Connect with us

Hassan

ಫೆ.೧೭ ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ : ಆರ್.ಪಿ.ಐ. ಸತೀಶ್

Published

on

ಹಾಸನ : ಲೋಕಾಸಭೆಯ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಚರ್ಚೆ ಮಾಡಲು ಬೆಂಗಳೂರಿನ ಅರಮನೆ ಮೈದಾನದ ಭೀಮ ಮಂಟಪದಲ್ಲಿ ಫೆಬ್ರವರಿ ೧೭ ರಂದು ಆರ್.ಪಿ.ಐ. ಕಾರ್ಯಕರ್ತರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಸತೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ದೇಶದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷವೂ ಸಹ ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತಗೊಳ್ಳುತ್ತಾ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣದ ಸಾಕಾರತೆಯ ಹೆಜ್ಜೆಗಳ ಛಾಪನ್ನು ಇಡೀ ದೇಶದಾದ್ಯಂತ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಪಡೆದಿರುವ ತನ್ನ ಅಗ್ರ ಸ್ಥಾನದ ನಂತರ ಕರ್ನಾಟಕ ರಾಜ್ಯ ಘಟಕವು ಆರ್.ಪಿ.ಐ.ಗೆ ದ್ವಿತೀಯ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿದೆ. ನವದೆಹಲಿಯ ಡಾ.ಬಿ.ಆರ್.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್‌ನ ಐತಿಹಾಸಿಕ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರು ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ದೇಶದ ಸಮಸ್ತ ಆರ್.ಪಿ.ಐ. ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿ ರಾಷ್ಟ್ರ ಮಟ್ಟದಲ್ಲಿ ಪಕ್ಷದ ನವ ಚೈತನ್ಯಕ್ಕೆ ಸಾಕ್ಷಿಯಾಗುತ್ತಿದೆ ಎಂದರು. ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯದಲ್ಲಿ ಕಳೆದ ಸಲ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್.ಪಿ.ಐ. ವತಿಂದ ಎರಡು ಶಾಸಕರ ಆಯ್ಕೆಯ ಖಾತೆ ತೆರೆದ ನಂತರ ದೇಶದ ಕ್ರಿಯಾಶೀಲ ಕಾರ್ಯಕರ್ತರಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಕರ್ನಾಟಕದಲ್ಲಿ ಆರ್.ಪಿ.ಐ. ಬೆಳವಣಿಗೆಯನ್ನು ಸಹಿಸದವರಿಗೆ ಶಾಕ್ ನೀಡುವ ಪಕ್ಷದ ಬೆಳವಣಿಗೆಗಳು ಹೊಸಬರ ಸೇರ್ಪಡೆಗೆ ಅವಕಾಶ ಮಾಡಿಕೊಡುತ್ತಿವೆ. ಚಿಕ್ಕಬಳ್ಳಾಪುರದ ಜಿ.ಸಿ. ವೆಂಕಟರಮಣಪ್ಪ, ರಾಮನಗರದ ಡಾ.ಜಿ.ಗೋವಿಂದಯ್ಯ, ಬೆಂಗಳೂರಿನ ಡಾ.ಆರ್.ಚಂದ್ರಶೇಖರ್ ಮುಂತಾದ ಜಿಲ್ಲಾ ಮಟ್ಟದ ಮುಖಂಡರು ರಾಜ್ಯಸಮಿತಿ ಪದಾಧಿಕಾರಿಗಳಾದ ಮೇಲೆ ಪಕ್ಷದಲ್ಲಿ ಎರಡನೇ ಹಂತದ ನಾಯಕತ್ವಕ್ಕೆ ಅವಕಾಶವಾಗಿರುವುದು ಯುವಜನತೆಗೊಂದು ಭರವಸೆ ಮೂಡಿ ಆರ್.ಪಿ.ಐ. ಪಕ್ಷವನ್ನು ವಿಸ್ತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಿದರು.

