Connect with us

Mysore

ಶಿಕ್ಷಣ ಎಂಬ ಮರದ ಬೇರು ಕಹಿ, ಅದರ ಫಲ ಸಿಹಿ : ನಾಗೇಂದ್ರ

Published

on

ಸಾಲಿಗ್ರಾಮ : ಶಿಕ್ಷಣ ಎಂಬ ಮರದ ಬೇರು ಯಾವಾಗಲೂ ಕಹಿಯಾಗಿದ್ದು ಆ ಮರ ಬೆಳೆದು ನೀಡುವ ಫಲ ಎಂದಿಗೂ ಸಿಹಿಯಾಗಿರುತ್ತದೆ ಎಂದು ಅಂಕನಹಳ್ಳಿ ಪ್ರೌಡ ಶಾಲೆಯ ಮುಖ್ಯಶಿಕ್ಷಕ ನಾಗೇಂದ್ರ ಹೇಳಿದರು.
ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದಲ್ಲಿ ೧೯೯೧-೯೨ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಿಷ್ಯಸಮಾಗಮ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯೆಯನ್ನು ಸಮಾಜಕ್ಕೆ ಹಂಚಬೇಕು,ನಮ್ಮಿಂದ ಕಲಿತ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳಲ್ಲಿ ನಮ್ಮ ಮುಂದೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವುದನ್ನು ನೋಡಿದಾಗ ತಮ್ಮಲ್ಲಿರುವ ಶಿಕ್ಷಣದ ವೃತ್ತಿ ಗೌರವ ಹೆಚ್ಚುತ್ತದೆ. ಅದರೆ ಈಗಿನ ಯಾಂತ್ರೀಕೃತ ಶಿಕ್ಷಣ, ಸಾಮಾಜಿಕ ಮೌಲ್ಯ ಮತ್ತು ಗುರು ಶಿಷ್ಯರ ಸಂಬಂಧವನ್ನು ಹಾಳು ಮಾಡುತ್ತಿದೆ ಎಂದರು.
ಹಿಂದೆ  ಶಿಕ್ಷಕ ವೃತ್ತಿ ಹಣದ ಹೊರತಾಗಿತ್ತು ಆದರೆ ಇಂದು ವೃತ್ತಿಯನ್ನು ಹಣದಲ್ಲಿ ಅಳೆಯುವಂತಹ ಪ್ರೌವೃತ್ತಿ ಹೆಚ್ಚುತ್ತಿದ್ದು ೯೧-೯೨ರ ಸಾಲಿನ ಹಿರಿಯ ವಿದ್ಯಾರ್ಥಿಗಳು ತಮ್ಮ ಹಳೆಯ ಗುರುಗಳನ್ನು ನೆನೆದು ಅವರನ್ನು ಗೌರವಿಸುತ್ತಿರುವುದು ಹೆಚ್ಚು ಸಂತೋಷ ನೀಡುವ ಕೆಲಸವಾಗಿದ್ದು ಇಂದು ನನ್ನ ವೃತ್ತಿಯ ಅಂತಿಮ ದಿನವಾಗಿದ್ದು ಇಂದು ನನ್ನ ಹಳೆಯ ವಿದ್ಯಾರ್ಥಿಗಳು ಸೇರಿ ಮಾಡಿದ ಈ ಸನ್ಮಾನ ಎಲ್ಲಕ್ಕಿಂತ ಹೆಚ್ಚು ಎಂದು ಭಾವುಕವಾಗಿ ನುಡಿದರು.


