Connect with us

Mandya

ಗ್ರಾಮೀಣ ಗ್ರಂಥಪಾಲಕರ ಕ್ಷೇಮಾಭಿವೃದ್ಧಿ ಸಂಘ ರಚನೆ

Published

on

ಶ್ರೀರಂಗಪಟ್ಟಣ : ಗ್ರಾಮ l ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದಗಳ “ತಾಲೂಕು ಗ್ರಂಥಪಾಲಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಯುವಜನ ಮತ್ತು ಕ್ರೀಡಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಪುರಸಭಾ ಸದಸ್ಯ ಹಾಗೂ ಟಿಏಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಗೌರವ ಸಲಹೆಗಾರರಾಗಿ ಯೋಗ ತರಬೇತಿದಾರ ಕೆ ಶೆಟ್ಟಹಳ್ಳಿ ಅಪ್ಪಾಜಿ, ಅಧ್ಯಕ್ಷರಾಗಿ ಕೂಡಲಕುಪ್ಪೆ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವಪುರ ಅನಿತಾ, ಉಪಾಧ್ಯಕ್ಷರಾಗಿ ಹುಲಿಕೆರೆ ಪುಷ್ಪ, ಉಪಾಧ್ಯಕ್ಷರಾಗಿ ತಡಗವಾಡಿ ರತ್ತಮ್ಮ, ಖಜಾಂಚಿಯಾಗಿ ಕೆ.ಶೆಟ್ಟಹಳ್ಳಿ ಶೋಭಾ, ಸಂಘಟನಾ ಕಾರ್ಯದರ್ಶಿಯಾಗಿ ಬಳ್ಳೇಕೆರೆ ಬೈರೇಶ್ವರ, ಗೌರವ ನಿರ್ದೇಶಕರಾಗಿ ಮರಳಗಾಲ ಪ್ರಕಾಶ್, ನಿರ್ದೇಶಕರಾಗಿ ಕೆ ಆರ್ ಎಸ್ ಶ್ರೀದೇವಿ, ಗಾಮನಹಳ್ಳಿ ಜಯಲಕ್ಷ್ಮಿ. ಕಿರಂಗೂರು ಸುಮಿತ್ರ, ಪಿ.ಹೊಸಹಳ್ಳಿ ಶಿಲ್ಪ ಹಾಗೂ ಅರಕೆರೆ ಉಷಾ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಎಂ ನಂದೀಶ್ ಮಾತನಾಡಿ, ಗ್ರಾಮೀಣ ಗ್ರಂಥಪಾಲಕರ ಹಿತ ಕಾಯುವ ಮೂಲಕ ಅವರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕು. ಮೇಲ್ವಿಚಾರಕರ ಭವಿಷ್ಯದ ಹಿತ ದೃಷ್ಟಿಯಿಂದ ಸಾಮೂಹಿಕ ಆರೋಗ್ಯ ವಿಮೆ ಸೇರಿದಂತೆ ಬಹುದಿನಗಳ ನ್ಯಾಯಯುತ ಹೋರಾಟಕ್ಕಾಗಿ ಧ್ವನಿಗೂಡಿಸಿ, ಗ್ರಾಮೀಣ ಗ್ರಂಥಾಲಯಗಳಿಗೆ ನಿವೇಶನ ಹಾಗೂ ಸುಸರ್ಜಿತ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದ ಓದುಗರಿಗೆ ಉತ್ತಮ ಸೇವೆ ನೀಡಲು ಉತ್ತಮ ವಾತಾವರಣ ನಿರ್ಮಿಸಲು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ ಅವತು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರ.

