Mysore
ಪೋಷಕರು ಮಕ್ಕಳಿಗೆ ತಿಳಿವಳಿಕೆ ಮತ್ತು ಸಂಸ್ಕಾರ ವನ್ನು ಕಲಿಸಿ: ಜಿ. ಪಂ. ಮಾಜಿ ಅಧ್ಯಕ್ಷ ಸಾರಾ ನಂದೀಶ್
ಸಾಲಿಗ್ರಾಮ ಪಟ್ಟಣದ ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆ ವತಿಯಿಂದ ಶಾಲಾ ವಾರ್ಷಿಕೋತ್ಸವದ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಂದೆ ತಾಯಂದಿರುಗಳು ತಮ್ಮ ಮಕ್ಕಳಲ್ಲಿ ಒಳ್ಳೆಯ ಬುದ್ದಿ ಮಾತು ಹೇಳಿ ಅವರಿಗೆ ತಿಳುವಳಿಕೆ ನೀಡಬೇಕು. ಇಂದಿನ ಮಕ್ಕಳು ಅತೀ ಸೂಕ್ಶ್ಮವಾಗಿದ್ದು, ಅವರಿಗೆ ಕೂರಿಸಿಕೊಂಡು ಉದ್ರೇಕದಲ್ಲಿ ಅಥವಾ ವಿಪರೀತ ಕೋಪದಲ್ಲಿ ರೇಗುವ ರೀತಿಯಲ್ಲಿ ಮಾತನಾಡದೆ ಒಳ್ಳೆಯ ಮಾತಿನಲ್ಲಿ ಮನ ತಟ್ಟುವ ಹಾಗೆ ಮಾತನಾಡಿದಾಗ ಮಾತ್ರ ಮಕ್ಕಳು ಕೇಳುತ್ತಾರೆ. ಪೋಷಕರು ತಮ್ಮ ಮಕ್ಕಳು ಯಾವ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟ ಶಾಲೆಗಳಿಗೆ ಭೇಟಿ ನೀಡಿ ವಿಚಾರಿಸಿದರೆ, ಶಿಕ್ಷಕರಿಗೂ ಸಹ ಪೋಷಕರುಗಳು ಬರುತ್ತಾರೆ. ವಿಚಾರಿಸುತ್ತಾರೆ ಎಂಬ ಭಯ ಇರುತ್ತೆ. ಓದಲು ಮತ್ತು ಓದಿಸಲು ಹೆಚ್ಚಿನ ರೀತಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಪ್ರಮುಖ ಕಾರಣರಾಗಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಸಾರಾ ನಂದೀಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಮಕ್ಕಳ ಪೋಷಕರುಗಳು ವಿವಿಧ ಆಟೋಟ ಗಳಲ್ಲಿ ಸ್ಪರ್ದಿಸಿ ಗೆದ್ದಿರುವವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ. ಡಿ. ಪಿ ಐ ಪಾಂಡುರಂಗ, ಗ್ರಾ ಪಂ ಅಧ್ಯಕ್ಷ ಫಾತಿಮಾ, ಬರಹಗಾರ ಜಯಪ್ಪ ಹೊನ್ನಹಳ್ಳಿ, ಶೋಭ ನಾಗಭೂಷಣ, ಕೆ. ಪಿ. ಭಾರತಿ,ಸಂಸ್ಥೆ ಅಧ್ಯಕ್ಷೆ ಕಮಲಮ್ಮ, ಕಾರ್ಯದರ್ಶಿ ತ್ರಿವೇಣಿ ರಮೇಶ್, ಮುಖ್ಯ ಶಿಕ್ಷಕಿ ಯಶಸ್ವಿನಿ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಕೆ. ಮಧುಚಂದ್ರ, ಶಿಕ್ಷಣ ಇಲಾಖೆ ಜಗದೀಶ್, ಸಂಪಾದಕ ಭಾಸ್ಕರ್, ಚಲನಚಿತ್ರ ನಟ ಶ್ರೀ ಕಾಂತ್ ಹೊನ್ನವಳ್ಳಿ, ರಾಜಶೇಖರ್ ಕಲ್ಯಾಣಪುರ, ಮಂಜುನಾಥ್,ಪ್ರಧಾನ ವ್ಯವಸ್ಥಾಪ ರಮೇಶ್, ಗುಣಚಂದ್ರಕುಮಾರ್ ಜೈನ್, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಇನ್ನಿತರರು ಇದ್ದಾರೆ.
