Connect with us

Mysore

ಮೈಸೂರಿನಲ್ಲಿ ಸಾಂಸ್ಕೃತಿಕ ಕಾವೇರಿ ರಾಜ್ಯ ಸಮ್ಮೇಳನ

Published

on

ಮೈಸೂರು: ಮೈಸೂರಿನಲ್ಲಿ ಸಂಸ್ಕೃತ ಕಾವೇರಿ ರಾಜ್ಯ ಸಮ್ಮೇಳನವನ್ನು ಫೆಬ್ರವರಿ 1 ಮತ್ತು 2 ರಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಲಾಗಿದೆ ಎಂದು ಕೃಷ್ಣ ರಾಜಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ತಿಳಿಸಿದರು.

ಈ ಕುರಿತು ನಗರದ ಪ್ರತಿಕಾಗೋಷ್ಠಿಯಲ್ಲಿ ಸೋಮವಾರ ಮತನಾಡಿದ ಅವರು ಯಾವುದೇ ಜಾತಿ ಧರ್ಮ ಬೇದವಿಲ್ಲದೆ ಎಲ್ಲರ ಮನೆಗಳಲ್ಲಿ ಸಂಸ್ಕೃತ ಪಾಠ ಶಾಲೆಗಳು ಆರಂಭ ಆಗಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.

ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಫೆಬ್ರವರಿ 1 ರಂದು ಸಂಸ್ಕೃತಿಕ ಕಾವೇರಿ ರಾಜ್ಯ ಸಮ್ಮೇಳನವನ್ನು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಉದ್ಘಾಟನೆಯನ್ನು ನೆರವೇರಿಸುವರು. ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.

ಸಂಸ್ಕ್ರತ ಕಾವೇರಿ ರಾಜ್ಯ ಸಮ್ಮೇಳನದ ಆಕರ್ಷಣೆಗಳು: ವಿಶೇಷ ಉಪನ್ಯಾಸ, ವಿವಿಧ ಗೋಷ್ಠಿಗಳು, ವಿಜ್ಞಾನ ಪ್ರದರ್ಶಿನ, ವಸ್ತು ಪ್ರದರ್ಶಿನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಶೋಭಾಯಾತ್ರೆಯು ಫೆಬ್ರವರಿ 1 ರಂದು ಸಂಜೆ 5 ಗಂಟೆಗೆ ವಿದ್ಯಾರಂಣ್ಯ ಪುರಂ, ಚಾಮುಂಡಿಪುರಂ, ಮೂಲಕ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ನಡೆಸಿ ನಂತರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು ಸಂಸ್ಕೃತ ಭಾರತಿಯ ಅಖಿಲ ಭಾರತ ಉಪಾಧ್ಯಕ್ಷ ದಿನೇಶ್ ಕಾಮತ್ ಅವರಿ ಸಾರ್ವಜನಿಕ ಸಭೆ ಕುರಿತು ಭಾಷಣ ಮಾಡುವರು ಎಂದರು.

ಸಂಸದ ಯದುವೀರ್ ಒಡೆಯರ್ ಅವರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಭಾಗವಹಿಸುವರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿ,ಶ್ರೀ ಶರಚ್ಚಂದ್ರ ಸ್ವಾಮೀಜಿ, ಮೈಸೂರು ವಿವಿ.ಯ ಕುಲಪತಿ ಪ್ರೊ, ಲೋಕನಾಥ್, ಸಂಗೀತ ವಿವಿ.ಯ ಕುಲಪತಿ ಪ್ರೊ, ವಿ ನಾಗೇಶ್ ಬೆಟ್ಟಕೋಟೆ, ಸಂಸ್ಕೃತ ವಿವಿ.ಯ ಕುಲಪತಿ ಡಾ. ಅಹಲ್ಯ ಶರ್ಮ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀ ನಿಧಿ ಗ್ರೂಫ್ಸ್ ನ ಪ್ರಭಾಕರ್ ರಾವ್ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಫೆಬ್ರವರಿ 2 ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಂಸ್ಕೃತ ಭಾರತಿಯ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳಾದ ಜಯಪ್ರಕಾಶ್ ಗೌತಮ್ ಅವರು ಸಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.

ಸಂಸ್ಕೃತ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್, ಅಖಿಲ ಭಾರತ ಪ್ರಚಾರ ಪ್ರಮುಖರಾದ ಡಾ,ಸಚಿನ್ ಕಟಾಳೆ, ರಾಜ್ಯ ಕಾರ್ಯದರ್ಶಿ ಗುರುರಾವ್ ಕುಲಕರ್ಣಿ, ರಾಜ್ಯದ ಸಂಸ್ಕೃತ ಪ್ರಧ್ಯಾಪಕರು ಸಂಸ್ಕೃತ ಸಾಹಿತಿಗಳು, ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಹೇಳಿದರು.