ಗೌರವ ಸಲಹೆಗಾರರಾಗಿ ಅವಿರೋಧವಾಗಿ ಆಯ್ಕೆಯಾದ ಯೋಗ ತರಬೇತಿದಾರ ಕೆ ಶೆಟ್ಟಹಳ್ಳಿ ಅಪ್ಪಾಜಿ ಮಾತನಾಡಿ, ಮೊಬೈಲ್ ಹಾವಳಿಯ ನಡುವೆ ಓದುವ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ವಿಷಾದನೀಯ. ಗ್ರಾಮೀಣ ಗ್ರಂಥಪಾಲಕರು ಸೇವೆಯ ರೂಪದಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಸಮಯಪ್ರಜ್ಞೆ ಪಾಲಿಸಿ, ಓದುವ ಸಂಸ್ಕೃತಿಯನ್ನು ಉಳಿಸಿ ಅವಕಾಶ ವಂಚಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಗ್ರಂಥಪಾಲಕರ ಪರವಾಗಿ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು

Continue Reading
Click to comment

Leave a Reply

Your email address will not be published. Required fields are marked *

Mandya

 ಫೆ.13ಕ್ಕೆ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾದ್ವಾರ ರಾಜಗೋಪುರ ಲೋಕಾರ್ಪಣೆ : ಶ್ರೀ ಸೋಮೇಶ್ವರನಾಥ ಸ್ವಾಮೀಜಿ

Published

on

ನಾಗಮಂಗಲ : ತಾಲೂಕಿನ ಹಾಲತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜಗೋಪುರ ಉದ್ಘಾಟನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ವು ಫೆಬ್ರವರಿ 13ರಂದು ನಡೆಯಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ತಿಳಿಸಿದರು

ಅವರು ತಾಲೂಕಿನ ಶಾಖಾಮಠದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ, ಶ್ರೀ ಮಠವು ಆಯೋಜನೆ ಮಾಡಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ದಿವ್ಯ ಆಶೀರ್ವಾದಗಳೊಂದಿಗೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯದ ಮಹಾ ದ್ವಾರದ 64 ಅಡಿಯ ನೂತನ ರಾಜಗೋಪುರದ ಉದ್ಘಾಟನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮವನ್ನು ಇದೇ ತಿಂಗಳು ಫೆ. 13ರಂದು ಶುಕ್ರವಾರ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಿದ್ದಾರೆ.

ಇದೇ ಸಮಾರಂಭದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ದಿನಾಂಕ 11. 12. ರಂದು ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಫೆ.12 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂಜಾ ಕಾರ್ಯಕ್ರಮಗಳಲ್ಲಿ ಅಕ್ಕಪಕ್ಕದ ಗ್ರಾಮದಿಂದ ಸುಮಾರು 60 ಗ್ರಾಮ ದೇವತೆಗಳು ಸೇರಲಿವೆ.

ಸಮಾರಂಭಕ್ಕೆ ನಾಡಿನ ಗಣ್ಯರು ಮುಖ್ಯಸ್ಥರು ಧಾರ್ಮಿಕ ಭಕ್ತರು ಆಗಮಿಸಲಿದ್ದಾರೆ. ಫೆ.13 ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೂತನ ಗೋಪುರ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರಗಲಿದೆ.

ಭಕ್ತಾದಿಗಳು ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

Continue Reading

Mandya

ಫೆ.13 ರಿಂದ 19 ರವರೆಗೆ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ

Published

on

ಮಂಡ್ಯ: ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ ಮತ್ತು ಯುವ ಜನೋತ್ಸವ ಕಾರ್ಯಕ್ರಮವನ್ನು ಫೆ.13 ರಿಂದ 19ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ಶಾರದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ದೇವರ ಆದ್ಯಾತ್ಮ ಭಾವದ ಆಚರಣೆ ಮಹಾಶಿವರಾತ್ರಿಯ ಅಂಗವಾಗಿ ಕಾರ್ಯಕ್ರಮ ಯೋಜನೆ ಮಾಡಲಾಗಿದೆ ಎಂದರು.

ಏಳು ದಿನ ನಡೆಯಲಿರುವ ಕಾರ್‍ಯಕ್ರಮದಲ್ಲಿ 21 ಅಡಿ ಎತ್ತರದ ಶಿವಲಿಂಗ, ಭೂಲ್ ಬುಲಯ್ಯ, ಸ್ವರ್ಗ, ಮೈಂಡ್ ಸ್ಪಾ, ಉದ್ಬವಲಿಂಗ, ಸಹಸ್ರಲಿಂಗಗಳು ಆಕರ್ಷಣೆಯಾಗಲಿವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ವಿಜಯಲಕ್ಷ್ಮಿ ಹಾಜರಿದ್ದರು.