Mysore
ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್*
ದೆಹಲಿಯ ಕಚೇರಿಯಲ್ಲಿ ನಿತಿನ್ ಗಡ್ಕರಿ ಅವರೊ೦ದಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಭೆ ನಡೆಸಿ, ಮೈಸೂರಿನ ಬೆಳವಣಿಗೆಗೆ ಪ್ರಮುಖ ಮೂಲಸೌಕರ್ಯ ಯೋಜನೆಗಳ ಕುರಿತು ಕೆಲಕಾಲ ಚರ್ಚೆ ನಡೆಸಿದರು.
ಸಭೆಯಲ್ಲಿ ಮುಖ್ಯವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ ಯಲ್ಲಿ ರಸ್ತೆ ಸುರಕ್ಷತೆಗಾಗಿ ಹೆಚ್ಚುವರಿ ಮಂಜೂರಾತಿ, ಮೈಸೂರು-ಕುಶಾಲನಗರ ಭಾಗಕ್ಕೆ ಭೂಸ್ವಾಧೀನ ಮತ್ತು ಅನುಮತಿ ಹಾಗೂ ಕೇರಳದಿಂದ ಕೊಳ್ಳೆಗಾಲದವರೆಗೆ 6 ಪಥಗಳ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಮನವಿ ಮಾಡಲಾಯಿತು.
ಯದುವೀರ್ ಅವರು ಮೈಸೂರಿನ ಬೆಳವಣಿಗೆಗೆ ಏನೆಲ್ಲಾ ಪ್ರಮುಖ ಮೂಲಸೌಕರ್ಯ ಗಳ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ ಎಂಬುದನ್ನು ನೋಡುವುದಾದರೆ
*NH-275 ರ ಬೆಂಗಳೂರಿನಿಂದ ಮೈಸೂರು ವಿಭಾಗದಲ್ಲಿ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕಾಮಗಾರಿಗಳ ಮಂಜೂರಾತಿ*
ಮೈಸೂರು ರಿಂಗ್ ರಸ್ತೆ ಮತ್ತು ಬೆಂಗಳೂರು – ಮೈಸೂರು ಹೆದ್ದಾರಿಯೊಂದಿಗೆ ಸಂಚಾರವನ್ನು ವಿಲೀನಗೊಳಿಸಲು ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಿಸುವ ಮೂಲಕ ಜಂಕ್ಷನ್ ಅಭಿವೃದ್ಧಿ.
ಟೋಲ್ ಬೂತ್‌ಗಳ ಸ್ಥಾಪನೆಯೊಂದಿಗೆ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ನಿಬಂಧನೆಗಳ ಅಭಿವೃದ್ಧಿ ಇದು ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ದಟ್ಟಣೆಯನ್ನು ನಿಯಂತ್ರಿಸುತ್ತದೆ. ಇದಲ್ಲದೆ, ರಚನೆಗಳು/ ( ROB) Railways over bridge ಗಳ ಮೂಲಕ ಸೇವಾ ರಸ್ತೆಗಳ ನಿರಂತರತೆಯನ್ನು ಟ್ರಾಫಿಕ್‌ನ ಸ್ಥಳೀಯ ಚಲನೆಗೆ ಅನುಕೂಲವಾಗುವಂತೆ ಖಚಿತಪಡಿಸಿಕೊಳ್ಳಬಹುದು.