ಸಂಸ್ಕೃತ ಭಾರತಿ ಕರ್ನಾಟಕ ಸಮ್ಮೇಳನದ ಸಂಚಾಲಕ ಡಾ. ಬಿ.ಜೆ. ಭಾಗ್ಯಲಕ್ಷ್ಮಿ, ಸಂಸ್ಕೃತ ಕಾವೇರಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಅ.ಮ. ಭಾಸ್ಕರ ಅವರು ಉಪಸ್ಥಿತರಿದ್ದರು.

Continue Reading

Mysore

ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟ ಮಾಡಲು ಅವಕಾಶ ನೀಡಿ

Published

on

ಮೈಸೂರು : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಹಾಗೂ ಅವರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಗುರುವಾರ ಭೇಟಿ ಮಾಡಿದ ನಂತರ ಸಂಸದರು ಈ ವಿಷಯ ತಿಳಿಸಿದ್ದಾರೆ.

ಇದಕ್ಕೆ ಸೂಕ್ತವಾಗಿ ಸ್ಪಂದನೆ ವ್ಯಕ್ತಪಡಿಸಿದ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್, ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.

ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.

ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಸಂಸದರು ತಿಳಿಸಿದರು.

ನಮ್ಮ ಕ್ಷೇತ್ರದ ಬೆಳಗಾರರ ಪರವಾಗಿ ದನಿ ಎತ್ತಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.

Continue Reading

Mysore

ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿ: ನಾಗರೀಕ ಸೇವಾ ವೇದಿಕೆ ಹಾಗೂ ಆಟೋ ಚಾಲಕರ ಒತ್ತಾಯ

Published

on

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸ್ವ ಕ್ಷೇತ್ರವಾದ ತಿ.ನರಸೀಪುರ ಪಟ್ಟಣದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದರೆ ಧಾರ್ಮಿಕ ಆಚರಣೆ ಹೊರತು ಪಡಿಸಿ ಪಟ್ಟಣದಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ನಾಗರೀಕ ಸೇವಾ ವೇದಿಕೆಯ ಕಾರ್ಯದರ್ಶಿ ಕರೋಹಟ್ಟಿ ಪ್ರಭುಸ್ವಾಮಿ ಸರ್ಕಾರಕ್ಕೆ ಎಚ್ಚರಿಕ ನೀಡಿದರು.

ಪಟ್ಟಣದ ನಾಗರೀಕ ಸೇವಾ ವೇದಿಕೆ ಕಾರ್ಯಕರ್ತರು ಹಾಗು ಆಟೋ ಚಾಲಕ ಸಂಘದ ಸದಸ್ಯರೊಂದಿಗೆ ಪಟ್ಟಣದಲ್ಲಿ ಹಳ್ಳ ಬಿದ್ದಿರುವ ರಸ್ತೆಗಳ ದುರಸ್ತಿ ಮಾಡಬೇಕೆಂಬ ಸದುದ್ದೇಶದೊಂದಿಗೆ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪತ್ರಕರ್ತರೊಂದಿಗೆ ಗುಂಡಿ ಬಿದ್ದ ರಸ್ತೆ ಬಳಿ ತೆರಳಿ ಅವ್ಯವಸ್ಥೆ ಬಗ್ಗೆ ಕಿಡಿಕಾರಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಫೆ.10 ರಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯುತ್ತಿದೆ. ಆದರೆ ಪಟ್ಟಣದ ಯಾವುದೇ ರಸ್ತೆಗಳು ವ್ಯವಸ್ಥಿತವಾಗಿಲ್ಲ. ತಿ.ನರಸೀಪುರ ಪುರಸಭೆಯ 23 ವಾರ್ಡ್ ಗಳ ಪೈಕಿ17 ವಾರ್ಡ್ ಗಳು ವರುಣ ಕ್ಷೇತ್ರಕ್ಕೆ ಸೇರಿದರೆ, ಉಳಿಕೆ 6 ವಾರ್ಡ್ ಗಳು ಎಚ್‌ಸಿಎಂ ಕ್ಷೇತ್ರಕ್ಕೆ ಸೇರುತ್ತವೆ. ಆದರೆ ಇಲ್ಲಿ ಯಾವುದೇ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಪಟ್ಟಣದ ಎಣ್ಣೆ ಮಿಲ್ ರಸ್ತೆಯ ಸ್ಥಿತಿಯಂತೂ ಹೇಳ ತೀರದಾಗಿದೆ. ಮಂಡಿ ಮಟ್ಟದ ಹಳ್ಳ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.

