Connect with us

Mysore

ಜೆ.ಡಿ.ಎಸ್ ಬೆಂಬಲಿತರಿಂದ ವಿಜಯೋತ್ಸವ

Published

on

ಆಡಳಿತ ಮಂಡಳಿಯ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು ಮಾಜಿ ಶಾಸಕ ಸಾ. ರಾ.ಮಹೇಶ್ ರವರ  ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು. ಸಾಲಿಗ್ರಾಮ ತಾಲೂಕಿನ ಮಿರ್ಲೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಧಾಕರ್ 325,ಸಾಲಗಾರರ ಕ್ಷೇತ್ರದಿಂದ ಕಮಲಮ್ಮ ಎಂ ಬಿ 292, ಕಿರಣ್ ಕುಮಾರ್ 304, ಕೃಷ್ಣಶೆಟ್ಟಿ ಎಂ ಕೆ  229, ಧ್ರುವ ಕುಮಾರ ಎಂ ಎಸ್ 394, ನಟರಾಜ್ ಎಂ ಕೆ 303, ಭಾಸ್ಕರ್ 443, ರಮೇಶ್ ಎಂ ವಿ 252, ರಂಗಸ್ವಾಮಿ 310, ಸುಶೀಲಮ್ಮ 243, ಪರಿಶಿಷ್ಟ ಪಂಗಡದಿಂದ ಪಾಪ ನಾಯ್ಕ 246, ಪರಿಶಿಷ್ಟ ಜಾತಿಯಿಂದ ಬೈರೋಜಿ 296, ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಇನ್ನು ಕಾಂಗ್ರೇಸ್ ಪಕ್ಷದ ಬೆಂಬಲಿತರಾಗಿದ್ದ ಅಶ್ವತ  186,ಕಳಸೇಗೌಡ152, ಗುರುಸ್ವಾಮಿ 113, ಜವರಯ್ಯ104,ತೇಜಸ್ವಿನಿ203,ದಿನಕರ 229,ದೇವೇಂದ್ರ 184,ರಮಾಮಣಿ 213, ಸುರೇಶ 180,ಹನುಮಂತೇಗೌಡ 279,ದಿನೇಶ 255,ವೆಂಕಟೇಶ್,137 ಮತಪಡೆದು ಪರಾಭವಗೊಂಡರು

ಸಾಲಗಾರ ಕ್ಷೇತ್ರದಿಂದ 851 ಮತಗಳಲ್ಲಿ 680 ಮತಗಳು ಮತ್ತು ಸಾಲಗಾರರಲ್ಲದ  ಕ್ಷೇತ್ರದಿಂದ 857 ಮತಗಳಲ್ಲಿ 458 ಮತಗಳು ಚಲಾವಣೆಗೊಂಡವು.

ಚುನಾವಣಾಧಿಕಾರಿಯಾಗಿ ಸಹಕಾರ ಗಿರೀಶ್ ಕಾರ್ಯ ನಿರ್ವಹಿಸಿದರು. ಚುನಾವಣಾ ಫಲಿತಾಂಶ   ಪ್ರಕಟಿಸುತ್ತಿದ್ದಂತೆಯೇ  ಮಿರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು,  ಜೆಡಿಎಸ್ ಮುಖಂಡರುಗಳಾದ ರಾಧಾಕೃಷ್ಣ, ನಾಗೇಶ್, ದಿವಾಕರ್, ಎಂ.ಎಲ್  ಧನಂಜಯ, ಧರ್ಮದರ್ಶಿ ಎಂ.ಎಲ್. ಲೋಕೇಶ್,  ಹನುಮೇಗೌಡ,ರಾಜೇಶ,ಪುಟ್ಟಸ್ವಾಮಿಗೌಡ, ನಾಗರಾಜು ಕುನ್ನೇಗೌಡ, ಹೊಸಟ್ಟಿ ರಘು, ಮನು ,ಚಂದ್ರು , ಸೇರಿದಂತೆ ಇನ್ನಿತರರು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಜಯಕಾರ ಕೂಗಿ  ವಿಜ ಯೋತ್ಸವ ಆಚರಿಸಿದರು.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಲಯ ಮಟ್ಟದ ಸಾಧನ ಸಮಾವೇಶ

Published

on

ಸಾಲಿಗ್ರಾಮ  ತಾಲೂಕಿನ ಕರ್ಪೂರವಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಸಾಲಿಗ್ರಾಮ ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮ ವಲಯ ಮಟ್ಟದ ಸಾಧನ ಸಮಾವೇಶವನ್ನು ನಡೆಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕರ್ಪೂರವಳ್ಳಿಯ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿರವರು ವಹಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.

ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ.ಮದುಚಂದ್ರ ಯೋಜನೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ತಾಲೂಕಿನ ಕರ್ತಾಳು ಗ್ರಾಮದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಒಂದುವರೆ ಲಕ್ಷ ರೂ ಮಂಜೂರಾತಿ ಆದೇಶ ಪತ್ರ, ಕರ್ಪೂರವಳ್ಳಿ ಜಂಗಮ ಮಠದ ಶಾಲೆಗೆ 10 ಬೆಂಚು ಡೆಸ್ಕ್ ಗಳ ಮಂಜೂರಾತಿ ಪತ್ರ, ಕರ್ಪೂರವಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವರಿಗೆ ಮಾಶಾಸನ ಮಂಜುರಾತಿ ಪತ್ರ, ಜನ ಮಂಗಳ  ಕಾರ್ಯಕ್ರಮದಲ್ಲಿ ಸಣ್ಣಮ್ಮ ಎಂಬುವರಿಗೆ ವಾಟರ್ ಬೆಡ್ ಮಂಜುರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಸ್ವಾಮಿ, ಪಿಡಿಓ ಕುಳ್ಳೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ವಲಯ ಮೇಲ್ವಿಚಾರಕ  ಧರಣಪ್ಪಗೌಡ, ಕರ್ಪೂರವಳ್ಳಿ  ಸೇವಾ ಪ್ರತಿನಿಧಿ ಉಮೇಶ್, ಸೇವಾ ಪ್ರತಿನಿಧಿಗಳು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಸೇರಿದಂತೆ ಹಲವರು ಸಾಧನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ   

Continue Reading

Crime

ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆ; ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

Published

on

ನಂಜನಗೂಡು: ಪತ್ನಿ ಜೊತೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯತಮನನ್ನು ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 39 ವರ್ಷದ ಮಹದೇವಸ್ವಾಮಿ ಮೃತ ದುರ್ಧೈವಿಯಾಗಿದ್ದಾನೆ. 40 ವರ್ಷದ ಸೋಮಯ್ಯ ಎಂಬುವವರ ಪತ್ನಿ ಜೊತೆ ಮಹದೇವಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದ ಎಂದು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಮಲಗಿದ್ದ ಮಹದೇವಸ್ವಾಮಿಯನ್ನು ಸೋಮಯ್ಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಸೋಮಯ್ಯ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿವೈಎಸ್ ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Mysore

