Connect with us

Kodagu

ಮಡಿಕೇರಿಯ ಪಂಪಿನ ಕೆರೆಯಲ್ಲಿ ಮಾಜಿ ಯೋಧ ಸಂದೇಶ್ ಮೖತದೇಹ ಪತ್ತೆ

Published

on

ಮಡಿಕೇರಿ : ಡೆತ್ ನೋಟ್ ಬರೆದಿಟ್ಟು ಮಂಗಳವಾರ ಪಂಪಿನ ಕೆರೆಗೆ ಹಾರಿದ್ದ ಮಾಜಿ ಯೋಧ ಸಂದೇಶ್ ಮೃತದೇಹ ಇಂದು ರಾತ್ರಿ ಪತ್ತೆಯಾಗಿದೆ.

ಜಿಲ್ಲಾ ಪೊಲೀಸರು ಸತತ ಶೋಧ ಕಾರ್ಯದ ಮೂಲಕ ಸಂದೇಶನ ಮೖತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ರಾತ್ರಿ 8.20 ರ ಸುಮಾರಿಗೆ 40 ಆಡಿ ಆಳದಲ್ಲಿ ಮೃತ ದೇಹ ಪತ್ತೆಯಾಗಿದೆ.

ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡ ಶತತ ಪ್ರಯತ್ನದಿಂದ ಮೃತದೇಹ ಶೋಧ ಮಾಡಿದೆ.

ಹನಿ ಟ್ರಾಪ್ ಬಲೆಗೆ ಬಿದ್ದು ಮಾಜಿ ಸೈನಿಕ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತಳ ಪತ್ನಿ ದೂರು ದಾಖಲಿಸಿದ್ದಾರೆ.

ಮೃತ ಸಂದೇಶ್ ತನ್ನ ಸಾವಿಗೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮಂಗಳವಾರ ಸಂಜೆ ಪಂಪಿನ ಕೆರೆಗೆ ಹಾರಿದ್ದಾರೆ.

ಸಂದೇಶ್ ಪತ್ನಿ ದೂರಿನ ಆಧಾರದ ಮೇರೆಗೆ ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮಾಗ೯ದಶ೯ನದಲ್ಲಿಯೇ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ

Continue Reading
Click to comment

Leave a Reply

Your email address will not be published. Required fields are marked *

Kodagu

ಗಿಡುಗ ಸಿನಿಮಾ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆ

Published

on

ಗೋಣಿಕೊಪ್ಪ: ಗೌರಿ ಗಣೇಶ ಹಬ್ಬದ ಸಂಭ್ರಮವಾಗಿ ಗಿಡುಗ ಸಿನಿಮಾ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆಂಪೇಗೌಡ ಮಾಗಡಿ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿಡುಗ ಸಿನಿಮಾ ಅಣ್ಣ ತಂಗಿಯ ಬಾಂಧವ್ಯದ ಬೆಸುಗೆಯ ಕೌಟುಂಬಿಕ ಕಥೆಯನ್ನು ಹೊಂದಿರುವ ಸಿನಿಮವಾಗಿದೆ.

ಸಿನಿಮಾದಲ್ಲಿ ಒಂದು ಕೊಲೆಯ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿ ತ್ರಿಲಿಂಗ್ ನೀಡಲಾಗಿದೆ. ಸಿನಿಮಾದಲ್ಲಿರುವ ಮೂರು ಅತ್ಯುತ್ತಮ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ.

ಸುಮಾರು 2 ಗಂಟೆಗಳ ಕಾಲ ಸಿನಿಮಾ ನಡೆಯಲಿದ್ದು, ೪೦ ದಿನಗಳಲ್ಲಿ ಬೆಂಗಳೂರು, ಮಾಗಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು ೩೦ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಪಾತ್ರದಾರಿಗಳಾಗಿ ಸಿನಿಮಾಕ್ಕೆ ಜೀವ ತುಂಬಿದ್ದಾರೆ.

ಸಿನಿಮಾ ಪ್ರೇಕ್ಷಕರನ್ನು ಸಂಪೂರ್ಣವಾಗಿ ಮನತಣಿಸಲು ಈ ತಂಡ ತಮ್ಮ ಕಲಾ ಕೌಶಲ್ಯವನ್ನು ದಾರೆ ಎರೆದಿದೆ ಎಂದು ಭರವಸೆ ನೀಡಿದ್ದಾರೆ.