*ಮೈಸೂರು – ಕುಶಾಲನಗರ ವಿಭಾಗ NH – 275 ರ ಕೆಲಸವನ್ನು ಪ್ರಾರಂಭಿಸಲು ಭೂಸ್ವಾಧೀನ ಮತ್ತು ಶಾಸನಬದ್ಧ ಅನುಮತಿಗಳನ್ನು ತ್ವರಿತಗೊಳಿಸುವುದು*
Land acquisition ( LA)
ಪರಿಹಾರದ ವಿತರಣೆಯನ್ನು ತ್ವರಿತಗೊಳಿಸಬಹುದು, ಆದ್ದರಿಂದ ಸಂಬಂಧಪಟ್ಟ NHAl ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬಹುದು.
NH-766 (ಹಳೆಯ NH-212) ನ ಕೇರಳದಿಂದ ಕೊಳ್ಳೇಗಾಲ ವಿಭಾಗವು ಕೊಳ್ಳೇಗಾಲ- ಟಿ.ನರಸೀಪುರ – ಮೈಸೂರು – ನಂಜನಗೂಡು – ಗುಂಡ್ಲುಪೇಟೆ – ಕೋಜಿ಼ಕೋಡ್ ಮೂಲಕ ಹಾದುಹೋಗುತ್ತದೆ.
ಗಣಪತಿ ಸಚ್ಚಿದಾನಂದ ಆಶ್ರಮ (ಅಸ್ತಿತ್ವದಲ್ಲಿರುವ 4L) ಮತ್ತು ಕಡಕೋಳ ಇಂಡಸ್ಟ್ರಿಯಲ್ ಕ್ರಾಸ್ Vehicle under pass ( VUP) ಯೊಂದಿಗೆ ಎರಡು ಲೇನ್ ಟ್ರಾಫಿಕ್ ಮತ್ತು ಉಳಿದ ಎರಡು ಲೇನ್ ರಸ್ತೆಯನ್ನು ಜಂಕ್ಷನ್ ಸುಧಾರಣೆ ಕ್ರಮಗಳೊಂದಿಗೆ ಮಾತ್ರ ಪ್ರಸ್ತಾಪಿಸಲಾಗಿದೆ. ರಸ್ತೆ ಸುರಕ್ಷತೆಗಾಗಿ ಇದು ಕಾರ್ಯಸಾಧ್ಯವಾದ ದೀರ್ಘಕಾಲೀನ ಪರಿಹಾರವಲ್ಲ. ಆದ್ದರಿಂದ, ಈ ಎರಡನ್ನೂ ಮತ್ತೊಮ್ಮೆ ಪರಿಶೀಲಿಸಲು ಎನ್‌ಎಚ್‌ಎಎಲ್‌ಗೆ ವಿನಂತಿಸಲಾಗಿದೆ.
ಮೈಸೂರಿನಿಂದ ನಂಜನಗೂಡಿಗೆ 20ಕಿಮೀ ಉದ್ದದ ಸಂಚಾರದ ತೀವ್ರತೆ 40,000 ಪಿಸಿಯುಗಳಿಗಿಂತ ಹೆಚ್ಚಿದೆ ಮತ್ತು ಮುಖ್ಯ ಟ್ರಾಫಿಕ್ ಉತ್ಪಾದನಾ ಕೇಂದ್ರಗಳು ರೈಲ್ವೆಯ ಕಂಟೈನರ್ ಡಿಪೋ, ಕಡಕೋಳ, ತಾಂಡವಪುರ ಮತ್ತು ನಂಜನಗೂಡು ಮುಂತಾದ ಕೈಗಾರಿಕಾ ಪ್ರದೇಶಗಳು ದಕ್ಷಿಣ ಕಾಶಿ – ದೇವಸ್ಥಾನ ಮತ್ತು ಚಾಮರಾಜನಗರದ ಕಡೆಗೆ NH-150A ಅನ್ನು ವಿಭಜಿಸುವುದು. ಊಟಿಗೆ ಹೋಗುವ ವಿಮಾನ ನಿಲ್ದಾಣ ಮತ್ತು ಟ್ರಾಫಿಕ್ ಜೊತೆಗೆ. ಆದ್ದರಿಂದ, ಹೆದ್ದಾರಿಯ ಈ ಭಾಗವನ್ನು 6-ಲೇನ್‌ಗೆ ನವೀಕರಿಸುವ ಅಗತ್ಯವಿದೆ. ಆದ್ದರಿಂದ, 6 ಲೇನ್ ಉನ್ನತೀಕರಣಕ್ಕಾಗಿ ಹೆಚ್ಚಿನ ಅಧ್ಯಯನಕ್ಕಾಗಿ ಡಿಪಿಆರ್ ಸೇವೆಗಳನ್ನು ತೊಡಗಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ವಿನಂತಿಸಲಾಗಿದೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ರನ್‌ವೇ ವಿಸ್ತರಣೆಗಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿ ಅಸ್ತಿತ್ವದಲ್ಲಿರುವ NH-766 ರಸ್ತೆಯ ಡೈವರ್ಶನ್‌ಗಾಗಿ DPR ಅನ್ನು ತ್ವರಿತಗೊಳಿಸಬೇಕೆಂಬ ಮನವಿ ಮಾಡಲಾಗಿದೆ.
ಸಚಿವರ ಬೆಂಬಲ ಮತ್ತು ಮಾರ್ಗದರ್ಶನವು ಮೈಸೂರು-ಕೊಡಗಿನ ಮೂಲಸೌಕರ್ಯಗಳನ್ನು ಪರಿವರ್ತಿಸಲು, ಸಂಪರ್ಕವನ್ನು ಹೆಚ್ಚಿಸಲು ಸಹಕಾರಿಯಾಗುವ ಜೊತೆಗೆ ಮೈಸೂರಿನ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ಗೌರವ ಪೂರ್ವಕವಾಗಿ ಮನವಿ ಮಾಡಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಅವರ ಕೋರಿಕೆಯನ್ನು ಸ್ವೀಕರಿಸಿದ ನಿತಿನ್ ಗಡ್ಕರಿಯವರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
Mysore
ಕಸದ ತ್ಯಾಜ್ಯ ಮತ್ತು ಎಣ್ಣೆ ಕಾಲಿ ಬಾಟಲ್ ಗಳು ರೋಡಿನಲ್ಲಿ ಬಿದ್ದಿರುವುದು ಇದನ್ನು ಕೇಳದ ಪುರಸಭೆ
ಎಚ್ ಡಿ ಕೋಟೆ ಹಾಗೂ ಹ್ಯಾಂಡ್ ಪೋಸ್ಟ್ ಗೆ ಓಡಾಡುವ ರಸ್ತೆ ತುಂಬಾ ಕಸದ ರಾಶಿ ಮತ್ತು ಎಣ್ಣೆ ಬಾಟಲಿಗಳು ಬಿದ್ದಿರುವುದನ್ನು ಯಾರು ಕೇಳುತ್ತಿಲ್ಲ 100 ಮೀಟರ್ ಅಂತರದಲ್ಲಿ ಗಣಪತಿ ದೇವಸ್ಥಾನ ವಿದ್ದು ಸಾರ್ವಜನಿಕರು ಓಡಾಡಲು ತುಂಬಾ ಕಷ್ಟವಾಗುತ್ತಿದೆ ದಯವಿಟ್ಟು ಇದನ್ನು ಗುರು. ವೈನ್ಸ್ ಬಾರ್ ಬಾರ್ ನಿಂದ ಬಂದ ಕಸ ಇದು ಮೊಟ್ಟೆ * ಮತ್ತು ಎಣ್ಣೆ ಖಾಲಿ ಬಾಟಲಿಗಳು ಬಾಟಲೂಗಳು
ಬಿದ್ದಿರುವುದನ್ನು ನೋಡಿ ಎಚ್ ಡಿ ಕೋಟೆ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಇದನ್ನು ನೋಡಿ ತುಂಬಾ ಮುಜುಗರವಾಗುತ್ತಿದೆ & ಮತ್ತು ವಿದ್ಯಾರ್ಥಿಗಳಿಗೆ ಕೆಟ್ಟ ಪರಿಣಾಮ ವಿರುತ್ತದೆ ದೇವಸ್ಥಾನದ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಬೇಕೆಂದು ಪುರಸಭೆ ವ್ಯಾಪ್ತಿಯಿಂದ ಅವರಿಗೆ ತಿಳಿಸಬೇಕಾಗಿ ಮನವಿ.