ರಾಜ್ಯ ಮಟ್ಟದ ಹೊಸ ಯುವ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕ, ವಿದ್ಯಾರ್ಥಿ ಘಟಕಗಳೂ ಸಹ ವಿಸ್ತರಿಸಿಕೊಳ್ಳುತ್ತಿವೆ. ಪಕ್ಷದಲ್ಲಿ ಸ್ಲಂ ಮೋರ್ಚ, ರೈತ ಮೋರ್ಚ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಮೋರ್ಚಾಗಳು ಗಟ್ಟಿಗೊಳ್ಳುತ್ತಿವೆ. ಎಲ್ಲಾ ಜಾತಿ, ಧರ್ಮಗಳನ್ನೊಳಗೊಂಡ ಸರ್ವಜನ ಪಕ್ಷವಾಗಿ ಆರ್.ಪಿ.ಐ. ಬೆಳೆಯುತ್ತಿದೆ. ಪಕ್ಷದ ರಾಜ್ಯಮಟ್ಟದ ಇಂತಹ ಹೊಸ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಇದೇ ಫೆಬ್ರವರಿ ೧೭ರ ಶನಿವಾರ ಬೆಂಗಳೂರಿನ ಅರಮನೆ ಮೈದಾನದ “ಭೀಮ ಮಂಟಪ”ದಲ್ಲಿ ಆಯೋಜಿಸಲಾಗಿದೆ. ಪಕ್ಷದ ಮುಂದಿನ ರಾಜಕೀಯ ನಡೆಯ ಕುರಿತು ಮಹತ್ತರ ನಿರ್ಣಯಗಳನ್ನು ಅನುಮೋದಿಸಲಾಗುವುದು. ಬನ್ನಿ ಅಂದು ರಾಜ್ಯದಲ್ಲೊಂದು ಭೀಮಶಕ್ತಿಯ ಅನಾವರಣಕ್ಕೆ ಸಾಕ್ಷಿಯಾಗೋಣ. ನಾಡಿನ ಎಲ್ಲಾ ಭಾಗಗಳಿಂದ ದಯಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನಿಮ್ಮೊಂದಿಗೆ ಕರೆತನ್ನಿ. ರಾಜ್ಯದಲ್ಲಿ ಆರ್.ಪಿ.ಐ. ಪಕ್ಷದ ಹೊಸ ಮನ್ವಂತರಕ್ಕೆ ನಾಂದಿ ಹಾಡೋಣ ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ. ಪಕ್ಷದ ಮುಖಂಡರಾದ ಹರೀಶ್, ಯೋಗಿಶ್, ರಂಜಿತ್ ಕುಮಾರ್, ಉಪಾಧ್ಯಕ್ಷ ಸತೀಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನವನ್ನು ಸ್ವಚ್ಛ ಮತ್ತು ಸುಂದರ ನಗರವಾಗಿಸಲು ಶ್ರಮ : ಶಾಸಕ ಸ್ವರೂಪ್ ಪ್ರಕಾಶ್

Published

on

ಹಾಸನ: ಹಾಸನ ನಗರಸಭೆ ಇದೀಗ ಮಹಾನಗರ ಪಾಲಿಕೆಯಾಗಿ ಉನ್ನತೀಕರಣ ಗೊಂಡಿದ್ದು, ಹೆಚ್ಚಿನ ಅನುದಾನ ತಂದು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಪಿ. ಸ್ವರೂಪ್ ಭರವಸೆ ನೀಡಿದರು.

ನಗರದ 80 ಅಡಿ ರಸ್ತೆ ಬಳಿ ಇರುವ ವಿಶ್ವನಾಥ ನಗರದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಹಾಸನದ ಅಭಿವೃದ್ಧಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಚಿವರಾಗಿದ್ದಾಗ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ಅಲ್ಲದೆ ಇದೀಗ ಮಹಾನಗರ ಪಾಲಿಕೆ ಆಗಿರುವ ಹಿನ್ನೆಯಲ್ಲಿ ರಾಜ್ಯ ಸರಕಾರದಿಂದ ಮೂರು ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಹಕಾರದಲ್ಲಿ ಕೇಂದ್ರದಿಂದಲೂ ಸುಮಾರು ೩೦ ಕೋಟಿ ಅನುದಾನ ಸಿಗುವ ಭರವಸೆ ಇದೆ ಎಂದರು. ಈಗಾಗಲೇ ಮಹಾನಗರ ಪಾಲಿಕೆಗೆ ಸೇರಿರುವ ಹೆಚ್ಚುವರಿ ೩೫ ಹಳ್ಳಿಗಳಿಲ್ಲಿ ಅನೇಕ ಸಮಸ್ಯೆಗಳಿದ್ದು ತನ್ನ ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸುಮಾರು ೧೦೦-೧೫೦ ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಗೆ ಒಳಗೊಂಡ ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರಗೌಡ ಮಾತನಾಡಿ, ಹಾಸನ ನಗರ ವಾಸಿಗಳ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಶಾಸಕರ ಸಹಕಾರದಿಂದ ಹಾಸನಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು ಎಂದರು.

