Mysore
ಸಾಲಿಗ್ರಾಮ: 79ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮ ದಲ್ಲಿ ಪತ್ನಿಗೆ ಅಧಿಕಾರ, ಪತಿಗೆ ಸರ್ವಾಧಿಕಾರ
ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 79 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿಯೂ ಸಹ ಪುಷ್ಪಾರ್ಚನೆ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಪತ್ನಿಗೆ ಇರುವ ಅಧಿಕಾರ ಪತಿಗೂ ಇದೆಯಾ ಎಂದು ಮಾತನಾಡಿಕೊಳ್ಳುತ್ತಿದ್ದರು.

ವಂದನಾ ಸ್ವೀಕಾರ, ವೇದಿಕೆ ಮೇಲೆ ಕುಳಿತಿರುವುದನ್ನು ಗಮನಿಸಿದ ಅಂಬೇಡ್ಕರ್ ನಗರದ ಸೋಮಶೇಖರ್, ಲೋಕೇಶ್, ಹಾಗೂ ಉಮೇಶ್ ಇವರುಗಳು ತೀರ್ವವಾಗಿ ಖಂಡಿಸಿದ್ದಾರೆ, ಮುಂದೆಯೂ ಇದೇ ರೀತಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಹಿಸುವುದಿಲ್ಲ ಎಂದು ತಿಳಿಸಿದರು.
ಏನೇ ಆದರೂ ಸಭೆ ಮುಗಿಯುವ ತನಕ ಪತಿಯು ವೇದಿಕೆಯಲ್ಲಿ ಇದ್ದದ್ದು ಎಲ್ಲರ ಗಮನ ಸೆಳೆಯಿತು.
Mysore
ನಂಜನಗೂಡಿನಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ
ನಂಜನಗೂಡು: ನಂಜನಗೂಡು ನಗರದಲ್ಲಿ ಹನುಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಆರ್.ಪಿ. ರಸ್ತೆ ಮತ್ತು ಎಂ.ಜಿ. ರಸ್ತೆ ಕೇಸರಿಮಯವಾಗಿ ಕಂಗೊಳಿಸಿದ್ದು, ಭವ್ಯ ಮೆರವಣಿಗೆ ಗಮನ ಸೆಳೆದಿತು.
ಮೆರವಣಿಗೆಯಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಕಳಲೆ ಕೇಶವಮೂರ್ತಿ ಹಾಗೂ ಹರ್ಷವರ್ಧನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಬೃಹತ್ ಎತ್ತರದ ಹನುಮಂತನ ವಿಗ್ರಹವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.

ಜಾನಪದ ಕಲಾ ತಂಡಗಳ ಪ್ರದರ್ಶನ, ಡಿಜೆ ಸಂಗೀತಕ್ಕೆ ಕುಣಿದ ಭಕ್ತರು ಹಾಗೂ ಸಹಸ್ರಾರು ಸಂಖ್ಯೆಯ ಜನರ ಭಾಗವಹಿಸುವಿಕೆ ಉತ್ಸವದ ಸಂಭ್ರಮವನ್ನು ಹೆಚ್ಚಿಸಿತು. ಮೆರವಣಿಗೆ ಆರ್.ಪಿ. ರಸ್ತೆ, ಹುಲ್ಲಹಳ್ಳಿ ವೃತ್ತ ಹಾಗೂ ಎಂ.ಜಿ. ರಸ್ತೆಯ ಮೂಲಕ ಸಾಗಿತು.
ಮೆರವಣಿಗೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
Mysore
ತಾಲೂಕು ಆಡಳಿತದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಬೃಹತ್ ಬಾರು ಕೋಲು ಚಳುವಳಿ : ಜೂ.8 ರಂದು ರೈತ ಸಂಘ & ಹಸಿರು ಸೇನೆ ಪ್ರತಿಭಟನೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ನಂಜನಗೂಡು ತಾಲೂಕು ವತಿಯಿಂದ ಜೂನ್ 8ರ ಸೋಮವಾರದಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ತಾಲೂಕು ಆಡಳಿತದ ಕಚೇರಿ ಮುಂಭಾಗ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಹೆಚ್.ಮಹದೇವನಾಯಕ ತಿಳಿಸಿದ್ದಾರೆ.
ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಮಹದೇವ ನಾಯಕ, ದೇವರಾಜ್, ಮೋಹನ್, ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಆಡಳಿತವು ರೈತರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡುವ ಟನ್ ಕಬ್ಬಿಗೆ 4500 ರೂಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಮತ್ತು ಪೂರೈಕೆ ಮಾಡಿದ ಕಬ್ಬಿನ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಾಕಷ್ಟು ಬಾರಿ ತಿಳಿಸಿದ್ರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.