Mysore
ದಿವಾಳಿಯ ಅಂಚಿನಲ್ಲಿರುವ ವಿಶ್ವವಿದ್ಯಾನಿಲಯಗಳು. ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾನಿಲಯಗಳತ್ತ ಕಣ್ತೆರೆವರೇ!
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ. ಡಾ. ಅರುಣ್ ಕುಮಾರ್ H R ಬೇಸರ.
ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ಶಿಕ್ಷಣ ಜ್ಞಾನವನ್ನ ಕೊಟ್ಟು . ಸಾಮಾಜಿಕವಾಗಿ ಮೌಡ್ಯ ದಿಂದ ಮುಖ್ಯವಾಹಿನಿಗೆ ತರುವಲ್ಲಿ ವಿಶ್ವವಿದ್ಯಾನಿಲಯ ಗಳು ಉನ್ನತವಾದ. ಸ್ಥಾನವನ್ನ ಪಡೆದಿವೆ.
ಅದರಂತೆ ಪ್ರಾಚೀನ ನಳಂದ ವಿಶ್ವವಿದ್ಯಾನಿಲಯ ತನ್ನದೇ ಆದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವನ್ನು ಕೊಟ್ಟರು. ಅದರಂತೆ 1945 ರಲ್ಲಿ UGC. ಯನ್ನು ರಚಿಸಲಾಯಿತು. ಮೂರು ಕೇಂದ್ರೀಯ ವಿಶ್ವವಿದ್ಯಾನಿಲಯಗಳಾದ. ಆಲಿಘರ್. ಬನಾರಸ್. ದೆಹಲಿ. ಮೇಲ್ವಿಚಾರಣೆ ಕೆಲಸವನ್ನು ಮಾಡಿದವು.
1947ರಲ್ಲಿ ಎಲ್ಲಾ ಭಾರತೀಯ ವಿಶ್ವವಿದ್ಯಾಲಯಗಳು ಒಳಗೊಳಲು ವಿಸ್ತರಿಸಲಾಯಿತು.1952 ರಲ್ಲಿ ಸರ್ಕಾರವು ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ಅನುದಾನಗಳನ್ನು UGC ಮೂಲಕ ವಹಿಸಬೇಕೆಂದು ನಿರ್ಧರಿಸಿತು. ನಂತರ ಶಿಕ್ಷಣ ಮತ್ತು ನೈಸರ್ಗಿಕ ಸಂಪನ್ಮೂಲಗಳು ವೈಜ್ಞಾನಿಕ ಸಂಶೋಧನಾ ಸಚಿವರಾದ ಮೌಲಾನಾ ಅಬುಲ್ ಕಲಾಂ ಅಜಾದ್ ರವರು 28 ಡಿಸೆಂಬರ್ 1953 ರಂದು ಉದ್ಘಾಟನೆ ಮಾಡಿದರು.
UGC ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿದೆ ಇದನ್ನ UGC ಇದೆ 1956 ರಲ್ಲಿ ಅನುಗುಣವಾಗಿ ಸ್ಥಾಪಿಸಲಾಗಿದೆ. UGC ಯು JRF ಉತ್ತೀರ್ಣರಾದ ಎಲ್ಲರಿಗೂ ಡಾಕ್ಟರೇಟ್ ಮತ್ತು ಡಾಕ್ಟರ್ ಫೆಲೋಶಿಪ್ ಗಳಿಗೆ ಪ್ರೋತ್ಸಾಹವನ್ನು ನೀಡುತ್ತಾಬಂದಿದೆ.