ಸಿನಿಮಾದ ನಾಯಕ ನಟನಾಗಿ ಕೊಡಗಿನ ನಿವಾಸಿ ರತೀಶ್ ಹುದಿಕೇರಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಭವಾನಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಜ ರಾಣಿ ರೂರಲ್ ರಾಕೆಟ್, ಅವಂತಿಕಾ ಮತ್ತು ಇನ್ನಿತರ ಸಿನಿಮಾಗಳನ್ನು ನಿರ್ದೇಶನ ಮಾಡಿದ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಅನುಭವ ಹೊಂದಿರುವ, ಮಾಗಡಿ ಕೆಂಪೇಗೌಡ ಅವರು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶಂಕರ್ ನಾರಾಯಣ, ನಂಬೋದಿರಿ, ಕೆಂಪೇಗೌಡ ಜಿ, ರತೀಶ್ ಹುದಿಕೇರಿ, ಬಂಡವಾಳ ಹೂಡಿದ್ದಾರೆ.
ಸಂಗೀತ ವಿನ್ಸನ್ ಮತ್ತು ಮುಖೇಶ್, ಸಂಕಲನ ಆದಿ ಆದರ್ಶ, ಸಾಹಸ ಸುಪ್ರೀತ್ ಸುಬ್ಬು ನಿರ್ವಹಿಸಿದ್ದು ,ಶ್ರೀ ಸಿನಿಮಾ ಮೂಲಕ ಪ್ರೊಡಕ್ಷನ್ ಮಾಡಲಾಗಿದೆ.

ಗಿಡುಗ ಸಿನಿಮಾವನ್ನು ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡಬಹುದಾದ ಚಿತ್ರವಾಗಿದೆ. ಆಗಸ್ಟ್ ತಿಂಗಳಲ್ಲಿ ಗೋಣಿಕೊಪ್ಪದ ನೂತನ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ನಾಯಕ ನಟ ರತೀಶ್ ಹುದಿಕೇರಿ, ನಾಯಕಿ ಭವಾನಿ ಉಪಸ್ಥಿತರಿದ್ದರು.

Continue Reading

Kodagu

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಿಂದ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ

Published

on

ಕೊಡ್ಲಿಪೇಟೆ : ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಂಬಳೂರು, ಕ್ಯಾತಿ ಮತ್ತು ಬ್ಯಾಡಗೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು.

ವಾಲಿಬಾಲ್, ಥ್ರೋಬಾಲ್, ಬಾಡ್ಮಿಂಟನ್ ಸೆಟ್, ಚೆಸ್, ಕೇರಂಬೋರ್ಡ್ ಸೇರಿದಂತೆ ಇತರೆ ಅವಶ್ಯಕ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ಪಾವನ ಗಗನ್, ಶಾಲೆಗಳ ಬೇಡಿಕೆಯನುಸಾರ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿ ಎಂದು ಕ್ರೀಡಾ ಸಾಮಾಗ್ರಿಯನ್ನು ಆಡಳಿತ ಮಂಡಳಿ ಎಲ್ಲಾ ಸದಸ್ಯರುಗಳ ಸರ್ವಸಮ್ಮತ ತೀರ್ಮಾನದಂತೆ ವಿತರಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಶಾಲೆಗೆ ಕೀರ್ತಿ ತರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ದ್ರಾಕ್ಷಾಯಿಣಿ, ಸದಸ್ಯರುಗಳಾದ ಮೋಕ್ಷಿತ್ ರಾಜ್, ರೇಣುಕಾ ಮೇದಪ್ಪ, ಲೀನಾ ಪರಮೇಶ್, ಹನೀಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.

