Connect with us

Cinema

‘ಸೇವ್‌ ಅವರ್ ಸೋಲ್’ ಕಿರುಚಿತ್ರ ಬಿಡುಗಡೆ

Published

on

ಮಂಗಳೂರು: “ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ಮಹತ್ವದ ಸಂದೇಶ ಸಾರುವ ಕಿರುಚಿತ್ರ ‘ಸೇವ್ ಅವರ್ ಸೋಲ್’ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ.ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಬಿಡುಗಡೆ ಎ.ಯು. ಕ್ರಿಯೇಶನ್ಸ್ ಯೂ ಯೂ ಟ್ಯೂಬ್‌ನಲ್ಲಿ ಅ.೧೮ರಂದು ಸಂಜೆ ನಡೆಯಲಿದೆ“ ಎಂದು ನಿರ್ಮಾಪಕ ಯು.ಜಿ.ರಾಘವ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಸೇವ್ ಅವರ್ ಸೋಲ್ ಕಿರುಚಿತ್ರದಲ್ಲಿ ಅತ್ಯಾಚಾರ ಹಾಗೂ ಅಪಘಾತಗಳು ನಡೆದ ಸಮಯದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಕಾಂಟ್ಯಾಕ್ಟ್ ಮಾಡಬಹುದು ಎಂಬ ಸಂದೇಶ ಸಾರಲಾಗಿದೆ. ಎ.ಯು. ಕ್ರಿಯೇಶನ್ಸ್ ಮೂಲಕ ನಿರ್ಮಾಣಗೊಂಡಿರುವ ಈ ಕಿರ್ರುಚಿತ್ರಕ್ಕೆ ದ.ಕ.ಜಿಲ್ಲಾ ಪೊಲೀಸ್ ಘಟಕ
ಸಹಯೋಗ ನೀಡಿದೆ. ಇದೇ ಅ. ೧೮ರಂದು ಎ.ಯು. ಕ್ರಿಯೇಶನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಕಿರುಚಿತ್ರ ಬಿಡುಗಡೆಗೊಳ್ಳಲಿದೆ“ ಎಂದರು.


ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರು ‘ಸೇವ್ ಅವರ್ ಸೋಲ್’ ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಅವರು ಸಹನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಸರ್ಗಂ ಸ್ಟುಡಿಯೋಸ್ ನ ಸಾತ್ವಿಕ್ ಪಡಿಯಾ‌ರ್ ಸಂಗೀತ ನೀಡಿದ್ದು ಪ್ರಸಾದ್ ಕೊಯಿಲ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅನೀಶ್ ಗಾಣಿಗ, ಕಿಶೋರ್ ಜೋಗಿ, ಅನುಷಾ ಜೋಗಿ ಪುರುಷರಕಟ್ಟೆ, ಅಚಲ್ ಉಬರಡ್ಕ, ಗುರುಮೂರ್ತಿ ಅಮ್ಮಣ್ಣಾಯ, ವಿಲ್ಮಾ ಸಿಸ್ಮರ್, ಲಲಿತಾ ಸಿಸ್ಟರ್, ದಿವಾಕರ ಸುರ್ಯ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ,
ಸಂದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಜಯರಾಮ ಆಚಾರ್ಯ, ನವೀನ್ ಕುಲಾಲ್, ಕಿಶೋರ್ ನೀರಕಟ್ಟೆ, ಚಂದ್ರಶೇಖರ ಶೆಟ್ಟಿ ಮತ್ತಿತರರು ತಾರಾಗಣದಲ್ಲಿದ್ದಾರೆ.
ಎ.ಯು. ಕ್ರಿಯೇಶನ್ಸ್‌ನ ಪರಿಚಯ:
ಅಚಲ್ ಉಬರಡ್ಕ ಅವರ ಮುಂದಾಳತ್ವದ ಎ.ಯು. ಕ್ರಿಯೇಶನ್ಸ್ ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ಮೊದಲ ಕಿರುಚಿತ್ರ ಮೌನ. ಇದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅಚಲ್ ಉಬರಡ್ಕ ಅವರು ವಿಧ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿ ಮಾಡಿರುವ ಕಿರುಚಿತ್ರ. ಇದಕ್ಕೆ ರಾಷ್ಟ್ರ ಮಟ್ಟದ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಅಚಲ್, ಅನಿಶ್ ಗಾಣಿಗ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.