ಈ ರಸ್ತೆಯಲ್ಲಿ ಅದೆಷ್ಟೋ ಬೈಕ್ ಸವಾರರು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡರೆ, ಲಾರಿ, ಬೈಕ್ ಗಳು ಹಳ್ಳಕ್ಕೆ ಬಿದ್ದು ಅಪಘಾತ ಸಹ ಉಂಟಾಗಿದೆ. ಇನ್ನುಳಿದಂತೆ ಲಿಂಕ್ ರಸ್ತೆ, ತಾಲೂಕು ಕಚೇರಿ ರಸ್ತೆ ಹಾಗು ಕೆನರಾ ಬ್ಯಾಂಕ್‌ ರಸ್ತೆ ಸಹ ತೀವ್ರವಾಗಿ ಹದಗೆಟ್ಟ ಸ್ಥಿತಿಯಲ್ಲಿದ್ದು ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಕ್ಷೇತ್ರದ ಜನತೆ ನಿಮ್ಮ‌ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ದ್ರೋಹ ಬಗೆಯದೇ ಶೀಘ್ರವಾಗಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದರು.

ಯಾವುದೇ ಒಂದು ಐತಿಹಾಸಿಕ ಆಚರಣೆ ಮಾಡಬೇಕಾದರೆ ಪೂರ್ವಭಾವಿಯಾಗಿ ಮೂಲಸೌಕರ್ಯದ ಅಭಿವೃದ್ಧಿ ಮಾಡಬೇಕಾದದ್ದು ದೂರದೃಷ್ಟಿ ಇರುವ ನಾಯಕರ ಜವಾಬ್ದಾರಿಯಾಗಿದೆ ಎಂದು ವಿಷಾಧಿಸಿದರು.

ಈ ವೇಳೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ,ಕಾರ್ ಮಲ್ಲಪ್ಪ,ಮಂಜು,ಮಹೇಶ್, ರೇವಣ್ಣ,ಬಸವರಾಜು,ಮಹದೇವ ಸ್ವಾಮಿ,ರಾಜೇಶ ಮತ್ತಿತರರಿದ್ದರು.

Continue Reading

Mysore

ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ಸಿ.ನಾರಾಯಣಗೌಡ

Published

on

ಮೈಸೂರು: ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಶ್ರೀ ದುರ್ಗಾ ಪೋಡೇಶನ್ ಹಾಗೂ ಅರಿವು ಸಂಸ್ಥೆ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, 20 ವರ್ಷ ನಿರಂತರ ಸಾಮಾಜಿಕ ಸೇವೆ, ಸಂಘಟನೆಯಿಂದ ಸೇವೆ ಸಲ್ಲಿಸುತ್ತಿರುವ ಎಸ್.ಇ.ಗಿರೀಶ್ ಅವರಿಗೆ ಜೀವ ರಕ್ಷಕ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಸೇವೆಯನ್ನು ಆತ್ಮ ತೃಪ್ತಿ ಮತ್ತು ಮನಃಸಂತೋಷಕ್ಕಾಗಿ ಮಾಡುತ್ತೇವೆ. ಆದರೆ, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜೊತೆಗೆ , ಬಡ ವಿದ್ಯಾರ್ಥಿ ಹಾಗೂ ರೋಗಿಗಳ ಸಹಾಯ ಮಾಡುವ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಸೇವೆ ಮಾಡುತ್ತಿರುವುದು ನಿಜವಾದ ಸಮಾಜ ಸೇವೆ ಎಂದರು.

ನಿಸ್ವಾರ್ಥ ಸೇವಾಕಾರಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿ. ಗಿರೀಶ್ ಅವರ 20 ವರ್ಷದ ಸುದೀರ್ಘಕಾಲದ ಸೇವೆಯನ್ನು ಹೀಗೆ ಮುಂದುವರಿಸಲಿ ಎಂದು ಆಶಿಸಿದರು.
ಮೈಸೂರು ಚೇಂಬರ್ ಆ್ ಕಾಮಸ್‌ರ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ,

ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ. ಅಂತಹ ಕೆಲಸದಲ್ಲಿ ಜೀವದಾರ ರಕ್ತನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ಸೇವೆ ಮಾಡುತ್ತ ಬಂದಿದೆ. ಜೀವದಾರ ರಕ್ತ ನಿಧಿ ಕೇಂದ್ರಕ್ಕೆ ಮೈಸೂರು ನಗರದ ಅತ್ಯುತ್ತಮ ರಕ್ತ ನಿಧಿ ಕೇಂದ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ೌಂಡೇಶನ್ ಹಾಗೂ ಅರಿವು ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ 30 ಯೂನಿಟ್ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಜೆಡಿಎಸ್ ಕಾರ್ಯಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾ ದರ್ಶನ್, ಜಿ.ರಾಘವೇಂದ್ರ, ಆನಂದ್, ಮುತ್ತಣ್ಣ, ಎಂ.ಗಂಟಯ್ಯ (ಕೃಷ್ಣಪ್ಪ), ದುರ್ಗಾ ೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಕೇಬಲ್ ವಿಜಿ, ಸೂರಜ್, ಸದಾಶಿವ್, ವಿನಯ್ ಕಣಗಾಲ್, ರಾಕೇಶ್, ಕೆಂಪಣ್ಣ ,ನಂದೀಶ್, ರಾಘವೇಂದ್ರ ಮತ್ತಿತರರು ಇದ್ದರು.

Continue Reading

Trending

error: Content is protected !!