Continue Reading

Kodagu

ಸಿ.ಐ.ಪಿ.ಯು.ಕಾಲೇಜಿನಲ್ಲಿ ರಕ್ಷಾಬಂಧನದ ಆಚರಣೆ

Published

on

ಪೊನ್ನಂಪೇಟೆ : ಕೊಡವ ಎಜುಕೇಷನ್ ಸೊಸೈಟಿಯ ಮಹತ್ವಾಕಾಂಕ್ಷೆಯ ಕಾಲೇಜಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜು ಮತ್ತು ಕೊಡಗು ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯುಕ್ತ ಆಶ್ರಯದಿ ರಕ್ಷಾಬಂಧನನವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆರ್.ಎಸ್.ಎಸ್‌ನ ಜಿಲ್ಲಾ ಸಂಚಾಲಕ ಚಕ್ಕೇರ ಮನು ಕಾವೇರಪ್ಪ ಮತ್ತು ಜಿಲ್ಲಾ ಶಾರೀರಿಕ ಪ್ರಮುಖರಾದ ಕಿರಣ್ ಆಗಮಿಸಿದರು. ಈ ಕಾರ್ಯಕ್ಕೆ ಜ್ಯೋತಿಬೆಳಗಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಕ್ಕೇರ ಮನು ಕಾವೇರಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾವೆಲ್ಲರೂ ಭಾರತಾಂಬೆಯ ಮಕ್ಕಳು ನಮ್ಮ ಸನಾತನ ಸಂಸ್ಕೃತಿ, ಆಚಾರ – ವಿಚಾರವನ್ನು ಅನುಸರಿಸಬೇಕು ಜೊತೆಗೆ ನಾವೆಲ್ಲರೂ ಸಹೋದರತೆ ಮತ್ತು ಅನುಬಂಧದಿಂದ ಕೂಡಿ ಸಹಬಾಳ್ವೆಯನ್ನು ನಡೆಸಬೇಕು. ಹಾಗೇಯೇ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ರಾಷ್ಟ್ರ ವಿರೋಧಿ ಚಟುವಟಿಕೆಯನ್ನು ನಿಯಂತ್ರಿಸಿ, ದೇಶದ ರಕ್ಷಣೆ, ಅಭ್ಯುದಯ ಮತ್ತು ಶಾಂತಿ – ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಭಾರತೀಯರು ತಮ್ಮ ಕರ್ತವ್ಯವೆಂದು ಪಾಲಿಸಬೇಕು ಎಂದರು.

ಹಾಗೇಯೇ ಸ್ವಾಮಿ ವಿವೇಕಾನಂದರ ಚಿಂತನೆ ಆರ್ದಶಗಳನ್ನು ನಮ್ಮ ಜೀವನದ ಮೌಲ್ಯವಾಗಿ ಅಳವಡಿಸಿಕೊಂಡು ನಮ್ಮತನವನ್ನು ವಿಶ್ವಕ್ಕೆ ಪರಿಚಯಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಈ ಕಾರ್ಯಕ್ರಮದಲ್ಲಿ ಸಹೋದರತೆಯ ಅನುಬಂಧವನ್ನು ಸಾರುವ ಪಾವಿತ್ರತೆಯ ಬಂಧವಾದ ರಕ್ಷಾಬಂಧನದ ಮಹತ್ವವನ್ನು ಸಾರುವ ಗೀತೆಯನ್ನು ಆರ್. ಎಸ್.ಎಸ್ ನ ಜಿಲ್ಲಾ ಶಾರೀರಿಕ ಘಟಕದ ಪ್ರಮುಖ ಕಿರಣ್ ಗಾಯನದ ಮೂಲಕ ವಿದ್ಯಾರ್ಥಿಗಳಿಗೆ ಪರಿಪರಿಯಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷಾಬಂಧನವನ್ನು ಕಟ್ಟಿಕೊಂಡು ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಐ.ಪಿ.ಯು.ಪ್ರಾಂಶುಪಾಲೆ ಡಾ.ರೋಹಿಣಿ.ತಿಮ್ಮಯ್ಯ ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ದ್ವಿತೀಯ ಪಿ.ಯು.ವಿದ್ಯಾರ್ಥಿನಿ ಕುಮಾರಿ ರಿಷಾ ಗಣಪತಿ ನಿರ್ವಹಿಸಿದರು. ದ್ವಿತೀಯ ಪಿ.ಯು.ವಿದ್ಯಾರ್ಥಿನಿಯರಾದ ಕುಮಾರಿ ಭಾಷಿತ .ಕೆ.ಡಿ.ಪ್ರಾರ್ಥಿಸಿದರು ಮತ್ತು ಕುಮಾರಿ ಧೀಮಹಿ ವಂದಿಸಿದರು.ಈ ಕಾರ್ಯಕ್ರಮದಲ್ಲಿ ಸಿ.ಐ.ಪಿ.ಯು.ಉಪನ್ಯಾಸಕವೃಂದ ಮತ್ತು ಬೋಧಕೇತರವೃಂದ ಹಾಗೂ ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.

Continue Reading

Trending

error: Content is protected !!