ನಂಜನಗೂಡು ತಾಲೂಕಿನಲ್ಲಿ ಅಂತರ್ಜಲ ಬತ್ತು ಹೋಗಿ ನೂರಾರು ಬೋರ್ವೆಲ್ ಗಳು ಕೆಟ್ಟು ನಿಂತಿವೆ . ಇದರಿಂದ ಬೆಳೆ ನಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಬೇಕು. ತಾಲೂಕಿನಲ್ಲಿ ಎಲ್ಲಾ ಕೆರೆಗಳ ಒತ್ತುವರಿ ತೆರೆಸಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು.
ತಾಲೂಕಿನ ಎಲ್ಲಾ ಗ್ರಾಮದಲ್ಲಿ ಭೌತಿಕವಾಗಿ ಉಳುವೆ ಮಾಡುತ್ತಿರುವ ಸಾಗುವಳಿದಾರರಿಗೆ ಫಾರಂ ನಂಬರ್ 53,57, ರಲ್ಲಿ ಅರ್ಜಿ ಸಲ್ಲಿಸಿ ನೈಜ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ರೈತರು ಕೊಂಡುಕೊಳ್ಳುವ ರಸಗೊಬ್ಬರಕ್ಕೆ ಎಫ್ಐಡಿ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕೆಂದು ಹಾಗೂ ರಸಗೊಬ್ಬರ ಡೀಸೆಲ್, ಪೆಟ್ರೋಲ್ ಗ್ಯಾಸ್ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಆರು ಸಾವಿರ ಸರ್ವೆಯರು ಕೆಲಸವಿಲ್ಲದೆ ಬೀದಿಯಲ್ಲಿ ಕುಳಿತಿದ್ದಾರೆ ಸರ್ವೆ ಕೆಲಸ ತಾಲೂಕಿನಲ್ಲಿ ನಡೆಯದೆ 7 ಲಕ್ಷ ಅರ್ಜಿಗಳು ನೆನೆಗುದಿಗೆ ಬಿದ್ದಿವೆ ಎಂದರು ರಸ್ತೆಗಳ ತೆರವು ಓಣಿಗಳ ಬಿಡಿಸಲು ಸಾಧ್ಯವಾಗದೆ ಕಂದಾಧಿಕಾರಿಗಳು ಇದುವರೆಗೂ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಗೋ ರಕ್ಷಣೆಗಾಗಿ ಮೇವು ಬ್ಯಾಂಕ್ ತುರ್ತಾಗಿ ಮಾಡಿಸಲೇಬೇಕು.

