Mandya
ಸಾಲದ ವಸೂಲಾತಿಗೆ ರೈತರ ಮೇಲೆ ಕಿರುಕುಳ ನೀಡಬಾರದು: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಮೈಕ್ರೋ ಫೈನಾನ್ಸ್ ಕಂಪನಿಯವರು ರೈತರಿಗೆ ಮತ್ತು ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲತಿ ಮಾಡುವ ಸಂದರ್ಭದಲ್ಲಿ ಅವರುಗಳ ಮೇಲೆ ಯಾವುದೇ ತರಹ ಕಿರುಕುಳ ಮತ್ತು ಒತ್ತಡ ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಕಂಪನಿಗಳು ಸಭೆ ನಡೆಸಿ ಮಾತನಾಡಿ, ರೈತರಿಗೆ ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲತಿ ಮಾಡುವಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಗಳ ಮೇಲೆ ಕಿರುಕುಳ ಹಾಗೂ ಒತ್ತಡ ನೀಡುತ್ತಿರುವುದು ಕಂಡು ಬಂದಿದೆ.
ಇದು ಅತಿರೇಖವಾದಲ್ಲಿ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಸಾಲ ವಸೂಲತಿ ಮಾಡುವ ಮೈಕ್ರೋಪೈನಾನ್ಸ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಕಿರುಕುಳ ನೀಡಿದ ಮೈಕ್ರೋಪೈನಾನ್ಸ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
2 ರಿಂದ 3 ತಿಂಗಳು ಸಾಲ ವಸೂಲಾತಿ ಮಾಡುವಂತಿಲ್ಲ ಸರ್ಕಾರ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಗಳೆಂದು ಘೋಷಿಸಿ 77 ಸಾವಿರ ರೈತರಿಗೆ ರೂ 34 ಕೋಟಿ ಹಣವನ್ನು ಬರ ಪರಿಹಾರವಾಗಿ ನೀಡಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಎರಡು ಮೂರು ತಿಂಗಳುಗಳ ಕಾಲ ಸಾಲ ಮರುಪಾವತಿಗೆ ಅವಕಾಶ ನೀಡಿ ಒತ್ತಡ ಏರದಂತೆ ನೋಡಿಕೊಳ್ಳಿ ಎಂದರು.
ಬೆಳಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಸಾಲ ವಸೂಲಾತಿ ಮಾಡುವವರು ಪ್ರತಿದಿನ ಮನೆಗೆ ಭೇಟಿ ನೀಡುತ್ತಿದ್ದು, ಇದರಿಂದ ಸಾರ್ವಜನಿಕರು ತಮಗೆ ಪ್ರತಿ ದಿನದ ಕೆಲಸ ಮಾಡಲು ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿದ್ದು, ಸಾಲ ವಸೂಲಾತಿಗೆ ಸರಿಯಾದ ಸಮಯ ನಿಗದಿಮಾಡಿಕೊಳ್ಳುವಂತೆ ತಿಳಿಸಿದರು.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೈಕ್ರೋಪೈನಾನ್ಸ್ ಗಳು ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಣಿ ಸಂಖ್ಯೆ: 18004255654, 18001021080, 011 47174410, ನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲ, ಹಾಗೂ ವಿವಿಧ ಮೈಕ್ರೋ ಫೈನಾನ್ಸ್ ನ ವ್ಯವಸ್ಥಾಪಕರು ಉಪಸ್ಥಿತರಿದ್ದರು.
Mandya
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ

ಮಂಡ್ಯ: ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮದ್ಯೆದಲ್ಲಿಯ ಮೃತನ ಶವ ಸುಟ್ಟ ಘಟನೆಗೆ ಸಂವಂಧಿಸಿದಂತೆ ಜನಮಿತ್ರ ಪತ್ರಿಕೆ ಹಾಗೂ ಡಿಜಿಟಲ್ ವರದಿಗೆ ಫಲಶೃತಿ ದೊರೆತಿದೆ.
ಜನಮಿತ್ರ ವರದಿಯಿಂದ ಎಚ್ಚತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ರಸ್ತೆಯ ಇಕ್ಕೆಲಗಳ ಇಬ್ಬರೂ ರೈತರಿಂದ ಹತ್ತು, ಹತ್ತು ಅಡಿ ಜಾಗವನ್ನು ಸ್ಮಶಾಬದ ರಸ್ತೆಗೆ ಬಿಡಿಸಿ ಸಫಲತೆ ಕಂಡಿದೆ.
ಜನಮಿತ್ರ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳ ತಂಡ, ಸ್ಮಶಾನ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ತೆರಳುವ ರಸ್ತೆಯ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿನ ರೈತರಾದ ಅಂಧಾನಿಗೌಡ ಹಾಗೂ ಯಶೋಧಮ್ಮ ರವರಿಂದ ತಲಾ ಹತ್ತು ಹತ್ತು ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಟ್ಟುಕೊಡುವಂತೆ ಮನವಲೈಸಿದ್ದಾರೆ.
ತಾಲ್ಲೂಕು ಆಡಳಿತದ ಮದ್ಯಸ್ಥಿಕೆಯಿಂದಾಗಿ ಇದೀಗ ಹೆಬ್ಬಾಡಿಹುಂಡಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜನಮಿತ್ರ ಪತ್ರಿಕೆ ಹಾಗೂ ಜನಮಿತ್ರ ಡಿಜಿಜಿಟಲ್ ನ್ಯೂಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Mandya
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಚೆಲುವರಾಯಸ್ವಾಮಿ

ನಾಗಮಂಗಲ : ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಬಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡುತ್ತ ಮಾತನಾಡಿದರು.
ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್. ಎಚ್ ಟಿ ಕೃಷ್ಣೆ ಗೌಡ. ಪುರಸಭಾ ಅಧ್ಯಕ್ಷರು ಗಣ್ಯರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
Mandya
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ

ಮಂಡ್ಯ : ಈ ಚಿತ್ರದಲ್ಲಿರುವ ವ್ಯಕ್ತಿ ಇಂದು (ಮಾ.14) ರಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲುಗಾಡಿಯಿಂದ ಬಿದ್ದು ಗಾಯಗೊಂಡಿರುತ್ತಾರೆ.
ಸದರಿಯವರ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ, ಅಥವ ಇವರ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ ಮಾಹಿತಿ ನೀಡಲು
ರೈಲ್ವೆ ಹೊರ ಉಪ ಠಾಣೆ ಮಂಡ್ಯ ಕೋರಿದೆ.
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