Chamarajanagar
ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಬಹಳ ದೊಡ್ಡ ಪಾಠ ಶಾಲೆ : ಪ್ರಾಂಶುಪಾಲ ವಿಜಯ್

ಯಳಂದೂರು ಆಗಸ್ಟ್ 7
ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಕಾಲೇಜಿಗೆ ಬಂದಿರುವ ನೀವು ನೋಡದೆ ಇರುವ ಇನ್ನೊಂದು ಪ್ರಪಂಚ ಇದೆ. ಅದು ನಿಮ್ಮ ತಂದೆ ತಾಯಿಯ ಕಷ್ಟ. ಎಂತಹ ಕಷ್ಟಬಂದರೂ ತಂದೆ ತಾಯಿ ನಿಮ್ಮ ಮುಂದೆ ತೋರಿಸಿಕೊಳ್ಳುವುದಿಲ್ಲ. ಆ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಕಷ್ಟ ಜೀವನವೇ ಶಿಸ್ತನ್ನು ಕಲಿಸುವ ಬಹಳ ದೊಡ್ಡ ಪಾಠ ಶಾಲೆಯಾಗಿದೆ. ತಂದೆ ತಾಯಿಯ ನಿರೀಕ್ಷೆಗಿಂತ ದೊಡ್ಡ ಸಾಧನೆ ಮಾಡಿ ತೋರಿಸಬೇಕೆಂದು ವೈ .ಎಂ . ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ ಹನೂರು ಅವರು ತಿಳಿಸಿದರು.
ಅವರು ಪಟ್ಟಣದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಶೈಕ್ಷಣಿಕವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಪ್ರಸ್ತುತತೆಯ ಬಗೆಗೆ ಮಾತನಾಡುತ್ತಾ, ದೃಢವಾದ ಶರೀರ ಇದ್ದರೆ ದೃಢವಾದ ಮನಸ್ಸು ನಮ್ಮದಾಗಿರುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಜ್ಞಾನವಂತರಾಗಬೇಕು. ಜಗತ್ತಿನಲ್ಲಿ ಅಪಹರಿಸಲು ಆಗದಿರುವ ಒಂದು ಸಂಪತ್ತು ಜ್ಞಾನ. ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಬಾಳೆಹಣ್ಣು ಬೆಳೆದಂತೆ ಬಾಗುವ ರೀತಿಯಲ್ಲಿ ನಿಜವಾದ ಜ್ಞಾನವಂತರು ಫಲತುಂಬಿದ ಮರಗಳ ರೀತಿ ಬಾಗುತ್ತಾರೆ. ಪ್ರತಿಯೊಂದು ಫಲವು ಸಿಪ್ಪೆಯಿಂದ ಬಂಧಿತವಾಗಿರುವAತೆ ಜ್ಞಾನವನ್ನು ನಮ್ಮ ಚಕ್ಷÄಗಳ ಮೂಲಕ ಬಂಧಿಸಿಕೊಳ್ಳಬೇಕೆAದು ತಿಳಿಸುತ್ತಾ ಹಿರಿಯರು ಕಿರಿಯರ ಜೊತೆಯಲ್ಲಿ ನಿಮ್ಮ ವರ್ತನೆ ಹೇಗಿದೆ ಎಂಬುದು ಮುಖ್ಯ. ಸಮಾಜದ ಕಟ್ಟುಪಾಡುಗಳನ್ನು ಪಾಲಿಸುತ್ತಾ ಮಾದರಿಯಾಗಿ ಬದುಕಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿ. ಚಂದ್ರಕಲಾ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆ ಇದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಕಾಲದಲ್ಲಿ ಹೊರಹಾಕಬೇಕು. ಪಠ್ಯ-ಪಠ್ಯೇತರ ಚಟುವಟಿಕೆಗಳು ತುಂಬ ಮುಖ್ಯವಾದದ್ದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡು ಸ್ಫರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಮೊದಲು ಪೋಷಕರ ಮತ್ತು ಸಂಸ್ಥೆಯ ಹೆಸರನ್ನು ಉಳಿಸಿ ಬೆಳಸಬೇಕು. ಅವಕಾಶಗಳು ಮತ್ತು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಂದೆ, ತಾಯಿಗೆ, ಗುರು, ಹಿರಿಯರಿಗೆ ಗೌರವ ಕೊಡಬೇಕು. ನಾವು ಸಮಾಜಕ್ಕೆ ಹೊಂದಿಕೊಳ್ಳಬೇಕು. ನಿಮ್ಮ ಬಾಳಿಗೆ ನೀವೇ ದಾರಿದೀಪವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕು. ಆಶಾ ಮತ್ತು ತಂಡ ಪ್ರಾರ್ಥನೆಯನ್ನು ಸಲ್ಲಿಸಿದರು. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸಂಜನಾ ಅವರು ನಿರೂಪಿಸಿದರು.
Chamarajanagar
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ

ಚಾಮರಾಜನಗರ: ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಾನ ಮನಸ್ಕರ ಮಾಧ್ಯಮ ಮಿತ್ರರ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿ ಹನುಮೇಶ್ ಕೆ ಯಾವಗಲ್ ತಿಳಿಸಿದ್ದಾರೆ.
ಹಾಸನ ತಾಲೂಕಿನ ಬೇಲೂರಿನಲ್ಲಿ ಸಂಸ್ಕಾರ ಸಂಸ್ಕೃತಿ ಸಂಘಟನೆಗಾಗಿ ವಿಕಾಸ ಸಾರಥ್ಯದಲ್ಲಿ ಬೇಲೂರು ಹಬ್ಬ ಕಾರ್ಯಕ್ರಮವು ಜು.20 ರಂದು ಭಾನುವಾರ ಬೇಲೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಭಾರತಿ ತೀರ್ಥ ಸಭಾ ಭವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿಪ್ರ ವಿಕಾಸ ಪ್ರಶಸ್ತಿ ಸ್ವೀಕರಿಸಲ್ಲಿರುವ ಸುರೇಶ್ ಎನ್ ಋಗ್ವೇದಿ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ರಾಷ್ಟ್ರೀಯ ಚಿಂತನೆ, ಸ್ವದೇಶಿ, ಯುವ ಸಂಘಟನೆ, ಪರಿಸರ ಸಂರಕ್ಷಣೆ, ಸಂಸ್ಕೃತಿ, ಪರಂಪರೆ, ರಾಷ್ಟ್ರೀಯ ಮೌಲ್ಯಗಳ ಪ್ರಸಾರ, ಶಿಕ್ಷಣ, ಕನ್ನಡ ನಾಡು ನುಡಿ ಹಾಗೂ ಸಮಾಜದ ಸಮಗ್ರ ವಿಕಾಸದ ಬೆಳವಣಿಗೆಯಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದು ಇವರಿಗೆ ವಿಕಾಸ ಬೇಲೂರು ಹಬ್ಬ 2025 ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ದಿ.ಗರುಡನಗಿರಿ ನಾಗರಾಜ್ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಸುರೇಶ್ ಎನ್ ಋಗ್ವೇದಿಯವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ , ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಋಗ್ವೇದಿ ಯೂತ್ ಕ್ಲಬ್ ಗೌರವಾಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ, ಕಾರ್ಯನಿರ್ವಹಿಸಿದ್ದು, ಇತಿಹಾಸ ಉಪನ್ಯಾಸಕರಾಗಿ ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
Chamarajanagar
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

ಚಾಮರಾಜನಗರ: ಒಂದು ವಾರದ ಹಿಂದೆ ಜನಿಸಿರುವ ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಸಂಭವಿಸಿದೆ.
ತಾಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಗ್ರಾಮಗಳ ನಡುವಿನ ರಸ್ತೆಯ ಬದಿಯಲ್ಲಿ ಹೆಣ್ಣು ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದು, ಸಾಗಡೆ ಗ್ರಾಮದ ಪರಮೇಶ್ ಎಂಬುವವರು ಅದೇ ರಸ್ತೆಯಲ್ಲಿ ನಗರ ಕಡೆ ಸಂಚಾರ ಮಾಡುತ್ತಿದ್ದಾಗ ಹಸುಗೂಸು ಅಳುವ ಶಬ್ಧ ಕೇಳಿಬಂದಿದೆ.
ಸ್ಥಳಕ್ಕೆ ಬಂದು ನೋಡಿದಾಗ ಹೆಣ್ಣು ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು ತಿಳಿದು, ಬಳಿಕ ಸಾಗಡೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮಗುವನ್ನು ಆಂಬುಲೆನ್ಸ್ ಮೂಲಕ ಚಾ.ನಗರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಮಗುವಿನ ಪೋಷಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.
Chamarajanagar
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು

ಚಾಮರಾಜನಗರ: ಗುಂಡ್ಲುಪೇಟೆ – ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಮಸಮುದ್ರದ ನಿವಾಸಿ ಸಂತೋಷ್ (25) ಮೃತ ದುರ್ದೈವಿ. ಈತ ತೆರಕಣಾಂಬಿಯ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೃತ ಸಂತೋಷ್ ಬೈಕ್ ನಲ್ಲಿ ಗುಂಡ್ಲುಪೇಟೆ- ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಬರುವಾಗ ಕೆ.ಕೆ ಹುಂಡಿ ಗ್ರಾಮದ ಬಳಿ ವಾಹನವೊಂದು ಹೊಡೆದುಕೊಂಡು ಹೋಗಿರುವ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ದೇಹವನ್ನು ನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
State15 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya11 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar17 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar11 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore12 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu11 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
Chamarajanagar11 hours ago
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು