Chamarajanagar
ತಾಲ್ಲೂಕು ಆಸ್ಪತ್ರೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ
ಯಳಂದೂರು ಜು.20
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರುತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.ತಾಲ್ಲೂಕಿನಾದ್ಯಂತ ಡೆಂಗ್ಯೂ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.
ಆರೋಗ್ಯ ರಕ್ಷ ಸಮಿತಿಯ ಸದಸ್ಯ ಜಿ ಮಾದೇಶ್, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ ಚಿದಂಬರಂ, ತಹಸೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ ಶ್ರೀಧರ್, ತಾಲೂಕು ವೈದ್ಯಾಧಿಕಾರಿಗಳಾದ ಡಾನಾಗೇಂದ್ರ ಮೂರ್ತಿ, ಡಾ.
ಶಶಿರೇಖಾ, ಡಾ ನಾಗೇಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್ ವಿ ಚಂದ್ರು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜೆ ಯೋಗೇಶ್ ಮತ್ತು ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷ ಸಮಿತಿಯ ಸದಸ್ಯರು,ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.
Chamarajanagar
ಕೊಳ್ಳೇಗಾಲ ತಾಲ್ಲೂಕು ಕ್ರೈಸ್ತ ಒಕ್ಕೂಟದಿಂದ ಭಾರತೀಯ ಕ್ರೈಸ್ತ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭ ಪುರಸ್ಕಾರ.
ಕೊಳ್ಳೇಗಾಲ: ಕ್ರೈಸ್ತರು ಪರಸ್ಪರ ಪ್ರೀತಿ, ಅನ್ಯೋನ್ಯತೆ , ಬಡವರ ಮತ್ತು ಶೋಷಿತರ ಸೇವೆಯಲ್ಲಿ ಯೇಸು ಕ್ರಿಸ್ತನನ್ನು ಅನುಸರಿಸಿ ಜೀವಿಸಬೇಕು ಎಂದು ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ನ ಫಾದರ್ ಎಂ.ರಾಯಪ್ಪ ಹೇಳಿದರು.
ಕೊಳ್ಳೇಗಾಲ ನಗರದ ಬೇತೆಲ್ ಲೂಥರನ್ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಭಾರತೀಯ ಕ್ರೈಸ್ತ ದಿನಾಚರಣೆ, ಸರ್ವ ಸದಸ್ಯರ ದ್ವಿತೀಯ ವಾರ್ಷಿಕ ಮಹಾಸಭೆ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿದರು.
ಯಾರಿಗೂ ಸಹ ಕೇಡು ಉಂಟಾಗದಂತೆ ಪ್ರತಿನಿತ್ಯ ಒಳ್ಳೆಯ ಕೆಲಸಗಳನ್ನು ಮಾಡಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಆಸಕ್ತಿವಹಿಸಿ ಉತ್ತಮ ಅಂಕ ಗಳಿಸಬೇಕು. ಅಂಕ ಗಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ತಂದೆ ತಾಯಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಮೋಜು ಮಸ್ತಿ ಸೇರಿದಂತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಹಾಗಾಗಿ ಅಂತಹ ದುಶ್ಚಟಗಳಿಗೆ ಒಳಗಾಗದೆ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ವಹಿಸಬೇಕು ಜೊತೆಗೆ ದೇವರಲ್ಲಿ ಹೆಚ್ಚಾಗಿ ಪ್ರಾರ್ಥನೆಯನ್ನು ಮಾಡಿ ಓದಿನ ಕಡೆ ಗಮನ ಹರಿಸಬೇಕು. ಕೊಳ್ಳೇಗಾಲ ತಾಲೂಕು ಕ್ರೈಸ್ತ ಒಕ್ಕೂಟ ಒಂದು ವರ್ಷದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ವಿವಿಧ ಕ್ರೈಸ್ತ ಸಭೆಗಳ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಮತ್ತು ದಕ್ಷಿಣ ಕನ್ನಡದ ಹಿರಿಯ ಕ್ರೈಸ್ತ ಮುಖಂಡ ಗ್ರೇಶಿಯನ್ ರಾಡ್ರಿಗಸ್, ತಾಲ್ಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಅಂತೋಣಿ ದಿನೇಶ್, ಕಾರ್ಯದರ್ಶಿ ತೇಜ್ ಪಾಲ್, ಖಜಾಂಚಿ ವಿಜಯ್ ಕುಮಾರ್, ಉಪಾಧ್ಯಕ್ಷ ಕಿರಣ್ ಜೆ.ಮೋಸಸ್, ಅಂತೋಣಿ, ನಿರ್ದೇಶಕ ನರೇಂದ್ರನಾಥ, ಡೇವಿಡ್, ನಾಗರಾಜು, ಮಿಲ್ಟನ್ ಕ್ರಿಸ್ಟೋಫರ್, ಎಸ್.ಕಿರಣ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸರ್ವ ಸದಸ್ಯರು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು
Chamarajanagar
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮುಡ್ಲುಪುರ ನಂದೀಶ್ ಅವರು ಮತಯಾಚನೆ
ಇಂದು ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮುಡ್ಲುಪುರ ನಂದೀಶ್ ಅವರು ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಮೂಡ್ಲುಪುರ ನಂದೀಶ್ ರವರು ಕಳೆದ ಮೂರು ವರ್ಷಗಳಿಂದ ಚಾಮರಾಜನಗರ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ .
ಮತ್ತೆ ಈ ಬಾರಿಯೂ ಕೂಡ ಚುನಾವಣೆಗೆ ಸ್ಪರ್ಧಿಸಿದ್ದು ತಮ್ಮ ಅಮೂಲ್ಯವಾದ ಮತವನ್ನು ನನಗೆ ಕೊಡುವ ಮೂಲಕ ಲಿಂಗಾಯಿತ ಸಮಾಜದ ಅಭಿವೃದ್ಧಿ ಏಳಿಗೆಗೆ ನಾನು ದುಡಿಯಲು ಸಿದ್ಧನಿದ್ದು ನಮ್ಮ ಸಮಾಜದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು .. ಮನವಿ ಮಾಡಿಕೊಂಡರು ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ
ನೂತನ ತಾಲೂಕ್ ಅಧ್ಯಕ್ಷರಾದ ಕಮರಳ್ಳಿ ರವಿ ಅವರು ಮಹೇಂದ್ರ ಅಲತೂರು ಮಂಜು ಶಿವಪುರ ಪ್ರಸಾದ್ ಕಮರಳ್ಳಿ ಇನ್ನು ಮುಂತಾದವರು ಉಪಸ್ಥಿತರಿದ್ದರು.. ವರದಿ.. ಮಂಜುಕುಮಾರ್ ಪಿ ಗುಂಡ್ಲುಪೇಟೆ
Chamarajanagar
ಹೇಮಾಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಅಧ್ಯಯನ ಪ್ರವಾಸ
ತಾಲ್ಲೂಕಿನ ಹೊಸಮೋಳೆ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆ ವತಿಯಿಂದ ಹೇಮಾಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಯಿತು
ಪ್ರಥಮವಾಗಿ ಮಹಿಳಾ ಸಾಂತ್ವನ ಕೇಂದ್ರ ಭೇಟಿ ನೀಡಿ ಮಹಿಳೆಯರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು, ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಬ್ರೂಣ ಹತ್ಯೆ ಕುರಿತು ಆಪ್ತ ಸಮಾಲೋಚಕಿ ಉಷಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸರಸ್ವತಿ ಮಾಹಿತಿ ನೀಡಿದರು.
ಪಟ್ಟಣದಲ್ಲಿರುವ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಭೇಟಿ ನೀಡಿ ಕಾನೂನು ಅರಿವು ಹಾಗೂ ನಿಯಮಗಳ ಬಗ್ಗೆ ನ್ಯಾಯಾದೀಶರಾದ ಆಕರ್ಶ್ ರವರು ಮಾರ್ಗದರ್ಶನ ನೀಡಿದರು. ಪಟ್ಟಣದಲ್ಲಿರುವ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿ ಅಲ್ಲಿಯ ಕಾರ್ಯವೈಖರಿ ಬಗ್ಗೆ, ಮೊಬೈಲ್ ಕರೆ ಓಟಿಪಿ ಅಪರಿಚಿತರಿಗೆ ನೀಡಬಾರದು, ಸೈಬರ್ ಕಳ್ಳತನ, ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಕ್ಕಳ ಬಗ್ಗೆ ಗಮನ ನೀಡುವ ಕುರಿತು ಹಾಗೂ ಏನಾದರೂ ಸಮಸ್ಯೆ ಬಂದಲ್ಲಿ 112 ಗೆ ಕರೆ ಮಾಡುವಂತೆ ಎ ಎಸ್ ಐ ಮಹದೇವಪ್ಪ ತಿಳಿಸಿದರು.
ಉಮ್ಮತ್ತೂರಿನ ಅಕೃತಿ ಇಂಡೇಸ್ಟ್ರಿ ಸ್ವ ಉದ್ಯೋಗ ಘಟಕ ಕ್ಕೆ ಭೇಟಿ ನೀಡಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪೂರಕವಾಗಿ ಸಂಸ್ಥೆಯ ವರ್ಷ ಮಾಹಿತಿ ನೀಡಿ ಅಲ್ಲಿ ಬಾಳೆ ದಿಂಡುವಿನಲ್ಲಿ ಮಾಡುವ ಪರಿಕರಗಳು ಉಪ್ಪಿನಕಾಯಿ, ಮ್ಯಾಟ್, ಬ್ಯಾಗ್, ಹಗ್ಗ ತಯಾರಿಕೆ ಕುರಿತು ಪರಿಶೀಲಿಸುವ ಮೂಲಕ ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು
ಈ ವೇಳೆ ವಿನುತಾ ಶೆಟ್ಟಿ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized1 month ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.