ವಾರ್ಡ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ವಾರ್ಡ್ ನಂ.೩೦ಕ್ಕೆ ಸುಮಾರು ೧೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಹೆಚ್.ಡಿ. ರೇವಣ್ಣ ಅವರು ಉಸ್ತುವಾರಿ ಸಚಿವರಾಗಿದ್ದಾಗ ೮೦ ಅಡಿ ರಸ್ತೆ ನಿರ್ಮಿಸಿ ಈ ಭಾಗದ ಜನರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ಸ್ವರೂಪ್ ಪ್ರಕಾಶ್ ಅವರು ಶಾಸಕರಾದ ಬಳಿಕ ನಮ್ಮ ಬಡಾವಣೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ ಎಂದರು. ಈ ಭಾಗಕ್ಕೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಒಳ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅಬಿವೃದ್ಧಿ ಪಥದತ್ತ ಸಾಗುತ್ತಿರುವ ಬಡಾವಣೆಗೆ ಹೆಚ್ಚಿನ ಅನುದಾನ ನೀಡಿ ಇನ್ನಷ್ಟು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಹಾಸನ ಮಹಾನಗರ ಪಾಲಿಕೆಯ ಮೇಯರ್ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.

ಭೂಮಿ ಪೂಜೆಯಲ್ಲಿ ಹಾಸನ ಮಹಾನಗರ ಪಾಲಿಕೆಯ ಉಪ ಮೇಯರ್ ಹೇಮಲತಾ, ಎಇಇ ಚೆನ್ನೇಗೌಡ, ಎ.ಇ ಆನಂದ್, ನಗರಸಭೆ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.

 

Continue Reading

Hassan

ನನ್ನ ಪತ್ನಿ ಕೈಗೆ ವಿಷಪೂರಿತ ಪೌಡರ್ ಹಾಕಿ ಸಾಯಿಸುವ ಯತ್ನ ತನಿಖೆ ನಡೆಸಿ ನ್ಯಾಯಕೊಡಿಸಿ: ಪತಿ ಎ.ಎಸ್. ಮಹೇಂದರ್ ಒತ್ತಾಯ

Published

on

ಹಾಸನ: ಕಳೆದ ತಿಂಗಳು ನನ್ನ ಪತ್ನಿ ಜಯಕಿರಣ್ ಕೈಗೆ ವಿಷಪೂರಿತ ಕೆಮಿಕಲ್ ಪೌಡರ್ ಹಾಕಿ ಸಾಯಿಸುವ ಯತ್ನ ಮಾಡಲಾಗಿದ್ದು, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ನ್ಯಾಯಕೊಡಿಸಬೇಕೆಂದು ಈಕೆಯ ಪತಿ ಎ.ಎಸ್. ಮಹೇಂದರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಜಯಕಿರಣ್ ಇಬ್ಬರೂ ಕೂಡ ವಿಶೇಷ ಚೇತನರಾಗಿದ್ದು, ನನಗೆ ಪೂರ್ತಿ ಕಣ್ಣು ಕಾಣಿಸುವುದಿಲ್ಲ. ನನ್ನ ಪತ್ನಿಗೆ ಆಗಿರುವ ಅನ್ಯಾಯದ ವಿರುದ್ಧ 2019ನೇ ಇಸವಿಯಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ದೀಲಿಪ್ ಎಂಬುವರು ನನ್ನ ಪತ್ನಿಯ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸಲು ಎರಡು ಸುಳ್ಳು ಕೇಸು ಹಾಕಿಸಲಾಗಿದ್ದು, ಈಗಾಗಲೇ ನ್ಯಾಯಾಲಯದಲ್ಲಿ ಸ್ಟಾಪ್ ಗೊಂಡಿದೆ.

