Connect with us

Mysore

ಒಂದೆಡೆ ಸಂಭ್ರಮ, ಮತ್ತೊಂದೆಡೆ ಸೋಲು,ಹಾಸನದಲ್ಲಿ ಗೆದ್ದು – ಬಿದ್ದ ಸಾಲಿಗ್ರಾಮದ ಮೊಮ್ಮಕ್ಕಳು

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ  : ಹೈವೊಲ್ಟೈಜ್ ಕದನವಾಗಿ ಮಾರ್ಪಟ್ಟು ಪೆನ್ ಡ್ರೈವ್ ಪ್ರಕರಣದಿಂದ ರಾಷ್ಟ್ರದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಾಲಿಗ್ರಾಮದ ಮೊಮ್ಮಕ್ಕಳಲ್ಲಿ ಒಬ್ಬ ಗೆದ್ದು ಇನ್ನೊಬ್ಬ ಪರಾಭವ ಗೊಂಡಿದ್ದು, ಒಂದೆಡೆ ಸಂಭ್ರಮ, ಇನ್ನೊಂದೆಡೆ ಸೋಲು ಮನೆಮಾಡಿದೆ.
ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶ್ರೇಯಸ್ ಪಟೇಲ್ ಮತ್ತು ಜೆಡಿಎಸ್ ನಿಂದ ಸ್ವರ್ಧಿಸಿ ಪರಾಭವಗೊಂಡ ಪ್ರಜ್ವಲ್ ರೇವಣ್ಣ ಅವರು ಇಬ್ಬರು ಸಾಲಿಗ್ರಾಮದ ಮೊಮ್ಮಕ್ಕಳು‌ ಎಂಬುದು ವಿಶೇಷವಾಗಿದೆ.


ಶ್ರೇಯಸ್ ಪಟೇಲ್ ಅವರು ಸಾಲಿಗ್ರಾಮದ ಮಾಜಿ ಜಿ.ಪಂ.ಸದಸ್ಯೆ ಸುಮಿತ್ರಮ್ಮ ಮತ್ತು ಗೋವಿಂದರಾಜು ಅವರ ಪುತ್ರಿ ಅನುಪಮ ಅವರ ಪುತ್ರನಾದರೇ, ಪ್ರಜ್ವಲ್ ರೇವಣ್ಣ ಅವರು ಸಾಲಿಗ್ರಾಮದ ರಾಜಲಕ್ಷ್ಮಿ ಮತ್ತು ಶಿವಣ್ಣ ಅವರ ಪುತ್ರಿ ಭವಾನಿ ರೇವಣ್ಣ ಅವರ ಪುತ್ರ.
ಗೆದ್ದ ಶ್ರೇಯಸ್ ಪಟೇಲ್ ಮತ್ತು ಸೋತ ಪ್ರಜ್ವಲ್ ರೇವಣ್ಣ ಅವರಿಬ್ಬರು ರಾಜ್ಯದ ದೊಡ್ಡ ಪ್ರಭಾವಿ ರಾಜಕಾರಣಿಗಳ ಕುಟುಂಬಕ್ಕೆ ಸೇರಿದವರಾಗಿದ್ದು , ಶ್ರೇಯಸ್ ಪಟೇಲ್ ಹಿರಿಯ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪುಟ್ಟಸ್ವಾಮಿಗೌಡ ಮೊಮ್ಮಗನಾದರೇ ,ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ.
ಹಿಂದಿನಿಂದಲು ಈ ಎರಡು ಕುಟುಂಬಗಳ ನಡುವೆ ರಾಜಕೀಯ ಜಿದ್ದಾ- ಜಿದ್ದಿ ನಡೆದು ಕೊಂಡು ಬಂದಿದ್ದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ದ ಶ್ರೇಯಸ್ ಪಟೇಲ್ ಒಂದು ಬಾರಿ ಮತ್ತು ಇವರ ತಾಯಿ ಅನುಪಮ ಎರಡು ಬಾರಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.


