ್ಕೇಟ್ ಆವರಣದ ತೆಂಗಿನಕಾಯಿ ಮಂಡಿಗಳಲ್ಲಿ ಐದಾರು ಬಾರಿ ಒಟ್ಟು 34 ಚೀಲದಲ್ಲಿದ್ದ 2500 ತೆಂಗಿನಕಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಕುರಿತು ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಮೇಲ್ಕಂಡ ಪ್ರಕರಣಗಳಲ್ಲಿ ಅತೀ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಡಾ.ವಿಕ್ರಮ್ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆ, ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಶೈಲೇಂದ್ರ ಪೊಲೀಸ್ ಉಪಾಧೀಕ್ಷಕರು ಚಿಕ್ಕಮಗಳೂರು ಉಪ-ವಿಭಾಗ ರವರ ನೇತೃತ್ವದಲ್ಲಿ ವಿಜಯಕುಮಾರ ಎಂ. ಬಿರಾದಾರ ಸಿಪಿಐ ಬಸವನಹಳ್ಳಿ ವೃತ್ತ, ಬಸವನಹಳ್ಳಿ, ಪೊಲೀಸ್ ಠಾಣೆ ಪಿಎಸ್ಐಗಳಾದ ಕೀರ್ತಿಕುಮಾರ್, ಅಜರುದ್ದೀನ್ & ನಾಗೇಶ್ ಮತ್ತು ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರವೀಂದ್ರ, ಮಧುಸೂಧನ್, ಲಿಂಗಮೂರ್ತಿ, ಮಾಲತೇಶ, ಜಯರಾಮ, ಸತೀಶ್ & ಚಾಲಕರಾದ ಇಬ್ರಾಹಿಂ ರನ್ನು ಒಳಗೊಂಡ ವಿಶೇಷ ತನಿಖಾತಂಡವನ್ನು ರಚಿಸಲಾಗಿದ್ದು ಅವರುಗಳು ಸದರಿ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಕದ್ದಮಾಲು ಪತ್ತೆಯ ಬಗ್ಗೆ ವೈಜ್ಞಾನಿಕವಾಗಿ ತನಿಖೆಯನ್ನು ನಡೆಸಿ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಬಸವನಹಳ್ಳಿ ವೇಣುಗೋಪಾಲ ದೇವಾಲಯದ ಸಮೀಪ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿ ಸಚಿನ್ ಡಿಸೋಜಾ.ವಿ ಬಿನ್ ಆರುಲ್ ದಾಸ್, 20 ವರ್ಷ, ತಮಿಳು ಕ್ರಿಶ್ಚಿಯನ್ ಜನಾಂಗ, ಕೂಲಿ ಕೆಲಸ, ವಾಸ ದುರ್ಗಿ ಪೆಂಡಲ್ ಎದುರು, ಕಲ್ಲುದೊಡ್ಡಿ, ಇಂದಾವರ ಅಂಚೆ, ಚಿಕ್ಕಮಗಳೂರು ತಾಲ್ಲೂಕು ಈತನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆತನಿಂದ ಮೇಲ್ಕಂಡ ಮನೆಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಸುಮಾರು 6 ಲಕ್ಷರೂ ಮೌಲ್ಯದ 71 ಗ್ರಾಂ ಚಿನ್ನಾಭರಣಗಳು ಹಾಗೂ 25.000/- ರೂ ಮೌಲ್ಯದ 100ಗ್ರಾಂ ತೂಕದ ಬೆಳ್ಳಿಯ ಒಡವೆ ಆಭರಣಗಳನ್ನು ಹಾಗೂ ಆರೋಪಿಯು ಕಳವು ಮಾಡಲು ಉಪಯೋಗಿಸಿದ ಸುಮಾರು 1 ಲಕ್ಷರೂ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಸೇರಿದಂತೆ ಒಟ್ಟು 7,25,000/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ತೆಂಗಿನಕಾಯಿ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ 1) ಮಹಮದ್ ನೌಷದ್ ಬಿನ್ ಹಸೇನರ್, 29 ವರ್ಷ, ಮುಸ್ಲಿಂ ಜನಾಂಗ, ತರಕಾರಿ ವ್ಯಾಪಾರ ವೃತ್ತಿ, ವಾಸ ಇಂದಿರಾ ನಗರ, ಬೆಳಗುಳ. ಮೂಡಿಗೆರೆ ಟೌನ್, 2) ಗಣೇಶ.ಡಿ ಬಿನ್ ಧನಪಾಲ ಶೆಟ್ಟಿ, 28 ವರ್ಷ, ಬಲಿಜ ಜನಾಂಗ, ಆಟೋ ಚಾಲಕ ವೃತ್ತಿ, ವಾಸ ವಿವೇಕಾನಂದ ನಗರ, ಬೆಳಗುಳ ಮೂಡಿಗೆರೆ ಟೌನ್, ಆರೋಪಿಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಅವರಿಂದ ತೆಂಗಿನಕಾಯಿ ಕಳವು ಮಾಡಿ ಮಾರಾಟ ಮಾಡಿದ 1,10,000/- ರೂಪಾಯಿ ಹಣ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು 2 ಲಕ್ಷ ರೂ ಮೌಲ್ಯದ ಬಜಾಜ್ ಮಾಕ್ಸಿಮಾ ಆಟೋ ಸೇರಿದಂತೆ ಮೇಲ್ಕಂಡ ಮೂರು ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು 10,35,000/- ರೂ (ಹತ್ತು ಲಕ್ಷದ ಮುವತ್ತೈದು ಸಾವಿರ ರೂ) ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿರುತ್ತಾರೆ.