 ರೈತರು ಹೈನುಗಾರಿಕೆಗೆ ಒತ್ತು ನೀಡಿ ಶಾಸಕ ಡಿ. ರವಿಶಂಕರ್

Published

on

 ರೈತರು ಹೈನುಗಾರಿಕೆ ಗೆ   ಒತ್ತು ನೀಡಿ   ಶಾಸಕ ಡಿ. ರವಿಶಂಕರ್
ಬರಗಾಲ ಎದುರಾದಾಗ ಮತ್ತು ಕೋವಿಡ್ ನಂತಹ ಸಂದರ್ಭದಲ್ಲಿ ದೇಶ ಲಾಕ್‌ಡೌನ್ ಆದಾಗ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದ್ದು ಹೈನುಗಾರಿಕೆ ಇದನ್ನು ಗ್ರಾಮೀಣ ಜನತೆ ಅರ್ಥ ಮಾಡಿಕೊಂಡು ಹೈನುಗಾರಿಕೆಗೆ ಒತ್ತು ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕು ಲಕ್ಷ್ಮಿ ಪುರ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಹೈನುಗಾರಿಕೆಗೆ ಸರ್ಕಾರ ಮತ್ತು ಹಾಲು ಒಕ್ಕೂಟದವರು ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಹಳ್ಳಿಗಾಡಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕನಿಷ್ಠ ಒಂದು ಹಸುವನ್ನಾದರೂ ಸಾಕಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಶುಸಂಗೋಪನಾ ಇಲಾಖೆಯ ಸಚಿವರಾಗಿದ್ದಾಗ ರೈತರಿಗೆ ಮತ್ತು ಹೈನುಗಾರಿಕೆ ಮಾಡುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದರು ಇದರಿಂದ ಹಾಲು ಒಕ್ಕೂಟಗಳು ಸಾಕಷ್ಟು ವೃದ್ದಿಯಾಗಲು ಸಾಧ್ಯವಾಯಿತು ಎಂದ ಶಾಸಕರು ಗುಜರಾತ್‌ನ ಅಮೂಲ್‌ಗಿಂತಲೂ ಕೆಎಂಎಫ್ ಎಲ್ಲಾ ರೀತಿಯಲ್ಲೂ ಅಭಿವೃದ್ದಿಗೊಂಡಿದೆ ಇದಕ್ಕೆ ಸರ್ಕಾರವೇ ಕಾರಣ ಎಂದರು.
ಒಕ್ಕೂಟಕ್ಕೆ ಹೆಚ್ಚು ಹಾಲು ಸರಬರಾಜಾಗಿ ಉಳಿಯುತ್ತಿರುವ ಹಾಲು ಹಾಳಾಗಬಾರದು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಹಾಲು ಮಹಾ ಮಂಡಳ ೨೦೧೪ರಲ್ಲಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದಾಗ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದರಿAದ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಉಪಯೋಗವಾಯಿತು ಇಂತಹಾ ಕೆಲಸಗಳನ್ನು ಮುಖ್ಯಮಂತ್ರಿಯಾದವರು ಮಾಡಬೇಕು ಎಂದು ಹೇಳಿದರು.
ಲಕ್ಷಿö್ಮಪುರ ಗ್ರಾಮವನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಗ್ರಾಮ ವಿಕಾಸ್ ಯೋಜನೆಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ ಇದರ ಜತೆಗೆ ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ ಮಾಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕ ಡಿ.ರವಿಶಂಕರ್ ಗ್ರಾಮಸ್ಥರ ಬೇಡಿಕೆಯಂತೆ ದೇವಾಲಯಗಳ ಜೀರ್ಣೋದ್ದಾರಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಸಾಲಿಗ್ರಾಮ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿರುವ ಲಕ್ಷಿö್ಮಪುರ ಗ್ರಾಮಸ್ಥರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಲು ಹೆಚ್ಚು ಮತ ನೀಡುವ ಮೂಲಕ ನನಗೆ ಸಹಕಾರ ನೀಡಿದ್ದಾರೆ ಇದರ ಜತೆಗೆ ಎರಡು ವಿಧಾನ ಸಭಾ ಚುನಾವಣೆಗಳಲ್ಲೂ ಹೆಚ್ಚು ಮತ ನೀಡಿದ್ದಾರೆ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರಲ್ಲದೆ ಗ್ರಾಮದ ಮುಖ್ಯ ರಸ್ತೆಗಳ ಡಾಂಬರೀಕರಣ ಮಾಡಿಸಲು ಬದ್ದನಾಗಿದ್ದು ಲಕ್ಷಿö್ಮಪುರ, ಚಿಕ್ಕನಾಯಕನಹಳ್ಳಿ ಮುಖ್ಯ ರಸ್ತೆಯ ಅಭಿವೃದ್ದಿಗಾಗಿ ೧ ಕೋಟಿ ರೂ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ರಾಜ್ಯದ ಎಲ್ಲಾ ಒಕ್ಕೂಟಗಳಿಗಿಂತ ಮೈಮುಲ್ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಾಲು ಸರಬರಾಜುದಾರರಿಗೆ ಹೆಚ್ಚು ಹಣ ನೀಡುವುದರ ಜತೆಗೆ ಅವರುಗಳ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗಿದೆ ಎಂದರು.
ಈ ಬಾರಿ ಬರ ಇರುವುದರಿಂದ ಪಶು ಆಹಾರಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು ಈ ಬಗ್ಗೆ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗಿದ್ದು ಮುಖ್ಯಮಂತ್ರಿಗಳ ಆಪ್ತರಾಗಿರುವ ಶಾಸಕ ಡಿ.ರವಿಶಂಕರ್ ಈ ಕೆಲ ಸವನ್ನು ಮಾಡಿಸಿ ಕೊಡಬೇಕು ಇದರಿಂದ ಹೈನುಗಾರಿಕೆ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಸಂಘದ ಅಧ್ಯಕ್ಷ ಕೆ.ಸುರೇಶ್, ತಾ.ಪಂ.ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್.ವಿಜಯಕುಮಾರ್, ನಿವೃತ್ತ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಬಿಎಂಸಿ ವ್ಯವಸ್ಥಾಪಕ ಜಿ.ಎನ್.ಸಂತೋಷ್ ಮಾತನಾಡಿದರು. ಸಂಘಕ್ಕೆ ಗುಣಮಟ್ಟ ಮತ್ತು ಹೆಚ್ಚು ಹಾಲು ಸರಬರಾಜು ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.
 ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿಲಾಮಂಜುನಾಥ್, ಮಾಜಿ ಅಧ್ಯಕ್ಷ ಹುಚ್ಚೇಗೌಡ, ಸದಸ್ಯರಾದ ಪಾಪಣ್ಣ, ಕೃಷ್ಣೇಗೌಡ, ರೂಪ, ಕಾಳಮ್ಮ, ಸಂಘದ ಉಪಾಧ್ಯಕ್ಷ ಸ್ವಾಮಿ(ಎಂ.ಪಿ), ನಿರ್ದೇಶಕರಾದ ಡಿಷ್‌ಮಂಜು, ಎಲ್.ಎನ್.ಮಂಜಯ್ಯ, ಸಣ್ಣೇಗೌಡ, ನಾಗರಾಜು, ರೇವಣ್ಣ, ಪ್ರಕಾಶಾಚಾರ್, ರೇವಣ್ಣ, ಎಂ.ಅರುಣ, ಪ್ರತೀಮಾ, ಕಾರ್ಯದರ್ಶಿ ಕೃಷ್ಣೇಗೌಡ, ಸಿಬ್ಬಂದಿಗಳಾದ ಎಸ್.ಮಹೇಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ 
Continue Reading

Trending

error: Content is protected !!