ಈ ಬಾರಿ ನಡೆದ ಚುನಾವಣೆಯಲ್ಲಿ  ಶ್ರೇಯಸ್ ಪಟೇಲ್ ಮತ್ತು ಪ್ರಜ್ವಲ್ ರೇವಣ್ಣ ಸ್ಪರ್ದೆ ಮಾಡಿದ ಪರಿಣಾಮವಾಗಿ ಮತ್ತೊಮ್ಮೆ ಈ ಕ್ಷೇತ್ರ ಹೈವೊಲ್ಟೈಜ್ ಕದನವಾಗಿ ಮಾರ್ಪಟಿತ್ತು . ಘಟಾ ನುಗಟಿ ರಾಜಕಾರಣಿಗಳ ದಂಡೆ ಈ ಇಬ್ಬರ ಪರ ಅದ್ದೂರಿ ಪ್ರಚಾರ ನಡೆಸಿದ ಪರಿಣಾಮವಾಗಿಯೇ ಈ ಕ್ಷೇತ್ರವು ಯಾರ ಪಾಲಾಗುತ್ತದೆ ಎಂದು ಕೂತುಹಲ ಮೂಡಿಸಿತ್ತು.
ಆದರೆ ಮಂಗಳವಾರ ಪ್ರಕಟಗೊಂಡ ಈ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು 670274 ಮತಗಳ ಜೊತಗೆ 43738 ಮತಗಳ ಲೀಡ್ ಪಡೆದು ತಮ್ಮ ವಿರುದ್ದ ಜೆಡಿಎಸ್ ನಿಂದ ಸ್ಪರ್ಧಿಸಿ 626536 ಮತಗಳನ್ನು‌ ಪಡೆದ ಪ್ರಜ್ವಲ್ ರೇವಣ್ಣ ಅವರನ್ನು ಪರಾಭವಗೊಳಿಸಿದ್ದಾರೆ.
ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಚುನಾವಣೆ ವೇಳೆಗೆ ಬಂದ ಪೆನ್ ಡ್ರೈವ್ ಸುದ್ದಿಯಿಂದ ಮತದಾರ ಅವಕೃಪೆಗೆ ಪಾತ್ರರಾಗುವಂತೆ ಮಾಡಿದ್ದರೆ ,ಇನ್ನು ಶ್ರೇಯಸ್ ಪಟೇಲ್ ಅವರು ಮತ್ತು ಅವರ ತಾಯಿ ಅನುಪಮ ಅವರ ವಿಧಾನ ಸಭೆ ಚುನಾವಣೆಯ ಸೋಲಿನ ಅನುಕಂಪ ಇಲ್ಲಿ ಪಟೇಲ್ ಗೆಲುವಿಗೆ ವರ್ಕ್ ಔಟ್ ಅಗಿದೆ.


ಶ್ರೇಯಸ್ ಪಟೇಲ್ ಗೆಲುವಿನ ಬಗ್ಗೆ “ಜನಮಿತ್ರ ” ದೊಂದಿಗೆ ಮಾತನಾಡಿದ ಇವರ ಸೋದರ ಮಾವ  ಸಾಲಿಗ್ರಾಮದ ಎಸ್.ಜಿ.ಬಾಬುಹನುಮಾನ್  ರವರು   ನಮ್ಮ ಸಹೋದರಿಯ ಪುತ್ರ ಹಾಸನದ ಸಂಸದನಾಗಿ ಆಯ್ಕೆಯಾಗಿರುವುದು ಸಾಲಿಗ್ರಾಮದ ನಮ್ಮ ಮನೆತನ “ಗೌಡ”ರ ಕುಟುಂಬಕ್ಕೆ ಹೆಮ್ಮೆ ಎನ್ನಿಸುತ್ತಿದೆ . ಯುವಕರಾಗಿರುವ ಶ್ರೇಯಸ್ ಪಟೇಲ್ ಅವರು ಹಾಸನ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳುವಂತ ಕೆಲಸ ಮಾಡುವ ವಿಶ್ವಾಸ ಇದೆ ಎಂದರು

Continue Reading
Click to comment

Leave a Reply

Your email address will not be published. Required fields are marked *

Mysore

ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕಿದ್ದ ಅಡ್ಡಿ ನಿವಾರಣೆ: ಕಾಮಗಾರಿ ಆರಂಭ

Published

on

ಮೈಸೂರು: ಭೂ ಮಾಲೀಕರ ಜತೆಗಿನ ಯಶಸ್ವಿ ಸಂಧಾನ ಹಾಗೂ ಸೂಕ್ತ ಪರಿಹಾರ ಭರವಸೆಯ ಬಳಿಕ ಹೆಚ್.ಡಿ.ಕೋಟೆ ತಾಲೂಕು ವಡ್ಡರಗುಡಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಕೆಪಿಟಿಸಿಎಲ್ ನ 66/11 ಕೆ.ವಿ. ವಿದ್ಯುತ್‌ ಗೋಪುರ ಮತ್ತು ಲೈನ್‌ ನಿರ್ಮಾಣ ಕಾರ್ಯಕ್ಕೆ ಇದ್ದ ವಿಘ್ನ ನಿವಾರಣೆಯಾಗಿದೆ.