ಕರ್ನಾಟಕದಲ್ಲಿ 20 ವಿಶ್ವವಿದ್ಯಾನಿಲಯಗಳು ಇವೆ. ಅದರಲ್ಲೂ ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ 1916 ಸ್ಥಾಪನೆ ಆದ ಮೈಸೂರು ವಿಶ್ವವಿದ್ಯಾನಿಲಯ. ಮತ್ತು.ಅನೇಕ ಡಿಮ್ಡ್ ಯೂನಿವರ್ಸಿಟಿ. ಪ್ರತ್ಯೇಕ ವಿಷಯಗಳಿಗೆ ಆಧರಿತವಾಗಿ ಯೂನಿವರ್ಸಿಟಿ ಗಳು ಇವೆ.
ಇನ್ನು 2022-2023 BJP ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಂದೊಂದು ವಿಶ್ವವಿದ್ಯಾಲಯ ಪರಿಕಲ್ಪನೆಯಂತೆ ಹೊಸದಾಗಿ 7ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡಿವೆ.
ಆದರೆ ವಿಶ್ವವಿದ್ಯಾನಿಲಯಗಳು ಆರ್ಥಿಕ ಸಂಕಷ್ಟದಿಂದ ಕೂಡಿದ್ದು ದಿನದಿಂದ ದಿನಕ್ಕೆ ನಿವೃತ್ತ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚುತ್ತಿದೆ . ಇನ್ನು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರು. ಮತ್ತು ಅರೆ ನೌಕರಿ ಸಿಬ್ಬಂದಿಗಳ ಪಾಡು ಹೇಳತಿರದು. ಸರಿಯಾಗಿ ಒಂದು ತಿಂಗಳಿಗೆ ಸಂಬಳವೂ ಆಗುವುದಿಲ್ಲ. ಇನ್ನು ನಿವೃತ್ತಿಯಾದ ಪ್ರಾಧ್ಯಾಪಕರಿಗೆ ನಿವೃತ್ತಿ ಬತ್ತೆಗಳು ಕೊಟ್ಟಿಲ್ಲ.
ಹೊಸ ವಿಶ್ವವಿದ್ಯಾಲಯ ಗಳ ಕಥೆ ಹೇಳುತ್ತಿರದು. ಯಾವ ಪುರುಷಾರ್ಥಕ್ಕಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಆಯಿತು. ಅವಲೋಕನ ಮಾಡಬೇಕಾಗಿದೆ ಇದರಿಂದ ವಿಶ್ವ ವಿದ್ಯಾಲಯದ ಘನತೆ ಕುಗ್ಗಿದೆ.
ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ಲ ಎಂದರೆ ಮಾತೃ ಸಂಸ್ಥೆಗೆ ವರ್ಗಾಯಿಸಿ ಬಿಡುವುದು ಒಳ್ಳೆಯದು.
ವಿಶ್ವವಿದ್ಯಾಲಯಗಳಲ್ಲಿ ದುಡಿಯುವ ಪ್ರಾಮಾಣಿ ಪ್ರಾಮಾಣಿಕ ಅತಿಥಿ ಉಪನ್ಯಾಸಕರ ಸ್ಥಿತಿ ಯಾರು ಕೇಳಲಾರರು ಸರಿಯಾಗಿ ಸಂಬಳ ಬರುವುದಿಲ್ಲ ಎಂದರೆ ಜೀವನ ನಿರ್ವಹಣೆ ಮಾಡುವುದು ಹೇಗೆ ಸರ್ಕಾರವೇ ಯೋಚನೆ ಮಾಡಬೇಕಾಗಿದೆ.
ಹಾಗಾಗಿ ವಿಶ್ವವಿದ್ಯಾನಿಲಯಗಳು ದೇಶದ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಕೆಲಸವನ್ನು ಮಾಡುತ್ತವೆ ಆದರೆ ಉಪನ್ಯಾಸಕ ನೀಡುವ ಅತಿಥಿ ಉಪನ್ಯಾಸಕರಿಗೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿ ಎಂದರೆ ಎಷ್ಟು ಸಮಂಜಸ!!!