ಈ ಹಕ್ಕೋತ್ತಾಯಗಳನ್ನು ಒತ್ತಾಯಿಸಿ ಜೂನ್ 8 ರ ಸೋಮವಾರದಂದು 10:00ಗೆ ನಂಜನಗೂಡು ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮುಖಾಂತರ ತಾಲೂಕು ಆಡಳಿತ ಕಚೇರಿವರೆಗೆ ತೆರಳಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಹಕ್ಕೋತ್ತಾಯಗಳನ್ನು ಮಂಡನೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ರೈತ ಬಾಂಧವರು, ಮತ್ತು ಯುವಕರು, ಯುವತಿಯರು, ವಿದ್ಯಾರ್ಥಿಗಳು ದಲಿತ ಸಂಘಟನೆ, ಹಾಗೂ ಪ್ರಗತಿಪರ ಸಂಘಟನೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾ ಸಾಗರ್ ರಾಮೇಗೌಡ, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್, ರೈತ ಸಂಘ ಹಸಿರು ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್, ಮೋಹನ್, ಮಾದಪ್ಪ, ವರದರಾಜು, ಸೇರಿದಂತೆ ಹಲವಾರು ಮುಖಂಡರು ಇದ್ದರು.
Mysore
ಆದಿವಾಸಿ ಮೇಲೆ ಕರಡಿ ದಾಳಿ : ಗಂಭೀರ ಗಾಯ
ಮೈಸೂರು: ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬಳ್ಳೆ ಸಮೀಪದ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿ ನಡೆದಿದ್ದು, ಆದಿವಾಸಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಳ್ಳೆ ಹಾಡಿ ನಿವಾಸಿ ಉಪೇಂದ್ರ ಸೇರಿದಂತೆ ಕೆಲ ಆದಿವಾಸಿಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯ ಪ್ರದೇಶಕ್ಕೆ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ತೆರಳಿದ್ದರು. ಈ ವೇಳೆ ಬಳ್ಳೆ ಹಾಡಿ ಸಮೀಪದ ವಡಕನ ಮಾಳ ಬಳಿ ಕರಡಿ ಪ್ರತ್ಯಕ್ಷವಾಗಿ, ಆದಿವಾಸಿಗಳ ಗುಂಪಿನ ಮೇಲೆ ಹಠಾತ್ ದಾಳಿ ನಡೆಸಿದೆ.

ಕರಡಿ ದಾಳಿಯಿಂದ ಭಯಗೊಂಡು ಆದಿವಾಸಿಗಳ ಗುಂಪು ಚದುರಿಹೋಗಿದ್ದು, ಈ ವೇಳೆ ಉಪೇಂದ್ರ ಕರಡಿ ದಾಳಿಗೆ ಸಿಲುಕಿದ್ದಾರೆ. ಬಳಿಕ ಇತರರು ಜೋರಾಗಿ ಕಿರುಚಾಡಿ ಕರಡಿಯನ್ನು ಓಡಿಸಿದ್ದಾರೆ.
ದಾಳಿಯಿಂದ ಉಪೇಂದ್ರ ಅವರ ಮುಖ, ತಲೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಗಾಯಾಳುವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ಸರಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
-
Chamarajanagar23 hours agoನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪ
-
Manglore4 hours agoಪ್ರತ್ಯೇಕ 2 ಪ್ರಕರಣಗಳಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿಗಳಿಬ್ಬರ ಸೆರೆ
-
Kodagu23 hours agoಕುಟ್ಟ, ನಾಗರಹೊಳೆ ಸೇರಿದಂತೆ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ
-
Chikmagalur6 hours agoಅಡಿಕೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ₹5.7 ಲಕ್ಷ ಮೌಲ್ಯದ ಸ್ವತ್ತು ವಶ
-
National4 hours agoಭಾರತ ಟಿ-20 ತಂಡ ಪ್ರಕಟ: ಶ್ರೇಯಸ್ ಅಯ್ಯರ್ಗೆ ನಾಯಕತ್ವ, ಸೂರ್ಯಕುಮಾರ್ ಔಟ್
-
Kodagu10 hours agoಜೂ.06 ರಂದು ವಿದ್ಯುತ್ ವ್ಯತ್ಯಯ
-
Kodagu23 hours agoಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯ: ಶುಭ
-
Hassan5 minutes agoಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂತ ಭಕ್ತರೆ ದೊಡ್ಡ ಆಸ್ತಿ: ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ
