Connect with us

Mysore

ಚಿರಾ ನಿದ್ರೆಗೆ ಜಾರುವ ಜಾಗದಲ್ಲಿ ರಸ್ತೆ ಅಗಲೀಕರಣ, ತಡೆ ಹಿಡಿದ ಗ್ರಾ. ಪಂ. ಸದಸ್ಯರು

Published

on

ಸಾಲಿಗ್ರಾಮ ಪಟ್ಟಣದ ಹೆಬ್ಬಾಗಿಲಿನ ಬಳಿ ಇರುವ ಸಾರ್ವಜನಿಕ ಸ್ಮಶಾನವು ಶತ ಮಾನಗಳಿಂದಲೂ ಇರುತ್ತದೆ. ಗ್ರಾಮದಲ್ಲಿ  5 ಸಾವಿರ ಜನ ಸಂಖ್ಯೆ ಇದ್ದಾಗನಿಂದಲೂ ಗ್ರಾಮದ ಸಾರ್ವಜನಿಕರು ಈ ಸ್ಮಶಾನಕ್ಕೆ ಸಾವನಪ್ಪಿದವರನ್ನು ಇಲ್ಲಿಯೇ ಮಣ್ಣು ಮಾಡುತ್ತಿದ್ದಾರೆ. ಈಗ 25 ರಿಂದ 30 ಸಾವಿರ ಜನಸಂಖ್ಯೆ ಇದ್ದು, ಈಗಲೂ ಇಷ್ಟೇ ವಿಸ್ತೀರ್ಣ ದಲ್ಲಿಯೇ ಅಂತ್ಯ ಕ್ರಿಯೆ ಮಾಡಬೇಕು. ಆದರೆ ಈಗ ನಮ್ಮ ಗ್ರಾಮ ಪಂಚಾಯಿತಿಯ ಗಮನಕ್ಕೆ ವಿಷಯವನ್ನು ತಿಳಿಸದೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ( ಕೆ – ಶಿಪ್) ರವರು   ರಸ್ತೆ ಅಗಲೀಕರಣ  ಕಾಮಗಾರಿಯನ್ನು  ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಇರುವ ಸ್ಮಶಾನವನ್ನು ರಸ್ತೆಗೆ ಉಪಯೋಗಿಸಿ ಕೊಂಡರೆ ಸ್ವಲ್ಪ ಭಾಗ ಮಾತ್ರ ಉಳಿಯುತ್ತದೆ ಇದರಿಂದ ಮುಂದಿನ ದಿನಗಳಲ್ಲಿ ಬಹಳ ತೊಂದರೆ ಉಂಟಾಗುತ್ತದೆ, ಆದ್ದರಿಂದ ಇದಕ್ಕೆ  ಪರ್ಯಾಯ ವ್ಯವಸ್ಥೆ ಮಾಡಬೇಕು ಅಲ್ಲಿಯ ತನಕ   ಕಾಮಗಾರಿಯನ್ನು  ನಿಲ್ಲಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಾ ರಾ ಪ್ರಕಾಶ್ ತಿಳಿಸಿದರು.

ನಂತರ ಮಾತನಾಡಿ ಮಾಜಿ ಸಚಿವ ಸಾರಾ ಮಹೇಶ್ ರವರು ಹಿಂದೆಯೇ ಅಧಿಕಾರಿಗಳನ್ನು ಸ್ಥಳಕ್ಕೆ ಬರ ಮಾಡಿಕೊಂಡು ಪರಿಶೀಲನೆ ಮಾಡಿ ನೀಲ ನಕ್ಷೆಯ ಯೋಜನೆಯಂತೆ ಕಾಮಗಾರಿ ನಡೆಸಬೇಕು, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಮತ್ತು ವಾಸ ಮಾಡುವ ಮನೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿಯನ್ನು ಮಾಡಬೇಕು ಎಂದು ಸೂಚನೆ ನೀಡಿದ್ದರು, ಆದರೂ ತಮ್ಮ ಇಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಉನ್ನಿಸಾ, ಉಪಾಧ್ಯಕ್ಷೆ ಶಶಿ, ಪಿ ಡಿ ಒ ಮಂಜು, ಸದಸ್ಯರುಗಳಾದ ಸುಧಾ ರೇವಣ್ಣ, ಪ್ರಕಾಶ್, ಶೋಭಾ ಗೋವಿಂದ,  ಲೋಕೇಶ್, ರತ್ನಮ್ಮ , ನೀಲಮ್ಮ, ಗಂಗಾಧರ, ಹರೀಶ್,     ಸಿಬ್ಬಂದಿಯವರಾದ ರವಿ, ಸ್ವಾಮಿ, ಮುಖಂಡರುಗಳಾದ ಸರ್ದಾರ್, ಜಗದೀಶ್,  ಇನ್ನಿತರರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ

Published

on

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಈಚನೂರು ಕುಮಾರ್ ಅವರು ಇಂದು ಬೆಳಗ್ಗೆ 11.30 ಕ್ಕೆ ನಿಧನರಾಗಿದ್ದಾರೆ.
ಅವರ ಇಬ್ಬರು ಮಕ್ಕಳು ಅಕ್ಷರಾ ಹಾಗೂ ಪತ್ರಕರ್ತ ಅಜಿತ್ ಅವರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.