ಇನ್ನು ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆಯಲ್ಲಿ ಕೋಟಿ ಕೋಟಿ ದುಡ್ಡಿರುವವರನ್ನ ಆಯ್ಕೆ ಮಾಡುತ್ತಿರುವುದು ಸುದ್ದಿ ಕೇಳುತ್ತಿದೆ.
ಇನ್ನು ವಿಶ್ವವಿದ್ಯಾನಿಲಯಗಳಲ್ಲಿ ಮಾನವಿಕ ವಿಭಾಗದ ಕೋರ್ಸ್ಗಳನ್ನ ಮುಚ್ಚುವುದು ಎಷ್ಟು ಸಮಂಜಸ! ಇದರ ಬಗ್ಗೆ ಸರ್ಕಾರ ಅವಲೋಕನ ಮಾಡಬೇಕಾಗಿದೆ.
ಹೀಗೆ ನಿರಂತರವಾಗಿ ವಿಶ್ವವಿದ್ಯಾನಿಲಯಗಳನ್ನು ಸುಸ್ಥಿತಿಗೆ ತರದೆ ಅಥವಾ ಬಲಪಡಿಸದೆ ಹೋದಲ್ಲಿ
ಮುಚ್ಚುತ್ತದೆ ಇಲ್ಲವೆಂದರೆ private university ಗೆ ಮಾರಬೇಕಾಗುತ್ತದೆ.
ಬೇಡವಾದ ಯೋಜನೆಗಳಿಗೆ ಸರ್ಕಾರ ಸಾವಿರಾರು ಕೋಟಿ ಹಣವನ್ನು ವ್ಯಯ ಮಾಡುತ್ತಿದೆ ಅಂತ ಕೋಟಿ ಹಣವನ್ನು ವಿಶ್ವವಿದ್ಯಾನಿಲಯಗೆ ಉಪಯೋಗ ಮಾಡಿದರೆ ವಿಶ್ವವಿದ್ಯಾನಿಲಯಗಳು ಖಾಸಗಿ ವಿಶ್ವವಿದ್ಯಾನಿಲಯಗಳಿಗಿಂತ ಹೆಚ್ಚಾಗಿ ಬೆಳೆಯುತ್ತದೆ.
ವಿಶ್ವವಿದ್ಯಾನಿಲಯಗಳು . ಆ ಭಾಗದ ಸಂಸ್ಕೃತಿ. ಕಲೆ. ಭಾಷೆ. ಜ್ಞಾನ ವನ್ನ ಎತ್ತಿ ಹಿಡಿಯುತ್ತವೆ. ಮುಂದಿನ 10. 20 ವರ್ಷಗಳಲ್ಲಿ ಈ ರೀತಿ ಆದರೆ ವಿಶ್ವವಿದ್ಯಾಲಯಗಳು ತನ್ನಷ್ಟಕ್ಕೆ ತಾನೇ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ. ಆದರಿಂದ ಉನ್ನತ ಸಚಿವರು ಮತ್ತು ಸರ್ಕಾರಗಳು ಇದರ
ವಿಶ್ವವಿದ್ಯಾನಿಲಯಗಳನ್ನು ಕಟ್ಟುವ ಬಗ್ಗೆ ಆಸಕ್ತಿ ತೆಗೆದುಕೊಂಡು ಈ ದೇಶ ಕಟ್ಟುವ ವಿಶ್ವವಿದ್ಯಾನಿಲಯಗಳ ಕಾಯಕವನ್ನು ಮಾಡಬೇಕಾಗುತ್ತದೆ .
ಡಾ. ಅರುಣ್ ಕುಮಾರ್ HR
MA. Mphil. PhD.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.ವಾಸುದೇವ ಮೇಟಿ ಬಣ
ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕರು. ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.