ಮೇಲ್ಕಂಡ ಮೂರು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆ ಕಾರ್ಯ ವಿಶೇಷ ತನಿಖಾ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.
Chikmagalur
ಗ್ರಾಮ ಪಂಚಾಯತಿ ಸದಸ್ಯನಿಂದ ಮಾದರಿ ಕಾರ್ಯ: ಸ್ವಂತ ಖರ್ಚಿನಿಂದ ಹೊರನಾಡು ಶೃಂಗೇರಿ ಕಲ್ಪಿಸುವ ಮಾರ್ಗದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ನಿಸ್ವಾರ್ಥಿ
ಕೊಪ್ಪ: ಮಲೆನಾಡು ಮಳೆಗಾಲದಲ್ಲಿ ಪ್ರವಾಸಿಗರಿಗೆ ಸ್ವರ್ಗದ ರೀತಿ ಕಾಣುತ್ತದೆ. ವಾರಾಂತ್ಯದಲ್ಲಂತೂ ಅಬ್ಬಬ್ಬಾ ಕಾಫಿನಾಡಿನ ಕಡೆ ಪ್ರವಾಸಿಗರ ದಂಡೇ ಬರುತ್ತದೆ. ಆದರೆ ಮಲೆನಾಡಿನ ರಸ್ತೆಗಳು ಎಂತವರಿಗೂ ಬೇಸರವನ್ನುಂಟು ಮಾಡೋದಂತು ಸತ್ಯ.
ಮುಖ್ಯರಸ್ತೆಗಳೇ ಸರಿ ಇಲ್ಲದ ಈ ಮಲೆನಾಡಿನಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಕಥೆ ಊಹಿಸಿಕೊಳ್ಳೋಕು ಸಾಧ್ಯ ಇಲ್ಲ ಬಿಡಿ. ಅಂತದರಲ್ಲಿ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿಸಿ ಪ್ರೇರಣೆಯಾಗಿದ್ದಾರೆ.

ಹೌದು, ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ್ ಜಾಲ್ಮರ ಅವರು ತನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರೆದೇವರು ಗ್ರಾಮದ ಬಸ್ತಿ ಬಾಲಕ್ಕಿ ತೋಟ ರಸ್ತೆಗೆ ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಟ್ರ್ಯಾಕ್ಟರ್, ಜೆಸಿಬಿ ಬಳಸಿ ರಸ್ತೆ ದುರಸ್ಥಿ ಮಾಡಿಸಿದ್ದಾರೆ.
ಈ ರಸ್ತೆಯೂ ಹೊರನಾಡಿನಿಂದ ಕೊಗ್ರೆ ಮಾರ್ಗದ ಮೂಲಕ ಶೃಂಗೇರಿಗೆ ತಲುಪಲು ಬಹಳ ಹತ್ತಿರದ ಮಾರ್ಗವಾಗಿದ್ದು ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ.
ಆದರೆ ಈ ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ಬಹಳ ವರ್ಷಗಳಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಪಾಳು ಬಿದ್ದಿತ್ತು.
ಬಹಳಷ್ಟು ಭಾರೀ ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ದುರಸ್ಥಿ ಮಾಡಿದ್ದರು ಕೂಡ ಕೆಲ ದಿನಗಳ ನಂತರ ಮತ್ತದೆ ಹೊಂಡ ಗುಂಡಿಗಳು ಸೃಷ್ಠಿಯಾಗಿ ಬಿಡುತ್ತಿದ್ದವೂ.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಜಾಲ್ಮರ ಅವರು, ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ, ಈಗ ಎಲ್ಲಾ ವ್ಯವಹಾರಿಕವಾಗಿ ಸಮಸ್ಯೆಗಳು ಬಗೆಹರಿದಿದೆ. ಸರ್ಕಾರದಿಂದ ವಿಶೇಷವಾದ ಅನುದಾನ ಕೊಡಿಸಿ ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
-
Manglore14 hours agoತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಣ್ಣನೂ ಹೃದಯಾಘಾತಕ್ಕೆ ಬಲಿ
-
Hassan10 hours agoಹಾಸನ : ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿ :ಇಬ್ಬರು ಯುವಕರ ಧಾರುಣ ಸಾ*ವು
-
Education50 minutes agoಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ : ಆಕರ್ಷಕ ಸಂಬಳ
-
Mandya3 hours agoಮಹಿಳೆಯರಿಗೆ ಬಾಗಿನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ : ಮಾಜಿ ಸಚಿವ ಶ್ರೀರಾಮುಲು
-
Chamarajanagar13 hours ago*ಪ್ರೀತಿ ನಿರಾಕರಣೆ: ಚಾಕುವಿನಿಂದ ಇರಿದುಕೊಂಡ ಯುವಕ*
-
Hassan5 hours agoಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ
-
Manglore13 hours agoಬೆಳ್ತಂಗಡಿ: ವಿಜಯೇಂದ್ರ ನೇತೃತ್ವದಲ್ಲಿ ‘ಬಿಜೆಪಿ’ ಧರ್ಮಸ್ಥಳಕ್ಕೆ ಭೇಟಿ
-
Mysore7 hours agoಖಾಸಗಿ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿದ ಸೆಸ್ಕ್ ಎಂಡಿ