Continue Reading

Cinema

ಬಿಗ್‌ಬಾಸ್‌ ಸೀಸನ್‌ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್‌ ತಲುಪಿದ್ದಾರೆ ಎಂದ ನಟಿ ಹಂಸ

Published

on

ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಲರ್ಸ್‌ ಕನ್ನಡದಲ್ಲಿ ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್‌ ಬಾಸ್‌ ಸೀಸನ್‌-11ರ ಸ್ಪರ್ಧಿಯಾಗಿರುವ ನಟಿ ಹಂಸ ಅವರು ಬಿಗ್‌ಬಾಸ್‌ನ ಗ್ರ್ಯಾಂಡ್‌ ಫಿನಾಲೆ ಅಭ್ಯರ್ಥಿ ಹನುಮಂತು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹನುಮಂತು ಬಿಗ್‌ಬಾಸ್‌ ಫಿನಾಲೆಗೆ ತಲುಪಿರುವ ಬಗ್ಗೆ ಕುಹಕವಾಡಿರುವ ಹಂಸ, ಮೀಸಲಾತಿ, ಸಿಂಪತಿ ಮೂಲಕ ಫೈನಲ್ಸ್‌ ತಲುಪಿದ್ದು, ಹಳ್ಳಿ ಪ್ರತಿಭೆ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಇರುತ್ತಲ್ಲಾ, ಜನರಲ್‌ ಕ್ಯಾಟಗರಿ ಅವರು ಪೂರ್ತಿ ಹಣ ಪಾವತಿಸಿ ಶಿಕ್ಷಣ ಪಡೆಯಬೇಕು, ಆದರೆ ಬೇರೆ ಕ್ಯಾಟಗರಿಯವರು ಕಡಿಮೆ ಶುಲ್ಕ ಪಾವತಿಸಿದರೇ ಸಾಕು. ಇಲ್ಲಿ ನಾವು ಎಷ್ಟೆ ಓದಿದರು ಸಹಾ ನೌಕರಿ ವಿಚಾರವಾಗಿ ಮೊದಲ ಆದ್ಯತೆ ಅವರಿಗೆ ಇರುತ್ತದೆ. ಇದರಲ್ಲಿ ನಮ್ಮನ್ನು ಕಡೆಗಣಿಸಲಾಗಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹಾ ಇದೇ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.

ಜೊತೆಗೆ ರಿಯಾಲಿಟಿ ಶೋಗಳಲ್ಲಿ ಸಿಂಪತಿಗಳೆಲ್ಲವೂ ಚೆನ್ನಾಗಿ ವರ್ಕ್‌ ಆಗುತ್ತದೆ. ಉಳ್ಳವರನ್ನು ಗೆಲ್ಲಿಸುವ ಬದಲು ಹಳ್ಳಿಯಿಂದ ಬಂದವರನ್ನು ಗೆಲ್ಲಿಸೋಣ ಎಂಬ ಮನಸ್ಥಿತಿ ಇಲ್ಲಿ ಹೆಚ್ಚಾಗುತ್ತಿದೆ. ಜನರು ಸಹಾ ಅಂಥವರನ್ನೇ ಗೆಲ್ಲಿಸುತ್ತಾರೆ ಎಂದು ನಟಿ ಹಂಸ ದೂರಿದ್ದಾರೆ.

Continue Reading

Cinema

ಸ್ಟೇಟ್‌ ಅವಾರ್ಡ್‌ ತಿರಸ್ಕರಿಸಿದ ಕಿಚ್ಚ ಸುದೀಪ: ಕಾರಣ ಏನು ಗೊತ್ತಾ?

Published

on

ಬೆಂಗಳೂರು: 2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕನ್ನಡದ ಖ್ಯಾತನಟ ಕಿಚ್ಚ ಸುದೀಪ್ ಹಾಗೂ ನಟಿ ಅನುಪಮಾ ಗೌಡಗೆ ರಾಜ್ಯ ಪ್ರಶಸ್ತಿ ಘೋಷಿಸಿದೆ.

ಪೈಲ್ವಾನ್ ಸಿನಿಮಾದಲ್ಲಿನ ಅಭಿನಯಕ್ಕೆ ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡುವುದಾಗಿ ಘೋಷಿಸಿತ್ತು. ಆದರೆ ಈ ಪ್ರಶಸ್ತಿಯನ್ನು ಒಪ್ಪದ ಕಿಚ್ಚ ಸುದೀಪ್‌ ಅತೀ ನಯವಾಗಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ನನಗಿಂತ ಹೆಚ್ಚು ಜನರು ಶ್ರಮ ಜೀವಿಗಳು ಚಿತ್ರರಂಗದಲ್ಲಿ ದುಡಿದಿದ್ದಾರೆ. ಅಂತವರಲ್ಲಿ ಒಬ್ಬರಿಗೆ ಈ ಗೌರವ ಸಲ್ಲಬೇಕು ಎಂದು ಅವರು ಭಾವಿಸಿದ್ದಾರೆ.