ಪೊಲೀಸರ ಸಮ್ಮುಖದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಜಮೀನು ಮಾಲೀಕರ ಜತೆ ನಡೆದ ಮಾತುಕತೆ ಬಳಿಕ ಸೂಕ್ತ ಪರಿಹಾರದೊಂದಿಗೆ ನಿಗದಿತ ಸ್ಥಳದಲ್ಲಿ ಟವರ್ ನಿರ್ಮಾಣಕ್ಕೆ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಜಮೀನು ಮಾಲೀಕರು ಸಮ್ಮತಿಸಿದ್ದಾರೆ.

ಕಾಡಂಚಿನ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ ಹೆಚ್.ಡಿ.ಕೋಟೆ ತಾಲೂಕು ವಡ್ಡರಗುಡಿ ಗ್ರಾಮದ ಜಮೀನಿನಲ್ಲಿ 66/11 ವಿದ್ಯುತ್ ಗೋಪುರ ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿತ್ತು. ಆದರೆ, ಕಾನೂನಿನ ಮಾಹಿತಿಯ ಕೊರತೆಯಿಂದಾಗಿ ಸ್ಥಳೀಯರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲಸ ಆರಂಭಿಸಲು ಅವಕಾಶ ನೀಡಿರಲಿಲ್ಲ.

ಈ ಮಧ್ಯೆ ಜಿಲ್ಲಾಧಿಕಾರಿಗಳ ನ್ಯಾಯಾಲಯವು,ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ನಿಗದಿತ ಸ್ಥಳದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿತ್ತು. ಅಲ್ಲದೆ, ಕಾಮಗಾರಿ ನಡೆಸಲು ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸುವಂತೆಯೂ ಸೂಚಿಸಿತ್ತು. ಅದರಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಟಿ.ಎಸ್. ರಮೇಶ್‌, ಅಧೀಕ್ಷಕ ಇಂಜಿನಿಯರ್‌, ಯೋಜನೆ, ಕೆಪಿಟಿಸಿಎಲ್ ಮೈಸೂರು ವಿಭಾಗ ಇವರ ನೇತೃತ್ವದಲ್ಲಿ ಸೋಮವಾರ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು. ಇದರಿಂದ ಸಮಾಧಾನಗೊಂಡ ಜಮೀನು ಮಾಲೀಕರು ಕಾಮಗಾರಿ ಆರಂಭಿಸಲು ಒಪ್ಪಿಗೆ ಸೂಚಿಸಿದರು. ಅದರಂತೆ ಸೋಮವಾರವೇ ಕೆಲಸ ಆರಂಭಿಸಲಾಗಿದೆ.