ಸುಮಾರು 11 ಪ್ರಕರಣಗಳಿಗೆ ಕೋರ್ಟ್ ಮೆಟ್ಟಿಲನನ್ನು ಹತ್ತಿಸಿದ್ದಾರೆ ಎಂದು ದೂರಿದರು. ಇದಕ್ಕೆಲ್ಲಾ ಕಳೆದ 26 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳೆ ಒಟ್ಟಾಗಿ ಸೇರಿಕೊಂಡು ಕಛೇರಿ ಒಳಗೊಂಡಂತೆ ಇಲಾಖೆಯ ಪ್ರತಿ ಯೋಜನೆಗಳ ಸಿಬ್ಬಂಧಿಗಳ ಆರ್ಥಿಕತೆ ಇತರೆ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಎಂದು ದೂರಿದರು. ಅಧಿಕಾರಿಗಳ ವಿರುದ್ಧ ಸೂಕ್ತ ದಾಖಲೆ ಸಲ್ಲಿಸಿ ನ್ಯಾಯದ ಪರ ಹೋರಾಟ ಮಾಡುತ್ತಿರುವುದರಿಂದ ನನ್ನ ಮೇಲೆ ಹಾಗೂ ನನ್ನ ಪತ್ನಿ ಮೇಲೆ ಹಲವಾರು ಸಂಚುಗಳನ್ನು ರೂಪಿಸಿದ್ದಾರೆ.

ಗಲಾಟೆ ಮಾಡಿಸಿ ಎರಡು ಸುಳ್ಳು ಕೇಸು ಹಾಕಿಸಿದ್ದಾರೆ ಎಂದರು. ಕಳೆದ ತಿಂಗಳು 31 ರ ಬೆಳಿಗ್ಗೆ ನಾನು ಮತ್ತು ನನ್ನ ಪತ್ನಿ ಜೊತೆ ಮೆಟ್ಟಿಲು ಹತ್ತುವಾಗ ಕೈಗೆ ಏನು ಬಿಸಿಯಾಗಿ ಸಲ್ಪ ಸಮಯದಲ್ಲಿಯೇ ಪತ್ನಿಯ ಕೈ ಉರಿಯಲು ಆರಂಭಿಸಿದೆ. ಚರ್ಮ ಕಿತ್ತುಕೊಂಡು ಹೋಯಿತು. ಉರಿ ಹೆಚ್ಚಾದಗ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಯಿತು. ಇದಾದ ನಂತರ ಆಯುರ್ವೇದ್ ವೈದ್ಯರ ಬಳಿ ಹೋದಾಗ ಆಯಿಟ್ ಮೆಂಟ್ ಹಾಗೂ ಮಾತ್ರೆ ನೀಡಿ ಕಳುಹಿಸಿದರು. ಈ ಘಟನೆ ಬಗ್ಗೆ ದೂರು ನೀಡಲಾಗಿದ್ದು, ಈ ರೀತಿ ನಮ್ಮ ಮೇಲೆ ಅಟೇಕ್ ಮಾಡುವ ಬದಲು ಕೋರ್ಟಿನಲ್ಲಿ ಹೋರಾಟ ನಡೆಸಿ. ವರತು ಈರೀತಿ ಹೋರಾಟ ಮಾಡಬೇಡಿ. ಕೂಡಲೇ ಎಫ್.ಐ.ಆರ್. ಮಾಡಿ ತನಿಖೆ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಲೈವ್ ಮಾಡಲಾಗಿದ್ದು, ಯಡಿಯೂರು ರಸ್ತೆಯಲ್ಲಿ ಹೋದ ವೇಳೆ ಅಂಗನವಾಡಿ ವಿತರಣೆಯ ಫುಡ್ ಪ್ಯಾಕೆಟ್ ಗಳೆಲ್ಲಾವನ್ನು ರಸ್ತೆ ಮೇಲೆ ಬಿಸಾಡಿದ್ದರು. ಈ ವಿಚಾರವಾಗಿ ದೂರನ್ನು ನೀಡಲಾಗಿತ್ತು. ಅಧಿಕಾರಿಗಳು ತನಿಖೆ ಮಾಡಿದ್ದು, ಕಂಪನಿಯಿಂದ ಈತರ ಫುಡ್ ಬಂದಿದೆ. ಫುಡ್ ನಮ್ಮದೆಯಲ್ಲ ಎಂದು ಹೇಳಿದ್ದಾರೆ. ಎ.ಎಸ್. ಮಹೇಂದರ್ ಪತ್ನಿ ಮೇಲೆ ಕೆಮಿಕಲ್ ಅಟೆಕ್ ಮಾಡಲಾಗಿದೆ ಎಂದು ನಮ್ಮ ಬಳಿ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರನ್ನೆ ತೆಗೆದುಕೊಳ್ಳುತ್ತಿಲ್ಲ. ಇವರಿಬ್ಬರಿಗೂ ಕಣ್ಣು ಕಾಣಿಸುವುದಿಲ್ಲ. ಈ ವೇಳೆ ಮೂರು ಬಾರಿ ಸಾಯಿಸಲು ಮುಂದಾಗಿದ್ದಾರೆ. ಕೇಸು ದಾಖಲಿಸುವಲ್ಲಿ ಪೊಲೀಸರು ಹಿಂದೆಟು ಹಾಕಿ ರಾತ್ರಿ ದಾಖಲಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಬೂವನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಧು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಎನ್.ಟಿ.ಸಿ ಕಾರ್ಮಿಕರ ಹೋರಾಟ ಸ್ಥಳಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ : ಕಾರ್ಮಿಕರ ಪರ ನಿಂತ ಶಾಸಕರು

Published

on

ಹಾಸನ: ಬಾಕಿ ಉಳಿಸಿಕೊಂಡಿರುವ ವೇತನ ನೀಡುವಂತೆ ನಗರದ ಕೈಗಾರಿಕಾ ಪ್ರದೇಶದಲ್ಲಿನ ನ್ಯೂ ಮಿನರ್ವ ಮಿಲ್ ಎದುರು ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಇಂದು ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.

ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ವೇತನ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಹೋರಾಟ ನಡೆಯುತ್ತಿದ್ದು ಇಂದು ಸ್ಥಳಕ್ಕೆ ಬಂದ ವ್ಯವಸ್ಥಾಪಕರನ್ನು ಕಾರ್ಮಿಕರು ತೀರ್ವ ತರಾಟೆಗೆ ತೆಗೆದುಕೊಂಡರು.

ಪ್ರಮುಖವಾಗಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅತೀ ಶೀಘ್ರವಾಗಿ ನೀಡಬೇಕು, ಜೊತೆಗೆ ನಿಂತು ಹೋಗಿರುವ ಕಂಪೆನಿಯಲ್ಲಿನ ಸಾಮಗ್ರಿಗಳನ್ನು ರಕ್ಷಿಸುವ ಸಲುವಾಗಿ ಕಾರ್ಮಿಕರನ್ನು ಕವಾಲುಗಾರರನ್ನಾಗಿ ನೇಮಕ ಮಾಡಿಕೊಂಡಿದ್ದು ಅವರಿಗೂ ವೇತನ ನೀಡುತ್ತಾರೆ ಎಂಬ ನಂಬಿಕೆ ಇಲ್ಲ ಹಾಗಾಗಿ ಎಲ್ಲಾರಿಗೂ ವೇತನ ನೀಡಲು ಗಡುವು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಮಿಕರ ನೀತಿ ನಿಯಮಗಳನ್ನು ಆಡಳಿತಮಂಡಳಿ ಗಾಳಿಗೆ ತೂರಿದೆ, ವ್ಯವಸ್ಥಾಪಕರು ಕಾರ್ಮಿಕರನ್ನು ಒಳಗೆ ಬಿಡದೆ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡುತ್ತಿದ್ದಾರೆ ಅಲ್ಲದೆ ವೇತನದ ಬಗ್ಗೆ ವ್ಯವಸ್ಥಾಪಕರಲ್ಲಿ ಕೇಳಿದರೆ ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ ಆದುದರಿಂದ ವೇತನ ನೀಡುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಕೆಲಸ ಮಾಡಬೇಕು. ಈಗಾಗಲೇ ಕೈಗಾರಿಕಾ ಪ್ರದೇಶಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಳೆದುಕೊಂಡಿರುವ ರೈತ ಕುಟುಂಬಗಳು ಇಂದು ಬೀದಿ ಪಾಲಾಗಿವೆ, ಅವರಿಗೆ ಉದ್ಯೋಗ ನೀಡಿ ಅವರಿಗೆ ಸಹಕಾರ ನೀಡಬೇಕಿರುವುದು ಕಾರ್ಖಾನೆಗಳ ಜವಾಬ್ದಾರಿ ಆದುದರಿಂದ ಸಂಸ್ಥೆ ಕೂಡಲೇ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದರು.

ತಾನು ಕೂಡ ಶಾಸಕನಾಗಿ ಸಂಭಂದಿಸಿದ ಇಲಾಖಾ ಸಚಿವರ ಬಳಿ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಶೀಘ್ರವಾಗಿ ಬಗೆಹರಿಸುವ ಕೆಲಸ ಮಾಡಲಾಗುವುದು, ಸರ್ಕಾರದ ಅಂಗ ಸಂಸ್ಥೆಯಾಗಿರುವ ಎನ್.ಟಿ.ಸಿ ಕಾರ್ಖಾನೆಯಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು

Continue Reading

Trending

error: Content is protected !!