Continue Reading

Mysore

ತಾಂಡವಪುರ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಕಾಲೇಜ್ ನಲ್ಲಿ ಉಚಿತ PGCET ತರಬೇತಿ

Published

on

ನಂಜನಗೂಡು ಜು.20

ನಂಜನಗೂಡು ತಾಲೂಕಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ ಕಾಲೇಜಿನಲ್ಲಿ PGCET ಉಚಿತ ತರಬೇತಿಯನ್ನು ನಡೆಸಲಾಗಿದೆ ವಿದ್ಯಾರ್ಥಿಗಳು ಇದನ್ನು ಸದುಪಡಿಸಿಕೊಳ್ಳಿ ಎಂದು ಎಂ.ಐ.ಟಿ. ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ದಿನಾಂಕ 22-07-24 ಮತ್ತು 23-07-24 ರಂದು ಎರಡು ದಿವಸ ಉಚಿತ PGCET ತರಬೇತಿ ಯನ್ನು MBA ಮತ್ತು MCA ಪ್ರವೇಶಾತಿ ಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಚಾಮರಾಜನಗರ ಗುಂಡ್ಲುಪೇಟೆ ನರಸೀಪುರ ನಂಜನಗೂಡು ಹೆಚ್ ಡಿ ಕೋಟೆ ಮೈಸೂರು ಸುತ್ತಮುತ್ತಲಿನಿಂದ ಬರುವವರಿಗೆ ಬಸ್ ಹಾಗೂ ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ MBA ವಿಭಾಗದ ಮುಖ್ಯಸ್ಥರು ಡಾ. ನಂದನ್ ಗಿರಿ 96326 20320

ನಂಜನಗೂಡು ಮಹದೇವಸ್ವಾಮಿ ಪಟೇಲ್

Continue Reading

Mysore

ಮಳೆಯಿಂದಾಗಿ ಮನೆ ಗೋಡೆ ಕುಸಿದು ಗೃಹಿಣಿ ಸಾವು – ಮೃತರ ಕುಟುಂಬಕ್ಕೆ ಸಂಸದ ಯದುವೀರ್ ಒಡೆಯರ್ ಸಾಂತ್ವನ

Published

on

ಪಿರಿಯಾಪಟ್ಟಣ: ಮನೆ ಗೋಡೆ ಕುಸಿದು ಗೃಹಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಆಕೆಯ ಜೊತೆಯಲ್ಲಿದ್ದ ಎರಡು ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಹೇಮಾವತಿ (22) ಮೃತಪಟ್ಟ ಮಹಿಳೆ, ಶುಕ್ರವಾರ ಹೇಮಾವತಿ ತನ್ನ ಎರಡು ವರ್ಷದ ಗಂಡು ಮಗುವನ್ನು ಎತ್ತಿಕೊಂಡಿದ್ದ ವೇಳೆ ಅತಿಯಾದ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದಿದೆ ತಕ್ಷಣ ಹೇಮಾವತಿ ತನ್ನ ಕೈಯಲ್ಲಿದ್ದ ಮಗುವನ್ನು ಹೊರಗೆ ತಳ್ಳಿದ್ದರಿಂದ ಅದೃಷ್ಟವಶಾತ್ ಮಗುವಿನ ಪ್ರಾಣ ಉಳಿದಿದೆ, ಸಾವಿನಲ್ಲು ತಾಯಿ ಮಮತೆಯನ್ನು ಎತ್ತಿ ಹಿಡಿದು ಹೇಮಾವತಿ ಸಾರ್ಥಕತೆ ಮೆರೆದಿದ್ದಾರೆ, ಮೃತರ ಪತಿ ಶಿವರಾಜ್ ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದು ಘಟನೆ ಸಂಭಂದ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ, ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಉಪ ತಹಶೀಲ್ದಾರ್ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ.

ಸಂಸದರಿಂದ ಸಾಂತ್ವನ: ಸಂಸದ ಯದುವೀರ್ ಒಡೆಯರ್ ಅವರು ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಕಗ್ಗುಂಡಿ ಗ್ರಾಮದ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸ್ಥಳದಲ್ಲಿದ್ದ ತಹಶಿಲ್ದಾರ್ ಕುಂ ಇ ಅಹಮದ್ ಅವರಿಗೆ ಸರ್ಕಾರದಿಂದ NDRF ಅಡಿ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು, ಈ ಸಂದರ್ಭ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೊಪ್ಪ ರಾಜೇಂದ್ರ ಮತ್ತಿತರಿದ್ದರು.

ವರದಿ: ಬೆಕ್ಕರೆ ಸತೀಶ್ ಆರಾಧ್ಯ

Continue Reading

Trending

error: Content is protected !!