ಏನಿದು ಪ್ರಕರಣ?: ಅಸ್ತಿತ್ವದಲ್ಲಿರುವ ಕೆಪಿಟಿಸಿಎಲ್ ನ ಹೋಸೂರು ಗೇಟ್ 66/11 ಕೆ.ವಿ. ಉಪ-ಕೇಂದ್ರ ಮೈಸೂರಿನಿಂದ 20.568 ಕಿ.ಮೀ. ದೂರದ ಹೆಚ್.ಡಿ.ಕೋಟೆಯಲ್ಲಿ ಅಸ್ತಿತ್ವದಲ್ಲಿರುವ 66/11 ಕೆ.ವಿ. ಉಪ ಕೇಂದ್ರಕ್ಕೆ ಡಿಸಿ ಟವರ್‌ಗಳ ಮೇಲೆ ಉದ್ದೇಶಿತ 66 ಕೆ.ವಿ. ಎಸ್‌ಸಿ ಲೈನ್ ನಿರ್ಮಾಣ ಕಾಮಗಾರಿಯನ್ನು 9.77 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯಲ್ಲಿ 87 ಗೋಪುರಗಳು ಬರುತ್ತಿದ್ದು, ಅವುಗಳ ಪೈಕಿ 81 ಗೋಪುರಗಳ ಕಾಮಗಾರಿ ಪೂರ್ಣಗೊಂಡಿದೆ. ಕೇವಲ 6 ಗೋಪುರಗಳ ನಿರ್ಮಾಣವಾಗಬೇಕಿದ್ದು, ಗೋಪುರ ಸಂಖ್ಯೆ 75ಕ್ಕೆ ಸಂಬಂಧಿಸಿದಂತೆ ಜಮೀನು ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಹೀಗಾಗಿ ಯೋಜನೆಗೆ ಅವಕಾಶ ಕಲ್ಪಿಸುವಂತೆ ಕೆಪಿಟಿಸಿಎಲ್ ವತಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯವು, ವಿದ್ಯುತ್ ಸರಬರಾಜು ಏರ್ಪಡಿಸಲು ಮತ್ತು ಉತ್ತಮಗೊಳಿಸಲು ಗೋಪುರಗಳ ನಿರ್ಮಾಣದ ಯೋಜನೆಗಾಗಲೀ, ನಿರ್ಮಾಣಗೊಂಡಿರುವ ಗೋಪುರಗಳ ಮಾರ್ಪಾಡುಗಳಿಲಾಗಲೀ ಅಥವಾ ಈಗಾಗಲೇ ಸ್ಥಾಪಿಸಲಾಗಿರುವ ಗೋಪುರಗಳ ವಿದ್ಯುತ್ ಲೈನುಗಳ ಪುನರ್ ನಿರ್ಮಾಣದ ಯೋಜನೆಗಳಾಗಲಿ ಯಾವುದೇ ತೊಂದರೆ ಉಂಟು ಮಾಡಬಾರದು ಎಂದು ಆದೇಶಿಸಿತ್ತು. ಅಲ್ಲದೆ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜಮೀನು ಮಾಲೀಕರು ಪರಿಹಾರ ಪಡೆದು ಯೋಜನೆಗೆ ಸಹಕರಿಸಬೇಕು. ಒಂದು ವೇಳೆ ಇದನ್ನು ಮೀರಿ ಕಾಮಗಾರಿಗೆ ತೊಂದರೆ ಉಂಟು ಮಾಡಿದಲ್ಲಿ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.

ಈ ಆದೇಶದನ್ವಯ ಕೆಪಿಟಿಸಿಎಲ್ ಮತ್ತು ಸೆಸ್ಕ್ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸರ್ವೇ ಕಾರ್ಯ ಆರಂಭಿಸಲು ಮುಂದಾದಾಗ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶವನ್ನು ವಿವರಿಸಿ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಅವಕಾಶ ಕಲ್ಪಿಸುವಂತೆ ಕೋರಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿ ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ಜಮೀನು ಮಾಲೀಕರು ಕೆಲಸ ಆರಂಭಿಸಲು ಸಮ್ಮತಿಸಿದರು.

ಕೋಟ್‌

ಇಂತಹ ಯೋಜನೆಗಳನ್ನು ಕೈಗೊಂಡಾಗ ಆಕ್ಷೇಪ, ವಿರೋಧ ಉಂಟಾಗುವುದು ಸಾಮಾನ್ಯ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ವಿದ್ಯುತ್ ಪೂರೈಸುವ ಸಲುವಾಗಿ ಈ ಯೋಜನೆ ಕಾರ್ಯಗತಗೊಳಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶವನ್ನು ಜಮೀನು ಮಾಲೀಕರಿಗೆ ತಿಳಿಸಿ, ಅದಕ್ಕೆ ಬದ್ಧರಾಗಿರುವಂತೆ ಮನವಿ ಮಾಡಿ ಅವರ ಮನವೊಲಿಸಿ ಟವರ್ ನಿರ್ಮಾಣ ಕಾರ್ಯ ಆರಂಭಿಸಲಾಯಿತು.

– ಟಿ.ಎಸ್. ರಮೇಶ್‌, ಅಧೀಕ್ಷಕ ಇಂಜಿನಿಯರ್‌, ಯೋಜನೆ, ಕೆಪಿಟಿಸಿಎಲ್ ಮೈಸೂರು ವಿಭಾಗ

Continue Reading

Mysore

ದಲೈವಾಲಾ ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ಸ್ವಾಗತಾರ್ಹ: ಕುರುಬೂರು ಶಾಂತಕುಮಾರ್‌

Published

on

ಮೈಸೂರು: ದೆಹಲಿ ಗಡಿಯಲ್ಲಿ ದೇಶದ ರೈತರ ಹಿತಕ್ಕಾಗಿ ಹೋರಾಡುತ್ತಿದ್ದ ದಲೈವಾಲಾ 53 ದಿನಗಳ ಉಪವಾಸ ಕೈ ಬಿಟ್ಟು ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರೈತರೆಲ್ಲ ಅವರ ಪ್ರಾಣದ ಬಗ್ಗೆ ಆತಂಕಗೊಂಡಿದ್ದರು ಎಂದು ಹೇಳುತ್ತ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಗಾಗಿ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚ ರಾಜಕೀಯೆತರ ಸಂಘಟನೆ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ಧಲೈವಾಲಾ 53 ದಿನದ ಉಪವಾಸ ಸತ್ಯಾಗ್ರಹ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಬೇಡಿಕೆ ಈಡೆರುವ ತನಕ ಚಳುವಳಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ. ಪೊಲೀಸ್ ಮಹಾ ನಿರ್ದೇಶಕರು ಅಧಿಕಾರಿಗಳ ತಂಡ ಚಳುವಳಿ ನಡೆಯುತ್ತಿರುವ ಕನೋರಿ ಬಾರ್ಡರ್ಗೆ ಮೂರು ದಿನಗಳ ಹಿಂದೆ ತೆರಳಿ ಫೆಬ್ರವರಿ 14 ರಂದು ಚಂಡೀಗಡದಲ್ಲಿ ರೈತರ ಸಮಸ್ಯೆಗಳಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ಕೇಂದ್ರ ಸರ್ಕಾರದ ಲಿಖಿತ ಪತ್ರ ನೀಡಿ 3 ಗಂಟೆಗಳ ಕಾಲ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗಿದೆ ಉಪವಾಸ ನಿರತ ದಲೆವಾಲ ನಿರ್ಧಾರ ರೈತರ ಹೋರಾಟದ ಶಕ್ತಿ ಹೆಚ್ಚಿಸಿದೆ. ಕಳೆದ ಮೂರು ದಿನಗಳಿಂದ 124 ರೈತರು ದಲೆವಾಲ ಉಪವಾಸ ಬೆಂಬಲಿಸಿ ನಾವು ಪ್ರಾಣ ತ್ಯಾಗಕ್ಕೆ ಸಿದ್ದ ಎಂದು ಉಪವಾಸ ಆರಂಭಿಸಿದರು. ಅವರು ಸಹ ಉಪವಾಸವನ್ನು ನಿನ್ನೆಯಿಂದ ಕೈಬಿಟ್ಟಿದ್ದಾರೆ. ಆದರೆ, ಸಮಸ್ಯೆ ಬಗೆಹರಿಯುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.

ಜನವರಿ 26 ರಂದು ದೇಶಾದ್ಯಂತ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಟ್ಯಾಕ್ಟರ್ ರಾಲಿ ನಡೆಸಲು ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿಯೂ ತಾಲೂಕು ಜಿಲ್ಲಾ ಮಟ್ಟದಲ್ಲಿ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲಾಗುವುದು. ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ಕಳೆದುಕೊಂಡ ಸ್ವತಂತ್ರ ಹೋರಾಟಗಾರರ ದೇಶದ ಗಡಿಯಲ್ಲಿ ಗಡಿ ರಕ್ಷಣೆಗಾಗಿ ಹುತಾತ್ಮರಾದ. ದೇಶದ ಜನರ ಆಹಾರ ಭದ್ರತೆಯಾಗಿ ದುಡಿದು ಹುತಾತ್ಮರಾದ ರೈತರ ನೆನಪಿನ ದಿನ ರಾಜ್ಯಮಟ್ಟದಲ್ಲಿ 30 ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ವಿಶ್ವ ಕಪ್ ಗೆದ್ದು ಜಯಭೇರಿ ಬಾರಿಸಿದ ಪುರುಷ, ಮಹಿಳೆಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಮಹಿಳೆಯರ ಭಾರತ ತಂಡದಲಿ ಉತ್ತಮ ಆಟ ಆಡುವ ಮೂಲಕ ಪ್ರಶಸ್ತಿಗೆ ಬಾಜನರಾಗಿರುವ ನಮ್ಮ ರಾಜ್ಯದ ಹಿರಿಮೆ ಹೆಚ್ಚಿಸಿದ ನಮ್ಮ ಊರಿನ ಕು. ಚೈತ್ರಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯ ಸರ್ಕಾರ ಅಭಿನಂದನೆ ಹೇಳಿದರೆ ಸಾಲದು. ಇಂಥಹ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಬೇಕು. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ರೀಡಾಪಟುಗೆ 3 ಕೋಟಿ ರೂ. ಪ್ರೋತ್ಸಾಹ ಧನ ನೀಡುವ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.

ಟಿ ನರಸೀಪುರ ತಾಲೂಕಿನ ಸರ್ವ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ನಾಳೆ (ಜ.21) ಚೈತ್ರಳನ್ನು ಅಭೂತಪೂರ್ವ ಸ್ವಾಗತ ನೀಡಿ ಅಭಿನಂದನಾ ಸಮಾರಂಭ ನಡೆಸಲಾಗುತ್ತಿ ಎಂದು ಮಾಹಿತಿ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ದೇವನೂರು ವಿಜಯೇಂದ್ರ, ಸಾತಗಳ್ಳಿ ಬಸವರಾಜು, ಹಳ್ಳಿಕೆರೆಹುಂಡಿ ಪ್ರಭುಸ್ವಾಮಿ, ಕುರುಬೂರ್ ಪ್ರದೀಪ್, ವಾಜಮಂಗಲನಾಗೇಂದ್ರ ಉಪಸ್ಥಿತರಿದ್ದರು.

Continue Reading

Mysore

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 2.5 ಲಕ್ಷ ಹಣ ಸಂಗ್ರಹ

Published

on

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ತುಂಬಾ ಯಶಸ್ವಿಯಾಗಿ ಪೂರ್ಣಗೊಂಡಿತು. ಒಟ್ಟಾರೆಯಾಗಿ 2.5 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ತಿಳಿಸಿದರು.

ರಂಗಾಯಣದ ಬಿ.ವಿ. ಕಾರಂತ್ ರಂಗ ಚಾವಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು . ಆರಂಭವಾದ ಮೊದಲೆರಡು ದಿನಗಳಲ್ಲಿ ಸಾರ್ವಜನಿಕರ ಸಂಖ್ಯೆಯು ಕಡಿಮೆಗೊಂಡಿದ್ದು. ತದನಂತರ ಕೊನೆಯದಿನದ ವರೆಗೂ ಕಲಾಮಂದಿರ ವರೆತು ಪಡಿಸಿ ಶೇ.80. 90 ರಂಗಾಯಣ ಕಲಾಪ್ರೇಕ್ಷರಿಂದ ತುಂಬಿ ತುಳುಕಿತು ವಾರಾಂತ್ಯ [ ಶನಿವಾರ ಮತ್ತು ಭಾನುವಾರ] ದಿನಗಳಲ್ಲಿ ಕಲಾಮಂದಿರನು ಸೇರಿ ಶೇ 100 ಸಾರ್ವಜನಿಕರಿಂದ ಕಂಗೊಳಿಸಿತು ಎಂದು ಹೇಳಿದರು.

ಪ್ರತಿವರ್ಷದಂತೆ ಈ ವರ್ಷವು ಬಹುಭಾಷೆಯ ನಾಟಕಗಳು, ಚಲನಚಿತ್ರಗಳು, ಬೀದಿನಾಟಕಗಳು, ಜನಪದ ಉತ್ಸವ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾದವು ಎಂದರು.

ಒಟ್ಟಾರೆಯಾಗಿ 6 ದಿನಗಳ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 1.200 ಕ್ಕು ಹೆಚ್ಚು ಕಲಾವಿದರು ಭಾಗವಹಿಸಿ ವಿಬಿನ್ನವಾಗಿ ಕಲೆ ಸಾಂಸ್ಕೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.

ಈ ವರ್ಷ ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬಹಳ ವಿಶೇಷವಾಗಿ ಮಕ್ಕಳ ಬಹುರೂಪಿ ವಿಶೇಷ ಕಾರ್ಯಕ್ರಮ ಆರಂಭಿಸಿದ್ದು. ಒಟ್ಟಾರೆಯಾಗಿ ಮಕ್ಕಳ ನಾಟಕವನ್ನು ಸುಮಾರು ಒಂದು ಸಾವಿರ ಮಕ್ಕಳು ವಿಕ್ಷಣೆ ಮಾಡಿದರು. ಚಲನಚಿತ್ರ ಮತ್ತು ಮಕ್ಕಳ ಚಲನಚಿತ್ರವನ್ನು ಎರಡು ಸಾವಿರ ಮಕ್ಕಳು ವಿಕ್ಷಿಸಿದ್ದಾರೆ ಎಂದು ತಿಳಿಸಿದರು.
ರಂಗಾಯಣದ ಉಪನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಉಪಸ್ಥಿತರಿದ್ದರು.

Continue Reading

Trending

error: Content is protected !!