ಸುದೀಪ್‌ ಟ್ವೀಟ್‌ನಲ್ಲೇನಿದೆ?

ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸದಸ್ಯರು, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ, ಮತ್ತು ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದಾಗ್ಯೂ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ಆಯ್ಕೆ ಮಾಡಿದ್ದೇನೆ, ನಾನು ಎತ್ತಿಹಿಡಿಯಲು ಉದ್ದೇಶಿಸಿರುವ ವಿವಿಧ ವೈಯಕ್ತಿಕ ಕಾರಣಗಳಿಗಾಗಿ ಮಾಡಿದ ನಿರ್ಧಾರವನ್ನು ನಾನು ವ್ಯಕ್ತಪಡಿಸಬೇಕು. ಅನೇಕ ಅರ್ಹ ನಟರು ಚಿತ್ರರಂಗಕ್ಕಾಗಿ ದುಡಿದಿದ್ದಾರೆ ಮತ್ತು ಈ ಪ್ರತಿಷ್ಠಿತ ಮನ್ನಣೆಯನ್ನು ನನಗಿಂತ ಹೆಚ್ಚು ಅವರಿಗೆ ನೀಡಬೇಕು. ಅವರಲ್ಲಿ ಒಬ್ಬರು ಅದನ್ನು ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

ಜನರನ್ನು ರಂಜಿಸುವ ನನ್ನ ಸಮರ್ಪಣೆ ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆಯೇ ಇರುತ್ತದೆ ಮತ್ತು ತೀರ್ಪುಗಾರರ ಈ ಅಂಗೀಕಾರವು ಶ್ರೇಷ್ಠತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ನನಗೆ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತದೆ.

ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ, ಏಕೆಂದರೆ ಈ ಗುರುತಿಸುವಿಕೆ ಸ್ವತಃ ನನ್ನ ಪ್ರತಿಫಲವಾಗಿದೆ. ನನ್ನ ನಿರ್ಧಾರವು ಯಾವುದೇ ನಿರಾಶೆಗೆ ಕಾರಣವಾಗಬಹುದಾದ ತೀರ್ಪುಗಾರರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ.

ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸುದೀರ್ಘವಾಗಿ ಬರೆದುಕೊಂಡು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಬಾದ್‌ಶಾ ಕಿಚ್ಚ ಸುದೀಪ.

Continue Reading

Cinema

ಚೆಕ್‌ಬೌನ್ಸ್‌ ಪ್ರಕರಣ: ನಿರ್ದೇಶಕ ಆರ್‌ಜಿವಿ ಗೆ 3 ತಿಂಗಳ ಸಜೆ: ಅಸಲಿಯತ್ತೇನು ಗೊತ್ತಾ?

Published

on

ಮುಂಬೈ: ಟಾಲಿವುಡ್‌ ಸ್ಟಾರ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಿಗೆ ಜಾಮೀನು ರಹಿತ ವಾರೆಂಟ್‌ ಜೊತೆಗೆ 3 ತಿಂಗಳ ಜೈಲು ವಾಸ ವಿಧಿಸಿ ಕೋರ್ಟ್‌ ಆದೇಶ ನೀಡಿದೆ.

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಆರ್‌ಜಿವಿ ಗೆ ಮುಂಬೈನ ಸ್ಥಳೀಯ ಕೋರ್ಟ್‌ ಭಾರೀ ದಂಡ ವಿಧಿಸಿದ್ದು, ಆ ದಂಡ ಪಾವತಿಸದೇ ಹೋದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

2018ರಲ್ಲಿ ಚೆಕ್ ಬೌನ್ಸ್‌ ಪ್ರಕರಣದಲ್ಲಿ ಮಹೇಶ್‌ ಚಂದ್ರ ಮಿಶ್ರಾ ಎಂಬುವವರು ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ದೂರು ನೀಡಿದ್ದರು. ಕಳೆದ ಏಳು ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರೂ ಸಹಾ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರೆಂಟ್‌ ನೀಡಲಾಗಿದೆ.

ಕೋರ್ಟ್‌ ತನ್ನ ಆದೇಶದಲ್ಲಿ ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ 3.72 ಲಕ್ಷ ಹಣ ಪಾವತಿಸಬೇಕು. ಒಂದು ವೇಳೆ ಇದು ತಪ್ಪಿದ್ದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೂರು ತಿಂಗಳ ಸಾದಾ ಸಜೆ ವಿಧಿಸಲಿದೆ ಎಂದು ಹೇಳಿದೆ.

Continue Reading

Trending

error: Content is protected !!