ಹಳೆಯ ವಿದ್ಯಾರ್ಥಿಗಳ ಪರವಾಗಿ ದೈಹಿಕ ಶಿಕ್ಷಕ ರಾಮಚಂದ್ರ ಮಾತನಾಡಿ ಶಿಕ್ಷಕರಾಗುವುದು ಬೇರೆ,ಆದರೆ ಮಕ್ಕಳ ದೃಷ್ಠಿಯಲ್ಲಿ ಆದರ್ಶ ಶಿಕ್ಷಕರಾಗಿ ಉಳಿಯುವುದು ಕಷ್ಟವಾಗಿದ್ದು ಅದರಲ್ಲಿ ನಾಗೇಂದ್ರ ಮಾಸ್ಟರ್ ಹಳ್ಳಿಗಾಡಿನ ಸಾವಿರಾರು ಮಕ್ಕಳಿಗಾಗಿ ನಿತ್ಯ ಐದಾರು ತಂಡಗಳನ್ನು ಮಾಡಿಕೊಂಡು ಶಾಲೆಯಲ್ಲಿ ಮಾತ್ರವಲ್ಲದೇ ಹಗಲುರಾತ್ರಿ ಮನೆಪಾಠವನ್ನು ಯಾವುದೇ ಪ್ರತಿಫಲಾಪೇಕ್ಷೆಯನ್ನು ಅಪೇಕ್ಷಿಸದೇ ಕಬ್ಬಿಣದ ಕಡಲೆಯಾಗಿದ್ದ ಗಣಿತವನ್ನು ಪಾಠ ಮಾಡಿದ್ದು ಇಂದಿಗೂ ನಮಗೆ ಸವಿನೆನಪಾಗಿ ಉಳಿದಿದ್ದು ಅವರ ಸೇವೆ ಹೀಗೆ ನಿರಂತರವಾಗಿ ಮಕ್ಕಳಿಗೆ ಸಿಗಲಿ ಎಂದರು.
ಇದೇ ಸಂದರ್ಭದಲ್ಲಿ ಅ ದಿನಗಳಲ್ಲಿ ನಾಗೇಂದ್ರ ಅವರಿಂದ ಕಲಿತ ಶಿಕ್ಷಣ ಕುರಿತು ಮೆಲುಕು ಹಾಕಲಾಯಿತು
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಎಸ್.ಆರ್.ರಾಮಚಂದ್ರ, ಕವಿ ಸುನೀಲ್‌ಹಳಿಯೂರು,,ಜಮೃತ್‌ಖಾನ್, ಹರಿಪ್ರಸಾದ್, ಮಂಜುನಾಥ, ಸುಭಾಷಿಣಿ, ಪ್ರೇಮಾಕುಮಾರಿ, ಭಾರಾಣಿ, ವರಲಕ್ಷಿ, ಭಾರತಿ, ಚಂದ್ರಕಲಾ, ಸವಿತಾ, ಉದಯ್,ರಮೇಶ್,ರಾಮಕೃಷ್ಣ,ಚಂದ್ರಕಲಾ,ಧನಂಜಯ,ಕನ್ಯಾಕುಮಾರಿ, ಮಂಜು, ಶೋಭಾ,ಸತೀಶ, ಸ್ವಾಮಿಗೌಡ,ವೇಣು,ದೇವೇಂದ್ರ,ಪ್ರೇಮಾ,ಶೋಭಾರಾಣಿ,ಮಂಜುನಾಥ , ಅಶ್ವಿನಿ, ವಿದ್ಯಾ ಶಿಕ್ಷಣ ಸಂಸ್ಥೆಯಶ್ರೀಕಾಂತ್,ಅನಿತಾ ಅವರುಗಳು ಭಾಗವಹಿಸಿದ್ದರು.

ಉದ್ಯೋಗ ಇನ್ನಿತರೆ ಕಾರಣಗಳಿಂದ ಹುಟ್ಟಿದ ಊರು ಬಿಟ್ಟು ನಿತ್ಯ ಜೀವನದ ಹೋಯ್ದಾಟದಲ್ಲೇ ಊರು,ಹೆತ್ತವರು,ಅಕ್ಷರ ಕಲಿಸಿದ ಗುರುಗಳನ್ನು ನೆನೆಪಿಸಿಕೊಳ್ಳದ ಇಂದಿನ ದಿನಗಳಲ್ಲಿ ೩೪ವರ್ಷಗಳ ಹಿಂದಿನ ವಿದ್ಯಾರ್ಥಿಗಳ ತಂಡವೊಂದು ತಮ್ಮ ಶಿಕ್ಷಕ,ಮನೆಪಾಠದ ಗುರುಗಳನ್ನು ಸನ್ಮಾನಿಸಿ ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಕಳೆದ ಈ ಸಮಾರಂಭ ಇಂದಿನ ಮಕ್ಕಳಿಗೆ ಒಂದು ಆದರ್ಶವಾಗಲಿದೆ
-ಕವಿ-ಲೇಖಕ ಸುನೀಲ್ ಕುಮಾರ್ ಹಳಿಯೂರು

 

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ*

Published

on

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ

Published

on

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೋರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮುಡಾ ಅಕ್ರಮ ನಿವೇಶನ ಹಂಚಿಕೆ: ಏಕ ಸದಸ್ಯ ವಿಚಾರಣಾ ಆಯೋಗ ರಚನೆ

Published

on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ, ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು, ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ನೀಡಲು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸಬೇಕು ಎಂದು ಸೂಚಿಸಲಾಗಿದೆ.

ಆಯೋಗವು ವಿಚಾರಣೆಗೆ ಬಯಸುವ ಎಲ್ಲ ಕಡತಗಳು ಮತ್ತು ದಾಖಲಾತಿಗಳನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒದಗಿಸಬೇಕು. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತನಿಖೆಗೆ ಆದೇಶಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮುಡಾ ನಿವೇಶನ ಹಂಚಿಕೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ. ಎನ್. ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ತನಿಖೆಗೆ ವಹಿಸಿದೆ. ಪ್ರಕರಣದ ಕೂಲಂಕಷವಾದ ವಿಚಾರಣೆ ನಡೆದು, ಸತ್ಯಾಸತ್ಯತೆ ಹೊರಬರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.

Continue Reading

Trending

error: Content is protected !!