Continue Reading

Mandya

ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು

Published

on

ಮದ್ದೂರು:  ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಸೋಮವಾರ ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವೆ ರಸ್ತೆ ತಡೆ ನಡೆಸುತ್ತಿದ್ದ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾ.ಪಂ. ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮದ ಗ್ರಾ.ಪಂ.ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದರು.


ಧರಣಿ ಪ್ರತಿಭಟನೆಯು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಸ್ಥರು ಮೈಸೂರು ಬೆಂಗಳೂರು ಸವರ್ಿಸ್ ಹೆದ್ದಾರಿಯಲ್ಲಿ ಸಂಚಾರ ತಡೆ ಮಾಡಿ ಪ್ರತಿಭಟನೆಯನ್ನು ನಡೆಸುತ್ತಿದರು.

ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ಗ್ರಾಮಸ್ಥರು ಆಗಮಿಸಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಅದಕ್ಕೂ ಮೊದಲು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿರವರು ರಸ್ತೆ ತಡೆಯನ್ನು ಕೈಬಿಡಲು ಪ್ರತಿಭಟನಾ ಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪ್ರಯೋಜವಾಗಲಿಲ್ಲ. ನಂತರ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ರೈತ ಪರ ಹೋರಾಟಗಾತಿ ಸುನಂದಾ ಜಯರಾಮು, ಲಿಂಗಪ್ಪಾಜಿ, ಶಂಕರ್, ಜಿ.ಪಿ.ಯೋಗೇಶ್, ವೀರಪ್ಪ, ಚಂದ್ರಶೇಖರ, ಗೌರಮ್ಮ, ಜಯಮ್ಮ ಸೇರಿದಂತೆ ಸುಮಾರು 80 ಕ್ಕೂ ಹೆಚ್ಚು ಪ್ರತಿಟನಾಕಾರರನ್ನು ವಶಕ್ಕೆ ಪಡೆದು 3 ವಾಹನಗಳಲ್ಲಿ ಮಂಡ್ಯದ ಪೊಲೀಸ್ ಠಾಣೆಗೆ ಕರೆದೋಯ್ದರು.

ಪ್ರತಿಭಟನೆಯಲ್ಲಿ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ಮಾತನಾಡಿ, ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ನಿರಂತರವಾಗಿ 50 ದಿನಗಳ ಹೋರಾಟವನ್ನು ನಡೆಸುತ್ತಿದ್ದರೂ, ಸಕರ್ಾರದ ಯಾವುದೇ ಪ್ರತಿನಿಧಿಗಳು ಅಧಿಕಾರಿಗಳು ರೈತರ, ಗ್ರಾಮಸ್ಥರು ಆಶೋತ್ತರಗಳಿಗೆ ಸ್ಪಂದಿಸದೆ ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿದರು.

ಇದರ ವಿರುದ್ಧವಾಗಿ ಗೆಜ್ಜಲಗೆರೆ ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆ ತಡೆಯಲು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡಲು ಹೊರಟಾಗ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅವಕಾಶ ಮಾಡಿಕೊಡದೆ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರನ್ನು, ಮಹಿಳೆಯರು ಮತ್ತು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮಾರು 80 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಂಧಿಸಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಗ್ರಾಪಂಯನ್ನು ಮದ್ದೂರು ನಗರಸಭೆಯಿಂದ ಕೈ ಬಿಡುವತನಕ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಿರಂತರವಾಗಿ ಮುಂದುವರೆಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ಭಾಗವಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂದ್ರಶೇಖರ್, ಲಿಂಗಪ್ಪಾಜಿ, ಮುದ್ದೇಗೌಡ್ರು, ಕೆ.ಬೊರೇಗೌಡ, ವಿರೇಶ್, ಗುರುಮೂತರ್ಿ, ಮಂಜಣ್ಣ, ಜಗದೀಶ್, ರಾಮಲಿಂಗಯ್ಯ, ಯೋಗೇಶ್ ಸೇರಿದಂತೆ ಇತರರು ಇದ್ದರು.

Continue Reading

Trending

error: Content is protected !!